Vaishnavi Gowda: ಕೇಸರಿ ಬಣ್ಣದ ಸೀರೆಯಲ್ಲಿ ಮುದ್ದು ಮುದ್ದಾಗಿ ಫೋಸ್ ಕೊಟ್ಟು ಮಿಂಚಿದ ನಟಿ ವೈಷ್ಣವಿ ಗೌಡ

By Poorva

ಅಗ್ನಿಸಾಕ್ಷಿ ಧಾರಾವಾಹಿಯ ಸನ್ನಿಧಿಯಾಗಿದ್ದ ನಟಿ ಈಗ ಸೀತಾರಾಮ ಧಾರಾವಾಹಿಯ ಮೂಲಕ ಸೀತಾ ಆಗಿ ಮಿಂಚುತ್ತಿದ್ದಾರೆ ನಟಿ ವೈಷ್ಣವಿ ಗೌಡ. ಈ ನಟಿ ಸೋಶಿಯಲ್ ಮೀಡಿಯಾದಲ್ಲಿ ಸಕ್ಕತ್ ಆಕ್ಟಿವ್ ಆಗಿದ್ದಾರೆ. ಅಭಿಮಾನಿಗಳ ಜೊತೆ ಆಗಾಗ ಫೋಟೋ ಶೇರ್ ಮಾಡಿಕೊಂಡು ಖುಷಿ ಪಡುತ್ತಿರುತ್ತಾರೆ.

ವೈಷ್ಣವಿ ಗೌಡ ಅಗ್ನಿಸಾಕ್ಷಿ ಧಾರಾವಾಹಿಯಿಂದ ಖ್ಯಾತಿ ಪಡೆದವರು. ಗುಳಿ ಕೆನ್ನೆಯ ಚೆಲುವೆಯ ನೋಟಕ್ಕೆ ಇದೀಗ ಸಾಕಷ್ಟು ಅಭಿಮಾನಿಗಳು ಫಿದಾ ಆಗಿದ್ದಾರೆ. ಹೊಸ ಫೋಟೋಗಳನ್ನು ನಟಿ ತಮ್ಮ ಸಾಮಾಜಿಕ ಮಾಧ್ಯಮಗಳಲ್ಲಿ ಶೇರ್ ಮಾಡಿಕೊಂಡಿದ್ದು, ಸೀರೆಯುಟ್ಟು ಚೆಲುವೆಯ ಅಂದಕ್ಕೆ ಅಭಿಮಾನಿಗಳು ಮನಸೋತಿದ್ದಾರೆ.

Kannada serial actress Vaishnavi Gowda Traditional Saree Look

ಕೇಸರಿ, ಪಿಂಕ್ ಮತ್ತು ಗೋಲ್ಡನ್ ಕಲರ್ ಸೀರೆಯಲ್ಲಿ ಬಹಳ ಅಂದವಾಗಿ ಕಾಣಿಸುತ್ತಿದ್ದಾರೆ. ಇನ್ನು ವೈಷ್ಣವಿ ಅಭಿಮಾನಿಗಳು ನಟಿ ಫೋಟೋಗಳಿಗೆ 'ಹೋಗಿ ದೃಷ್ಟಿ ತೆಗೆಸಿಕೊಳ್ಳಿ' ಎಂದು ಮೆಚ್ಚುಗೆ ಸೂಚಿಸಿದ್ದಾ. ಇನ್‌ಸ್ಟಾಗ್ರಾಮ್‌ನಲ್ಲಿ ಸದಾ ಆಕ್ಟಿವ್ ಆಗಿರುವ ವೈಷ್ಣವಿ ಗೌಡ ಆಗಾಗ ಫೋಟೋಶೂಟ್ ಮಾಡಿಸಿಕೊಳ್ಳುತ್ತಾರೆ.

ಮಾಡ್ರನ್ ಡ್ರೆಸ್‌ಗಳಲ್ಲಿ ಫೋಟೋ ಹಂಚಿಕೊಳ್ಳುವ ಇವರು ಹೊಸದಾಗಿ ಫೋಟೋ ಶೂಟ್ ಮಾಡಿಸಿಕೊಂಡು ನೋಡುಗರ ಗಮನ ಸೆಳೆದಿದ್ದಾರೆ. ಕೇಸರಿ ಸೀರೆಯುಟ್ಟು ಫೋಟೋಗಳಿಗೆ ಪೋಸ್ ನೀಡಿದ್ದಾರೆ. ವೈಷ್ಣವಿ ಫೋಟೋ ನೋಡಿ ಅಭಿಮಾನಿಗಳು ಬಹಳ ಖುಷಿ ಪಟ್ಟಿದ್ದಾರೆ .ಹಾಗೆಯೇ ಲೈಕ್ ಕಾಮೆಂಟುಗಳನ್ನು ಮಾಡಿ ಖುಷಿ ಪಡುತ್ತಿದ್ದಾರೆ.

ಈ ನಟಿ ಮಾಡರ್ನ್ ಲುಕ್‌ಗಿಂತ ಸಾಂಪ್ರದಾಯಿಕ ಲುಕ್ ನಲ್ಲಿ ಬಹಳ ಅಂದವಾಗಿ ಕಾಣಿಸುತ್ತಾರೆ ಎಂಬುದು ಅಭಿಮಾನಿಗಳ ಅಭಿಪ್ರಾಯ. ಹಸಿರು ಬಣ್ಣದ ಬ್ಲೌಸ್ ತೊಟ್ಟು, ಆರೆಂಜ್, ಕಿಂಕ್ ಮತ್ತು ಗೋಲ್ಡನ್ ಕಲರ್ ಸೀರೆಯುಟ್ಟು ಈ ನಟಿಯ ಅಂದಕ್ಕೆ ಮೆರುಗು ಕೊಟ್ಟಿರುವುದು ಚಿಕ್ಕದಾದ ಬಿಂದಿ. ಇದರ ಜೊತೆಗೆ ಹಣೆಯ ಮೇಲ್ಭಾಗದಲ್ಲಿ ಕುಂಕುಮವನ್ನು ಇಟ್ಟು ಬಹಳ ಅದ್ಭುತವಾಗಿ ಕಾಣಿಸುತ್ತಿದ್ದಾರೆ.

Kannada serial actress Vaishnavi Gowda Traditional Saree Look

ತಲೆಗೆ ಮಲ್ಲಿಗೆ ಮುಡಿದು ಮುದ್ದಾಗಿ ಕಾಣಿಸಿಕೊಂಡ ನಟಿ

ತಲೆಗೆ ಮಲ್ಲಿಗೆ ಹೂವನ್ನು ಮುದುಡಿಕೊಂಡು ಕುತ್ತಿಗೆಗೆ ನೆಕ್ಲೆಸ್ ಧರಿಸಿಕೊಂಡು ಇರುವುದೇ ಇವರ ಚೆಲುವಿಗೆ ಇನ್ನಷ್ಟು ಮೆರುಗು ನೀಡಿದೆ ಎಂದರೆ ತಪ್ಪಾಗದು. ಗುಳಿಕೆನ್ನೆಯ ಮೂಲಕ ಎಲ್ಲರ ಮನಸನ್ನು ಕದ್ದ ಚೆಲುವೆ ವೈಷ್ಣವಿ ಗೌಡ ಅವರ ಫೊಟೋಗಳಿಗೆ ರೆಡ್ ಹಾರ್ಟ್ ಅನ್ನು ಕಾಮೆಂಟ್ ಮಾಡುತ್ತಿದ್ದಾರೆ. ಸೀತಾರಾಮದ ಸೀತೆಯಾಗಿ ಮಿಂಚಿದ ನಟಿ ಅಭಿನಯದ ಮೂಲಕ ಎಲ್ಲರ ಮನಸನ್ನು ಕದ್ದಿದ್ದಾರೆ.

ಸೀತಾರಾಮ ಧಾರಾವಾಹಿಯಲ್ಲಿ ಬ್ಯುಸಿಯಾದ 'ಸನ್ನಿಧಿ'

ವೈಷ್ಣವಿ ಗೌಡ ಇದೀಗ ಸೀರಿಯಲ್‌ನಲ್ಲಿ ಬ್ಯುಸಿ ಆಗಿದ್ದಾರೆ. ವೈಷ್ಣವಿ ಗೌಡ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಚೆಲುವೆ ಫೋಟೋ ನೋಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಾ ಇರುತ್ತಾರೆ. ಅಗ್ನಿಸಾಕ್ಷಿಯ ಸನ್ನಿಧಿ ಹಣೆಪಟ್ಟಿಯಿಂದ ಸದ್ಯ ಸೀತೇಯಾಗಿ ಗುರುತಿಸಿಕೊಳ್ಳುತ್ತಿದ್ದಾರೆ. ಇನ್ನಿ ಸೀತಾ ರಾಮ ಯಾವಾಗ ಒಂದಾಗುತ್ತಾರೆ ಎಂದು ಜನರು ಕಾಯುತ್ತಿದ್ದಾರೆ

ರಾಮನಲ್ಲಿ ತಂದೆಯನ್ನು ಕಾಣುತ್ತಿರುವ ಸಿಹಿ

ಸೀತಾಗೆ ಮದುವೆ ಆಗುವಂತೆ ರಾಮ ಒತ್ತಾಯ ಮಾಡುತ್ತಾ ಇದ್ದಾನೆ. ಹೇಗಾದರೂ ಸೀತಾ ಬೇರೆ ಮದುವೆ ಆದರೆ ಆಕೆಗೆ ಇದ್ದ ಕಷ್ಟ ಎಲ್ಲ ಕಳೆದು ಹೋಗುತ್ತದೆ ಎನ್ನುವುದು ರಾಮನ ನಂಬಿಕೆ . ಆದರೆ ಸಿಹಿಗೆ ರಾಮ ನನ್ನ ಜೊತೆಯೇ ಇರಬೇಕು ಎನ್ನುವ ಆಸೆ . ಆ ಲಾಯರ್ ಅನ್ನು ಕಂಡರೆ ಭಯ ಪಡುವ ಸಿಹಿ ಆತನನ್ನು ಅಪ್ಪನೆಂದು ಒಪ್ಪಿಕೊಳ್ಳಲು ಸಾಧ್ಯವೇ ಇಲ್ಲ. ಅಷ್ಟು ದ್ವೇಷ ಮಾಡುತ್ತಾಳೆ . ಆದರೆ ರಾಮನಿಗೆ ಸಿಹಿ ಮನಸ್ಸು ಅರ್ಥ ಆಗುತ್ತಾ ಕಾದು ನೋಡಬೇಕಿದೆ.

More from Filmibeat

English summary
Vaishnavi Gowda New Saree photoshoot
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X