Amrutadhare: ಮಾಧ್ಯಮದವರನ್ನು ಕಂಡು ಬೆಚ್ಚಿಬಿದ್ದ ಭೂಮಿಕಾ; ಪ್ರಶ್ನೆಗೆ ಉತ್ತರಿಸದಾದ ಗೌತಮ್
ಅಮೃತಧಾರೆ ಧಾರವಾಹಿ ಅದ್ಬುತವಾಗಿ ಮೂಡಿ ಬರುತ್ತಿದ್ದು ನೋಡುಗರ ಮನ ಸೆಳೆಯುವ ಹಾಗೆ ಮಾಡುತ್ತಿದೆ. ಇದೀಗ ಭೂಮಿಕಾ ಹಾಗೂ ಗೌತಮ್ ಮದುವೆ ಮಾತುಕತೆ ಮುರಿದು ಹೋಗಿದೆ. ಭೂಮಿಕಾಗೆ ಈ ಮದುವೆ ಸ್ವಲ್ಪನೂ ಇಷ್ಟ ಇಲ್ಲ. ಹಾಗೆಯೇ ಗೌತಮ್ ನನ್ನು ಕಂಡರೆ ಅಂತೂ ಉರಿದು ಬೀಳುತ್ತಾಳೆ.
ಇದೀಗ ಗೌತಮ್ ಹಾಗೂ ಭೂಮಿಕಾಗೆ ಇಬ್ಬರು ಭೇಟಿ ಆಗಲೇ ಬೇಕು ಎನ್ನುವ ಒತ್ತಡ ಹಾಕುತ್ತಿದ್ದಾರೆ. ಎಷ್ಟು ಸಲ ಭೂಮಿಕಾ ಹಾಗೂ ಗೌತಮ್ ಈ ಮದುವೆ ಮಾತುಕತೆ ಬೇಡ ಎಂದು ಹೇಳಿದರೂ ಕೊನೆಗೂ ಭೇಟಿ ಆಗಲು ಒಪ್ಪಿಗೆ ನೀಡುತ್ತಾರೆ. ಇನ್ನು ಹೋಟೆಲ್ ಒಂದಕ್ಕೆ ಭೂಮಿಕಾ ಬರುತ್ತಾಳೆ.

ಹೋಟೆಲ್ ಗೆ ಬರುವ ಮುಂಚೆನೇ ಟೇಬಲ್ ಕೂಡ ಬುಕ್ ಆಗಿರುತ್ತದೆ. ಭೂಮಿಕಾ ಬಂದು ತನ್ನ ಟೇಬಲ್ ಬಳಿ ಕುಳಿತುಕೊಂಡು ಹಣೆಗೆ ಬಿಂದಿ ಇಟ್ಟಿದ್ದೇನೋ ಇಲ್ಲವೋ ಎಂಬುವುದನ್ನು ಚೆಕ್ ಮಾಡುತ್ತಾ ಇರುತ್ತಾಳೆ. ಅಷ್ಟರಲ್ಲಾಗಲೇ ಗೌತಮ್ ಬರುತ್ತಾನೆ.
ಭೂಮಿಕಾ ಮತ್ತು ಗೌತಮ್ ಒಂದಾಗಬೇಕು ಎಂದು ಗೌತಮ್ ಕುಟುಂಬ ಬಹಳಷ್ಟು ಪ್ರಯತ್ನ ಪಡುತ್ತಿದೆ. ಗೌತಮ್ ಹಾಗೂ ಭೂಮಿಕಾ ಅವರ ಮನಸ್ಥಿತಿ ಒಂದೇ ಇದ್ದರೂ ಇಬ್ಬರಿಗಂತು ಈ ಮದುವೆಯ ಸಹವಾಸ ಬೇಡ ಎನ್ನುವಷ್ಟರ ಮಟ್ಟಿಗೆ ಅನುಭವ ಆಗಿದೆ. ಇಬ್ಬರು ಮನಸ್ಸನ್ನು ಅವರಿಬ್ಬರೂ ಅರ್ಥ ಮಾಡಿಕೊಳ್ಳದೆ ಇರುವುದು ಅಭಿಮಾನಿಗಳಿಗೆ ಬೇಸರ ತರಿಸಿದೆ.
ಇನ್ನು ಗೌತಮ್ ದಿವಾನ್ ಮಲ ತಾಯಿ ಈ ಮೊದಲು ಗೌತಮ್ ಗೆ ಮದುವೆಯೇ ಬೇಡ ಎಂದು ಹೇಳುತ್ತಿದ್ದರು. ಆದರೆ ಆಕೆಯ ಮಗಳ ಮದುವೆ ನಡೆದರೆ ಭೂಮಿಕಾ ಅಲ್ಲಿಯೇ ಇರುತ್ತಾಳೆಂಬ ಕಾರಣಕ್ಕೆ ಮದುವೆ ಮಾಡಲು ಹೊರಟಿದ್ದಾಳೆ.
ಆದರೆ ಗೌತಮ್ ಮಾತ್ರ ಇಕ್ಕಟ್ಟಿನಲ್ಲಿ ಸಿಲುಕುವ ಹಾಗೆ ಆಯಿತು. ಇನ್ನು ಗೌತಮ್ ಮಲ ತಾಯಿ ಟಿವಿ ರಿಪೋರ್ಟರ್ ಗೆ ಕರೆ ಮಾಡಿ ಭೂಮಿಕಾ ಹಾಗೂ ಗೌತಮ್ ಮೀಟ್ ಮಾಡುತ್ತಿರುವ ವಿಚಾರವನ್ನು ಹೇಳುತ್ತಾಳೆ. ಮಾಧ್ಯಮದವರಿಗೆ ನ್ಯೂಸ್ ಸಿಕ್ಕಿದ್ದೇ ತಡ ಹೋಟೆಲ್ ಬಳಿ ಯಾರಿಗೂ ಗೊತ್ತಾಗದ ಹಾಗೆ ಬರುತ್ತಾರೆ.
ಇನ್ನು ಗೌತಮ್ ಭೂಮಿಕಾ ಬಳಿ ಮಾತನಾಡುತ್ತಾ ಇರುತ್ತಾನೆ. ಭೂಮಿಕಾ ಗೌತಮ್ ಬಳಿ ಮಿಸ್ಟರ್ ಗೌತಮ್ ನಿಮ್ಮ ಮನೆಗೆ ಹೋಗಿ ಹುಡುಗಿಗೆ ಅಷ್ಟಾಗಿ ಇಷ್ಟ ಆಗಿಲ್ಲ ಎಂದೆಲ್ಲ ಹೇಳಿ ನಾನು ನನ್ನ ಮನೆಗೆ ಹೋಗಿ ಹುಡುಗನಿಗೆ ನಾನು ಇಷ್ಟ ಆಗಿಲ್ಲ ಎಂದು ಹೇಳಿ ಎಂದು ಹೇಳುತ್ತಾಳೆ. ಇದನ್ನು ಕೇಳಿಸಿಕೊಂಡ ಗೌತಮ್ ಆಯಿತು ಎಂದು ಹೇಳಿ ಹೊರಡಲು ಅನುವಾಗುತ್ತಾನೆ. ಆಗ ಭೂಮಿಕಾ ಉಂಗುರ ಕಳಚಿ ಕೆಳಗೆ ಬೀಳುತ್ತದೆ. ಅದನ್ನು ಗೌತಮ್ ದಿವಾನ್ ತೆಗೆದು ಕೊಡುವಾಗ ಮಾಧ್ಯಮದವರು ಮುತ್ತಿಗೆ ಹಾಕುತ್ತಾರೆ.
ಮಾಧ್ಯಮದವರನ್ನು ನೋಡಿದ ಕೂಡಲೇ ಇಬ್ಬರು ಬೆಚ್ಚಿ ಬೀಳುತ್ತಾರೆ. ನಮ್ಮಿಬ್ಬರ ವಿಚಾರ ಮಾಧ್ಯಮದವರಿಗೆ ಹೇಳಿದ್ದಾದರೂ ಯಾರು ಎಂದು ಗೌತಮ್ ಯೋಚನೆ ಮಾಡುತ್ತಾ ಇರುತ್ತಾನೆ. ಇನ್ನು ಮಾಧ್ಯಮದವರಿಗೆ ಈ ವಿಚಾರ ತಿಳಿದು ಬಹಳ ದೊಡ್ಡ ಸುದ್ದಿ ಆಗಿ ಬಿಡುತ್ತದೆ. ಹೀಗಾಗಿ ಇವರು ಅಂದುಕೊಂಡಿದ್ದೇ ಒಂದು, ಆಗಿದ್ದೇ ಮತ್ತೊಂದು ಆಗಿರುವ ಹಾಗೆ ಕಾಣಿಸುತ್ತ ಇದೆ.


Click it and Unblock the Notifications











