Amruthadhare ; ಜೈ ದೇವ್ ಗೆ ಪ್ರಮೋಶನ್ ನೀಡಿದ ಗೌತಮ್, ಸತ್ಯ ಹೇಳ್ತಾಳಾ ಮಲ್ಲಿ..?

By ಪೂರ್ವ

ಮಲ್ಲಿ ಗೆ ಜೈ ದೇವ್ ಏನು ಹೇಗೆ ಎಲ್ಲವೂ ಬಹಳ ಚೆನ್ನಾಗಿಯೇ ಗೊತ್ತು. ಮಲ್ಲಿ ಬೇರೊಂದಿಗೆ ಪ್ರೀತಿಯಲ್ಲಿ ಬಿದ್ದಿದ್ದಾನೆ ಆತನ ಪ್ರಪಂಚವೇ ಬೇರೆ ಎನ್ನುವುದು ಮಲ್ಲಿಗೆ ತಿಳಿದಿದೆ. ಆದರೆ ಗಂಡ ಎನ್ನುವ ಒಂದೇ ಕಾರಣಕ್ಕೆ ಮಲ್ಲಿ ಸುಮ್ಮನಿದ್ದಾಳೆ. ಜೈ ದೇವ್ ಗೆ ಹೇಗಾದರೂ ಮಾಡಿ ಪಾಠ ಕಲಿಸಲೇಬೇಕು ಇಲ್ಲವಾದರೆ ಖಂಡಿತವಾಗಿಯೂ ಯಾರಿಗಾದರೂ ತೊಂದರೆ ಮಾಡಿಯೇ ಮಾಡುತ್ತಾನೆ ಎನ್ನುವ ಯೋಚನೆ ಮಲ್ಲಿಗೆ ಮೂಡುತ್ತದೆ. ಇದಕ್ಕೆ ಸರಿಯಾಗಿ ಇದೀಗ ಆಫೀಸ್ ನಲ್ಲಿ ಕೂಡ ಜೈದೇವ್‌ನನ್ನು ಉತ್ತಮ ಸ್ಥಾನಕ್ಕೆ ಇರಿಸಲು ಗೌತಮ್ ಎಲ್ಲಾ ಪ್ರಯತ್ನವನ್ನು ಮಾಡುತ್ತಿದ್ದಾನೆ.

ಲಚ್ಚಿ ಕಿಡ್ನಾಪ್ ಗೆ ಜೈದೇವ್ ಸಹಾಯ ಮಾಡಿದ್ದಾನೆ ಎಂದು ತಿಳಿದರೆ ಖಂಡಿತವಾಗಿಯೂ ಗೌತಮ್ ಮಾತನ್ನ ಸುಮ್ಮನೆ ಬಿಡುವ ಮಾತೇ ಇಲ್ಲ.ಹಾಗೆಯೇ ಆತನಿಗೆ ಕೊಡಬೇಕಾದ ಅಂತಹ ಉತ್ತಮ ಪೋಸ್ಟನ್ನು ಕೂಡ ಕ್ಯಾನ್ಸಲ್ ಮಾಡಬಹುದು.ಜೈ ದೇವ್ ಇದೀಗ ಲಚ್ಚಿಯನ್ನು ಮನೆಯಿಂದ ಕಿಡ್ನಾಪ್ ಮಾಡಿಸಿ ಭೂಮಿಕಾ ದಿಕ್ಕು ತಪ್ಪಿಸಿದ್ದಾನೆ.ಆದರೆ ಇದಕ್ಕೆಲ್ಲ ಕಾರಣ ಶಕುಂತಲಾ ದೇವಿ.ಶಕುಂತಲಾ ದೇವಿ ಬಣ್ಣ ಎಲ್ಲಿ ಬಯಲಾಗಿ ಬಿಡುತ್ತದೆಯೋ ಎನ್ನುವ ಭಯದಲ್ಲಿ ಜೈದೇವನ ಮುಂದೆ ಬಿಟ್ಟು ಲಚ್ಚಿಯನ್ನ ಕಿಡ್ನಾಪ್ ಮಾಡಿಸುತ್ತಾರೆ. ಆದರೆ ಲಚ್ಚಿ ಹೇಗೋ ಪ್ರಾಣಪಾಯದಿಂದ ಪಾರದಳು.

kannada-serial-amrutadhare-episode-22th-april

ಲಚ್ಚಿನ ಗೌತಮ್ ಮನೆಗೆ ಕರೆದುಕೊಂಡು ಬಂದಾಗ ಶಕುಂತಲಾ ದೇವಿಗೆ ಒಂದು ಕಡೆ ಗಾಬರಿಯಾದರೆ ಭೂಮಿಕಾ ಹಾಗೂ ಮಲ್ಲಿ ಹಾಗೆಯೇ ಲಚ್ಚಿ ತಾಯಿ ಬಹಳ ಖುಷಿ ಪಡುತ್ತಾರೆ. ಭೂಮಿಕ ಮೇಲೆ ಗೌತಮ್ ನನ್ನ ಎತ್ತಿ ಕಟ್ಟಬೇಕು ಎನ್ನುವ ದೃಷ್ಟಿಯಿಂದ ಈ ರೀತಿಯ ಕೆಲಸವನ್ನ ಮಾಡಿದ ಶಕುಂತಲಾ ದೇವಿಗೆ ಇದೀಗ ಲಚ್ಚಿ ಕಿಡ್ನಾಪ್ ಮಾಡಿದ್ದು ನಾವೇ ಎಂದು ಗೊತ್ತಾದರೆ ಖಂಡಿತ ಗೌತಮ್ ಸುಮ್ಮನೆ ಬಿಡುವ ಮಾತೆ ಇಲ್ಲ ಎಂದು ಆಕೆಗೆ ಭೀತಿ ಶುರುವಾಗಿದೆ. ಆದರೆ ಏನು ಗೊತ್ತಿಲ್ಲದ ಹಾಗೆ ಸುಮ್ಮನೆ ಇರುತ್ತಾಳೆ.

ಭೂಮಿಕಾ ಖುಷಿಗೆ ಪಾರವೇ ಇಲ್ಲ

ಇತ್ತ ಗೌತಮ್ ಮನೆಗೆ ಬಹಳ ಖುಷಿಯಿಂದ ಓಡಾಡಿಕೊಂಡು ಬರುತ್ತಾನೆ. ಹಾಗೆಯೇ ಭೂಮಿಕಾ ಬಳಿ ಬಂದ ಗೌತಮ್ ನ ಕೈಯಲ್ಲಿದ್ದ ಕವರ್ ನೋಡಿದ ಭೂಮಿ, ವಾವ್ ಇದು ಜೈ ದೇವ್ ಅವರ ಪ್ರಮೋಶನ್ ಲೆಟರ್ ಇದ್ದ ಹಾಗೆ ಇದೆ ಎಂದಾಗ ಗೌತಮ್ ಹೇಳುತ್ತಾನೆ ಅಷ್ಟೇ ಅಲ್ಲ ಇನ್ನೂ ಮೇಲೆ ನಮ್ಮ ಕಂಪನಿಯ ಬೋರ್ಡ್ ಆಫ್ ಡೈರೆಕ್ಟರ್ ನಲ್ಲಿ ಜೈ ದೇವ್ ಕೂಡ ಒಬ್ಬ ಎಂದು ಬಹಳ ಖುಷಿಯಿಂದ ಹೇಳುತ್ತಾನೆ ಆತನ ಮಾತು ಕೇಳಿದ ಭೂಮಿಗೆ ಬಹಳ ಖುಷಿಯಾಗಿ ಮಲ್ಲಿಯನ್ನು ರೂಮ್ ಗೆ ಬರ ಹೇಳುತ್ತಾಳೆ. ಹಾಗೆಯೇ ಗೌತಮ್ ಹೇಳಿದ ವಿಚಾರವನ್ನು ಭೂಮಿಕಾ ಮಲ್ಲಿ ಗೆ ಬಹಳ ಖುಷಿಯಿಂದ ಹೇಳುತ್ತಾಳೆ. ಜೈ ದೇವ್ ಅವರ ಪ್ರಮೋಶನ್ ಲೆಟರ್ ಕೂಡ ಕೊಡುತ್ತಾಳೆ.

ಮಲ್ಲಿ ಮನದಲ್ಲಿ ನೂರಾರು ಆಲೋಚನೆ

ಆ ಲೆಟರ್ ನೋಡುತ್ತಿದ್ದ ಹಾಗೆಯೇ ಮಲ್ಲಿ ಬಹಳ ಬೇಸರ ಮಾಡಿಕೊಳ್ಳುತ್ತಾಳೆ. ಹಾಗೆಯೇ ಮನದಲ್ಲಿ ನೋಡಿ ನಿಮ್ಮನ್ನು ಅದೆಷ್ಟು ಜನರು ನಂಬಿದ್ದಾರೆ ಆದರೆ ನೀವು ಅವರ ನಂಬಿಕೆಗೆ ಮೋಸ ಮಾಡುತ್ತಿದ್ದೀರಾ ಎಂದು ಬಹಳ ಬೇಸರ ಪಡುತ್ತಾಳೆ. ಮಲ್ಲಿ ಮುಖ ನೋಡಿಯೇ ಭೂಮಿಕಾ ಗೆ ಒಂದು ಖಾತ್ರಿ ಆಗುತ್ತದೆ. ಇಲ್ಲಿ ಯಾವುದೂ ಸರಿಯಾಗಿಲ್ಲ ಎನ್ನುವುದು. ಹಾಗೆಯೇ ಭೂಮಿಕಾ ಹಾಗೂ ಗೌತಮ್, ಮಲ್ಲಿ ಜೊತೆ ಕೇಳುತ್ತಾರೆ ಯಾಕೆ ಏನಾಯಿತು.ಯಾವುದೇ ವಿಚಾರವನ್ನು ತಮ್ಮ ಬಳಿ ಸಂಕೋಚ ಇಲ್ಲದೆ ಹೇಳಬೇಕು ಎಂದು ಗೌತಮ್ ಹಾಗೂ ಭೂಮಿಕಾ ಹೇಳುತ್ತಾರೆ.

ಆದರೆ ಭೂಮಿಕಾ ಮಾತಿಗೆ ಮಲ್ಲಿ ಮಾತ್ರ ಮೌನ ವಹಿಸುತ್ತಾಳೆ. ಮಲ್ಲಿ ಎಲ್ಲಾದರೂ ಜೈ ದೇವ್ ಕರಾಳ ಮುಖವನ್ನು ಗೌತಮ್ ಭೂಮಿಕಾ ಎದುರು ಬಿಚ್ಚಿಟ್ಟರೆ ಮಂತ್ಯಕ್ಕಿ ಖಂಡಿತವಾಗಿಯೂ ಯುದ್ಧ ನಡೆಯುವುದು ಖಚಿತ ಎನ್ನುವುದು ಆಕೆಗೆ ಚೆನ್ನಾಗಿ ತಿಳಿದಿರುತ್ತದೆ. ಜೈ ದೇವ್ ಮನೆಯಲ್ಲಿ ಎಲ್ಲರ ಜೊತೆಗೆ ಚೆನ್ನಾಗಿರುತ್ತಾನೆ. ಆದರೆ ಮಲ್ಲಿ ಗೆ ಜೈ ದೇವ್ ಎರಡನೇ ಮದುವೆ ಆಗಲು ಹೊರಟಿದ್ದು ಹಾಗೆಯೇ ಲಚ್ಚಿ ಕಿಡ್ನಾಪ್ ಮಾಡಿಸಿದ್ದು ಇದೆಲ್ಲ ಜೈ ದೇವ್ ಎನ್ನುವುದು ಮಲ್ಲಿಗೆ ಗೊತ್ತಿದೆ ಆದರೆ ಮಲ್ಲಿ ಇದ್ಯಾವುದನ್ನೂ ಯಾರ ಜೊತೆಯೂ ಹೇಳುತ್ತಿಲ್ಲ. ಶಕುಂತಲಾ ದೇವಿ ಮುಂದೇನು ಕಿತಾಪತಿ ಕೆಲಸಗಳನ್ನು ಮಾಡುತ್ತಾಳೆ ಎಂಬುವುದನ್ನು ಕಾದು ನೋಡಬೇಕಿದೆ.

More from Filmibeat

English summary
kannada serial amrutadhare episode 22th April
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X