ಕೂರ್ಗ್‌ನಲ್ಲಿ ಹುಟ್ಟುಹಬ್ಬ ಆಚರಣೆ ಮಾಡಿಕೊಂಡ 'ಪುಟ್ಟಕ್ಕನ ಮಕ್ಕಳು' ಸಂಜನಾ; ಮಾಡರ್ನ್ ಉಡುಗೆ ತೊಟ್ಟು ಮಿಂಚಿದ ಬೆಡಗಿ
ಪುಟ್ಟಕ್ಕನ ಮಕ್ಕಳು ಧಾರವಾಹಿ ಇತ್ತೀಚಿಗೆ ಬಹಳ ಅದ್ಭುತವಾಗಿ ಮೂಡಿ ಬರುತ್ತಿದೆ. ಇದರಲ್ಲಿ ಪುಟ್ಟಕ್ಕನ ಎರಡನೇ ಮಗಳಾಗಿ ಅಭಿನಯ ಮಾಡುತ್ತಿರುವ ಸ್ನೇಹಾ ಪಾತ್ರಧಾರಿಯ ಮೇಲೆ ಇದೀಗ ಎಲ್ಲರೂ ಕೋಪದಿಂದ ನೋಡುವ ಹಾಗೆ ಆಗಿದೆ.
ಹೌದು ಸ್ನೇಹಾ ಇದೀಗ ಕಂಠಿಯಿಂದ ದೂರ ಹೋಗುತ್ತಾ ಇದ್ದಾಳೆ. ಆದರೆ ಕಂಠಿ ಬಹಳ ಬೇಸರದಿಂದ ಇರುತ್ತಾನೆ. ಮೊದಲನೇ ಬಾರಿಗೆ ಕಂಠಿ ಅಷ್ಟೇನೂ ತಲೆ ಕೆಡಿಸಿಕೊಳ್ಳದೆ ಇರುತ್ತಾನೆ. ಆದರೆ ಆ ಬಳಿಕ ಭುವನ್ ಯಾವಾಗ ಸ್ನೇಹಾ ಜೀವನಕ್ಕೆ ಎಂಟ್ರಿ ಕೊಟ್ಟನೋ ಆಗ ಕಂಠಿಗೆ ಎಲ್ಲಾ ಅರ್ಥ ಆಗಿ ಬಿಡುತ್ತದೆ.

ಸ್ನೇಹಾ ಮೇಲಿನ ಕೋಪಕ್ಕೆ ಆತ ಕೂಡ ಬೇರೆ ಮದುವೆ ಮಾಡಿಕೊಳ್ಳಲು ನಿರ್ಧಾರ ಮಾಡುತ್ತಾನೆ. ಇದೀಗ ಸ್ನೇಹಾಗೆ ಕೂಡಾ ಕಂಠಿಯನ್ನು ಮರೆಯಲು ಸಾಧ್ಯ ಆಗದೆ ಪರದಾಡುತ್ತ ಇರುತ್ತಾಳೆ. ಸುಮಾ ಅಕ್ಕನಿಗೆ ಎಷ್ಟೇ ಬುದ್ಧಿವಾದ ಹೇಳಿದರೂ ಸ್ನೇಹಾ ಮಾತ್ರ ಹಠ ಬಿಡುತ್ತಿಲ್ಲ. ಇದೀಗ ಒಂದೇ ದಿನ ಇಬ್ಬರ ಮದುವೆ ಗೊತ್ತಾಗಿದೆ. ಹಾಗೆಯೇ ಒಂದೇ ಮದುವೆ ಮಂಟಪದಲ್ಲಿ ಇಬ್ಬರು ಮದುವೆ ಆಗುತ್ತಿದ್ದಾರೆ.
ಇದೀಗ ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿ ಸ್ನೇಹಾ ಆಗಿ ಅಭಿನಯ ಮಾಡುತ್ತಿರುವ ಸಂಜನಾ ಬುರ್ಲಿ ಜಾಲಿ ಮೂಡ್ ನಲ್ಲಿ ಇದ್ದಾರೆ. ಇವರು ಆಗಾಗ ಸಾಮಾಜಿಕ ಜಾಲತಾಣದಲ್ಲಿ ಫೋಟೋಗಳನ್ನು ಹರಿಯ ಬಿಟ್ಟು ನೋಡುಗರ ಮನ ತಣಿಸುತ್ತ ಇರುತ್ತಾರೆ. ಇದೀಗ ಸಂಜನಾ ಕೊಡಗಿಗೆ ಹೋಗಿದ್ದಾರೆ. ಅಲ್ಲಿ ಎಳೆಯ ಬೆಂಡೆಕಾಯಿಯನ್ನು ಕೈಯಲ್ಲಿ ಹಿಡಿದು ಫೋಟೋಗೆ ಪೋಸ್ ನೀಡಿದ್ದಾರೆ.
ಕೂರ್ಗ್ ನಲ್ಲಿಯೇ ತನ್ನ ಹುಟ್ಟು ಹಬ್ಬವನ್ನು ಆಚರಣೆ ಮಾಡಿ ಖುಷಿಪಟ್ಟಿದ್ದಾರೆ. ಫೋಟೋ ನೋಡಿದ ಅಭಿಮಾನಿಗಳು ಖುಷಿ ಪಟ್ಟಿದ್ದಾರೆ. ಬಳಿಕ ಸಂಜನಾಗೆ ಬೆಂಡೆಕಾಯಿ ಮಾರಾಟ ಮಾಡುತ್ತಾ ಇದ್ದೀರಾ ಎಂದು ಕಾಲು ಎಳೆಯುತ್ತಿದ್ದಾರೆ. ಸಂಜನಾ ಬುರ್ಲಿ ಹಾಕಿರುವ ಫೋಟೋಗಳಿಗೆ 11 ಸಾವಿರಕ್ಕೂ ಹೆಚ್ಚು ಲೈಕ್ಸ್ ಬಂದಿವೆ.
ಸಂಜನಾ ಬುರ್ಲಿ ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರಿಯರಾಗಿರುತ್ತಾರೆ. ಇಲ್ಲಿಯವರೆಗೆ ಸಂಜನಾ 395 ಪೋಸ್ಟ್ ಹಾಕಿದ್ದಾರೆ. ಆಗಾಗ ತಮ್ಮ ಬಗ್ಗೆ ಅಭಿಮಾನಿಗಳಿಗೆ ಅಪ್‍ಡೇಟ್ ಕೊಡ್ತಾ ಇರ್ತಾರೆ. ಇನ್ನು ಸಂಜನಾ ಬುರ್ಲಿ ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿ ಅದ್ಭುತವಾಗಿ ನಟನೆ ಮಾಡುತ್ತಿದ್ದಾರೆ. ಪುಟ್ಟಕ್ಕನ ಮಕ್ಕಳು ಧಾರವಾಹಿ ಟಿಆರ್ ಪಿಯಲ್ಲು ಕೂಡ ನಂಬರ್ ಒನ್ ಸ್ಥಾನದಲ್ಲಿದೆ.
ಸೋಮವಾರದಿಂದ ಶುಕ್ರವಾರದವರೆಗೆ ಅಭಿಮಾನಿಗಳಿಗೆ ರಸದೌತಣ ನೀಡುತ್ತಾ ಇರುತ್ತಾರೆ. ಪುಟ್ಟಕ್ಕನ ಮಗಳು ಇದೀಗ ಕೂರ್ಗ್ ನಲ್ಲಿ ಇದ್ದಾಳೆ . ಕೂರ್ಗ್ ನಲ್ಲಿ ಎಂಜಾಯ್ ಮಾಡುತ್ತಿರುವ ಫೋಟೋಗಳನ್ನು ತೆಗೆದು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದಾರೆ. ಒಟ್ಟಿನಲ್ಲಿ ಸಂಜನಾ ಬುರ್ಲಿ ಕೂರ್ಗ್ ಪ್ರವಾಸವನ್ನು ಎಂಜಾಯ್ ಮಾಡುತ್ತಾ ಇದ್ದಾರೆ. ಕೆಲವರು ಸಂಜನಾ ಅವರೇ ನಿಮಗೆ ಮಾಡರ್ನ್ ಡ್ರೆಸ್ ಬಹಳ ಚೆನ್ನಾಗಿ ಕಾಣಿಸುತ್ತದೆ ಎಂದು ಕಾಮೆಂಟ್ ಮಾಡಿದ್ದಾರೆ.


Click it and Unblock the Notifications











