Amrutadhare : ರೊಚ್ಚಿಗೆದ್ದ ಅಭಿಮಾನಿಗಳು, ಪಾರ್ಥ ಹೇಳಿದ್ದೇನು ?
ಭೂಮಿಕಾ ಗೆ ಇದೀಗ ಶಕುಂತಲಾ ದೇವಿ ಡಾಕ್ಟರ್ ಹೇಳಿದ ವಿಚಾರವನ್ನು ಪ್ರಸ್ತಾಪ ಮಾಡುತ್ತಾಳೆ. ಗೌತಮ್ ಗೆ ಮಕ್ಕಳಾಗುವುದಿಲ್ಲ ಎನ್ನುವ ವಿಚಾರವನ್ನು ಭೂಮಿಕಾ ಮನದಲ್ಲಿ ಇಟ್ಟುಕೊಂಡಿರುವುದಿಲ್ಲ ಆದರೆ ಶಕುಂತಲಾ ದೇವಿ ಇದೀಗ ಬೇಕಂತಲೇ ಈ ವಿಚಾರವನ್ನು ಭೂಮಿಕಾ ಮುಂದೆ ಪ್ರಸ್ತಾಪ ಮಾಡುತ್ತಾಳೆ. ಭೂಮಿಕಾ ಸುಮ್ಮನೆ ಕುಳಿತು ಯೋಚನೆ ಮಾಡುತ್ತಿರುವಾಗ ಶಕುಂತಲಾ ದೇವಿ ಬರುತ್ತಾಳೆ. ಅತ್ತೆ ಬರುತ್ತಿರುವುದನ್ನು ಕಂಡು ಎದ್ದು ನಿಲ್ಲುತ್ತಾಳೆ ಭೂಮಿಕಾ. ಭೂಮಿಕಾಳನ್ನು ನೋಡಿ ಬಹಳ ನಾಟಕಿಯವಾಗಿಯೇ ಅಭಿನಯಿಸುತ್ತಾಳೆ.
ಅತ್ತೆಯ ಮಾತುಗಳನ್ನು ಕೇಳಿ ಭೂಮಿಕಾಗೆ ಕೊಂಚ ರಿಲೀಫ್ ಆದರೂ ಕೂಡಾ ಸುಮ್ಮನಾಗುತ್ತಾಳೆ.ಇತ್ತ ಭೂಮಿಕಾ ಜೊತೆ ಮಾತಿಗೆ ಶುರು ಮಾಡಿದ ಶಕುಂತಲಾ ದೇವಿ ನಾಟಕೀಯವಾಗಿ ಭೂಮಿಕಾ ತೊಂದರೆ ಇರುವುದು ಗೌತಮ್ ಗೆ ಅಲ್ಲ. ನಿನಗೆ ತೊಂದರೆ ಇರುವುದು ಆದರೆ ಗೌತಮ್ ಆತನ ಮೇಲೆ ಹಾಕಿಕೊಂಡ ನಿನಗೆ ಗರ್ಭ ಧರಿಸಲು ಪ್ರಾಬ್ಲಂ ಇದೆ ಎಂದು ಡಾಕ್ಟರ್ ಹೇಳಿದ್ದಾರೆ, ಒಂದು ವೇಳೆ ಮಕ್ಕಳಾದರು ಬುದ್ದಿ ಮಾಂದ್ಯ ಮಗು ಹುಟ್ಟುವ ಚಾನ್ಸ್ ಜಾಸ್ತಿ ಇದೆ ಎಂದು ಅವರು ಹೇಳಿದ್ದಾರೆ ಎಂದು ಭೂಮಿಕಾ ಬಳಿಗೆ ಹೇಳಿದಾಗ ಪಾಪ ಆಕೆಗೆ ಏನು ಮಾತನಾಡಬೇಕು ಎಂದು ಅರ್ಥವಾಗದೆ ಅತ್ತೆಯ ಮುಖ ನೋಡುತ್ತಾಳೆ.

ಈ ಮಾತು ಕೇಳಿ ಭೂಮಿಕಾ ಗೆ ಬಹಳ ಬೇಸರವಾಗುತ್ತದೆ. ತನ್ನ ಗಂಡ ತನ್ನ ಮೇಲೆ ಆಪಾದನೆ ಬರುತ್ತದೆ ಎನ್ನುವ ಕಾರಣಕ್ಕಾಗಿ ನನಗೆ ಮಗು ಆಗುವುದಿಲ್ಲ ನನಗೇನು ಪ್ರಾಬ್ಲಮ್ ಇದೆ, ಆದ ಕಾರಣ ಮಗು ಆಗುತ್ತಿಲ್ಲ ಎನ್ನುವ ಸಣ್ಣ ಸುಳ್ಳನ್ನ ಭೂಮಿಕ ಹಾಗೂ ಮನೆಯವರ ಮುಂದೆ ಗೌತಮ್ ಹೇಳಿರುವುದು ನೆನಪಿಸಿಕೊಂಡ ಭೂಮಿಕಾ ಗೆ ಆಕೆಯ ಕಣ್ಣಾಳಿಗಳಲ್ಲಿ ನೀರು ಧಾರಾಕಾರವಾಗಿ ಸುರಿಯುತ್ತದೆ. ಏನು ಮಾಡಬೇಕು ಎಂದು ದಿಕ್ಕೇ ತೋಚದಂತಾಗುತ್ತದೆ. ಗೌತಮ್ ಮುಚ್ಚಿಟ್ಟಿರುವ ಸತ್ಯ ಗೌತಮ್ ಮೂಲಕ ಹೊರ ಬಿದ್ದಿರುವುದು ಮಾತ್ರ ಸತ್ಯ.
ಭೂಮಿಕಾ ಎದುರು ಸುಳ್ಳು ಹೇಳುತ್ತಿರುವ ಶಕುಂತಲಾ ದೇವಿ
ಗೌತಮ್ ಗೆ ಹೆಂಡತಿ ಎಂದರೆ ಬಹಳ ಪ್ರಾಣ ಆದ ಕಾರಣ ಮಗುವಿಗಾಗಿ ಹೆಂಡತಿ ಗೆ ನೋಯಿಸುವುದು ಎಷ್ಟರ ಮಟ್ಟಿಗೆ ಸರಿ ಎನ್ನುವ ಆಲೋಚನೆ ಆತನದು. ಇತ್ತ ಶಕುಂತಲಾ ದೇವಿಗೆ ಗೌತಮ್ ನಿಂದಾ ಭೂಮಿಕಾ ನನ್ನು ಹೇಗಾದರೂ ಮಾಡಿ ದೂರ ಮಾಡಬೇಕು. ಆಕೆಯನ್ನು ಈ ಮನೆಯಲ್ಲಿ ಇಲ್ಲದ ಹಾಗೆ ಮಾಡಬೇಕು ಎಂದು ಹುನ್ನಾರ ನಡೆಸುತ್ತಾಳೆ ಶಕುಂತಲಾ ದೇವಿ. ಆ ಕಾರಣಕ್ಕಾಗಿ ಭೂಮಿಕಾ ಬಳಿಗೆ ಬಂದು ಆಕೆಗೆ ಡಾಕ್ಟರ್ ಹೇಳಿದ ಮಾತುಗಳನ್ನು ಎಳೆ ಎಳೆಯಾಗಿ ಹೇಳುತ್ತಾಳೆ.ಪಾಪ ಭೂಮಿಕಾ ನೋವಿನಿಂದ ನರಳಾಡುತ್ತಾಳೆ. ಏನು ಮಾಡಬೇಕು, ಏನು ಮಾತನಾಡಬೇಕೆಂದು ಆಕೆಗೆ ತಿಳಿಯುವುದಿಲ್ಲ. ಅತ್ತೆಯ ಮುಖವನ್ನು ಅಳು ಮೊಗದಿಂದ ನೋಡುತ್ತಾಳೆ ಭೂಮಿಕಾ.
ಅಪ್ಪಿ ಮಾತಿಗೆ ಬೆಚ್ಚಿ ಬಿದ್ದ ಮನೆ ಮಂದಿ
ಇತ್ತ ಅಪ್ಪಿ ಯ ವರ್ತನೆ ಮನೆಯವರಿಗಾಗಲಿ ಅಭಿಮಾನಿಗಳಿಗೆ ಹಿಡಿಸುತ್ತಿಲ್ಲ. ಸದಾಶಿವ ರಾಯರು ಹಾಗೆಯೇ ಮಂದಾಕಿನಿ ಅಪ್ಪಿ ಮಾತನ್ನು ಕೇಳಿ ಬಹಳ ಬೇಸರ ಪಡುತ್ತಾರೆ. ಈಕೆ ನಮ್ಮ ಮಗಳ ಎನ್ನುವ ಹಾಗೆ ಅಳುತ್ತಾರೆ. ತನ್ನ ದೊಡ್ಡ ಮಗಳಿಗೆ ಮಗುವಾಗುವುದಿಲ್ಲ ಎಂದು ಗೊತ್ತಾದ ಬಳಿಕ ಸದಾಶಿವ ರವರಿಗೆ ಬಹಳ ನೋವಾಗುತ್ತದೆ. ಅದಕ್ಕಿಂತ ಹೆಚ್ಚಾಗಿ ಅಪ್ಪಿ ತನ್ನ ಮನೆಗೆ ಬಂದು ಅಕ್ಕನ ಸ್ಥಿತಿಯ ಬಗ್ಗೆ ಹೇಳಿ ಖುಷಿ ಪಡುತ್ತಿದ್ದಾಳೆ. ಇಂತಹ ಮಗಳು ಇದ್ದರೆ ಎಷ್ಟು ಬಿಟ್ಟರೆ ಎಷ್ಟು ಎನ್ನುವ ಆಲೋಚನೆ ಮೂಡುತ್ತದೆ.
ಹೆಂಡತಿಯನ್ನು ಸಮಾಧಾನ ಪಡಿಸಲು ಪ್ರಯತ್ನಿಸುತ್ತಿರುವ ಪಾರ್ಥ
ಇತ್ತ ಪಾರ್ಥ ಹೆಂಡತಿಯ ಗುಲಾಮನ ಹಾಗೆ ಮಾತನಾಡುತ್ತಾನೆ. ಅಪ್ಪಿ ಪಾರ್ಥಾನ ಎದುರಲ್ಲಿಯೇ ಆಕೆಯ ತಂದೆ ತಾಯಿ ಬಳಿ ಭೂಮಿಕಾ ಬಗ್ಗೆ ತುಚ್ಛವಾಗಿ ಮಾತನಾಡಿದ್ದಕ್ಕೆ ಪಾರ್ಥ ವಾರ್ನಿಂಗ್ ಏನೋ ಮಾಡುತ್ತಾನೆ. ಆದರೆ ಆತನಿಂದ ಏನು ಮಾತನಾಡಲು , ಮಾಡಲು ಸಾಧ್ಯ ಆಗುವುದೇ ಇಲ್ಲ. ಇದರಿಂದ ರೊಚ್ಚಿಗೆದ್ದ ಅಭಿಮಾನಿಗಳು ಪಾರ್ಥ ನಿಗೇ ಸಖತ್ ಕ್ಲಾಸ್ ತೆಗೆದುಕೊಳ್ಳುತ್ತಾರೆ. ಏನೋ ಪಾರ್ಥ ನೀನು ಎರಡು ಕೈ ಗಳಿಗೆ ಬಳೆ ತೊಟ್ಟುಕೊಂಡು ಬಾ ಎಂದು ಹಲವರು ಹೇಳಿದರೆ ಹೆಂಡತಿಯನ್ನು ಕಂಟ್ರೋಲ್ ನಲ್ಲಿ ಇಟ್ಟುಕೊಳ್ಳದೆ ಇರುವ ನೀನು ಯಾವ ಸೀಮೆ ಗಂಡ ಎಂದು ಖಡಕ್ ಆಗಿ ಹೇಳಿದ್ದಾರೆ. ಒಟ್ಟಿನಲ್ಲಿ ಭೂಮಿಕಾಗೆ ಸಂಕಷ್ಟಗಳು ಎದುರಾಗುತ್ತಲೇ ಇದೆ. ಶಕುಂತಲಾ ದೇವಿಯ ಸುಳ್ಳಿನ ಕೋಟೇ ಒಂದಲ್ಲ ಒಂದು ದಿನ ಸುತ್ತು ಹೋಗುವುದು ಮಾತ್ರ ಖಚಿತ.


Click it and Unblock the Notifications











