ಉಜ್ಜಯಿನಿಯ ಮಹಾಕಾಳೇಶ್ವರ ದೇವಾಲಯಕ್ಕೆ ಭೇಟಿ ನೀಡಿದ 'ಕನ್ನಡತಿ' ರಂಜನಿ

By Poorva

ರಂಜನಿ ರಾಘವನ್ ಅವರು ಉಜ್ಜಯಿನಿಗೆ ಹೋಗಿದ್ದಾರೆ. ಮಹಾ ಕಾಳೇಶ್ವರ ದೇವಾಲಯಕ್ಕೆ ಭೇಟಿ ನೀಡಿದ್ದಾರೆ. ರಂಜನಿ ದೇಶ ವಿದೇಶದೆಲ್ಲೆಡೆ ಪ್ರವಾಸ ಮಾಡುತ್ತಾ ಇರುತ್ತಾರೆ. ತಾನು ಅನುಭವಿಸಿದ ಖುಷಿಯನ್ನು ಹಾಗೆಯೇ ಪ್ರಯಾಣದ ಬಗೆಗಿನ ವಿಚಾರವನ್ನು ಪುಸ್ತಕದಲ್ಲಿ ಬರೆಯುತ್ತಾರೆ.

ರಂಜನಿ ರಾಘವನ್‌ಗೆ ಪುಸ್ತಕಗಳು ಅಂದರೆ ಬಹಳ ಪ್ರೀತಿ. ಮೊದಲ ಬಾರಿಗೆ ಪುಟ್ಟ ಗೌರಿ ಮದುವೆ ಧಾರಾವಾಹಿ ಮೂಲಕ ಎಲ್ಲರ ಜನ ಮನ ಗೆದ್ದಿದ್ದರು. ಬಹಳ ಕ್ಯೂಟ್ ಆಗಿ ಅಭಿನಯ ಮಾಡುತ್ತಿದ್ದ ಈಕೆಯ ನಟನೆಗೆ ಅಭಿಮಾನಿಗಳು ಫಿದಾ ಆಗಿದ್ದರು. ಆ ಬಳಿಕ ರಾಜ ಹಂಸ ಎಂಬ ಚಿತ್ರದಲ್ಲಿ ನಟನೆ ಮಾಡಿ ತನ್ನದೇ ಛಾಪು ಮೂಡಿಸಿದ್ದರು.

Kannada serial actress Ranjani Raghavan Ujjain tour

ಆ ಬಳಿಕ ಇಷ್ಟದೇವತೆ' ಎಂಬ ಈ ಧಾರಾವಾಹಿಯ ಕ್ರಿಯೇಟಿವ್ ಡೈರೆಕ್ಟರ್ ಆಗಿ ಕೂಡ ಕಾರ್ಯ ನಿರ್ವಹಿಸಿದ್ದಾರೆ. ಆ ಬಳಿಕ ಕನ್ನಡತಿ ಎಂಬ ಧಾರಾವಾಹಿ ಮೂಲಕ ಜನರ ಮನ ಗೆದ್ದಿದ್ದಾರೆ. ಟೀಚರ್ ಪಾತ್ರದಲ್ಲಿ ಮುಖ್ಯ ಪಾತ್ರಧಾರಿಯಾಗಿ ಅಭಿನಯ ಮಾಡಿ ಎಲ್ಲರ ಮನಸನ್ನು ಗೆದ್ದಿದ್ದಾರೆ . ಆ ಬಳಿಕ ಹಲವಾರು ಪುಸ್ತಕಗಳನ್ನು ಬರೆದು ಜನಪ್ರಿಯರಾಗಿದ್ದಾರೆ. ಇತ್ತೀಚೆಗಷ್ಟೇ ಯುರೋಪ್ ಇಂಟರ್ ನ್ಯಾಶನಲ್ ಟ್ರಿಪ್ ಹೋಗಿ ಬಂದಿರುವ ರಂಜನಿ ರಾಘವನ್ ಇದೀಗ ಮಧ್ಯಪ್ರದೇಶ ಪ್ರವಾಸದಲ್ಲಿದ್ದಾರೆ.

ಉಜ್ಜಯಿನಿಗೆ ಭೇಟಿ ನೀಡಿ ಶ್ರೀ ಮಹಾಕಾಳೇಶ್ವರನ ದರ್ಶನ ಪಡೆದಿದ್ದಾರೆ. ಇನ್ನು ರಂಜನಿ ರಾಘವನ್ ವಿಶೇಷವಾಗಿ ಹಣೆಯ ಮೇಲೆ ಮಹಾಕಾಲ ಎಂದು ಬರೆದುಕೊಂಡಿದ್ದಾರೆ. ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಹಾಗೆಯೇ ವೀಡಿಯೊಗಳನ್ನು ಕೂಡ ರಂಜನಿ ರಾಘವನ್ ಹರಿಬಿಟ್ಟಿದ್ದಾರೆ . ಫೋಟೋ ನೋಡಿದ ಅಭಿಮಾನಿಗಳು ಮಾತ್ರ ಸಖತ್ ಖುಷಿ ಪಟ್ಟಿದ್ದಾರೆ.

ಹಾಗೆಯೇ ಉಜ್ಜಯಿನಿ ದೇಗುಲದ ಒಂದಷ್ಟು ಚೆಂದನೆಯ ಫೋಟೋ ಪೋಸ್ಟ್ ಮಾಡಿಕೊಂಡು ಪುರಾಣ ಪ್ರಸಿದ್ಧ ಉಜ್ಜಯಿನಿಯ ಮಹಾಕಾಲೇಶ್ವರ ಜ್ಯೋತಿರ್ಲಿಂಗ ದರ್ಶನ ಮಾಡಿದೆ. ಶಿಪ್ರಾ ನದಿಯ ಆರತಿಯಲ್ಲಿ ಭಾಗಿಯಾಗಿ ಮನಸ್ಸು ಫುಲ್ ಖುಷ್ ಆಗಿದೆ ಕಾಳಿದಾಸನ "ಮೇಘದೂತ" ಕಾವ್ಯದಲ್ಲಿ ಬರುವ ಉಜ್ಜಯಿನಿಯ ವರ್ಣನೆಯನ್ನ ಬೇರೆ ಲೈಟ್ ಆಗಿ ಓದ್ಕೊಂಡು ಹೋದಿದ್ದೆ, ಹಾಗಾಗಿ ಇನ್ನೂ ಥ್ರಿಲ್ ಆಗೋಯ್ತು!' ಎಂದು ಕ್ಯಾಪ್ಷನ್ ಬರೆದಿದ್ದಾರೆ.

ರಂಜನಿಗೆ ಹೀಗೆ ಹೊಸ ಹೊಸ ಜಾಗಕ್ಕೆ ಹೋಗಲು ಉತ್ಸುಕತೆ. ಎಲ್ಲರ ಹಾಗೆ ತಾನು ಏನಾದರೂ ಸಾಧನೆ ಮಾಡಬೇಕು ಎಂಬುದು ಆಕೆಯ ಹಂಬಲ. ಅದು ಬರವಣಿಗೆ ಆಗಿರಬಹುದು ಅಥವಾ ಪುಸ್ತಕ ಬರೆಯುವುದು ಆಗಿರಬಹುದು ಒಟ್ಟಿನಲ್ಲಿ ಏನಾದರು ಸಾಧನೆ ಮಾಡಬೇಕು ಎಂಬುವುದು ಆಕೆಯ ಗುರಿ.

ರಂಜನಿ ತಮ್ಮ ಸೋಷಿಯಲ್ ಮೀಡಿಯಾ ಮೂಲಕ ಅಭಿಮಾನಿಗಳೊಂದಿಗೆ ಸಂಪರ್ಕದಲ್ಲಿದ್ದಾರೆ. ಆಗಾಗ ತಮ್ಮ ಜೀವನದ ಅಪ್ ಡೇಟ್ಸ್ ಕೊಡುತ್ತಿರುತ್ತಾರೆ. ನಟಿ ರಂಜನಿಗೆ ಇನ್ ಸ್ಟಾಗ್ರಾಂನಲ್ಲಿ 1 ಮಿಲಿಯನ್ ಫಾಲೋವರ್ಸ್ ಇದ್ದಾರೆ. ಹಾಗೆಯೇ ಹೊಸ ಹೊಸ ಫೋಟೋ ವಿಡಿಯೋವನ್ನು ಅಪ್ಲೋಡ್ ಮಾಡಿ ಜನರಿಗೆ ಖುಷಿ ನೀಡುತ್ತಾ ಇರುತ್ತಾರೆ.

More from Filmibeat

English summary
Kannada serial actors ranjanj raghavan ujjain tour
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X