ಬಟನ್ ಇಲ್ಲದ ಬಟ್ಟೆಯಲ್ಲಿ ಫೋಟೋಶೂಟ್ ಮಾಡಿಸಿಕೊಂಡ ಸಾನ್ಯಾಗೆ ಕಾಮೆಂಟಪ್ಪೋ ಕಾಮೆಂಟು!
ಸಾನ್ಯಾ ಅಯ್ಯರ್ ಚಿಕ್ಕ ವಯಸ್ಸಿನಿಂದಲೇ ಬಣ್ಣದ ಲೋಕಕ್ಕೆ ಕಾಲಿಟ್ಟವರು. ಪುಟ್ಟ ಗೌರಿ ಮದುವೆ ಧಾರವಾಹಿ ಸಾನಿಯಾಗೆ ಬಹಳ ಹೆಸರನ್ನು ತಂದುಕೊಟ್ಟಿತು. ಬಾಲ ನಟಿಯಾಗಿ ಎಲ್ಲರ ಮನ ಗೆದ್ದ ಈ ಚೆಲುವೆ ಇದೀಗ ಬೋಲ್ಡ್ ಲುಕ್ ನಲ್ಲಿ ಫೋಟೋ ಶೂಟ್ ಮಾಡಿಸಿಕೊಂಡಿದ್ದಾರೆ.
ಇನ್ನು ಸಾನ್ಯಾ ಹುಟ್ಟಿದ್ದು ಬೆಂಗಳೂರಿನಲ್ಲಿ. ಪ್ರಾಥಮಿಕ ಹಾಗೂ ಪ್ರೌಢ ಶಾಲಾ ಶಿಕ್ಷಣವನ್ನು ಮುಗಿಸುವ ಮುನ್ನವೇ ಬಣ್ಣದ ಲೋಕಕ್ಕೆ ಕಾಲಿಟ್ಟಿದ್ದರು. ಅದರಿಂದ ಶಿಕ್ಷಣ ಹಾಗೂ ನಟನೆ ಇದೆರಡನ್ನು ಸಾನ್ಯಾ ಒಟ್ಟಾಗಿ ನಿರ್ವಹಣೆ ಮಾಡಿದ್ದಾರೆ. ಸಾನ್ಯಾಗೆ ಬಾಲ್ಯದಿಂದಲೂ ದೊಡ್ಡ ಕನಸು ಎಂದರೆ ನಟನೆಯಲ್ಲಿ ಏನಾದರು ಸಾಧನೆ ಮಾಡಬೇಕು ಎಂಬ ಹಂಬಲ.

ಇನ್ನು ಸಾನ್ಯಾಗೆ ಬೆನ್ನೆಲುಬಾಗಿ ನಿಂತವರು ಅವರ ತಾಯಿ. ಸಾನ್ಯಾ ತಾಯಿ ಕೂಡ ಬಹಳ ದೊಡ್ಡ ನಟಿ. ಆದುದರಿಂದ ಅಮ್ಮನ ನಟನೆ ನೋಡಿ ಸಾನ್ಯಾಗೆ ಅಭಿನಯದಲ್ಲಿ ಆಸಕ್ತಿ ಮೂಡಿತು ಎಂದು ಹೇಳಿದರೆ ತಪ್ಪಾಗಲಾರದು. ಇನ್ನು ಸಾನ್ಯಾ ಬಿಗ್ ಬಾಸ್ ನಲ್ಲಿ ಕೂಡ ಮಿಂಚಿ ಜನರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ. ಇನ್ನು ಪುಟ್ಟ ಗೌರಿ ಮದುವೆ ಧಾರವಾಹಿ ಆದ ಬಳಿಕ ಮತ್ತೆಲ್ಲೂ ಅಷ್ಟಾಗಿ ಸಾನ್ಯಾ ನಟಿಸಿರಲಿಲ್ಲ. ಆದರೆ ಇದೀಗ ಹಿರಿತೆರೆಯತ್ತ ಮುಖ ಮಾಡಿದ್ದಾರೆ. ತಾನು ಒಳ್ಳೆಯ ನಟಿ ಆಗಬೇಕು ಎಂದು ಸಾನ್ಯಾ ಅಯ್ಯರ್ ಆಗಾಗ ಹೇಳುತ್ತ ಇದ್ದರು. ಹಾಗೆಯೇ ಇದೀಗ ಉತ್ತಮ ಫೋಟೋ ಶೂಟ್ ಮಾಡಿ ಎಲ್ಲರ ಮನ ಗೆದ್ದಿದ್ದಾರೆ. ಈ ಫೋಟೋ ನೋಡಿದ ಅಭಿಮಾನಿಗಳು ಮಾತ್ರ ಸಾನ್ಯಾ ಮೈ ಮಾಟಕ್ಕೆ ಬೆರಗಾಗಿದ್ದಾರೆ.
ಇನ್ನು ತಾಯಿ ದೀಪಾ ಅಯ್ಯರ್ ಗೆ ತನ್ನ ಮಗಳು ಉತ್ತಮ ನಟಿ ಆಗಬೇಕು ಹಾಗೆಯೇ ಆಕೆ ನಟನೆಯಲ್ಲಿ ಏನಾದರು ಸಾಧನೆ ಮಾಡಬೇಕು ಎಂಬುವುದು ಕನಸು. ಇನ್ನು ಸಾನ್ಯಾ ಅಯ್ಯರ್ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟಿವ್ ಆಗಿ ಇರುತ್ತಾರೆ. ಹಾಗೆಯೇ ಅನೇಕ ರೀತಿಯ ಫೋಟೋಗಳನ್ನು ತೆಗೆಸಿ ಸೋಷಿಯಲ್ ಮೀಡಿಯಾದಲ್ಲಿ ಹರಿಯಬಿಡುತ್ತಿದ್ದರು .
ಹಳೆಯ ನಟಿಯರಂತೆ ಕಾಣುವ ಬಟ್ಟೆಯಲ್ಲಿ ಸಾನಿಯಾ ಕಾಣಿಸಿಕೊಂಡಿದ್ದಾರೆ. ಆ ಫೋಟೋಗಳನ್ನು ಅನೇಕರು ಇಷ್ಟಪಟ್ಟಿದ್ದಾರೆ. ಇನ್ನು ಅದಕ್ಕೂ ಮೀರಿ ಇದೀಗ ಸಾನಿಯಾ ಬೋಲ್ಡ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಆಕೆಯ ಬಟ್ಟೆ ನೋಡಿದ ನೆಟ್ಟಿಗರು ಮಾತ್ರ ಸಖತ್ ಕಾಮೆಂಟ್ ಮಾಡಿ ಪ್ರಶ್ನೆ ಮೇಲೆ ಪ್ರಶ್ನೆ ಮಾಡುತ್ತಾ ಇದ್ದಾರೆ.
ಇನ್ನು ಸಾನ್ಯಾ ಪರ್ಪಲ್ ಕಲರ್ ಬ್ಲೇಜರ್ ತೊಟ್ಟಿದ್ದಾರೆ ಆದರೆ ಅದಕ್ಕೆ ಬಟನ್ ಮಾತ್ರ ಹಾಕಿಲ್ಲ. ಬ್ಲೇಜರ್ ಅನ್ನು ಅವರೇ ಕೈಯಿಂದ ಕ್ಲೋಸ್ ಮಾಡಿಕೊಂಡಿದ್ದಾರೆ. ಈ ಫೋಟೋ ನೋಡಿದ ಅಭಿಮಾನಿಗಳು ಸಖತ್ ಕಾಮೆಂಟ್ ಮಾಡಿ ಲೈಕ್ಸ್ ಕೂಡ ನೀಡುತ್ತಿದ್ದಾರೆ. ಕೆಲವರು ಕೆಟ್ಟದಾಗಿ ಕಾಮೆಂಟ್ ಮಾಡಿದರೆ ಇನ್ನೂ ಕೆಲವರು ಬಹಳ ಚೆನ್ನಾಗಿದೆ ಎಂದು ಹೇಳುವ ಮೂಲಕ ನೆಟ್ಟಿಗರ ಗಮನ ಸೆಳೆದಿದ್ದಾರೆ.
ಇನ್ನು ಸಾನ್ಯಾ ಅವರ ಫೋಟೋ ಶೂಟ್ ಅನ್ನು ಬಾಲಿವುಡ್‌ನ ಸೆಲೆಬ್ರೆಟಿ ಫೋಟೋಗ್ರಾಫರ್ ಡಬ್ಬೂ ರತ್ನಾನಿ ಅವರು ಮಾಡಿದ್ದಾರೆ. ಎಲ್ಲಾ ಫೋಟೋಗಳಲ್ಲೂ ಸಾನ್ಯಾ ಸಖತ್ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಬಾಲಿವುಡ್‌ನ ಸ್ಟಾರ್ ನಟರು, ನಟಿಯರು ಡಬ್ಬೂ ರತ್ನಾನಿ ಬಳಿಯೇ ಫೋಟೋ ಶೂಟ್ ಮಾಡಿಸುತ್ತಾರೆ. ಹಾಗಾಗಿಯೇ ಡಬ್ಬೂ ರತ್ನಾನಿ ಎಲ್ಲರ ಫೇವರಿಟ್ ಫೋಟೋಗ್ರಾಫರ್ ಆಗಿದ್ದಾರೆ. ಇನ್ನು ಸಾನ್ಯಾ ಅಯ್ಯರ್ ಯಾವಾಗ ಹಿರಿತೆರೆ ಆಗಮಿಸುತ್ತಾರೆ ಇದ್ದಾರೆ ಎಂಬುವುದನ್ನು ಕಾದು ನೋಡಬೇಕಿದೆ.


Click it and Unblock the Notifications











