ಸೋಶಿಯಲ್ ಮೀಡಿಯಾದಲ್ಲಿ ಮೋಡಿ ಮಾಡುತ್ತಿರುವ ಕಿರುತೆರೆ ನಟಿಯರು ಇವರೇ: ಫಾಲೋವರ್ಸ್ ಎಷ್ಟು?

By ಎಸ್ ಸುಮಂತ್

ಈ ಹಿಂದೆಲ್ಲಾ ಸಿನಿಮಾದಲ್ಲಿ ನಟಿಸುವ ನಟಿಮಣಿಯರಿಗೆ ಮಾತ್ರ ಸಿಕ್ಕಾಪಟ್ಟೆ ಅಭಿಮಾನಿಗಳು ಹುಟ್ಟಿಕೊಳ್ಳುತ್ತಿದ್ದರು. ಧಾರಾವಾಹಿಗಳು ಸಿನಿಮಾಗೆ ಎಂಟ್ರಿ ಕೊಡುವ ಮೆಟ್ಟಿಲುಗಳಂತೆ ಬಳಕೆ ಮಾಡಿಕೊಳ್ಳಲಾಗುತ್ತಿತ್ತು. ಆದರೆ, ಈಗ ಕಾಲ ತುಂಬಾ ಬದಲಾಗಿದೆ. ಸಿನಿಮಾ ನಟಿಯರಿಗಿಂತ ಸೀರಿಯಲ್ ನಟಿಯರೇ ಹೆಚ್ಚು ಫೇಮಸ್ ಆಗಿದ್ದಾರೆ. ಗೃಹಿಣಿಯರು ಸೇರಿದಂತೆ ವಯಸ್ಕರು ಕೂಡ ಕಿರುತೆರೆ ನಟಿಯರ ಅಭಿಮಾನಿಗಳಾಗಿದ್ದಾರೆ. ಅದೇ ಕಾರಣಕ್ಕೆ ನಟಿಮಣಿಯರ ಸೋಶಿಯಲ್ ಮೀಡಿಯಾದಲ್ಲಿನ ಫಾಲೋವರ್ಸ್ ಸಂಖ್ಯೆ ಏರಿಕೆಯಾಗುತ್ತಿದೆ.

ಕಿರುತೆರೆಯಲ್ಲಿ ಸಾಕಷ್ಟು ನಟಿಯರಿಗೆ ಅಭಿಮಾನಿ ಬಳಗವಿದೆ. ಅವರ ಹೆಸರಲ್ಲಿ ಫ್ಯಾನ್ಸ್ ಪೇಜ್‌ಗಳು ಕ್ರಿಯೇಟ್ ಆಗಿವೆ. ಅದರಲ್ಲೂ ಮೇಘಾ ಶೆಟ್ಟಿ, ದೀಪಿಕಾ ದಾಸ್, ವೈಷ್ಣವಿ ಗೌಡ ಎಂದರೆ ಸ್ವಲ್ಪ ಹೆಚ್ಚು ಇಷ್ಟಪಡುವ ಮಂದಿ ಇದ್ದಾರೆ. ಅದಕ್ಕಾಗಿಯೇ ಅವರ ಫಾಲೋವರ್ಸ್ ಹೆಚ್ಚಿನ ಸಂಖ್ಯೆಯಲ್ಲಿ ರೀಚ್ ಆಗಿದ್ದಾರೆ.

ಈ ನಟಿಯರ ಫಾಲೋವರ್ಸ್ ಸಂಖ್ಯೆ ಮಿಲಿಯನ್ ದಾಟಿದೆ

ಈ ನಟಿಯರ ಫಾಲೋವರ್ಸ್ ಸಂಖ್ಯೆ ಮಿಲಿಯನ್ ದಾಟಿದೆ

ಇತ್ತೀಚೆಗೆ ಸೋಶಿಯಲ್ ಮೀಡಿಯಾ ಅನ್ನೋದು ಎಲ್ಲರ ಟೈಮ್ ಪಾಸ್ ಆಗಿ ಹೋಗಿದೆ. ಅದಕ್ಕೆಂದೇ ಮನರಂಜನೆಯ ತಾಣವಾಗಿದೆ. ರೀಲ್ಸ್ ಮಾಡುವವರು, ಕಾಮಿಡಿ ಮಾಡುವವರು ಹೆಚ್ಚಿನ ಸಂಖ್ಯೆಯಲ್ಲಿಯೇ ಸಿಗುತ್ತಿದ್ದಾರೆ. ಮನೆಯಲ್ಲಿನ ಟಿವಿಯನ್ನು ಹಿರಿಯರು ಮಾತ್ರ ನೋಡುವಂತಾಗಿದೆ. ಮಕ್ಕಳ ಕೈನ್ನಲ್ಲೆಲ್ಲಾ ಮೊಬೈಲ್ ಇದ್ದು ಮನರಂಜನೆಗಾಗಿ ಸೋಶಿಯಲ್ ಮೀಡಿಯಾದ ಮೊರೆ ಹೋಗಿದ್ದಾರೆ. ತಮ್ಮಿಷ್ಟದ ನಟಿ ಮಣಿಯ ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚು ಸಮಯವನ್ನೇ ಕಳೆಯುತ್ತಾರೆ. ಅದರಲ್ಲೂ ದೀಪಿಕಾ ದಾಸ್, ವೈಷ್ಣವಿ ಗೌಡ, ಮೇಘಾ ಶೆಟ್ಟಿಯನ್ನು ಫಾಲೋ ಮಾಡುವ ಸಂಖ್ಯೆ ಕಡಿಮೆ ಏನು ಇಲ್ಲ. ಮಿಲಿಯನ್ ಗಟ್ಟಲೇ ಫಾಲೋವರ್ಸ್ ಹೊಂದಿರುವ ಕಿರುತೆರೆ ನಟಿಯರಾಗಿದ್ದಾರೆ.

ದೀಪಿಕಾ ದಾಸ್ ಫಾಲೋವರ್ಸ್ ಎಷ್ಟು?

'ನಾಗಿಣಿ' ಧಾರಾವಾಹಿ ಮೂಲಕ ಎಲ್ಲರ ಮನದಲ್ಲಿ ನಿಂತವರು ಇದೇ ದೀಪಿಕಾ ದಾಸ್. ಆ ಬಳಿಕ ಬಿಗ್ ಬಾಸ್ ಗೆ ಎಂಟ್ರಿಯಾದರೂ. ಅಲ್ಲಿಯೂ ಒಂದಷ್ಟು ಅಭಿಮಾನಿಗಳನ್ನು ಸಂಪಾದಿಸಿಕೊಂಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಇವರು ಹೆಂಗಳೆಯರ ಫ್ಯಾಷನ್ ಐಕಾನ್. ಇನ್‌ಸ್ಟಾಗ್ರಾಂನಲ್ಲಿ ಸಿಕ್ಕಾಪಟ್ಟೆ ಆಕ್ಟೀವ್ ಇರುವ ನಟಿ ದೀಪಿಕಾ ದಾಸ್. ಸದ್ಯ ಯಾವುದೇ ಧಾರಾವಾಹಿಯಲ್ಲಿ ಕಾಣಿಸಿಕೊಳ್ಳುತ್ತಿಲ್ಲ. ಆದರೂ, ತಮ್ಮದೇ ಸೋಶಿಯಲ್ ಮೀಡಿಯಾ‌ ಮೂಲಕ ಅಭಿಮಾನಿಗಳ ಮನಮುಟ್ಟುತ್ತಿದ್ದಾರೆ. ಇವರಿಗೆ 1.3 ಮಿಲಿಯನ್ ಫಾಲೋವರ್ಸ್ ಇದ್ದು, ಸಿನಿಮಾ ನಟಿಯರಿಗಿಂತ ಹೆಚ್ಚು ಫಾಲೋವರ್ಸ್ ಸಂಪಾದಿಸಿದ್ದಾರೆ.

ವೈಷ್ಣವಿಗೌಡರನ್ನು ಫಾಲೋ ಮಾಡೋರೆಷ್ಟು?

ವೈಷ್ಣವಿ ಗೌಡ ಹೆಚ್ಚು ಖ್ಯಾತಿ ಪಡೆದಿದ್ದೆ ಸನ್ನಿಧಿಯಾಗಿ. ಈ ಮುಂಚೆ ಹಲವು ಧಾರಾವಾಹಿಗಳಲ್ಲಿ ನಟಿಸಿದ್ದರೂ ಸಹ, ವೈಷ್ಣವಿಗೆ ಹಿಟ್ ಕೊಟ್ಟಿದ್ದು 'ಅಗ್ನಿಸಾಕ್ಷಿ' ಧಾರಾವಾಹಿ. ಅದಾದ ಬಳಿಕ ಬಿಗ್ ಬಾಸ್‌ಗೆ ಬಂದ ಮೇಲಂತೂ ಅವರ ಖ್ಯಾತಿ ಇನ್ನಷ್ಟು ಎತ್ತರಕ್ಕೆ ಹೋಗಿತ್ತು. ಬಿಗ್‌ಬಾಸ್ ಮನೆಯಲ್ಲಿ ಅವರು ನಡೆದುಕೊಳ್ಳುತ್ತಿದ್ದ ರೀತಿ, ಅವರಿಗಿರುವ ತಾಯಿಯಂತಹ ಹೃದಯ, ತಾಳ್ಮೆಗೆ ಎಲ್ಲರೂ ಸಲಾಂ ಎಂದಿದ್ದರು. ಬಿಗ್‌ಬಾಸ್ ಮನೆಯಿಂದ ಹೊರ ಬಂದ ಮೇಲೆ ಅಭಿಮಾನಿಗಳ ಸಂಖ್ಯೆಯೂ ಹೆಚ್ಚಾಗಿದೆ. ಫ್ಯಾನ್ಸ್ ಪೇಜ್ ಕೂಡ ಜಾಸ್ತಿಯಾಗಿದೆ. ಫಾಲೋವರ್ಸ್ ಮಿಲಿಯನ್‌ಗೆ ಜಿಗಿದಿದೆ. ತನ್ನದೇ ಯೂಟ್ಯೂಬ್ ಕೂಡ ಮಾಡಿಕೊಂಡಿರುವ ವೈಷ್ಣವಿ ವೆರೈಟಿ ವೆರೈಟಿ ಪ್ರೋಗ್ರಾಂ ಮಾಡುತ್ತಾ ಬ್ಯುಸಿಯಾಗಿದ್ದಾರೆ.

ಮಿಲಿಯನ್ ಗಟ್ಟಲೇ ಮನಸ್ಸು ಗೆದ್ದಿರುವ ಮೇಘಾ!

ಮೇಘಾ ಶೆಟ್ಟಿ ಎಲ್ಲರಿಗೂ ಗೊತ್ತಿರುವ ನಟಿ. ಅನು ಸಿರಿಮನೆಯಾಗಿ ಈಗಾಗಲೇ ಎಲ್ಲರ ಮನಸ್ಸು ಗೆದ್ದಿದ್ದಾರೆ. ಮಾಡಿದ್ದು ಒಂದೇ ಸೀರಿಯಲ್ ಆದರೂ ಖ್ಯಾತಿ ಗಳಿಸಿದ್ದು ದೊಡ್ಡ ಮಟ್ಟದಲ್ಲಿ. ಮೇಘಾ ಶೆಟ್ಟಿ ಈಗಾಗಲೇ ಸಿನಿಮಾವನ್ನು ಮಾಡಿದ್ದಾರೆ. ಆಫರ್ ಗಳ ಸುರಿಮಳೆ ಮೇಘಾ ಶೆಟ್ಟಿಗಿದೆ. ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಆಗಿರುವ ಮೇಘಾಗೆ 1 ಮಿಲಿಯನ್ ಫಾಲೋವರ್ಸ್ ಇದ್ದಾರೆ.

More from Filmibeat

English summary
Kannada Serial Actress Social Media Followers List. Here is the details, Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X