Sara Annaiah: ಸಾರಾ ಅಣ್ಣಯ್ಯ ಬಳಿ ಇರೋ ಬ್ಯಾಗ್ ಎಲ್ಲಾ ಹೆವಿ ಕಾಸ್ಟ್ಲೀ..!

By ಎಸ್ ಸುಮಂತ್

ಸಾರಾ ಅಣ್ಣಯ್ಯ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಹಲವು ಸೀರಿಯಲ್‌ಗಳಲ್ಲಿ ಸಿಕ್ಕಾಪಟ್ಟೆ ರಿಚ್ ಹುಡುಗಿಯ ಪಾತ್ರಗಳನ್ನೇ ಮಾಡಿದವರು. ಸೀರಿಯಲ್‌ನಲ್ಲಿ ತಮ್ಮ ಲೈಫ್ ಸ್ಟೈಲ್ ಅನ್ನು ಹೇಗೆ ಶೋ ಮಾಡ್ತಾ ಇದ್ರೋ ನಿಜ ಜೀವನದಲ್ಲೂ ತನ್ಮ ಲೈಫ್‌ ಸ್ಟೈಲ್ ಅನ್ನು ಅದೇ ರೀತಿಯೇ ಕಾಪಾಡಿಕೊಂಡು ಬರುತ್ತಿದ್ದಾರೆ. ಫ್ಯಾಷನ್ ಲೋಕಕ್ಕೆ ಇವರೇ ಟೀಚರ್ ಎಂಬಂತೆ ಕಾಣಿಸುತ್ತಾರೆ.

ಸಾರಾ ಅಣ್ಣಯ್ಯ ಹಾಕುವ ಡ್ರೆಸ್, ಮಾಡುವ ಮೇಕಪ್‌ಗೆ ಫಿದಾ ಆಗದವರೇ ಇಲ್ಲ. ಒಮ್ಮೆ ಅವರ ಸೋಶಿಯಲ್ ಮೀಡಿಯಾ ನೋಡಿದರೇನೆ ಅರ್ಥವಾಗುತ್ತದೆ. ಸೀರೆ ಹಾಕಿದರೂ ಅಲ್ಲಿಯೂ ಯಾವ ರೀತಿಯೆಲ್ಲ ಫ್ಯಾಷನ್ ಮಾಡಬಹುದು ಎಂಬುದನ್ನೇ ನೋಡುತ್ತಾರೆ. ಅದರಲ್ಲೂ ಅವರಾಕುವ ಒಂದೊಂದು ಬ್ಯಾಗ್‌ಗಳು ಅದೆಷ್ಟು ಕಾಸ್ಟ್ಲೀ ಇದ್ದಾವೆ ಗೊತ್ತಾ.? ಅದರ ಬಗ್ಗೆ ಮಾಹಿತಿ ಇಲ್ಲಿದೆ.

Kannada serial actress Sara Annaiah has costley bags in her collection

ಸಾರಾ ಅಣ್ಣಯ್ಯ 'ನಮ್ಮ ಲಚ್ಚಿ' ಧಾರಾವಾಹಿ ಮಾಡುವಾಗಲೂ ದೊಡ್ಡ ಶ್ರೀಮಂತರ ಮನೆಯ ಮಗಳಾಗಿ ಕಾಣಿಸಿಕೊಂಡಿದ್ದರು. ಇಂಥದ್ದು ಬೇಕು ಅಂದ್ರೆ ಅಂಥದ್ದು ಬೇಕು. ದುಬಾರಿ ಜೀವನವನ್ನು ಕಳೆಯುವಂತ ಪಾತ್ರವದು. ಆ ಧಾರಾವಾಹಿಯನ್ನು ಅರ್ಧಕ್ಕೆ ಬಿಟ್ಟರು. ಬಳಿಕ 'ಅಮೃತಧಾರೆ' ಧಾರಾವಾಹಿಯಲ್ಲೂ ದೊಡ್ಡ ಮನೆಯ ಮಗಳಾಗಿ ಕಾಣಿಸಿಕೊಂಡರು. ಅಲ್ಲಿಯೂ ಫ್ಯಾಷನ್ ಐಕಾನ್ ರೀತಿಯೇ ಕಂಡರು. ಸದ್ಯ ಆ ಧಾರಾವಾಹಿಯಿಂದಾನೂ ಹೊರಗೆ ಬಂದಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಂತೂ ಸಿಕ್ಕಾಪಟ್ಟೆ ಬ್ಯುಸಿ ಇರುತ್ತಾರೆ.

ಸಾರಾ ಅಣ್ಣಯ್ಯ ಅವರ ಫೋಟೋಗಳನ್ನು ನೋಡಿದವರು ಹಾಟ್ ಬೊಂಬೆ ಅಂತಾನೇ ಅಂತಾರೆ. ಸಾಕಷ್ಟು ಸಲ ಅವರು ಅಪ್ಲೋಡ್ ಮಾಡುವ ಫೋಟೋಗಳು ಮೈಚಳಿ ಬಿಟ್ಟು ಪೋಸ್ ಕೊಟ್ಟಂತೆ ಇರುತ್ತವೆ. ಇತ್ತೀಚೆಗೆ ಸ್ನೇಹಿತೆಯರ ಜೊತೆಗೆ ಗೋವಾ ಟ್ರಿಪ್ ಹೋಗಿದ್ದರು. ಅಲ್ಲಿ ಅವರು ಕೊಟ್ಟ ಪೋಸ್ ಸಾಕಷ್ಟು ಜನರ ಕಣ್ಣುಗಳನ್ನ ಅರಳಿಸಿತ್ತು. ಸಾರಾ ಅಣ್ಣಯ್ಯ ಹಿಂಗ್ಯಾಕಾದ್ರೂ ಎಂಬ ಪ್ರಶ್ನೆಯನ್ನ ತಮಗೆ ತಾವೇ ಕೇಳಿಕೊಂಡಿದ್ದು ಉಂಟು. ಸಿಕ್ಕಾಪಟ್ಟೆ ಟ್ರಾವೆಲ್ ಕ್ರೇಜ್ ಇದೆ ಅನ್ಸುತ್ತೆ. ಹೀಗಾಗಿಯೆ ತುಂಬಾ ಕಡೆಗೆ ಸುತ್ತಾಡುತ್ತಾ ಇರುತ್ತಾರೆ. ಈ ಸುತ್ತಾಟದ ನಡುವೆ ಅವರು ಧರಿಸುವ ಬ್ಯಾಗ್‌ಗಳು ಅಷ್ಟೇ ಗಮನ ಸೆಳೆಯುತ್ತವೆ. ಆ ಬ್ಯಾಗ್ ಯಾವ ಬ್ರಾಂಡ್ ಹಾಗೂ ಎಷ್ಟು ಬೆಲೆ ಇದೆ ಎಂಬುದರ ಮಾಹಿತಿ ಇಲ್ಲಿದೆ.

ಬ್ಯಾಕ್ ಕಲರ್ ಡ್ರೆಸ್ ಹಾಕಿರೋ ಸಾರಾ ಅಣ್ಣಯ್ಯ ಅದರ ಜೊತೆಗೆ Gucchi ಬ್ಯಾಗ್ ಒಂದನ್ನ ಧರಿಸಿದ್ದಾರೆ. ನೋಡುವುದಕ್ಕೆ ತೀರಾ ಸಿಂಪಲ್. ಏನಿಲ್ಲ ಅಂದ್ರು ಆ ಬ್ಯಾಗ್ ಒಳಗೆ ಒಂದು ಮೊಬೈಲ್, ಲಿಪ್ ಸ್ಟಿಕ್ ಸಣ್ಣ ಪುಟ್ಟ ವಸ್ತುಗಳನ್ನು ಕ್ಯಾರಿ ಮಾಡಬಹುದೇನೋ. ಆದರೆ ಅದರ ಬೆಲೆ ಬಂದು 87,500 ರೂಪಾಯಿ ಇದೆ. ಸಾರಾ ಅಣ್ಣಯ್ಯ ಬಳಿ ಇದೊಂದೇ ಬ್ಯಾಗ್ ಅಲ್ಲ. ಸಾಕಷ್ಟು ಬ್ರಾಂಡೆಡ್ ಬ್ಯಾಗ್‌ಗಳೇ ಅವರ ಬಳಿ ಇರುವುದು. ಅಂಥ ಇನ್ನೊಂದು ಬ್ಯಾಗ್ ಬಗ್ಗೆನೂ ಇಲ್ಲಿದೆ ಮಾಹಿತಿ.

Kannada serial actress Sara Annaiah has costley bags in her collection

ಸಾರಾ ಅಣ್ಣಯ್ಯ ರಾಯರ ಸನ್ನಿಧಾನಕ್ಕೂ ಹೋಗಿದ್ದರು. ವೈಟ್ ಕಲರ್ ಸೀರೆಯುಟ್ಟು, ಹಸಿರು ಬಣ್ಣದ ಬ್ಲೌಸ್ ಧರಿಸಿ ಅಪ್ಸರೆಯಂತೆ ಕಾಣಿಸುತ್ತಿದ್ದರು. ರಾಯರ ದೇವಸ್ಥಾನದ ಮುಂದೆ ನಿಂತು ಫೋಟೋ ಕೂಡ ತೆಗೆಸಿಕೊಂಡಿದ್ದಾರೆ. ಆ ಪೋಟೋಗಳನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿದ್ದಾರೆ. ಆ ಫೋಟೋದಲ್ಲಿ ಸಣ್ಣದೊಂದು ಬ್ಯಾಗ್ ಕೂಡ ಹಾಕಿಕೊಂಡಿದ್ದಾರೆ. ಅದುವೇ MK ಬ್ರ್ಯಾಂಡ್ ಬ್ಯಾಗ್. ಇದರ ಬೆಲೆ ಬಂದು 36 ಸಾವಿರ ರೂಪಾಯಿ ತೋರಿಸ್ತಾ ಇದೆ.

More from Filmibeat

English summary
Kannada serial actress Sara Annaiah has costley bags in her collection;
Read more about: lifestyle filmbeat original
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X