Sharmitha Gowda: ಮಾಡ್ರನ್ ಡ್ರೆಸ್‌ನಲ್ಲಿ ಶರ್ಮಿತಾ ಗೌಡ ಫೋಟೋಶೂಟ್, ಕ್ಲೀನ್ ಬೋಲ್ಡ್ ಆದ ಫ್ಯಾನ್ಸ್
ಗೀತಾ ಧಾರಾವಾಹಿಯಲ್ಲಿ ಅದ್ಭುತವಾಗಿ ನಟನೆ ಮಾಡುತ್ತಿರುವ ನಟಿ ಶರ್ಮಿತಾ ಗೌಡ ಇದೀಗ ಕಿರುತೆರೆಯ ಮನೆ ಮಂದಿಯ ಮಾತಾಗಿದ್ದಾರೆ. ಹೌದು.. ಶರ್ಮಿತಾ ಗೌಡ ಗೀತಾ ಧಾರವಾಹಿಯಲ್ಲಿ ವಿಲನ್ ಕ್ಯಾರೆಕ್ಟರ್‌ನಲ್ಲಿ ಮಿಂಚುತ್ತಿದ್ದಾರೆ. ಇವರ ಅಭಿನಯ ನೋಡಿದ ಜನರು ಬಹಳ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಆದ,ರೆ ಇನ್ನೂ ಕೆಲವರು ಗೀತಾಗೆ ಯಾಕೆ ಇಷ್ಟು ಕಾಟ ಕೊಡುತ್ತಿದ್ದೀರಿ ಎಂದು ಬಯ್ಯುತ್ತಿದ್ದಾರೆ.
ನಟಿ ಶರ್ಮಿತಾ ಗೌಡ ಅಂದರೆ ಕೆಲವು ಮಂದಿಗೆ ಯಾರು ಎಂದು ತಿಳಿಯುವುದಿಲ್ಲ. ಆದರೆ, ಭಾನುಮತಿ ಎಂದರೆ ಎಲ್ಲರಿಗೂ ಚಿರಪರಿಚಿತ. ಯಾಕೆಂದರೆ ಗೀತಾ ಧಾರಾವಾಹಿಯಲ್ಲಿ ಭಾನುಮತಿ ಎಂಬ ಹೆಸರಿನಿಂದ ಶರ್ಮಿತಾ ಗೌಡ ಮಿಂಚುತ್ತಿದ್ದಾರೆ. ಇದೀಗ ಶರ್ಮಿತಾ ಗೌಡ ಫೋಟೋಶೂಟ್ ಮಾಡಿಸಿಕೊಳ್ಳುವ ಮೂಲಕ ಜನರಿಗೆ ಇನ್ನಷ್ಟು ರಸದೌತಣ ಉಣಬಡಿಸಿದ್ದಾರೆ.

ಹೌದು... ಶರ್ಮಿತಾ ಗೌಡ ಅವರು ಸೋಶಿಯಲ್ ಮೀಡಿಯಾದಲ್ಲಿ ಬಹಳ ಆಕ್ಟಿವ್ ಆಗಿದ್ದಾ.ರೆ ಹಾಗೆಯೇ ಇವರ ಅಭಿಮಾನಿಗಳಿಗೋಸ್ಕರ ಆಗಾಗ ಫೋಟೋಗಳನ್ನ ಶೇರ್ ಮಾಡಿ ಖುಷಿ ಪಡುತ್ತಿರುತ್ತಾರೆ. ಫೋಟೋ ನೋಡಿದ ಅಭಿಮಾನಿಗಳು ಮಾತ್ರ ಸಖತ್ ಖುಷಿಯಾಗಿದ್ದು ಫೋಟೋಗೆ ಕಾಮೆಂಟ್ ಹಾಗೂ ಲೈಕ್ ಗಳನ್ನು ಮಾಡುತ್ತಿದ್ದಾರೆ.
ಶರ್ಮಿತಾ ಗೌಡ ಫೋಟೋ ನೋಡಿ ಖುಷಿಪಟ್ಟ ಅಭಿಮಾನಿಗಳು
ಈ ಬಾರಿ ಕೂಡ ಮಾಡರ್ನ್ ಆಗಿರುವ ಬಟ್ಟೆ ತೊಟ್ಟು ಶರ್ಮಿತಾ ಗೌಡ ಮಿಂಚಿದ್ದಾರೆ. ನಟಿ ಗ್ರೀನ್ ವೆಲ್ವೆಟ್ ಬಾಡಿಕಾನ್ ಡ್ರೆಸ್ ಧರಿಸಿ ಕಾಣಿಸಿಕೊಂಡಿದ್ದಾರೆ. ನಟಿ ಸಿಂಗಲ್ ಶೋಲ್ಡರ್ ಡ್ರೆಸ್ನಲ್ಲಿ ಮಾಡರ್ನ್ ಆಗಿ ಕಾಣಿಸಿಕೊಂಡಿದ್ದಾರೆ. ನಟಿಯ ಹೇರ್ ಸ್ಟೈಲ್ ಕೂಡಾ ತುಂಬಾ ಅದ್ಭುತವಾಗಿದ್ದು, ಫೋಟೋಗೆ ವಿವಿಧ ಭಂಗಿಯಲ್ಲಿ ಪೋಸ್ ಕೊಟ್ಟು ಬಹಳ ಡಿಫರೆಂಟ್ ಆದ ಫೋಟೋಗಳನ್ನು ತೆಗೆಸಿಕೊಂಡಿದ್ದಾರೆ.

ಡಿಫರೆಂಟ್ ಭಂಗಿಯಲ್ಲಿ ಫೋಟೋಶೂಟ್
ಇನ್ನು ಈ ಬಟ್ಟೆಯಲ್ಲಿ ಶರ್ಮಿತಾ ಗೌಡ ಬಹಳ ಅದ್ಭುತವಾಗಿ ಕಾಣಿಸುತ್ತಿದ್ದಾರೆ ಹಾಗೆಯೇ ಶರ್ಮಿತಾ ಗೌಡ ಫೋಟೋ ನೋಡಿದ ಅಭಿಮಾನಿಗಳು ಸಖತ್ ಖುಷಿಪಟ್ಟಿದ್ದಾರೆ. ಶರ್ಮಿತಾ ಗೌಡ ಆಗಾಗ ಫೋಟೋ ವಿಡಿಯೋಗಳನ್ನು ಶೇರ್ ಮಾಡಿ ಖುಷಿಪಡುತ್ತಿರುತ್ತಾರೆ.
ನಟಿ ಶರ್ಮಿತಾ ಗೌಡ ಅವರು ಸೀರೆಯಲ್ಲಿ ಬಹಳ ಸುಂದರವಾಗಿ ಕಾಣಿಸುತ್ತಾರೆ. ಧಾರಾವಾಹಿಯಲ್ಲಿ ಬಿಸಿಯಾಗಿರುವ ನಟಿ ಶರ್ಮಿತಾ ಗೌಡ ಆಗಾಗ ಫೋಟೋಶೂಟ್ ಮಾಡಿಸಿಕೊಂಡು ಸೋಶಿಯಲ್ ಮೀಡಿಯಾದಲ್ಲಿ ಹರಿಯ ಬಿಡುತ್ತಾರೆ. ಸಿನಿಮಾಗಳಲ್ಲೂ ಶರ್ಮಿತಾ ಗೌಡ ನಟನೆ ಮಾಡಿ ಮೋಡಿ ಮಾಡಿದ್ದಾರೆ. ಅಭಿಮಾನಿಗಳು ಮಾತ್ರ ಶರ್ಮಿತಾ ಅವರ ಮಾಡರ್ನ್ ಲುಕ್‌ಗೆ ಫಿದಾ ಆಗಿದ್ದಾರೆ. ಫೋಟೋ ನೋಡಿದ ಅಭಿಮಾನಿಗಳೆಲ್ಲಾ ನೀವ್ಯಾಕೆ ಅಮ್ಮನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದೀರಾ ಎಂದು ಶರ್ಮಿತಾಗೆ ಪ್ರಶ್ನೆ ಮಾಡಿದ್ದಾರೆ.


Click it and Unblock the Notifications











