ಮಲೆನಾಡಿನ ಬೆಡಗಿ ಯುಕ್ತಾ ತೆಲುಗಿನ ಕಿರುತೆರೆಯಲ್ಲಿ ಮಿಂಚಿದ್ದಾದರೂ ಹೇಗೆ?

By Poorva

ಮಲೆನಾಡಿನ ಕುವರಿ ಹಾಗೆಯೇ ಚಿಕ್ಕಮಗಳೂರಿನ ಚೆಲುವೆ ಯುಕ್ತಳನ್ನು ನೋಡಿದ ಅನೇಕ ಜನ ಆಕೆಯ ಮುಗ್ಧತೆಗೆ ಮನಸೋತಿದ್ದಾರೆ. ಹುಟ್ಟಿದ್ದು ಕರ್ನಾಟಕದಲ್ಲಿ ಆದರೂ ಆಕೆಗೆ ತೆಲುಗು ಇಂಡಸ್ಟ್ರಿಯಲ್ಲಿ ನಟನೆ ಮಾಡಲು ಅವಕಾಶ ಸಿಗುತ್ತದೆ. ಏನಾದರೂ ಸಾಧನೆ ಮಾಡಬೇಕು ಎಂದು ತುಡಿಯುತ್ತ ಇದ್ದ ಯುಕ್ತ ಮನಸಿಗೆ ಇದು ಬಹಳ ಖುಷಿ ನೀಡುತ್ತದೆ. ಇನ್ನು ವೈದೇಹಿ ಪರಿಣಯದಲ್ಲಿ ಆಕ್ಟ್ ಮಾಡಲು ಅವಕಾಶ ಸಿಕ್ಕಿದ ಒಡನೆಯೇ ಆಕೆ ತೆಲುಗು ಇಂಡಸ್ಟ್ರಿಗೆ ಮೊದಲು ಪಾದಾರ್ಪಣೆ ಮಾಡುತ್ತಾಳೆ.

ಯುಕ್ತ ವೈದೇಹಿ ಪರಿಣಯದಲ್ಲಿ ಮುದ್ದು ಮುದ್ದಾಗಿ ನಟಿಸಿ ಎಲ್ಲರ ಜನ ಮನ ಗೆದ್ದಿದ್ದರು. ಯುಕ್ತಾ ಮೂಲತಃ ಚಿಕ್ಕಮಗಳೂರಿನಲ್ಲಿ ಜನಿಸಿದರು. ಇವರು ಕನ್ನಡ, ಮಲಯಾಳಂ ಹಾಗೂ ತೆಲುಗಿನ ಧಾರಾವಾಹಿಯಲ್ಲಿ ಸಖತ್ ಆಗಿ ಮಿಂಚುತ್ತಾ ಇದ್ದಾರೆ. ವೈದೇಹಿ ಪರಿಣಯದಲ್ಲಿ ನಟನೆ ಮಾಡಿದ ಮುದ್ದು ಮುಖದ ಚೆಲುವೆಯನ್ನು ನೋಡಿ ಅಭಿಮಾನಿಗಳು ಸಖತ್ ಇಂಪ್ರೆಸ್ ಆಗಿದ್ದರು.

Kannada serial actress Yukta serial journey

ಯುಕ್ತಾ ಅವರು ತಮ್ಮ ಬಾಲ್ಯದ ಶಾಲಾ ಶಿಕ್ಷಣವನ್ನು ಸೇಂಟ್ ಜೋಸೆಫ್ ಕಾನ್ವೆಂಟ್ ಪ್ರೌಢಶಾಲೆಯಲ್ಲಿ ಪೂರ್ಣಗೊಳಿಸಿದರು. ಪದವಿ ವ್ಯಾಸಂಗ ಮಾಡಲು ಈಕೆ ಬೆಂಗಳೂರನ್ನು ಅರಸಿ ಬರಬೇಕಾಯಿತು. ಇವರು ಬೆಂಗಳೂರು ವಿಶ್ವವಿದ್ಯಾಲಯದಿಂದ ಪದವಿ ಪಡೆದರು. ಮಾಡೆಲಿಂಗ್ ಎಂದರೆ ಯುಕ್ತಗೆ ಎಲ್ಲಿಲ್ಲದ ಪ್ರೀತಿ, ಮೊದಲು ಇವರು ಮಾಡೆಲಿಂಗ್ ಕ್ಷೇತ್ರದಲ್ಲಿ ತನ್ನ ವೃತ್ತಿಜೀವನವನ್ನು ಪ್ರಾರಂಭಿಸಿ ನಂತರ ಕಿರುತೆರೆಗೆ ಪ್ರವೇಶಿಸಿದರು.

ಕಿರುತೆರೆಗೆ ಪ್ರವೇಶಿಸಿದ ಮೊದಲು ಅನೇಕ ಆಡಿಷನ್ ನೀಡುತ್ತಾರೆ. ಆದರೆ ಅದ್ಯಾವುದಕ್ಕೂ ಸೆಲೆಕ್ಟ್ ಆಗದೆ ಇದ್ದರೂ ಸುಮ್ಮನೆ ಕೂರದೆ ಮರಳಿ ಯತ್ನವ ಮಾಡೋಣ ಎಂದು ಪುನಃ ಪ್ರಯತ್ನ ಮಾಡುತ್ತಾರೆ. ಮೊದಲು ಇವರು ಜೀ ತೆಲುಗಿನಲ್ಲಿ ಪ್ರಸಾರವಾದ ತೆಲುಗು ಧಾರಾವಾಹಿ ವೈದೇಹಿ ಪರಿಣಯಂನಲ್ಲಿ ನಟನೆ ಮಾಡಿ ತನ್ನ ಛಾಪನ್ನು ಮೂಡಿಸಿದ್ದರು. ಮುಗ್ದ ಹುಡುಗಿಯ ಪಾತ್ರದಲ್ಲಿ ಮಿಂಚಿದ ಯೂಕ್ತಾ ನೋಡುಗರ ಮನ ಗೆದ್ದಿದ್ದಾರೆ.

ಯುಕ್ತ ಮಲಯಾಳಂ ಮತ್ತು ಕನ್ನಡ ಕಿರುತೆರೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಆದರೆ ಮೊದಲಿಗೆ ಯುಕ್ತ ಪ್ರತಿಭೆ ಗುರುತಿಸಿ ಆಕೆಗೆ ಲೀಡ್ ರೋಲ್‌ನಲ್ಲಿ ನಟನೆ ಮಾಡಲು ಮೊದಲು ಅವಕಾಶ ಸಿಕ್ಕಿದ್ದು ತೆಲುಗಿನಲ್ಲಿ. ಯುಕ್ತಾ ಸಾಮಾಜಿಕ ಜಾಲತಾಣಗಳಲ್ಲಿ ತುಂಬಾ ಸಕ್ರಿಯಳಾಗಿ ಕಾಣಿಸಿಕೊಂಡಿದ್ದಾರೆ.

Kannada serial actress Yukta serial journey

ಯುಕ್ತಗೆ ಪ್ರಾಣಿ ಗಳು ಎಂದರೆ ವಿಶೇಷವಾದ ಕಾಳಜಿ, ಪ್ರೀತಿ ಕೂಡ. ತನ್ನ ಮನೆಯ ಸಾಕು ಪ್ರಾಣಿಗಳನ್ನು ಮಕ್ಕಳ ಹಾಗೆಯೇ ಲಾಲನೆ ಪೋಷಣೆ ಮಾಡುತ್ತಾ ಬಹಳ ಖುಷಿಯಿಂದ ಕಾಲ ಕಳೆಯುತ್ತಾ ಇದ್ದಾರೆ. ಯುಕ್ತಾಳ ನೆಚ್ಚಿನ ಹವ್ಯಾಸವೆಂದರೆ ನೃತ್ಯ. ನೃತ್ಯ ಎಂದರೆ ಯುಕ್ತಗೆ ಎಲ್ಲಿಲ್ಲದ ಪ್ರೀತಿ. ನೃತ್ಯದಲ್ಲೆ ಏನಾದರೂ ಒಂದು ಸಾಧನೆ ಮಾಡಬೇಕು ಎಂಬುದು ಯುಕ್ತ ಆಶಯ ಕೂಡ.

ಹಾಗೆಯೇ ಹೊಸತು ಹೊಸತು ಜಾಗಕ್ಕೆ ಹೋಗುವುದು, ಹೀಗೆ ಅನೇಕ ಪ್ರವಾಸಿ ತಾಣಗಳಿಗೆ ಭೇಟಿ ನೀಡುವುದು ಆಕೆಯ ಮನಸಿಗೆ ಇನ್ನೂ ಖುಷಿ ನೀಡುವ ಸಂಗತಿಯಂತೆ. ಇನ್ನು ವೈದೇಹಿ ಪರಿಣಯ ಧಾರಾವಾಹಿಯಲ್ಲಿ ಪವನ್ ರವೀಂದ್ರ ಮತ್ತು ಕರುಣಾ ಭೂಷಣ್ ಮುಖ್ಯ ಪಾತ್ರಧಾರಿಗಳು. ಯುಕ್ತಾ ಮಲ್ನಾಡ್ ಪೋಷಕ ಪಾತ್ರಗಳಲ್ಲಿ ನಟಿಸಿದ್ದಾರೆ. ದತ್ತು ಪಡೆದ ಹುಡುಗಿ ವೈದೇಹಿ ತನ್ನ ಸಹೋದರಿ, ಮಹತ್ವಾಕಾಂಕ್ಷಿ ನಟಿ ಓಡಿಹೋದ ನಂತರ ದೇವಾಂಶ್ ಅವರನ್ನು ಮದುವೆಯಾಗುವ ಸುತ್ತ ಸುತ್ತುವ ಕಥೆ. ಆದರೆ ಅವಳ ಸಹೋದರಿ ಹಿಂತಿರುಗಿದಾಗ, ವೈದೇಹಿಯ ಹೊಸ ಗುರುತು ಕಣ್ಮರೆಯಾಗುತ್ತದೆ. ಇದು ಕತೆಯ ಸಾರಾಂಶ. ಇದೀಗ ಕನ್ನಡದಲ್ಲೂ ತೆಲುಗಿನಿಂದ ರಿಮೇಕ್ ಮಾಡಿ ಈ ಧಾರಾವಾಹಿಯನ್ನು ತೋರಿಸಲಾಗುತ್ತದೆ.

More from Filmibeat

English summary
Kannada serial actor yukta serial journey.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X