ಬೋಲ್ಡ್ ಲುಕ್ ನಲ್ಲಿ ಮಿಂಚುತ್ತಿರುವ ಸಾನ್ಯಾ; ಫಿದಾ ಆದ ಪಡ್ಡೆ ಹುಡುಗರು
ಸ್ಟೈಲಿಶ್ ಲುಕ್ ನಲ್ಲಿ ಪಡ್ಡೆ ಹುಡುಗರ ನಿದ್ದೆ ಕದ್ದಿದ್ದಾರೆ ಸಾನಿಯಾ ಅಯ್ಯರ್. ಸಾನಿಯಾ ಅಯ್ಯರ್ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿದ್ದಾರೆ. ಇವರ ಲುಕ್ ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಪುಟ್ಟ ಗೌರಿ ಮದುವೆ ಮೂಲಕ ಕಿರುತೆರೆಗೆ ಕಾಲಿಟ್ಟ ನಟಿಯ ಅಭಿನಯಕ್ಕೆ ಜನ ಮಾರು ಹೋಗುತ್ತಾ ಇದ್ದರು. ಇವರ ನಟನೆಯನ್ನು ನೋಡಿದ ಎಲ್ಲರೂ ಸಣ್ಣ ಹುಡುಗಿ ಅದೆಷ್ಟು ಒಳ್ಳೆಯ ನಟಿ ಎಂದು ಹೇಳುತ್ತಿದ್ದರು.
ಇದೀಗ ಪುಟ್ಟ ಗೌರಿ ಖ್ಯಾತಿಯ ಸಾನಿಯಾ ಅಯ್ಯರ್ ವಿವಿಧ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯ ಬಿಟ್ಟಿದ್ದಾರೆ. ಪುಟ್ಟಗೌರಿ ಸಾನ್ಯಾ ಐಯ್ಯರ್ ಸ್ಟೈಲಿಶ್ ಲೆಹಂಗಾ ತೊಟ್ಟು ಫೋಟೋಗೆ ಪೋಸ್ ನೀಡಿದ್ದಾರೆ. ಈ ಫೋಟೋ ನೋಡಿದ ಅಭಿಮಾನಿಗಳು ಮಾತ್ರ ಸಖತ್ ಖುಷಿ ಪಟ್ಟಿದ್ದಾರೆ.

ಸಾನಿಯಾ ಅಯ್ಯರ್ ಈ ಸಖತ್ ಬೋಲ್ಡ್ ಆಗಿ ಫೋಟೋ ಷೂಟ್ ಮಾಡಿದ್ದಾರೆ. ಹಾಗೆಯೇ ಸ್ಟೈಲಿಶ್ ಲೆಹಂಗಾ ತೊಟ್ಟುಕೊಂಡಿದ್ದ ಸಾನಿಯಾಳನ್ನು ನೋಡಿದ ಅಭಿಮಾನಿಗಳು ಸಖತ್ ಆಗಿ ಕಾಣಿಸಿಕೊಳ್ಳುತ್ತಿದ್ದಿರಿ ಎಂದು ಕಾಮೆಂಟ್ ಮಾಡಿ ವಿಶ್ ಮಾಡುತ್ತಿದ್ದಾರೆ. ಸಾಮಾಜಿಕ ಜಾಲತಾಣಕ್ಕೆ ಫೋಟೋವನ್ನು ಅಪ್ಲೋಡ್ ಮಾಡಿದ ಕೆಲವೇ ನಿಮಿಷಗಳಲ್ಲಿ ಸಾಕಷ್ಟು ಕಾಮೆಂಟ್ ಲೈಕ್ ಗಳು ಬಂದಿದೆ.
ಬೋಲ್ಡ್ ಲುಕ್ ನಲ್ಲಿ ಮಿಂಚುತ್ತಿರುವ ಸಾನಿಯಾ ಅಯ್ಯರ್ ಬಹಳ ಸುದ್ದಿಯಲ್ಲಿ ಇದ್ದಾರೆ. ದಿನ ಕಳೆದ ಹಾಗೆಯೇ ಸಾನಿಯಾ ಅವರ ಸೌಂದರ್ಯ ಕೂಡ ಇಮ್ಮಡಿ ಆಗುತ್ತಿದೆ. ಅಭಿಮಾನಿಗಳಂತೂ ಸಾನಿಯಾ ಅವರ ಫೋಟೋಗಳನ್ನ ನೋಡಿ ಸಖತ್ ಖುಷಿ ಪಡುತ್ತಾ ಇದ್ದರು. ಇನ್ನು ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯ ರಾಗಿರುವ ನಟಿಗೆ ಅಭಿಮಾನಿಗಳು ಮಾತ್ರ ಸಿಕ್ಕಾ ಪಟ್ಟೆ ಇದ್ದಾರೆ.
ಇದೀಗ ಪಡ್ಡೆ ಹುಡುಗರ ನಿದ್ದೆ ಕದ್ದಿರುವ ಸಾನಿಯಾ ಅಯ್ಯರ್ ಮಾತ್ರ ಮುದ್ದು ಮುದ್ದಾಗಿ ಕಾಣಿಸುತ್ತಿದ್ದಾರೆ. ಪುಟ್ಟ ಗೌರಿ ಮದುವೆ ಆದ ಬಳಿಕ ಸಾನಿಯಾ ಅಯ್ಯರ್ ಬಿಗ್ ಬಾಸ್ ಸೀಸನ್ 9 ಹಾಗೂ ಓಟಿಟಿಯಲ್ಲಿ ಕೂಡ ಭಾಗವಹಿಸಿ ಜನಗಳಿಗೆ ಇನ್ನಷ್ಟು ಹತ್ತಿರವಾಗಿದ್ದಾರೆ ಎಂದರೆ ತಪ್ಪಾಗುವುದಿಲ್ಲ. ಬಿಗ್ ಬಾಸ್ ನಲ್ಲಿ ಮಾತ್ರ ಬಹಳ ಉತ್ತಮವಾಗಿ ಜನರನ್ನು ಮನರಂಜಿಸಿದ್ದಾರೆ.
ರೂಪೇಶ್ ಶೆಟ್ಟಿ ಜೊತೆ ಸಾನಿಯಾಗೆ ಪ್ರೇಮಾಂಕುರವಾಗಿತ್ತು ಎಂದೆಲ್ಲ ಊಹಾಪೋಹಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿತ್ತು. ಸಾನಿಯಾ ಅಯ್ಯರ್ ಗೆ ಚಿತ್ರರಂಗದಲ್ಲಿ ಏನಾದರೂ ಉತ್ತಮ ಹೆಸರು ಮಾಡಬೇಕು ಎಂದೆಲ್ಲ ಬಹಳ ಆಸೆ ಇದೆ. ತಾನು ಒಬ್ಬಳು ಹೀರೋಯಿನ್ ಆಗಬೇಕು ಅಭಿಮಾನಿಗಳಿಗೆ ಮನರಂಜನೆ ನೀಡಬೇಕು ತಾನು ಏನಾದರೂ ಸಾದಿಸಲೇಬೇಕು ಎಂಬ ಹಂಬಲ ಇದೆ. ಇನ್ನೂ ಸಾನಿಯಾಗೆ ಆಕೆಯ ತಾಯಿಯ ಸಪೋರ್ಟ್ ಕೂಡ ಬಹಳ ಇದೆ.


Click it and Unblock the Notifications











