Amruthadhare ; ಅಪ್ಪ ಅಮ್ಮನನ್ನು ಹೊರದಬ್ಬಿದ ಜೀವ, ಪಾಠ ಕಲಿಸುತ್ತಾಳ ಭೂಮಿಕಾ ?

By ಪೂರ್ವ

ಜೀವ ಹಾಗೂ ಮಹಿಮಾ ಬಹಳ ಪ್ರೀತಿಸಿ ಮದುವೆಯಾದ ಜೋಡಿ. ಆದರೆ ಈ ಜೋಡಿ ಮೇಲೆ ಯಾರ ಕಣ್ಣು ಬಿತ್ತೋ ಗೊತ್ತಿಲ್ಲ. ಇದೀಗ ಅವರಿಬ್ಬರ ಮಧ್ಯೆ ಕಲಹ ಏರ್ಪಟ್ಟಿದೆ. ಭೂಪತಿ ಬಗ್ಗೆ ಜೀವ ಬಳಿ ಭೂಮಿಕಾ ನೂರು ಬಾರಿ ಹೇಳಿದರು ಕೂಡ ಆತ ಭೂಮಿಕಾ ಮಾತಿಗೆ ತಲೆ ಕೆಡಿಸಿಕೊಂಡ ಹಾಗೆ ಕಾಣುತ್ತಿಲ್ಲ. ಭೂಮಿಕಾ ಎಂದರೆ ಜೀವ ಗೆ ಕೊಂಚ ರೆಸ್ಪೆಕ್ಟ್ ಇತ್ತು ಆದರೆ ಇದೀಗ ಜೀವನ ಮೊಗದಲ್ಲಿ ಅದ್ಯಾವುದೂ ಕಾಣುತ್ತಿಲ್ಲ. ಬದಲಿಗೆ ಭೂಪತಿ ಎನು ಹೇಳುತ್ತಾನೋ ಅದೆಲ್ಲವನ್ನೂ ಕೇಳುವ ಮನಸ್ಥಿತಿ ಆತನಿಗೆ ಬಂದು ಬಿಟ್ಟಿದೆ.

ಮಹಿಮಾ ಮನೆಯಲ್ಲಿ ಸಿಗರೇಟ್ ಸೇದುತ್ತಿರುವುದನ್ನು ನೋಡಿದ ಭೂಮಿಕಾ ತಾಯಿ ಮಂದಾಕಿನಿ ಗೆ ತಡೆದುಕೊಳ್ಳಲು ಆಗಲಿಲ್ಲ. ಆಕೆಗೆ ಬಹಳಷ್ಟು ನೋವಾಗುತ್ತದೆ. ಇದೇನಪ್ಪ ಮನೆ ಬೆಳಗಿದ ಸೊಸೆಯೇ ಈ ರೀತಿ ನಡೆದುಕೊಂಡರೆ ಮುಂದೆ ಈ ಮನೆಯ ಗತಿ ಏನು ಎಂದು ಬಹಳ ನೊಂದುಕೊಳುತ್ತಾಳೆ ಹಾಗೆಯೇ ಮಂದಾಕಿನಿ ಮಗಳಂತಿರುವ ಸೊಸೆ ಗೆ ಬುದ್ದಿ ಮಾತು ಹೇಳುತ್ತಾಳೆ.

kannada-serial-amrutadhare-episode-23th-april

ಹೀಗೆಲ್ಲ ಮಾಡಿದರೆ ನಮ್ಮ ಮನೆತನದ ಮಾನ ಮರ್ಯಾದೆ ಹಾಳಾಗಿ ಹೋಗುವುದು ಖಚಿತ. ದಯವಿಟ್ಟು ಆ ರೀತಿಯ ಕೆಲಸಗಳನ್ನು ಮಾಡಬೇಡ ಎಂದು ಬುದ್ದಿ ಮಾತು ಹೇಳುತ್ತಾರೆ. ಇದನ್ನು ಕೇಳಿದ ಮಹಿಮಾ ಬಹಳ ನೊಂದುಕೊಳ್ಳುತ್ತಾಳೆ. ನನಗೆ ಇತ್ತೀಚಿಗೆ ತುಂಬಾ ಟೆನ್ಶನ್ ಆಗುತ್ತದೆ. ಅದಕ್ಕೆ ಸಿಗರೇಟ್ ಸೇದುತ್ತೇನೆ ಇನ್ನೂ ಮುಂದೆ ಈ ರೀತಿ ನಾವು ಮಾಡುವುದು ಇಲ್ಲ ಎಂದು ಹೇಳುತ್ತಾಳೆ.

ಹಾಗೆಯೇ ಮಂದಾಕಿನಿಯನ್ನು ಬಿಗಿದಪ್ಪಿಕೊಂಡು ಅಳುತ್ತಾಳೆ. ಜೀವ ನಡೆದುಕೊಳ್ಳುತ್ತಿರುವ ರೀತಿಯಿಂದ ಮನೆ ಮಂದಿಗೆ ಬಹಳಷ್ಟು ನೋವಾಗುತ್ತದೆ. ಮಹಿಮಾ ಜೊತೆಗೆ ಜೀವ ಬಹಳಷ್ಟು ಪ್ರೀತಿಯಿಂದ ನಡೆದುಕೊಳ್ಳುತ್ತಿದ್ದ ಆದರೆ ಆ ಪ್ರೀತಿ ಇದೀಗ ಕಾಣಿಸುತ್ತಿಲ್ಲ. ಇನ್ನು ಮಹಿಮಾ ಮನೆಯಲ್ಲಿ ಮಧ್ಯ ಸೇವನೆ ಮಾಡುತ್ತಿರುವುದನ್ನು ಕಂಡ ಜೀವಗೆ ಬಹಳ ಬೇಸರವಾಗುತ್ತದೆ.

ಹಾಗೆಯೇ ಮಹಿಮಾ ವರ್ತನೆಯಿಂದ ಬಹಳಷ್ಟು ಕೋಪ ಬರುತ್ತದೆ. ಮಹಿಮಾ ಬಳಿ ಬಹಳ ಜೋರಾಗಿಯೇ ಮಾತನಾಡುತ್ತಾನೆ. ಯಾಕೆ ಹೀಗೆಲ್ಲ ನಡೆದುಕೊಳ್ಳುತ್ತಿದ್ದಿಯ? ನಿನಗೆ ಮಧ್ಯ ಸೇವನೆ ಮಾಡಲು ಯಾರು ಬಿಟ್ಟಿದ್ದು ಎಂದಾಗ ಮಹಿಮಾ ಪ್ರತ್ಯುತ್ತರವಾಗಿ ಹೇಳುತ್ತಾಳೆ.

ಮಹಿಮಾ ಸ್ಥಿತಿ ಕಂಡು ಕುಪಿತಗೊಂಡ ಜೀವ

ನೀನು ಮಧ್ಯ ಸೇವನೆ ಮಾಡುವಾಗ ನಾನು ಏನಾದರು ಹೇಳುತ್ತೇನಾ ಇಲ್ಲ. ಹಾಗಂದ ಮಾತ್ರಕ್ಕೆ ನೀನು ಯಾಕೆ ನನ್ನನ್ನು ಕೇಳುತ್ತಿಯಾ? ನೀನು ಡ್ರಿಂಕ್ಸ್ ಸೇವನೆ ಮಾಡಿದರೆ ನಾನು ಯಾಕೆ ಹಾಗೆ ಮಾಡಬಾರದು ಅದಕ್ಕೆ ನೀನು ಯಾಕೆ ಕೋಪ ಮಾಡಿಕೊಳ್ಳುತ್ತಿಯಾ ಎಂದು ಹೇಳುತ್ತಾಳೆ ಆ ಮಾತು ಕೇಳಿದ ಜೀವನಿಗೆ ಬಹಳ ಸಿಟ್ಟು ಬರುತ್ತದೆ. ಹಾಗೆಯೇ ತನ್ನ ತಂದೆ ತಾಯಿಯನ್ನು ಬಹಳ ಜೋರಾಗಿಯೇ ಕರೆಯುತ್ತಾನೆ. ಮಹಿಮಾ ಇರುವ ಸ್ಥಿತಿಯನ್ನು ನೋಡಿ ಸದಾಶಿವ ರಾಯರಿಗೆ ಎನು ಮಾಡಬೇಕು ಎಂದು ದಿಕ್ಕೇ ತೋಚದ ಹಾಗಾಗುತ್ತದೆ. ಹಾಗೆಯೇ ಮೌನಿಯಾಗುತ್ತಾರೆ.

ತಂದೆಯ ಮಾತಿಗೆ ಬಗ್ಗದ ಜೀವ ಮಾಡಿದ್ದೇನು ಗೊತ್ತಾ?

ನೀನು ಕುಡಿದು ಬಂದಾಗ ನಮ್ಮ ಮಾತು ಕೇಳುವುದು ಇಲ್ಲ ನಾವು ಅದೆಷ್ಟೇ ಬಾರಿ ನಿನ್ನ ಬಳಿ ಹೇಳಿದಾಗ ನಮ್ಮ ವಿರುದ್ಧವಾಗಿ ನಡೆದುಕೊಳ್ಳುತ್ತಿಯ ಆದರೆ ಸೊಸೆ ಗೆ ನಾವು ಹೇಗೆ ಸಾಧ್ಯ ಎಂದಾಗ ಜೀವ ಗೆ ಮತ್ತಷ್ಟು ಕೋಪ ಬಂದು ಇನ್ನೂ ಮೇಲೆ ನೀವು ಈ ಮನೆಯಲ್ಲಿ ಇರುವ ಅಗತ್ಯ ಇಲ್ಲ. ನೀವು ನನ್ನ ಮನೆಯಿಂದ ದಯವಿಟ್ಟು ಹೊರಟು ಹೋಗಿ ಎಂದು ತಂದೆ ತಾಯಿಯ ಕೈ ಹಿಡಿದು ಉಟ್ಟ ಬಟ್ಟೆಯಲ್ಲಿ ಮನೆಯಿಂದ ಜೀವ ಹೊರಗಡೆ ಆಗುತ್ತಾನೆ.

ಮನೆ ಮುಂದೆ ಜನರು ಬಂದು ನಿಂತಾಗ ಸದಾಶಿವ ಗೆ ಬಹಳ ನೋವಾಗುತ್ತದೆ. ಮುಜುಗರವಾಗುತ್ತದೆ ಜೀವ ಅದೆಲ್ಲವನ್ನೂ ಲೆಕ್ಕಿಸದೆ ಮನೆಯ ಒಳಗೆ ಹೆಂಡತಿಯನ್ನು ಕರೆದುಕೊಂಡು ಹೋಗುತ್ತಾನೆ. ಭೂಮಿಕಾ ತನ್ನ ತಂದೆ ತಾಯಿ ಗೆ ಕರೆ ಮಾಡುತ್ತಾಳೆ ಆದರೆ ಫೋನ್ ಪಿಕ್ ಮಾಡದ್ದನ್ನು ನೋಡಿ ಕೊಂಚ ಆತಂಕವಾಗುತ್ತದೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X