Amruthadhaare ; ಉಲ್ಟಾ ಆಯಿತು ಶಕುಂತಲಾ ಪ್ಲ್ಯಾನ್, ಭೂಮಿಕಾ ಮುಂದೆ ಸತ್ಯ ಹೊರ ಬರುತ್ತಾ..?
ಭೂಮಿಕಾಗೆ ತಾನು ತಾಯಿಯಾಗುವ ಬಯಕೆ ಮತ್ತಷ್ಟು ಹೆಚ್ಚಾಗುತ್ತಿದೆ. ಸುಧಾ ತನ್ನ ತಾಯ್ತನದ ಆನಂದದ ಬಗ್ಗೆ ಭೂಮಿಕಾ ಬಳಿ ಬಿಚ್ಚಿಡುತ್ತಾಳೆ. ಇದರಿಂದ ತಾನು ತಾಯಿ ಆಗಬೇಕು ಎನ್ನುವ ಆಸೆ ಮತ್ತಷ್ಟು ಹೆಚ್ಚಾಗುತ್ತದೆ. ಭಾಗ್ಯಳನ್ನು ಕೊಲ್ಲಲು ಸಂಚು ರೂಪಿಸಿದ ಶಕುಂತಲಾ ಪ್ಲಾನ್ ಉಲ್ಟಾ ಹೊಡೆದಿದೆ. ಶಕುಂತಲ ಆಟಕ್ಕೆ ಫುಲ್ ಸ್ಟಾಪ್ ಹಾಕಲು ಭೂಮಿಕಾ ಇರುತ್ತಾಳೆ. ಭೂಮಿಕಾ ಗೆ ಮನೆಯಲ್ಲಿ ಶಕುಂತಲಾ ಅತ್ತೆ ಕಾಣಿಸದೆ ಇರುವುದನ್ನು ಕಂಡು ಬಹಳಷ್ಟು ಹುಡುಕಾಡುತ್ತಾಳೆ.
ಯಾವತ್ತೂ ಕೂಡ ಶಕುಂತಲಾ ದೇವಿ ಭೂಮಿಕಾ ಬಳಿ ಎಲ್ಲಿ ಹೋದರು ಹೇಳಿ ಹೋಗುತ್ತಿದ್ದರು ಆದರೆ ಇದೀಗ ಶಕುಂತಲಾ ಮನೆಯಲ್ಲಿ ಕಾಣಿಸದೆ ಇರುವುದನ್ನು ಕಂಡು ಕೊಂಚ ಗಾಬರಿಯಾಗಿದ್ದಾಳೆ. ಭಾಗ್ಯಳನ್ನ ಕೊಲ್ಲಲು ಸಂಚು ರೂಪಿಸಿದ್ದು ಯಾರು ಎನ್ನುವ ಆಲೋಚನೆ ಮೂಡುವುದಂತು ಸತ್ಯ. ಭೂಮಿಕ ಕೈಯಲ್ಲಿ ಏಟು ತಿಂದ ಶಕುಂತಲಾ ದೇವಿಗೆ ಮನೆಯಲ್ಲಿ ಇದ್ದರೆ ತಾನೇ ಭಾಗ್ಯಳನ್ನು ತಿಳಿಯುತ್ತದೆ ಎಂದು ಅಂದುಕೊಂಡ ಶಕುಂತಲಾ ದೇವಿ ಮನೆಯಿಂದ ಹೊರಗೆ ಹೋಗುತ್ತಾಳೆ.

ಶಕುಂತಲಾ ದೇವಿಗೆ ಬಹಳಷ್ಟು ಗಾಬರಿಯಾಗುತ್ತದೆ. ಯಾಕೆಂದರೆ ಭಾಗ್ಯಳನ್ನು ಸಾಯಿಸಲು ತಾನೇ ಪ್ರಯತ್ನ ಪಟ್ಟೆ ಎಂದು ತಿಳಿದರೆ ಖಂಡಿತವಾಗಿಯೂ ನನ್ನನ್ನು ಗೌತಮ್ ಸುಮ್ಮನೆ ಬಿಡುವುದಿಲ್ಲ ಎಂದು ಆಕೆಗೆ ತಿಳಿಯುತ್ತದೆ. ಆದ ಕಾರಣ ಮನೆಯಲ್ಲಿ ಇರಲಿಲ್ಲ ಎಂದಾದರೆ ಖಂಡಿತವಾಗಿಯೂ ನನ್ನ ಮೇಲೆ ಯಾರಿಗೂ ಸಂಶಯ ಬರುವುದಿಲ್ಲ ಎಂದು ಅಂದುಕೊಳ್ಳುತ್ತಾಳೆ. ಆದರೆ ಶಕುಂತಲಾ ದೇವಿ ಆ ಪ್ಲಾನ್ ಕೂಡ ಉಲ್ಟಾ ಹೊಡೆಯುತ್ತದೆ. ಗೌತಮ್ ಗೆ ಅರ್ಜೆಂಟ್ ಆದ ಜಾಗದ ಫೈಲ್ ಬೇಕಾಗಿರುತ್ತದೆ. ಆದ ಕಾರಣ ಮೊದಲಿಗೆ ಗೌತಮ್ ಶಕುಂತಲಾ ದೇವಿ ತಮ್ಮನನ್ನು ಕರೆಯುತ್ತಾನೆ.
ಶಕುಂತಲಾ ದೇವಿಯನ್ನು ಮನೆಗೆ ಬರುವಂತೆ ಒತ್ತಾಯಿಸಿದ ಗೌತಮ್
ಗೌತಮ್ ಕರೆಗೆ ಬಂದ ಶಕುಂತಲಾ ತಮ್ಮ ಗೌತಮ್ ಬಳಿ ಏನೆಂದು ವಿಚಾರಣೆ ಮಾಡುತ್ತಾನೆ. ಗೌತಮ್ ಕೂಡಲೇ ಲಕ್ಷ್ಮೀ ನಾರಾಯಣನ ಬಳಿ ಮಾವ ನಾನು ಜಾಗದ ಫೈಲ್ ಕೊಟ್ಟಿದ್ದೆ. ಆ ಫೈಲ್ ಅನ್ನು ನನಗೆ ಕೊಡಿ ಎಂದಾಗ ಆ ಫೈಲ್ ತನ್ನ ಅಕ್ಕನ ಬಳಿ ಇರುವುದಾಗಿ ಹೇಳಿ ಶಕುಂತಲಾ ದೇವಿ ಗೆ ಕರೆ ಮಾಡುತ್ತಾನೆ. ಶಕುಂತಲಾ ದೇವಿ ಗೆ ತಮ್ಮ ಮಾಡಿದ ಕರೆಯನ್ನು ನೋಡಿ ಬಹಳ ಭಯ ಆಗುತ್ತದೆ. ಏನಾಯ್ತಾಪ್ಪ ಏನಾದರು ಮನೆಯಲ್ಲಿ ನಾನೇ ಭಾಗ್ಯನ ಕೊಲ್ಲಲು ಟ್ರೈ ಮಾಡಿದೆ ಎಂದು ತಿಳಿಯುತ್ತಾ ಎಂದು ಬಹಳಷ್ಟು ಭಯ ಪಡುತ್ತಾಳೆ. ಆ ನಂತರ ತಮ್ಮನ ಕರೆಯನ್ನು ಸ್ವೀಕರಿಸಿ ಮಾತನಾಡಿದ ಶಕುಂತಲಾ ದೇವಿ ಗೆ ಮತ್ತೊಂದು ಶಾಕ್ ಸುದ್ದಿ ಬರುತ್ತದೆ.
ಆತಂಕದಲ್ಲಿರುವ ಶಕುಂತಲಾ ಇನ್ನೇನು ಮಾಡುತ್ತಾಳೆ?
ಅಕ್ಕ ನೀನು ಮನೆಗೆ ಬರಲೇ ಬೇಕು ಯಾಕೆಂದರೆ ಗೌತಮ್ ಫೈಲ್ ಒಂದು ನಿನ್ನ ಜೊತೆ ಇದೆ ನೀನು ಬರಲೇಬೇಕು ಎಂದು ಹೇಳಿಬಿಡುತ್ತಾನೆ. ಶಕುಂತಲಾ ದೇವಿ ಅದೆಷ್ಟೇ ಕಷ್ಟ ಆಗಲಿ ನಾನು ಬರುವುದಿಲ್ಲ ಎಂದು ಹೇಳಿದರು ಕೇಳುವುದೇ ಇಲ್ಲ. ಕೊನೆಗೆ ಮಾವನ ಕೈಯಿಂದ ಫೋನ್ ಕಿತ್ತುಕೊಂಡ ಗೌತಮ್ ತನ್ನ ತಾಯಿ ಬಳಿ ಮನೆಗೆ ಬರಲೇ ಬೇಕು ಎಂದು ಒತ್ತಾಯ ಮಾಡುತ್ತಾನೆ. ಇತ್ತ ಶಕುಂತಲಾ ದೇವಿಗೆ ಏನು ಮಾಡಬೇಕು ಎಂದು ತಿಳಿಯದಾಗುತ್ತದೆ. ಆ ಕೂಡಲೇ ಶಕುಂತಲಾ ಗೌತಮ್ ಮನೆಗೆ ಬರುತ್ತಾಳೆ. ಶಕುಂತಲಾ ದೇವಿಯನ್ನು ನೋಡಿದ ಭೂಮಿಕಾಗೆ ಶಾಕ್ ಆಗುತ್ತದೆ. ಅತ್ತೆಯ ಹಣೆಗೆ ಏನೋ ಪೆಟ್ಟಾಗಿದೆ ಎಂದು ಆತಂಕ ವ್ಯಕ್ತ ಪಡಿಸುತ್ತಾಳೆ. ನಿನ್ನೆ ಚೆನ್ನಾಗಿದ್ದರೂ ಆದರೆ ಇದೀಗ ಹಣೆಗೆ ಏನಾಗಿದೆ ಎಂದು ಆತಂಕ ಆಗುತ್ತದೆ.


Click it and Unblock the Notifications











