Amrutadhare : ಭೂಮಿಕಾಳನ್ನು ಹೊರಗೆ ಕರೆದುಕೊಂಡು ಹೋದ ಗೌತಮ್, ಮಹಿಮಾ ಸೇದುತ್ತಿದ್ದ ಸಿಗರೇಟ್ ವಾಸನೆಗೆ ಮನೆ ಮಂದಿ ಗಾಬರಿ

By Poorva

ಅಮೃತಧಾರೆ ಧಾರಾವಾಹಿ ಬಹಳ ಕುತೂಹಲಕರವಾಗಿ ಮೂಡಿ ಬರುತ್ತಾ ಇದ್ದು ನೋಡುಗರಿಗೆ ಬಹಳ ಖುಷಿ ನೀಡಿದೆ. ಇದೀಗ ಗೌತಮ್ ದಿವಾನ್ ಅಜ್ಜಿಯ ಕೈಗೆ ಸಿಕ್ಕಿಬಿದ್ದಿದ್ದಾನೆ. ಮೊದಲೇ ಆಫೀಸ್ ಟೆನ್ಶನ್‌ನಲ್ಲಿ ಇರುವ ಗೌತಮ್‌ ಅಜ್ಜಿ ಮಾತಿಗೆ ಇಲ್ಲ ಎನ್ನದೆ ಭೂಮಿಕಾ ಜೊತೆ ಹೊರಗೆ ಹೋಗುವುದಾಗಿ ಹೇಳುತ್ತಾನೆ. ಇತ್ತ ಜೈದೇವ್ ಮಾತ್ರ ಅಣ್ಣನ ಆಫೀಸ್‌ನಿಂದಾ ಕೋಟಿಗಟ್ಟಲೆ ಹಣ ಕದ್ದಿದ್ದಾನೆ.

ಇದೀಗ ಜೈದೇವ್ ಸಿಕ್ಕಿ ಹಾಕಿಕೊಳ್ಳುವ ಬದಲು ಆತನ ಗೆಳೆಯ ಸಿಕ್ಕಿ ಬಿದ್ದಿದ್ದಾನೆ. ಜೈದೇವ್ ಅದು ಹೇಗೋ ಅಣ್ಣನ ಜೊತೆ ನಾಟಕವಾಡಿ ಗೆಳೆಯನಿಗೆ ಚೆನ್ನಾಗಿ ಹೊಡೆದು ಆಫೀಸ್‌ನಿಂದಾ ಹೊರಗೆ ಕಳುಹಿಸಿ ಬಿಡುತ್ತಾನೆ. ಇದರ ಜೊತೆಗೆ ನನ್ನ ವಿರುದ್ದ ಇದೀಗ ಬಹಳ ಸಂಚು ಮಾಡುತ್ತಿದ್ದಾರೆ ಎಂದು ಜೈದೇವ್‌ಗೆ ಭಯ ಶುರುವಾಗಿದೆ.

Kannada serial Amrutadhare written update on 11th October

ಇದಕ್ಕೆಲ್ಲ ಕಾರಣ ಆನಂದ್ , ಆತನನ್ನು ಆಫೀಸ್ ನಿಂದಾ ಹೊರಗೆ ಕಳುಹಿಸಿ ಬಿಟ್ಟರೆ ಎಲ್ಲಾ ಸರಿ ಹೋಗುತ್ತದೆ ಎಂದೆಲ್ಲ ಯೋಚನೆ ಮಾಡುತ್ತಾ ಇರುವಾಗ ಅಲ್ಲಿಗೆ ಬಂದ ಜೈದೇವ್ ತಾಯಿ ಹಾಗೂ ಮಾವ ಜೈದೇವನನ್ನು ತರಾಟೆಗೆ ತೆಗೆದುಕೊಂಡು ಬಿಡುತ್ತಾರೆ. ಜೈದೇವ್‌ಗೆ ಅಣ್ಣನ ಪಾಲಿನ ಮೇಲೆ ಕಣ್ಣು ಬಿದ್ದಿದೆ ಹಾಗೆಲ್ಲ ನೋಡಿದರೆ ಜೈದೇವ್‌ಗೆ ಗೌತಮ್ ದಿವಾನ್ ಜೊತೆ ಇರುವ ಆಸ್ತಿ ಗೂ ಯಾವುದೇ ಸಂಬಂಧ ಇಲ್ಲ.. ಅದೆಲ್ಲವೂ ಗೌತಮ್ ದುಡಿದು ಮಾಡಿಕೊಂಡ ಆಸ್ತಿ.

ಜೈದೇವ್ ಮುಖವಾಡ ಕಳಚಲು ಪ್ರಯತ್ನಿಸುತ್ತಿರುವ ಆನಂದ್

ಆದರೆ ಇದೆಲ್ಲ ತಿಳಿಯದ ಜೈದೇವ್ ಮಾತ್ರ ತನ್ನ ತಾಯಿಯ ಬಳಿ ಇದೆಲ್ಲವನ್ನೂ ಮಾತನಾಡಿಕೊಂಡು ಇರಬೇಕಾದರೆ ಜೈದೇವ್ ತಾಯಿ ಎನು ಮಾತನಾಡದೆ ಸುಮ್ಮನೆ ಆಗುತ್ತಾರೆ. ಇತ್ತ ಅಜ್ಜಿ ಗೌತಮ್ ಆಫೀಸ್ ನಿಂದಾ ಬರುವುದನ್ನೇ ಕಾಯುತ್ತ ಇರುತ್ತಾರೆ. ಬಂದ ಕೂಡಲೇ ಫಾರಿನ್ ನಿಂದಾ ಭೂಮಿಕಾಗೆ ಎನು ಗಿಫ್ಟ್ ತಂದೆ ತೋರಿಸು ಎಂದೆಲ್ಲ ಹೇಳಿದಾಗ ಗೌತಮ್‌ಗೆ ಎನು ಹೇಳುವುದು ಎಂದು ತಿಳಿಯದೇ ತಬ್ಬಿಬ್ಬಾಗಿ ಬಿಡುತ್ತಾನೆ.

Kannada serial Amrutadhare written update on 11th October

ಆಫೀಸ್‌ನಲ್ಲಿ ಮೀಟಿಂಗ್ ಇದ್ದರೂ ಭೂಮಿಯ ಜೊತೆ ಗೌತಮ್ ಸುತ್ತಾಟ

ಆಫೀಸ್‌ನಲ್ಲಿ ಇಂಪಾರ್ಟೆಂಟ್ ಮೀಟಿಂಗ್ ಇದ್ದರೂ ಭೂಮಿಕಳನ್ನು ಹೊರಗೆ ಕರೆದುಕೊಂಡು ಹೋಗುವ ಪರಿಸ್ಥಿತಿ ಎದುರಾಗಿದೆ. ಹೌದು ಹೇಗಾದರೂ ಮಾಡಿ ಭೂಮಿಕಾ ಹಾಗೂ ಗೌತಮ್‌ನನ್ನು ಒಂದು ಮಾಡಬೇಕು ಎನ್ನುವುದು ಅವರ ಉದ್ದೇಶ . ಇನ್ನೂ ಗೌತಮ್ ಭೂಮಿ ಕಾರಿನಲ್ಲಿ ಹೋಗುತ್ತಾ ಇರುವಾಗ ಗೌತಮ್ ಮೆತ್ತಗೆ ಭೂಮಿಕಾ ಬಳಿ ಎಲ್ಲಿಗೆ ಹೋಗೋಣ ಕೇಳುತ್ತಾನೆ.

ಭೂಮಿ ಮುಗ್ದತೆಗೆ ಮಾರು ಹೋದ ಗೌತಮ್

ಎಲ್ಲಿಗೆ ಹೋಗೋಣ ಎಂದು ಗೌತಮ್ ಭೂಮಿಕಾ ಬಳಿ ಕೇಳಿದಾಗ, ಮನೆ ಬಿಟ್ಟರೆ ಇನ್ಸ್ಟಿಟ್ಯೂಟ್ ಬೇರೆ ಎಲ್ಲಿ ಹೋಗುವುದು ಎಂದು ಗೊತ್ತಿಲ್ಲ ಎಂದೆಲ್ಲ ಹೇಳಿದಾಗ ಭೂಮಿಕಾ ಮುಗ್ಧತೆಗೆ ಗೌತಮ್‌ಗೆ ನಗು ಬರುತ್ತದೆ. ಇತ್ತ ಮಹಿಮಾ ಸಿಗರೇಟ್ ಸೇದುತ್ತಾ ಇದ್ದರೆ, ಮಹಿಮಾ ಅತ್ತೆ ಜೋರಾಗಿ ಜೀವನನ್ನು ಕರೆದು, ಜೀವ ಏನೋ ಸುಟ್ಟು ಹೋದ ವಾಸನೆ ಬರುತ್ತಿದೆ ಎಂದು ಹೇಳುತ್ತಾರೆ. ಇದನ್ನು ಕೇಳಿಸಿಕೊಂಡ ಮಹಿಮಾ ಸೇದುತ್ತಿದ್ದ ಸಿಗರೇಟ್ ಅನ್ನು ಕೆಳಗೆ ಹಾಕಿ ಕಾಲಿನಿಂದ ತುಳಿಯುತ್ತಾಳೆ.. ಇದೆಲ್ಲ ಭೂಮಿಕಾ ತಂದೆಗೆ ಗೊತ್ತಾದರೆ ಬಹಳ ನೋವಾಗಬಹುದು.

More from Filmibeat

English summary
Kannada serial Amrutadhare written update on 11th October.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X