ಆಕಸ್ಮಿಕವಾಗಿ ಚಿತ್ರರಂಗಕ್ಕೆ ಬಂದು 'ಲಾಂಗ್ ಡ್ರೈವ್' ಹೊರಟ ಮೈಸೂರು ಬೆಡಗಿಯ ಕಥೆಯೇನು?
'ಸೀತಾ ವಲ್ಲಭ' ಧಾರಾವಾಹಿಯ ಮೂಲಕ ಎಲ್ಲರ ಮನಗೆದ್ದ ನಟಿ ಸುಪ್ರಿತಾ ಸತ್ಯನಾರಾಯಣ. ಈ ಧಾರಾವಾಹಿ ಮೂಲಕ ಗುಬ್ಬಿಯಾಗಿ ನಟಿಸಿ ಕಿರುತೆರೆ ವೀಕ್ಷಕರ ಮನ ಮನಗೆದ್ದಿದ್ದಾರೆ. ತನ್ನ ಸಹಜ ಸೌಂದರ್ಯದಿಂದಾನೇ ಮೋಡಿ ಮಾಡಿರೋ ಕ್ಯೂಟ್ ಬೆಡಗಿ ಈಕೆ.
ಮೈಸೂರಿನಲ್ಲಿ ಹುಟ್ಟಿ ಬೆಳೆದ ಈ ಚೆಲುವೆ ಕಿರುತೆರೆಗೆ ಆಕಸ್ಮಾತಾಗಿ ಎಂಟ್ರಿ ಕೊಟ್ಟವರು. ಮೈಸೂರಿನಲ್ಲಿ ಇಂಜಿನಿಯರಿಂಗ್ ಮುಗಿಸಿ, ಕ್ಯಾಂಪಸ್‌ನಲ್ಲೇ ಸ್ಟಾಫ್ಟ್‌ವೇರ್ ಕಂಪನಿಯೊಂದು ಆಯ್ಕೆ ಮಾಡಿಕೊಂಡಿತ್ತು. ಆದರೆ, ಸುಪ್ರಿತಾ ಒಲವು ಬೇರೆ ಕಡೆಗೆ ಇತ್ತು.

ಸುಪ್ರಿತಾ ಸತ್ಯನಾರಾಯಣ ಸ್ಕ್ರಿಪ್ಟ್ ರೈಟಿಂಗ್ ಅಂದರೆ ಬಹಳ ಇಷ್ಟ. ಇನ್ನೇನು ಸಾಫ್ಟ್‌ವೇರ್ ಕೆಲಸ ಸಿಕ್ಕ ವೇಳೆನೇ ಒಂದು ಜನಪ್ರಿಯ ಚಾನೆಲ್‌ನಲ್ಲಿ ಸ್ಕ್ರಿಪ್ಟ್ ರೈಟಿಂಗ್ ಕೆಲಸಕ್ಕೆ ಕರೆದಿದ್ದರು. ಇದನ್ನು ನೋಡಿದ ಕೂಡಲೇ ಸುಪ್ರಿತಾ ಸತ್ಯನಾರಾಯಣ ಸಾಫ್ಟ್‌ವೇರ್ ಬಿಟ್ಟು ಸ್ಕ್ರಿಪ್ಟ್ ರೈಟಿಂಗ್ ಕಡೆ ಮುಖ ಮಾಡಿದ್ದರು. ಆದರೆ, ಅಲ್ಲಿ ನಟನೆಗೆ ಅವಕಾಶ ಸಿಕ್ಕಿತ್ತು.
'ಸೀತಾ ವಲ್ಲಭ' ಧಾರಾವಾಹಿಯಿಂದ ಫೇಮಸ್
ಸುಪ್ರಿತಾ ಸತ್ಯನಾರಾಯಣಗೆ ನಟನೆ ಅಚಾನಕ್ ಆಗಿ ಒದಗಿ ಬಂದ ಅವಕಾಶ. ಇವರ ಮೊದಲ ಧಾರಾವಾಹಿಯೇ 'ಸೀತಾ ವಲ್ಲಭ'. ಈ ಧಾರಾವಾಹಿ ಒಂದು ಕಾಲದಲ್ಲಿ ಕಿರಿತೆರೆ ವೀಕ್ಷಕರ ಫೆವರೀಟ್ ಧಾರಾವಾಹಿ ಆಗಿತ್ತು. ಈ ಧಾರಾವಾಹಿಯನ್ನು ನೋಡಲು ಕಾದು ಕೂರುತ್ತಿದ್ದದ್ದೂ ಇದೆ. ನಟನೆ ಬಗ್ಗೆ ಅಷ್ಟಾಗಿ ಗೊತ್ತಿಲ್ಲದೆ ಇದ್ದರೂ, 'ಸೀತಾ ವಲ್ಲಭ'ದಲ್ಲಿ ಇವರ ನಟನೆ ಕಂಡು ವೀಕ್ಷಕರು ಫಿದಾ ಆಗಿದ್ದರು.

ತೆಲುಗು ಕಡೆ ಮುಖ ಮಾಡಿದ ಸುಪ್ರಿತಾ
ಕನ್ನಡದಲ್ಲಿ ಸುಪ್ರಿತಾ ಸತ್ಯನಾರಾಯಣ ನಟನೆ ಕಂಡ ತೆಲುಗು ಮಂದಿ ಇವರಿಗೆ ಆಫರ್ ಕೊಟ್ಟಿದ್ದರು. ಕನ್ನಡ ಹಾಗೂ ತೆಲುಗು ಎರಡೂ ಭಾಷೆಯ ಧಾರಾವಾಹಿಗಳಲ್ಲೂ ಸುಪ್ರಿತಾ ಸತ್ಯನಾರಾಯಣ ನಟಿಸಲು ಆರಂಭಿಸಿದ್ದರು. ತೆಲುಗು ಬಾರದೇ ಇದ್ದರೂ, ಅಂಜದೆ ನಟಿಸಿದ್ದರು. ಭಾಷೆ ಯಾವುದಾದರೇನು? ಮುಖದ ಭಾವನೆ ಒಂದೇ ಅಲ್ಲವೇ? ಅನ್ನೋದು ಇವರ ಅಭಿಪ್ರಾಯ.
'ಲಾಂಗ್ ಡ್ರೈವ್' ಮೂಲಕ ಸಿನಿಮಾಗೆ ಎಂಟ್ರಿ
ಧಾರಾವಾಹಿಗಳಲ್ಲಿ ಫೇಮಸ್ ಆಗುತ್ತಿದ್ದಂತೆ ಕನ್ನಡದ ಸಿನಿಮಾಗಳಲ್ಲೂ ಇವರಿಗೆ ಆಫರ್ ಬಂದಿದೆ. ಕಿರುತೆರೆಯಲ್ಲಿ ಮಿಂಚಿದ ಬಳಿಕ 'ಲಾಂಗ್ ಡ್ರೈವ್' ಅನ್ನೋ ಸಿನಿಮಾದಲ್ಲಿ ನಟಿಸಿದ್ದರು. ಆ ಬಳಿಕ 'ರುಗ್ಣ' ಅನ್ನೋ ಸಿನಿಮಾದಲ್ಲಿ ನಟಿಸಿದ್ದಾರೆ. ಸಿನಿಮಾಗಳಲ್ಲೂ ವಿಭಿನ್ನ ಕಥೆಯನ್ನೇ ಆಯ್ಕೆ ಮಾಡಿಕೊಂಡಿದ್ದಾರೆ.
ಬೋಲ್ಡ್ ಲುಕ್‌ನಲ್ಲಿ ಸುಪ್ರಿತಾ
ಸುಪ್ರಿತಾ ಸತ್ಯನಾರಾಯಣಗೆ ಅರೆ ಬರೆ ಬಟ್ಟೆ ತೊಟ್ಟು ಬೋಲ್ಡ್ ಪಾತ್ರದಲ್ಲಿ ನಟನೆ ಮಾಡಲು ಇಷ್ಟ ಇಲ್ಲ. ಅಂತಹ ಸ್ಕ್ರಿಪ್ಟ್‌ನಲ್ಲಿ ನಟಿಸಲು ಹಿಂದೇಟು ಹಾಕುತ್ತಾರೆ ಎಂದು ವರದಿ ಆಗಿತ್ತು. ಕಂಟೆಂಟ್‌ಗೆ ಹೆಚ್ಚು ಪ್ರಾಮುಖ್ಯತೆ ಕೊಡುವ ಸುಪ್ರಿತಾ ಸತ್ಯನಾರಾಯಣ್ ಕಥೆಗಳ ಆಯ್ಕೆಗೆ ಹೆಚ್ಚು ಗಮನ ಹರಿಸುತ್ತಾರೆ.
ತೆಲುಗು ಚಿತ್ರರಂಗಕ್ಕೆ ಹಾರಿದ ನಟಿ
ತೆಲುಗು ಧಾರಾವಾಹಿಗಳಲ್ಲಿ ನಟಿಸುತ್ತಿದ್ದಂತೆ ಸುಪ್ರಿತಾ ಸತ್ಯನಾರಾಯಣಗೆ ಟಾಲಿವುಡ್ ಸಿನಿಮಾಗಳಲ್ಲೂ ನಟಿಸುವ ಅವಕಾಶ ಸಿಗುತ್ತಿದೆ. ಒಳ್ಳೊಳ್ಳೆ ಸಿನಿಮಾಗಳನ್ನು ಮಾಡುವ ಆಸೆ ಇವರಿಗಿದೆ. ಚಿತ್ರರಂಗದಲ್ಲಿ ಒಂದೊಳ್ಳೆ ಹೆಸರನ್ನು ಮಾಡಬೇಕು ಅನ್ನೋ ಆಸೆ ಇವರದ್ದು. ಹಾಗೇ ಪೌರಾಣಿಕ ಪಾತ್ರದಲ್ಲೂ ನಟಿಸಬೇಕು ಅನ್ನೋ ಆಸೆ ಇವರದ್ದು. ಇನ್ನು ಕನ್ನಡದ ನಿರ್ದೇಶಕ ಕೀರ್ತಿ, ಅನುಷ್ ಶೆಟ್ಟಿಯ 'ನೀನು ನಿನ್ನೊಳಗೆ ಖೈದಿ' ಎಂಬ ಕಾದಂಬರಿ ಆಧರಿಸಿ 'ಪಯಣಂ' ಅನ್ನುವ ಸಿನಿಮಾ ಮಾಡುತ್ತಿದ್ದು, ಅದರಲ್ಲಿ ನಾಯಕಿ ನಟಿಸುತ್ತಿದ್ದಾರೆ.


Click it and Unblock the Notifications











