Amruthadhaare ; ಎರಡನೇ ಪ್ಲಾನ್ ಕೂಡ ಫ್ಲಾಪ್, ಭೂಮಿಕಾ ಮೊದಲು ಭಾಗ್ಯಮ್ಮಗೆ ಸ್ಕೆಚ್ ಹಾಕ್ತಾಳಾ ಶಕುಂತಲಾ..?
ಅಮೃತಧಾರೆ ಧಾರಾವಾಹಿಯಲ್ಲಿ ಮೊದಲ ಅಪಾಯದಿಂದ ಭೂಮಿಕಾ ಪಾರಾಗಿದ್ದಾಳೆ. ದೇವರಿಗೆ ಪೂಜೆ ಸಲ್ಲಿಸಲು ಹೋಗುತ್ತಿದ್ದ ಭೂಮಿಕಾ ಇನ್ನೇನು ಶಕುಂತಲಾ ಬೀಸಿದ ಎಣ್ಣೆ ಜಾಲದ ಮೇಲೆ ಕಾಲಿಡಬೇಕು ಅಷ್ಟರಲ್ಲಿ ದೇವರಂತೆ ಬಂದ ಭಾಗ್ಯಮ್ಮ, ಭೂಮಿಕಾಳನ್ನು ಕಾಪಾಡಿದ್ದಾಳೆ. ಭಾಗ್ಯಮ್ಮ ವರ್ತನೆ ಮತ್ತು ಕೆಳಗೆ ಬಿದ್ದ ಎಣ್ಣೆಯನ್ನು ಕಂಡು ಆಘಾತಕ್ಕೊಳಗಾಗುವ ಭೂಮಿಕಾ ಎಷ್ಟೇ ಕೇಳಿದರು ಭಾಗ್ಯಮ್ಮ ಉತ್ತರ ನೀಡುವುದಿಲ್ಲ. ಇದರಿಂದ ಸುಮ್ಮನಾಗುವ ಭೂಮಿಕಾ ತನ್ನ ದೈನಂದಿನ ಜೀವನಕ್ಕೆ ಮರಳಿದ್ದಾಳೆ.
ಪ್ಲಾನ್ ಫ್ಲಾಪ್ ಮತ್ತೊಂದು ಅಸ್ತ್ರ ಪ್ರಯೋಗಿಸಲು ಮುಂದಾದ ಶಕುಂತಲಾ
ಆಸ್ತಿಯ ಆಸೆಗೆ ಭೂಮಿಕಾ ಹೊಟ್ಟೆಯಲ್ಲಿರುವ ಮಗುವನ್ನು ಶತಾಯು ಗತಾಯು ಸಾಯಿಸಲೇಬೇಕೆಂದು ತೀರ್ಮಾನ ಮಾಡಿರುವ ಶಕುಂತಲಾ ತನ್ನ ಅಣ್ಣನ ಜೊತೆ ಸೇರಿ ಮತ್ತೊಂದು ಬಲೆ ಹೆಣೆದಿದ್ದಾಳೆ.

ಮಹಡಿಯ ಮೇಲಿರುವ ಹೂಕುಂಡವನ್ನು ಭೂಮಿಕಾ ತಲೆಯ ಮೇಲೆ ಬೀಳಿಸುವುದಾಗಿ ತನ್ನ ಅಣ್ಣನ ಜೊತೆ ಮಾತನಾಡಿದ್ದಾಳೆ. ಶಕುಂತಲಾಳ ಈ ಮಾತುಗಳಿಗೆ ಇನ್ನು ಕುಮ್ಮಕ್ಕು ನೀಡುವ ಆಕೆಯ ಅಣ್ಣ ಜೀವನ ಎಂಬ ಚೆಸ್ ಆಟದಲ್ಲಿ ನೀನೊಬ್ಬಳು ಗ್ರ್ಯಾಂಡ್ ಮಾಸ್ಟರ್ ಇದ್ದಂತೆ ಎಂದು ಹೇಳಿ ಶಕುಂತಲಾಳನ್ನು ಅಟ್ಟಕ್ಕೇರಿಸುತ್ತಾನೆ.
ಭೂಮಿಗೆ ಭಾಗ್ಯಮ್ಮನೇ ಕಾವಲು
ಆದರೆ ಶಕುಂತಲಾ ದುರಾದೃಷ್ಟ ಈ ಬಾರಿ ಕೂಡ ಈ ಸಂಭಾಷಣೆಯನ್ನು ಭಾಗ್ಯಮ್ಮ ಕೇಳಿಸಿಕೊಂಡು ಆತಂಕಕ್ಕೊಳಗಾಗುತ್ತಾಳೆ. ಮತ್ತೊಂದು ಕಡೆ ತಮ್ಮ ಪ್ಲಾನ್ ಕಾರ್ಯರೂಪಕ್ಕೆ ತರಲು ಶಕುಂತಲಾ ಮತ್ತು ಆಕೆಯ ಅಣ್ಣ ಸಿದ್ದನಾಗಿದ್ದು ಶಕುಂತಲಾ ಮನೆಯ ಮೇಲಗಡೆ ಹೂಕುಂಡ ಒಂದು ಕೈಯಲ್ಲಿ ಮತ್ತೊಂದು ಕೈಯಲ್ಲಿ ಫೋನ್ ಹಿಡಿದು ತನ್ನ ಅಣ್ಣನ ಜೊತೆ ಮಾತನಾಡುತ್ತಿದ್ದಾಳೆ
ವಾಕಿಂಗ್‌ಗೆ ಬರುವ ಭೂಮಿಕಾ
ಇದೇ ಸಮಯದಲ್ಲಿ ಭೂಮಿಕಾ ಮನೆಯಾಚೆ ವಾಕಿಂಗ್ ಮಾಡಲು ಬರುತ್ತಾಳೆ. ಈ ವಿಚಾರವನ್ನು ಶಕುಂತಲಾಗೆ ತಲುಪಿಸುವ ಆಕೆಯ ಅಣ್ಣ ನೀನು ರೆಡಿಯಾಗಿದೀಯಾ ತಾನೇ ಎಂದು ಕೇಳುತ್ತಾನೆ. ಭೂಮಿಕಾ ಮೇಲೆ ಹೂಕುಂಡ ಎಸೆಯಲು ಇಬ್ಬರು ತುದಿಗಾಲಿನಲ್ಲಿ ನಿಂತು ಕಾಯುತ್ತಿರುತ್ತಾರೆ. ಇದೇ ಸಮಯದಲ್ಲಿ ಶಕುಂತಲಾ ಕಾಯುತ್ತಿದ್ದ ಸ್ಥಳಕ್ಕೆ ವಾಕಿಂಗ್ ಮಾಡುತ್ತಾ ಭೂಮಿಕಾ ಬರುತ್ತಾಳೆ. ಇನ್ನೇನು ಶಕುಂತಲಾ ಹೂಕುಂಡ ಎಸೆಯಬೇಕು ಎನ್ನುವಷ್ಟರಲ್ಲಿ ಭಾಗ್ಯಮ್ಮ ಬಂದು ಭೂಮಿಕಾಳನ್ನು ಕರೆದೊಯ್ಯುತ್ತಾಳೆ.
ಶಾಕ್ ಆಗುವ ಶಕುಂತಲಾ
ಪ್ಲ್ಯಾನ್ ಫ್ಲಾಪ್ ಆಗಿದ್ದಕ್ಕೆ ಚಿಂತೆಯಲ್ಲಿ ಶಕುಂತಲಾ ವಿಲ ವಿಲ ಒದ್ದಾಡುವಾಗ ಆಕೆಯ ಅಣ್ಣ ಬರುತ್ತಾನೆ. ಆಗ ಯಾಕೆ ಹೂಕುಂಡ ಎಸೆಯದಂತೆ ತಡೆದಿದ್ದು ಎಂದು ಶಕುಂತಲಾ ಕೇಳಿದಾಗ ಅವಳು ಬಂದು ಕಾಪಾಡಿದಳು ಎಂದು ಆಕೆಯ ಅಣ್ಣ ಹೇಳುತ್ತಾನೆ.
ಆಶ್ವರ್ಯಗೊಂಡ ಶಕುಂತಲಾ ಯಾರದು ಎಂದು ಕೇಳುತ್ತಾಳೆ. ಆಗ ಆಕೆಯ ಅಣ್ಣ ಅದೇ ನಮ್ಮ ಪಾಲಿನ ದೌರ್ಭಾಗ್ಯ ಅದೇ ಭಾಗ್ಯ ಎಂದು ಹೇಳುತ್ತಾನೆ. ಇದರಿಂದ ಶಾಕ್‌ಗೆ ಒಳಗಾಗುವ ಶಕುಂತಲಾ, ಭಾಗ್ಯ ಹೇಗೆ ಕಾಪಾಡಲು ಸಾಧ್ಯ ? ಇದೆಲ್ಲ ಅವಳಿಗೆ ಗೊತ್ತಾಗಲು ಹೇಗೆ ಸಾಧ್ಯ ಎಂದು ಕೇಳುತ್ತಾಳೆ. ಆಗ ಅಯ್ಯೋ ದೇವರೇ ಅವಳೂ ಹೇಗಾದರೂ ಬಂದು ಕಾಪಾಡಲಿ ಆದರೆ ಅವಳು ಕಾಪಾಡಿದ್ದು ಮಾತ್ರ ಸತ್ಯ ಎಂದು ಆಕೆಯ ಅಣ್ಣ ಎಂದು ಹೇಳುತ್ತಾನೆ.
ಭಾಗ್ಯಮ್ಮಗೆ ಸ್ಕೆಚ್ ಹಾಕ್ತಾಳಾ ಶಕುಂತಲಾ ?
ಭಾಗ್ಯಮ್ಮಗೆ ಎಲ್ಲ ಅರ್ಥ ಆಗ್ತಿದೆ, ಗೊತ್ತಾಗುತ್ತಿದೆ ಎಂದು ಶಕುಂತಲಾಗೆ ಆಕೆಯ ಅಣ್ಣ ಹೇಳುತ್ತಾನೆ. ಇಲ್ಲದಿದ್ದರೆ ಅದ್ಹೇಗೆ ಅವಳು ಬಂದು ನಮಗೆ ಅಡ್ಡಗಾಲು ಹಾಕಲು ಸಾಧ್ಯ ಎಂದು ಪ್ರಶ್ನೆ ಮಾಡುತ್ತಾನೆ. ಇದರಿಂದ ಮುಂದೆ ಭೂಮಿಕಾಗಿಂತ ಮೊದಲು ಶಕುಂತಲಾ ಈಗ ಭಾಗ್ಯಳನ್ನೇ ಟಾರ್ಗೆಟ್ ಮಾಡುತ್ತಾಳಾ ಎನ್ನುವ ಪ್ರಶ್ನೆ ಎದ್ದಿದೆ. ಮುಂದೇನಾಗುತ್ತೆ ಎನ್ನುವುದನ್ನು ಈಗ ಕಾದು ನೋಡಬೇಕಿದೆ,


Click it and Unblock the Notifications











