ಕೊಡಗಿನ ಕುವರಿಗೆ ಸಿನಿಮಾದಲ್ಲಿ ಅವಕಾಶ; ವೀಣಾ ಪೊನ್ನಪ್ಪಗೆ ಆಫರ್ ನೀಡಿದ ಉಪೇಂದ್ರ

ನೋಡಲು ಬಹಳ ಸುಂದರಿ ಆದರೆ ನಾಯಕಿ ಪಾತ್ರಕ್ಕಿಂತ ಖಳ ನಾಯಕಿ ಪಾತ್ರದಲ್ಲಿ ಹೆಚ್ಚಾಗಿ ಮಿಂಚಿದವರು. ಹೌದು ಅವರೇ ವೀಣಾ ಪೊನ್ನಪ್ಪ. ವೀಣಾ ಪೊನ್ನಪ್ಪ ಮೂಲತಃ ಕೊಡಗಿನ ಕುವರಿ. ಹೈಸ್ಕೂಲ್ ವಿದ್ಯಾಭ್ಯಾಸವನ್ನು ಕೊಡಗಿನಲ್ಲಿ ಮುಗಿಸಿ ಪದವಿ ವಿದ್ಯಾಭ್ಯಾಸವನ್ನು ಎಸ್ ಡಿ ಎಂ ಕಾಲೇಜು ಉಜಿರೆಯಲ್ಲಿ ಮುಗಿಸಿಕೊಂಡ ಬಳಿಕ ಮುಂದೇನು ಎಂಬ ಪ್ರಶ್ನೆ ವೀಣಾಗೆ ಕಾಡುತ್ತಿತ್ತು.

ವೀಣಾ ಪೊನ್ನಪ್ಪಗೆ ನಾನು ಉತ್ತಮ ನಟಿ ಆಗ ಬೇಕು ಎಂಬ ಕನಸು ಇತ್ತು. ಅದಕ್ಕಾಗಿ ಧಾರಾವಾಹಿಗಳಿಗೆ ಆಡಿಷನ್‌ಗಳನ್ನೂ ನೀಡಿದ್ದಾರೆ. ಇನ್ನು ವೀಣಾ ಮೊದಲ ಬಾರಿಗೆ ಬಣ್ಣದ ಲೋಕಕ್ಕೆ ಕಾಲಿಟ್ಟಿದ್ದು ಸಿಐಡಿ ಕರ್ನಾಟಕ ಎಂಬ ಧಾರವಾಹಿಯಿಂದ. ಆ ಬಳಿಕ ಬಿಳಿ ಹೆಂಡ್ತಿ, ಹರ ಹರ ಮಹಾದೇವ, ಪುಟ್ಮಲ್ಲಿ, ವಾರಸ್ದಾರ ಮತ್ತು ಕಿನ್ನರಿ ಧಾರಾವಾಹಿಗಳಲ್ಲಿ ಕಾಣಿಸಿಕೊಂಡಿದ್ದಾರೆ.

 Kannada serial actress Veena Ponnappa film journey

ಪುಟ್ಮಲ್ಲಿ ಧಾರವಾಹಿ ಇವರಿಗೆ ಇನ್ನಷ್ಟು ಖ್ಯಾತಿ ಗಳಿಸಿ ಕೊಡುತ್ತದೆ. ಆ ಬಳಿಕ ತೆಲುಗು ಕಿರುತೆರೆಯತ್ತ ಮುಖ ಮಾಡುತ್ತಾರೆ ವೀಣಾ ಪೊನ್ನಪ್ಪ. ವೀಣಾ ನೋಡಲು ಬಹಳ ಸುಂದರಿ. ಇವರ ನಟನೆಗೆ ಮಾತ್ರ ಮರುಳಾಗದವರೇ ಇಲ್ಲ. ಅಷ್ಟೊಂದು ಚೆನ್ನಾಗಿ ತನಗೆ ಕೊಟ್ಟ ಪಾತ್ರವನ್ನು ಅಚ್ಚುಕಟ್ಟಾಗಿ ಮಾಡಿ ಮುಗಿಸುತ್ತ ಇದ್ದರು.

ವೀಣಾಗೆ ಹೆಚ್ಚಾಗಿ ಖಳ ನಟಿ ಪಾತ್ರ ಸಿಗುತ್ತಿತ್ತು. ಖಳ ನಟಿಯಾಗಿ ಬಹಳ ಅದ್ಭುತವಾಗಿ ನಟನೆ ಮಾಡಿ ಸೈ ಎನಿಸಿಕೊಂಡಿದ್ದಾರೆ. ಈ ಧಾರವಾಹಿಗಳು ಮುಗಿದ ಬಳಿಕ ಐದು ವರುಷಗಳ ಕಾಲ ತೆಲುಗು ಇಂಡಸ್ಟ್ರಿಯ ಕಡೆ ಮುಖ ಮಾಡುತ್ತಾರೆ . ಸತತ ಐದು ವರುಷ ಆದ ಬಳಿಕ ಕನ್ನಡ ಇಂಡಸ್ಟ್ರಿಯಲ್ಲಿ ಕೆಲಸ ಮಾಡುತ್ತಿದ್ದಾರೆ.

ಹೌದು ಇದೀಗ ಉಧೋ ಉಧೋ ಶ್ರೀ ರೇಣುಕಾ ಎಲ್ಲಮ್ಮ ಧಾರಾವಾಹಿಯಲ್ಲಿ ನಟನೆ ಮಾಡುತ್ತಿದ್ದಾರೆ. ರಾಣಿ ಪಾತ್ರದಲ್ಲಿ ವೀಣಾ ಮಿಂಚುತ್ತಾ ಇದ್ದಾರೆ. ಕನ್ನಡದಲ್ಲಿ ಉತ್ತಮ ಸ್ಕ್ರಿಪ್ಟ್ ಗಾಗಿ ಕಾಯುತ್ತಿದ್ದೆ ಆದರೆ ಇದೀಗ ನನಗೆ ಉತ್ತಮ ಪಾತ್ರ ದೊರೆತಿದೆ ಆದ ಕಾರಣ ನಾನು ಕನ್ನಡ ಧಾರಾವಾಹಿಯಲ್ಲಿ ಅಭಿನಯ ಮಾಡುತ್ತಾ ಇದ್ದೇನೆ ಎಂದು ಹೇಳುತ್ತಾರೆ

ಇನ್ನು ವೀಣಾಗೆ ಸಿನಿಮಾದಲ್ಲಿ ಕೂಡ ಅವಕಾಶ ಸಿಗುತ್ತಿದೆ. ನಟ, ನಿರ್ದೇಶಕ ಉಪೇಂದ್ರ ಅವರ ಹೊಸ ಚಿತ್ರದಲ್ಲಿ ನಟಿಸುವ ಅವಕಾಶ ಒದಗಿ ಬಂದಿದೆ. ಹೌದು ಇದರಿಂದಾಗಿ ವೀಣಾಗೆ ಬಹಳ ಖುಷಿಯಾಗಿದೆ. ಉಧೋ ಉಧೋ ಶ್ರೀ ರೇಣುಕಾ ಯಲ್ಲಮ್ಮ ಧಾರಾವಾಹಿಯಲ್ಲಿ ರೇಣುಕೆಯ ತಂದೆ ಮಹಾರಾಜರ ಮೊದಲ ಪತ್ನಿಯಾಗಿ ನೆಗೆಟಿವ್ ಪಾತ್ರದಲ್ಲಿ ನಟಿಸುತ್ತಿರುವ ವೀಣಾ ಅಭಿನಯಕ್ಕೆ ಜನ ಫಿದಾ ಆಗಿದ್ದಾರೆ.

ವೀಣಾ ಅವರು ಅಭಿನಯಿಸುತ್ತಿರುವ ಮೂರನೇ ಪೌರಾಣಿಕ ಧಾರಾವಾಹಿ ಉಧೋ ಉಧೋ ಶ್ರೀ ರೇಣುಕಾ ಯಲ್ಲಮ್ಮ. ಇದಕ್ಕೂ ಮುನ್ನ 'ಹರಹರ ಮಹಾದೇವ', 'ಶ್ರೀ ವಿಷ್ಣು ದಶಾವತಾರ'ದಲ್ಲಿ ಇವರು ನಟನೆ ಮಾಡಿದ್ದಾರೆ. ಇದಕ್ಕೂ ಮುಂಚೆ ವೇದಾ ಸಿನಿಮಾದಲ್ಲಿ ಅಭಿನಯ ಮಾಡಿದ ವೀಣಾ ಪೊನ್ನಪ್ಪ ಬಹಳ ಅದ್ಭುತವಾಗಿ ನಟನೆ ಮಾಡಿದ್ದರು. ಇದೀಗ ಯು ಐ ಸಿನಿಮಾದ ಮೂಲಕ ಜನರ ಮನ ರಂಜಿಸಲು ಬರುತ್ತಿರುವುದು ಅಭಿಮಾನಿಗಳಿಗೆ ಖುಷಿ ಸುದ್ದಿಯೇ ಹೌದು.

More from Filmibeat

English summary
Kannada serial actors Veena ponnappa film journey
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X