ಸುಧಾ ಮನೆಗೆ ಬೆಂಕಿ ಹಾಕಿ ಅಟ್ಟಹಾಸ ಮೆರೆದ ಜೈದೇವ್‌ಗೆ ತಕ್ಕ ಪಾಠ ಕಲಿಸುತ್ತಾಳಾ ಭೂಮಿಕಾ ?
ಗೌತಮ್ ತಾಯಿ ಹಾಗೂ ತಂಗಿಯನ್ನು ಹುಡುಕುವಲ್ಲಿ ಆತನ ಪ್ರಯತ್ನವನ್ನು ಮುಂದುವರೆಸಿದ್ದಾರೆ. ಆದರೆ ಇದೀಗ ಆತನ ತಾಯಿ ತಂಗಿ ಇರುವಿಕೆಯ ಬಗ್ಗೆ ಜೈ ದೇವ್‌ಗೆ ತಿಳಿದಿದೆ. ಅವರಿಬ್ಬರನ್ನು ಹೇಗಾದರೂ ಮಾಡಿ ಹುಡುಕಿ ಸಾಯಿಸಿಬಿಡಬೇಕು ಎನ್ನುವ ನಿರ್ಧಾರಕ್ಕೆ ಬಂದಿದ್ದಾನೆ. ಶಕುಂತಲಾ ದೇವಿಗೆ ಗೌತಮ್ ತಾಯಿ ಎಂದರೆ ಬಹಳ ಕೋಪ. ಮೊದಲ ಬಾರಿ ಆಕೆಯ ಮೇಲೆ ಅಟ್ಯಾಕ್ ಮಾಡಿಸಿದವಳೇ ಶಕುಂತಲಾ. ಗೌತಮ್‌ಗೆ ಯಾವತ್ತೂ ಆತನ ತಾಯಿ ಸಿಗಬಾರದು ಎಂದು ಅಂದುಕೊಂಡಿದ್ದಾಳೆ.
ಶಕುಂತಲಾ ತನ್ನ ಮಗನ ಬಳಿ ಹೇಗಾದರೂ ಮಾಡಿ ಗೌತಮ್ ತಾಯಿ ಹಾಗೂ ತಂಗಿಯನ್ನು ಹುಡುಕಿಸಿ, ಅವರಿಬ್ಬರನ್ನು ಸಾಯಿಸಿಬಿಡಬೇಕು ಎನ್ನುವ ವಿಚಾರವನ್ನು ಪ್ರಸ್ತಾಪ ಮಾಡಿದಾಗ, ಜೈ ದೇವ್ ಅದಕ್ಕೆ ಒಪ್ಪಿಗೆಯನ್ನು ಸೂಚಿಸುತ್ತಾನೆ. "ಇಷ್ಟೇ ವಿಚಾರ ಅಲ್ವಾ? ಈ ವಿಚಾರವನ್ನು ನಮಗೆ ಬಿಡಿ ನಾನು ನೋಡಿಕೊಳ್ಳುತ್ತೇನೆ" ಎಂದು ಹೇಳುತ್ತಾನೆ.

ಅಮ್ಮ ನನ್ನ ಮೇಲೆ ಇಟ್ಟಿರುವ ನಂಬಿಕೆಯನ್ನು ಮತ್ತೆ ಮರಳಿ ಪಡೆಯುವುದಕ್ಕೆ ಹೊರಟಿದ್ದಾನೆ. ಈಗಾಗಲೇ ಆಕೆಯ ನಂಬಿಕೆಯನ್ನು ಹುಸಿಗೊಳಿಸಿದ್ದೇನೆ. ಈಗ ಅಮ್ಮನ ನಂಬಿಕೆಯನ್ನು ಪಡೆದುಕೊಳ್ಳುವ ಸದಾವಕಾಶ ನನಗೆ ದೊರಕಿದೆ ಎಂದು ಅಂದುಕೊಳ್ಳುತ್ತಾನೆ. ಅದೇ ರೀತಿ ಸುಧಾ ಹಾಗೂ ಭಾಗ್ಯಾ ಹುಡುಕಾಟ ಶುರು ಮಾಡುತ್ತಾನೆ. ಇತ್ತ ಭಾಗ್ಯಾ ಮನೆಯ ಬಳಿಗೆ ಬಂದ ಗೂಂಡಾ ಭಾಗ್ಯ ಮನೆ ಪಕ್ಕದವರ ಬಳಿ ಫೋಟೋ ತೋರಿಸಿ ಇವರು ನಿಮಗೆ ಗೊತ್ತಾ ಎಂದು ಕೇಳುತ್ತಾರೆ. ಆಗ ಫೋಟೋ ನೋಡಿದ ಹೆಂಗಸೊಬ್ಬರು ಇದೆ ಭಾಗ್ಯಾ ಅವರ ಮನೆ ಎಂದು ತೋರಿಸುತ್ತಾರೆ. ಈ ವಿಚಾರವನ್ನು ಜೈ ದೇವ್‌ಗೆ ಹೇಳುತ್ತಾನೆ.
ಸುಧಾ ಮನೆಗೆ ಲಾಕ್ ಹಾಕಿದ ಜೈ ದೇವ್
ಇನ್ನೇನು ಭಾಗ್ಯಾ ಹಾಗೂ ಸುಧಾ ಸಿಕ್ಕೆ ಬಿಟ್ಟರು ಎನ್ನುವ ಆಲೋಚನೆ ಮಾಡುತ್ತಾನೆ. ಹಾಗೆಯೇ ಸುಧಾ ಮನೆಗೆ ಲಾಕ್ ಹಾಕಿ ಮನೆ ಮೇಲೆ ಸೀಮೆ ಎಣ್ಣೆ ಸುರಿದು ಬೆಂಕಿ ಇಡುತ್ತಾರೆ. ಸುಧಾ ಅದೆಷ್ಟೇ ಬಾಗಿಲು ತೆಗೆಯಲು ನೋಡಿದರೂ ಕೂಡ ಹೊರಗಡೆ ಲಾಕ್ ಆಗಿರುವುದನ್ನು ಕಂಡು ಶಾಕ್ ಆಗುತ್ತಾಳೆ. ಇದೇನಪ್ಪ ಹೊರಗಡೆ ಲಾಕ್ ಆಗಿದೆ ಎನ್ನುವಷ್ಟರಲ್ಲಿ ಬೆಂಕಿ ಮನೆಯನ್ನೇ ಆವರಿಸಿಕೊಂಡು ಬಿಡುತ್ತದೆ.

ಬೆಂಕಿ ಆರಿಸಲು ಹರ ಸಾಹಸ
ಕಾಲೋನಿ ಮಂದಿ ಬೆಂಕಿ ಆರಿಸಲು ಹರಸಾಹಸ ಪಡುತ್ತಿದ್ದಾರೆ. ಇದನ್ನು ದೂರದಿಂದ ನೋಡಿದ ಜೈ ದೇವ್ ಕೇಕೆ ಹಾಕಿ ಜೋರಾಗಿ ನಗುತ್ತಾನೆ. ಇತ್ತ ಭೂಮಿಕಾ ಹಾಗೂ ಗೌತಮ್ ಸುಧಾ ಬಗ್ಗೆನೇ ಹೆಚ್ಚಾಗಿ ಮಾತನಾಡುತ್ತಿರುತ್ತಾರೆ. ಸುಧಾ ಬಹಳ ಪಾಪದ ಹುಡುಗಿ ಅವಳಿಗೆ ತಮ್ಮಿಂದ ಆದ ಸಹಾಯವನ್ನು ಮಾಡಿದರೆ ಆಕೆಗೆ ಬಹಳಷ್ಟು ಸಹಾಯ ಆಗುತ್ತದೆ. ಆಕೆ ಅಮ್ಮನಿಗೆ ಕೂಡ ಹುಷಾರಿಲ್ಲ. ಜೊತೆಗೆ ಪುಟ್ಟ ಮಗು ಬೇರೆ ಎಂದು ಹೇಳಿ ಸುಧಾ ಬಗ್ಗೆ ನೆನೆದು ಮರುಕ ಪಡುತ್ತಾಳೆ ಭೂಮಿಕಾ.


Click it and Unblock the Notifications











