Amruthadhaare ; ಇದ್ಯಾವುದು ಹೊಸ ಕರ್ಮ, ಯಾರು ಈ ಪಂಕಜಾ ? ಬೆಚ್ಚಿ ಬಿದ್ದಿದ್ದೇಕೆ ಭಾಗ್ಯಮ್ಮ?
ಅಮೃತಧಾರೆ ಧಾರಾವಾಹಿಯಲ್ಲಿ ಶಕುಂತಲಾ ತನ್ನ ಕೋಣೆಗೆ ಬಾಗಿಲು ಹಾಕಿ ಹೊರ ಬಂದಿದ್ಧಾಳೆ. ಶಕುಂತಲಾ ಹೊರ ಬರುತ್ತಿದ್ದಂತೆಯೇ ಸೃಜನ್ ಮತ್ತು ಸುಧಾ ಭೂಮಿಕಾಗೆ ಸಿಗ್ನಲ್ ನೀಡಿದ್ದಾರೆ. ಈ ಸಮಯವನ್ನು ಸದುಪಯೋಗ ಮಾಡಿಕೊಳ್ಳಲು ಭೂಮಿಕಾ ಚಪ್ಪಲಿ ರಹಸ್ಯ ಕಂಡು ಹಿಡಿಯಲು ನೇರವಾಗಿ ಶಕುಂತಲಾ ರೂಮ್ ನ ಪ್ರವೇಶಿಸುತ್ತಾಳೆ. ಮತ್ತೊಂದೆಡೆ ತಿಂಡಿ ತಿನ್ನಲು ಬಂದ ಶಕುಂತಲಾ ಕೆಲಸದವರೆಲ್ಲ ಎಲ್ಲಿ ಎಂದು ಮಲ್ಲಿಯನ್ನು ಕೇಳಿದಾಗ ಮಲ್ಲಿ ಅವರೆಲ್ಲ ಮಾರ್ಕೆಟ್‌ಗೆ ಹೋಗಿದ್ದಾರೆ ಎಂದು ಹೇಳುತ್ತಾಳೆ.
ಇದೇ ಸಮಯದಲ್ಲಿ ಲಕ್ಷ್ಮೀಕಾಂತ್ ಕೂಡ ತಿಂಡಿ ತಿನ್ನಲು ಬರುತ್ತಾನೆ. ಮಲ್ಲಿಯ ಮಾತುಗಳಿಂದ ಅನುಮಾನಗೊಂಡ ಲಕ್ಷ್ಮೀಕಾಂತ್ ತನ್ನ ಮನದ ದುಗುಡ ದುಮ್ಮಾನ ಹೊರ ಹಾಕುತ್ತಾನೆ. ಇದರಿಂದ ಆತಂಕಕ್ಕೆ ಒಳಗಾಗುವ ಶಕುಂತಲಾ ತಿಂಡಿಯನ್ನು ಅರ್ಧಕ್ಕೆ ಬಿಟ್ಟು ತನ್ನ ರೂಮ್‌ನತ್ತ ಹೊರಡುತ್ತಾಳೆ.

ಶಕುಂತಲಾ ಕೈಗೆ ಸಿಕ್ಕಿ ಬಿದ್ದಳಾ ಭೂಮಿಕಾ ?
ಶಕುಂತಲಾ ತನ್ನ ರೂಮ್‌ನತ್ತ ಹೆಜ್ಜೆ ಹಾಕುತ್ತಿರುವುದನ್ನು ಗಮನಿಸುವ ಸೃಜನ್ ಮತ್ತು ಸುಧಾ, ಶಕುಂತಲಾ ಬರುತ್ತಿರುವ ವಿಚಾರವನ್ನು ರೂಮ್‌ನಲ್ಲಿರುವ ಭೂಮಿಕಾಗೆ ತಿಳಿಸುತ್ತಾರೆ. ಆದರೆ ಭೂಮಿಕಾಗೆ ಅಲ್ಲಿಂದ ತಪ್ಪಿಸಿಕೊಳ್ಳಲು ಸಮಯ ಸಾಕಾಗುವುದಿಲ್ಲ. ಅದೃಷ್ಟವಶಾತ್ ಕೋಣೆಗೆ ಬರುವ ಶಕುಂತಲಾ ಅತ್ತಿತ್ತ ಹೆಚ್ಚು ನೋಡದೇ ತನ್ನ ಬೀರುವಿನ ಕೀ ತೆಗೆದುಕೊಂಡು ವಾಪಸ್ ಹೋಗುತ್ತಾಳೆ.
ಆದರೆ ಹೋಗುವಾಗ ತನ್ನ ರೂಮ್‌ಗೆ ಬೀಗ ಹಾಕಿ ಹೊಗುತ್ತಾಳೆ. ಇದರಿಂದ ಹೊರ ಬರಲಾರದೇ ಭೂಮಿಕಾ ರೂಮ್‌ನಲ್ಲಿಯೇ ಬಂಧಿಯಾಗಿದ್ದಾಳೆ. ಇದೇ ಸಮಯದಲ್ಲಿ ಚಪ್ಪಲಿ ರಹಸ್ಯ ಕಂಡು ಹಿಡಿಯಲು ಶಕುಂತಲಾ ರೂಮ್‌ಗೆ ಹೋಗಿದ್ದ ಭೂಮಿಕಾ ಕೈಗೆ ಪಂಕಜಾ ಎಂಬ ಮಹಿಳೆಯ ಜನ್ಮ ಪ್ರಮಾಣ ಪತ್ರ ಸಿಗುತ್ತದೆ. ಶಕುಂತಲಾ ದೇವಿ ಹುಟ್ಟಿದ ದಿನಾಂಕ ಮತ್ತು ಪಂಕಜಾ ಹುಟ್ಟಿದ ದಿನ ಎರಡು ಒಂದೆ ಇದೆಯಲ್ಲ ಎಂದು ಭೂಮಿಕಾ ಯೋಚನೆ ಮಾಡಲು ಶುರು ಮಾಡುತ್ತಾಳೆ.
ಪಾರಾದ ಭೂಮಿಕಾ ಮೂವರಿಗೆ ಹೇಳಿದ್ದೇನು ?
ಇನ್ನೇನು ಲಕ್ಷ್ಮೀಕಾಂತನ ಜೊತೆ ಶಕುಂತಲಾ ಮತ್ತೆ ಮರಳಿ ತನ್ನ ರೂಮ್ ಸೇರಬೇಕೆನ್ನುವಷ್ಟರಲ್ಲಿ ಹೊರಗಡೆ ಇದ್ದ ಮಲ್ಲಿ, ಸುಧಾ ಮತ್ತು ಸೃಜನ್ ಹೇಗೋ ಬಾಗಿಲನ್ನು ತೆರೆಯುತ್ತಾರೆ. ಆಗ ಹೊರಗಡೆ ಬರುವ ಭೂಮಿಕಾ ಜಸ್ಟ್ ಮಿಸ್ ಆದ್ವಿ ಇಲ್ಲ ಅಂದರೆ ಎಲ್ಲರೂ ಸಿಕ್ಕಿ ಹಾಕಿಕೊಳ್ಳುತ್ತಿದ್ವಿ ಎಂದು ಹೇಳುತ್ತಾಳೆ. ಆಗ ಸೃಜನ್ ನನ್ನ ಜೀವ ಬಾಯಿಗೆ ಬಂದಿತ್ತು ಒಂದು ಕ್ಷಣ ಎಲ್ಲ ದೇವರುಗಳು ನನ್ನ ಕಣ್ಮುಂದೆ ಬಂದು ಹೋದರು ಎಂದು ಹೇಳುತ್ತಾನೆ. ಇನ್ನು ಇದೇ ಸಮಯದಲ್ಲಿ ಹೋದ ಕೆಲಸ ಆಯ್ತಾ ಚಪ್ಪಲಿ ಸಿಕ್ತಾ ಎಂದು ಎಲ್ಲ ಕೇಳಿದಾಗ ಭೂಮಿಕಾ ಇಲ್ಲ ಸಿಗಲಿಲ್ಲ ಎಂದು ಹೇಳುತ್ತಾಳೆ.
ಈ ಮಾತು ಕೇಳಿ ಎಲ್ಲ ನೊಂದುಕೊಳ್ಳುತ್ತಿರುವಾಗ ನಾವ್ಯಾರು ಸಿಕ್ಕಿ ಹಾಕಿಕೊಂಡಿಲ್ಲ ಎನ್ನುವುದೇ ಸಮಾಧಾನದ ವಿಚಾರ ಹಾಗೊಂದು ವೇಳೆ ಯಾರಾದರೂ ಸಿಕ್ಕಿ ಹಾಕಿಕೊಂಡಿದ್ದರೆ ಅವರಲ್ಲ ನಾವು ತಪ್ಪಿತಸ್ಥರಾಗುತ್ತಿದ್ವಿ ಎಂದು ಹೇಳುತ್ತಾಳೆ.
ಪಂಕಜಾ ಹೆಸರು ಕೇಳಿ ಬೆಚ್ಚಿ ಬಿದ್ದ ಭಾಗ್ಯಮ್ಮ
ಮಲ್ಲಿ, ಸುಧಾ ಮತ್ತು ಸೃಜನ್ ಮೂವರನ್ನು ಅಲ್ಲಿಂದ ಕಳುಹಿಸುವ ಭೂಮಿಕಾ ಈ ಪಂಕಜಾ ರಹಸ್ಯ ತಿಳಿದುಕೊಳ್ಳಬೇಕು ಎಂದುಕೊಳ್ಳುತ್ತಾಳೆ. ಆ ನಂತರ ಭಾಗ್ಯಮ್ಮ ಕೊಠಡಿಗೆ ಬರುತ್ತಾಳೆ. ಭಾಗ್ಯಮ್ಮ ರೂಮ್‌ಗೆ ಬರುವ ಭೂಮಿಕಾ, ಸುಧಾ ಮತ್ತು ಭಾಗ್ಯಮ್ಮ ಎದುರು ಪಂಕಜಾ ಹೆಸರು ಪ್ರಸ್ತಾಪಿಸುತ್ತಾಳೆ.
ಪಂಕಜಾ ಹೆಸರು ಕೇಳುತ್ತಿದ್ದಂತೆಯೇ ಬೆಚ್ಚಿ ಬೀಳುವ ಭಾಗ್ಯಮ್ಮ ತಮ್ಮ ಮನದಲ್ಲಿಯೇ ಶಕುಂತಲಾ ಬಂಡವಾಳ ಬಯಲು ಮಾಡಲು ಇದು ಸರಿಯಾದ ಸಮಯ ಎಂದು ಅಂದುಕೊಳ್ಳುತ್ತಾಳೆ. ಆದರೆ ಪಂ.. ಪ ಎಂದು ಎಷ್ಟೇ ಮಾತನಾಡಲು ಪ್ರಯತ್ನ ಮಾಡಿದರು ಕೂಡ ಭಾಗ್ಮಮ್ಮಳ ಬಾಯಿಯಿಂದ ಒಂದು ಮಾತು ಕೂಡ ಹೊರಡುವುದಿಲ್ಲ.
ಅಂದ್ಹಾಗೇ ಪಂಕಜಾ ಹೆಸರನ್ನು ಭಾಗ್ಯಮ್ಮ ಆಗಾಗ ಕನವರಿಸುತ್ತಿರುತ್ತಾಳೆ.ಸದ್ಯ ಅಮೃತಧಾರೆ ಧಾರಾವಾಹಿ ಅನೇಕರಲ್ಲಿ ಕುತೂಹಲ ಕೆರಳಿಸಿದ್ದು ಇದ್ಯಾವುದು ಹೊಸ ಕರ್ಮ ಯಾರು ಈ ಪಂಕಜಾ ಎಂದು ಅನೇಕರು ತಲೆ ಕೆಡಿಸಿಕೊಂಡಿದ್ದಾರೆ.


Click it and Unblock the Notifications











