ಪರಭಾಷೆಯ ಕಿರುತೆರೆಯಲ್ಲಿ ಮಿಂಚುತ್ತಿರುವ ಈ ಕನ್ನಡತಿ ಯಾರು ಗೊತ್ತೇ? ಇಲ್ಲಿದೆ ಮಾಹಿತಿ

By ಅನಿತಾ ಬನಾರಿ

ಕಿರುತೆರೆಯ ಮೂಲಕ ನಟನೆಗೆ ಕಾಲಿಟ್ಟ ಹಲವು ಕಲಾವಿದರು ಮುಂದೆ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿರುವುದು ತೀರಾ ಮಾಮೂಲಿ ಸಂಗತಿ. ಆದರೆ, ಈಕೆ ಕೊಂಚ ಭಿನ್ನ. ಸಿನಿಮಾ ಮೂಲಕ ನಟನಾ ಕ್ಷೇತ್ರಕ್ಕೆ ಪರಿಚಿತರಾಗಿರುವ ಸ್ವಾತಿ ಕೊಂಡೆ ತದ ನಂತರ ಕಾಣಿಸಿಕೊಂಡಿದ್ದು ಕಿರುತೆರೆಯಲ್ಲಿ. ತದ ನಂತರ ಪರಭಾಷೆಯ ಸಿನಿಮಾದಲ್ಲಿಯೂ ಅಭಿನಯಿಸಿರುವ ಈ ನಟಿ ಅಲ್ಲೂ ತಮ್ಮ ನಟನಾ ಛಾಪನ್ನು ಈಕೆ ಪಸರಿಸಿದ್ದಾರೆ‌. ಅಂದ ಹಾಗೇ ಈಕೆಯ ಹೆಸರು ಸ್ವಾತಿ ಕೊಂಡೆ.

ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಯಾರಿವಳು' ಧಾರಾವಾಹಿಯಲ್ಲಿ ನಾಯಕಿ ಮಾಯಾಳಾಗಿ ನಟಿಸಿ ಸೈ ಎನಿಸಿಕೊಂಡಿದ್ದರು ಸ್ವಾತಿ ಕೊಂಡೆ. ಮೊದಲ ಧಾರಾವಾಹಿಯಲ್ಲಿಯೇ ನಾಯಕಿಯಾಗಿ ನಟಿಸಿ ಕಿರುತೆರೆ ವೀಕ್ಷಕರ ಮನ ಸೆಳೆದಿದ್ದ ಸ್ವಾತಿ ಕೊಂಡೆ ನಂತರ ಕಿರುತೆರೆಯಲ್ಲಿ ಕಾಣಿಸಿಕೊಂಡಿದ್ದು ಕಡಿಮೆ. ಇತ್ತೀಚೆಗಷ್ಟೇ ತೆರೆ ಕಂಡಿರುವ ಮಲಯಾಳಂ ಸಿನಿಮಾ 'ಪವಿ ಕೇರ್ ಟೇಕರ್' ಸಿನಿಮಾದಲ್ಲಿ ಮಲಯಾಳಂನ ಜನಪ್ರಿಯ ನಟ ದಿಲೀಪ್ ಕುಮಾರ್ ಅವರೊಂದಿಗೆ ಸ್ವಾತಿ ಕೊಂಡೆ ತೆರೆ ಹಂಚಿಕೊಂಡಿದ್ದಾರೆ.

Kannada serial actress Swathi Konde who is busy in other language serials

ಮಾಡೆಲಿಂಗ್ ಮೂಲಕ ಬಣ್ಣದ ಲೋಕದ ನಂಟು ಬೆಳೆಸಿಕೊಂಡಿರುವ ಸ್ವಾತಿ ನಟನಾ ಜರ್ನಿ ಶುರುವಾಗಿದ್ದು ಸಿನಿಮಾದ ಮೂಲಕ. ನೀನಾಸಂ ಸತೀಶ್ ಮತ್ತು ಶ್ರುತಿ ಹರಿಹರನ್ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದ 'ಬ್ಯೂಟಿಫುಲ್ ಮನಸ್ಸುಗಳು' ಧಾರಾವಾಹಿಯಲ್ಲಿ ಅಚ್ಯುತ್ ಕುಮಾರ್ ಮಗಳಾಗಿ ಈಕೆ ಅಭಿನಯಿಸಿದ್ದರು.

ನಂತರ 'ಕಟ್ಟುಕಥೆ', 'ವೆನಿಲ್ಲಾ' ಮತ್ತು 'ಕಮರೊಟ್ಟು ಚೆಕ್ ಪೋಸ್ಟ್' ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದ ಈಕೆ ನಂತರ ಮಾಯಾಳಾಗಿ ಕಿರುತೆರೆಗೆ ಕಾಲಿಟ್ಟಿದ್ದಲ್ಲದೇ ತಮ್ಮ ನಟನೆಯ ಮೂಲಕ ವೀಕ್ಷಕರ ಮನ ಸೆಳೆಯುವಲ್ಲಿ ಯಶಸ್ವಿಯಾದರು. ಹೌದು, 'ಯಾರಿವಳು' ಧಾರಾವಾಹಿಯಲ್ಲಿ ಮಾಯಾ ಎನ್ನುವ ರಗಡ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದರು ಸ್ವಾತಿ ಕೊಂಡೆ. ಆಂಜನೇಯನ ಪರಮ ಭಕ್ತೆಯಾಗಿ ತೆರೆ ಮೇಲೆ ಕಾಣಿಸಿಕೊಂಡಿದ್ದ ಈಕೆ ಯಾವುದೇ ಕಾರ್ಯವನ್ನು ಮಾಡಲಿ, ಅದಕ್ಕಿಂತ ಮೊದಲು ಭಜರಂಗಿಯನ್ನು ನೆನೆಯುವುದನ್ನು ಮರೆಯುತ್ತಿರಲಿಲ್ಲ. ಏನೇ ಆದರೂ ಹಿಂಜರಿಯದೇ ಮುನ್ನುಗುವ ಹುಡುಗಿಯಾಗಿ ತೆರೆಯ ಮೇಲೆ ಕಾಣಿಸಿಕೊಂಡಿದ್ದರು ಸ್ವಾತಿ ಕೊಂಡೆ.

Kannada serial actress Swathi Konde who is busy in other language serials

ಅಂದ ಹಾಗೇ ಇದೇ ವರ್ಷ ಬಿಡುಗಡೆಯಾಗಿರುವ 'ಪವಿ ಕೇರ್ ಟೇಕರ್' ಸಿನಿಮಾ ಒಂದು ರೀತಿಯ ಸಸ್ಪೆನ್ಸ್ ರೊಮ್ಯಾಂಟಿಕ್ ಹಾಗೂ ಕಾಮಿಡಿ ಕಥಾಹಂದರನ್ನೊಳಗೊಂಡ ಸಿನಿಮಾ. ವಿನೀತ್ ಕುಮಾರ ನಿರ್ದೇಶನದ ಈ ಸಿನಿಮಾವನ್ನು ದಿಲೀಪ್ ಕುಮಾರ್ ಅವರು ಗ್ರ್ಯಾಂಡ್ ಪ್ರೊಡಕ್ಷನ್ ನಡಿಯಲ್ಲಿ ನಿರ್ಮಾಣ ಮಾಡಿದ್ದಾರೆ.

ತೆಲುಗಿನ ಧಾರಾವಾಹಿಯೊಂದರಲ್ಲಿಯೂ ನಾಯಕಿಯಾಗಿ ನಟಿಸಿರುವ ಸ್ವಾತಿ ಕೊಂಡೆ ಸದ್ಯ ತಮಿಳಿನ ಧಾರಾವಾಹಿಯೊಂದರಲ್ಲಿಯೂ ಬಣ್ಣ ಹಚ್ಚುತ್ತಿದ್ದಾರೆ. ಇನ್ನು ದಿಲೀಪ್ ಕುಮಾರ್ ನಟನೆಯ 'ಪವಿ ಕೇರ್ ಟೇಕರ್' ಸಿನಿಮಾದಲ್ಲಿ ಲೀನಾ ಪಾತ್ರಕ್ಕೆ ಜೀವ ತುಂಬಿರುವ ಸ್ವಾತಿ ಕೊಂಡೆ ಸದ್ಯ ಪರಭಾಷೆಯಲ್ಲಿ ಬ್ಯುಸಿಯಾಗಿರುವ ನಟಿ. 'ಯಾರಿವಳು' ಧಾರಾವಾಹಿ ಹಾಗೂ 'ಕಮರೊಟ್ಟು ಚೆಕ್ ಪೋಸ್ಟ್' ಸಿನಿಮಾದ ಬಳಿಕ ಕನ್ನಡ ಕಿರುತೆರೆ, ಹಿರಿತೆರೆಯಲ್ಲಿ ಕಾಣಿಸಿಕೊಂಡಿರದ ಈಕೆ ಮತ್ತೆ ಕಿರುತೆರೆಗೆ ಅಥವಾ ಸಿನಿಮಾ ಮರಳುತ್ತಾರಾ ಅನ್ನೋದು ಸದ್ಯಕ್ಕೆ ಕುತೂಹಲ.

More from Filmibeat

English summary
Yarivalu serial fame Swathi Konde is now busy on other language:
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X