ಬೋಲ್ಡ್ ಆಗಿ ಕಾಣಿಸಿಕೊಂಡ 'ಪಾರು' ಧಾಮಿನಿಯನ್ನು ನೋಡಿದ ಅಭಿಮಾನಿಗಳು ಫುಲ್ ಖುಷ್
ಪಾರು ಖ್ಯಾತಿಯ ಧಾಮಿನಿ ಸೀರೆಯುಟ್ಟು ಬಹಳ ಅಂದವಾಗಿ ಕಾಣುತ್ತಿದ್ದರು. ಪಾರು ಧಾರಾವಾಹಿಯಲ್ಲಿ ಇವರೇ ದೊಡ್ಡ ಕಾಮಿಡಿ ವುಮನ್ ಅಂದರೆ ತಪ್ಪಾಗದು. ಪಾರು ಧಾರವಾಹಿ ಪ್ರತಿ ದಿನ ಸೋಮವಾರದಿಂದ ಶುಕ್ರವಾರದವರೆಗೆ ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿದೆ. ಈ ಧಾರವಾಹಿ ನೋಡುಗರ ಮನ ಗೆದ್ದಿದೆ ಎಂದು ಹೇಳಿದರು ತಪ್ಪೇನಿಲ್ಲ. ಧಾರಾವಾಹಿಯಲ್ಲಿ ಅಖೀಲಾಂಡೇಶ್ವರಿ ತಂಗಿಯಾಗಿ ಮೋಹನ್ ನ ಹೆಂಡತಿಯಾಗಿ ನಟನೆ ಮಾಡುತ್ತಿದ್ದಾರೆ ದಾಮಿನಿ.
ಇದೀಗ ದಾಮಿನಿ ಬೋಲ್ಡ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಫೋಟೋ ನೋಡಿದವರೆಲ್ಲ ಇವರೇನಾ ಪಾರು ಧಾರಾವಾಹಿಯಲ್ಲಿ ಬರುತ್ತಿದ್ದ ದಾಮಿನಿ ಎಂದು ಮೂಗಿನ ಮೇಲೆ ಬೆರಳು ಇಟ್ಟುಕೊಂಡು ನೋಡುತ್ತಿದ್ದಾರೆ. ಇನ್ನು ದಾಮಿನಿ ಅಭಿಮಾನಿಗಳು ಮಾತ್ರ ದಾಮಿನಿ ಫೋಟೋ ಕಂಡು ಸಖತ್ ಖುಷಿ ಪಟ್ಟಿದ್ದಾರೆ. ಫೋಟೋ ನೋಡಿದ ಅಭಿಮಾನಿಗಳು ಸೂಪರ್ ಎಂದು ಹೇಳಿದ್ರೆ ಇನ್ನೂ ಕೆಲವರು ನೀವು ಸೀರೆಯಲ್ಲಿ ನೋಡಲು ಚೆನ್ನಾಗಿ ಕಾಣಿಸುತ್ತ ಇದ್ರಿ ಎಂದು ಹೇಳಿದ್ದಾರೆ.

ದಾಮಿನಿ ಪಾತ್ರ ಮಾಡುತಿದ್ದ ಸಿತಾರ ಮಾತ್ರ ಸಖತ್ತಾಗಿ ಸದ್ದು ಮಾಡುತ್ತಾ ಪ್ರೇಕ್ಷಕರ ಮನದಲ್ಲಿ ಉಳಿದುಬಿಟ್ಟಿದ್ದಾರೆ. ಇನ್ನೂ ಸಿತಾರ ಚಿಕ್ಕ ಮಗು ಇದ್ದಾಗಲೇ ಇವರ ತಂದೆ ತಾಯಿಯನ್ನು ಕಳೆದುಕೊಂಡಿದ್ದರು. ಪುಟ್ಟ ಮಗುವಿದ್ದ ಇವರನ್ನು ಯಾರು ಅಷ್ಟಾಗಿ ನೋಡಿಕೊಳ್ಳದೆ ಇದ್ದಿದ್ದನ್ನು ಕಂಡ ಇವರ ಅಜ್ಜಿಯೇ ಸಿತಾರ ಅವರ ಆರೈಕೆ ಮಾಡುತ್ತಿದ್ದರಂತೆ.
ಸಿತಾರ ಶಾಲೆಗೆ ಹೋಗಬೇಕು ಅಂದುಕೊಂಡರೂ ಸಾಧ್ಯ ಆಗುತ್ತಿರಲಿಲ್ಲ. ಕೊನೆಗೆ ಸಾಣಿಹಳ್ಳಿ ಸ್ವಾಮೀಜಿಯವರು ಸಿತಾರ ಅವರನ್ನು ದತ್ತು ತೆಗೆದುಕೊಂಡು ಶಿಕ್ಷಣವನ್ನು ನೀಡಿದ್ದರು. ಶಾಲಾ ದಿನಗಳಲ್ಲಿ ಅಷ್ಟಾಗಿ ತಾರ ನೆನಪು ಮಾಡುತ್ತಿರಲಿಲ್ಲ ಎಂದು ಸ್ವತಃ ಸಿತಾರ ಹೇಳಿಕೊಂಡಿದ್ದಾರೆ. ಆದರೆ ಪಿಯುಸಿ ಮುಗಿಸಿ ಡಿಗ್ರಿ ಮಾಡುವಾಗ ನೀನಾಸಂನಲ್ಲಿ ಅವಕಾಶ ಗಿಟ್ಟಿಸಿಕೊಂಡಿದ್ದರು
ಆಗ ರಜೆ ಸಿಕ್ಕಾಗ ಎಲ್ಲರೂ ಮನೆಗೆ ಹೋದಾಗ ಸಿತಾರಗೆ ಕೂಡ ಬೇಸರ ಆಗುತ್ತಿತ್ತು. ಆಗ ತನ್ನ ತಂದೆ ತಾಯಿಯನ್ನು ನೆನೆಯದ ದಿನಗಳು ಇಲ್ಲ ಎಂದು ಸಿತಾರ ಹೇಳಿಕೊಂಡು ಇದ್ದಾರೆ. ಸಿತಾರಗೆ ಸಣ್ಣ ವಯಸ್ಸಿನಿಂದಲೂ ಏನಾದರು ಸಾಧನೆ ಮಾಡಬೇಕು ಎಂಬೆಲ್ಲಾ ಹಂಬಲ ಕಾಡುತ್ತಲೇ ಇತ್ತು.
ಅದರ ಪ್ರತಿಫಲವಾಗಿ ಸಿತಾರ ಇದೀಗ ಒಳ್ಳೆಯ ಸ್ಥಾನದಲ್ಲಿ ಇದ್ದಾರೆ. ನೀನಾಸಂನಲ್ಲಿ ಥಿಯೇಟರ್ ಆರ್ಟ್ಸ್‌ನಲ್ಲಿ ಡಿಪ್ಲೊಮಾ ಮಾಡಿದ್ದಾರೆ. ಹಾಗೆಯೇ ಸಿನಿಮಾ, ಧಾರಾವಾಹಿಗಳಲ್ಲಿ ನಟನೆ ಮಾಡಿ ಸೈ ಎನಿಸಿಕೊಂಡಿದ್ದಾರೆ. ಸಿತಾರ ಹೇಳುತ್ತಾರೆ ನಾನು ಏನೇ ಮಾಡಿದ್ದರು ಅದರ ಕ್ರೆಡಿಟ್ ಅದು ಸಾಣೆ ಹಳ್ಳಿ ಸ್ವಾಮಿಗಳಿಗೆ ಸೇರಬೇಕು. ನಾನು ತಿನ್ನುವ ಪ್ರತಿ ಆಗುಳಿನಲ್ಲಿ ನಾನು ಅವರನ್ನು ನೆನಪಿಸಿಕೊಳ್ಳುತ್ತೇನೆ ಎಂದು ಹೇಳುತ್ತಿರುತ್ತಾರೆ.
ಹೀಗೆ ಪಾರು ಧಾರಾವಾಹಿಯಲ್ಲಿ ಕಾಮಿಡಿ ವುಮನ್ ಆಗಿ ಎಲ್ಲರನ್ನೂ ನಗಿಸುತ್ತಾ ಇರುವ ಈಕೆ ಮಾತ್ರ ಬಹಳ ಕಷ್ಟದ ದಿನವನ್ನು ಕಳೆದು ಇದೀಗ ಕೊಂಚ ದುಃಖದಲ್ಲಿದ್ದಾರೆ. ಇನ್ನು ಬೋಲ್ಡ್ ಲುಕ್ ನಲ್ಲಿ ಕಾಣಿಸಿಕೊಂಡ ಸಿತಾರಳನ್ನು ನೋಡಿದ ಜನರಿಗೆ ಮಾತ್ರ ಬಹಳ ಖುಷಿ ಆಗಿದೆ. ಈ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.


Click it and Unblock the Notifications











