Amruthadhaare: ಕೊನೆಗೂ ಕಹಿ ಸತ್ಯ ತಿಳಿದ ಗೌತಮ್: ತಂಗಿ ಮಗುವಿಗಾಗಿ ಕಣ್ಣೀರು ಹಾಕಿದ ದಿವಾನ್!
ಗೌತಮ್ ತನ್ನ ತಂಗಿ ಮದುವೆ ಆದ ಬಳಿಕ ಮಹಿಮಾಳನ್ನೂ ಬಹಳ ನೆನಪಿಸಿಕೊಳ್ಳುತ್ತಾನೆ. ತಂದೆಯ ಸ್ಥಾನದಲ್ಲಿ ಇದ್ದುಕೊಂಡು ಮಹಿಮಾಳನ್ನೂ ಸಾಕಿ ಸಲಹಿ ದೊಡ್ಡವಳನ್ನಾಗಿ ಮಾಡಿ ಆಕೆಗೆ ಯಾವುದು ಇಷ್ಟ ಯಾವುದು ಇಷ್ಟ ಇಲ್ಲ ಎಂಬುದನ್ನ ತಿಳಿದುಕೊಂಡು ಆಕೆಯ ಇಷ್ಟಾರ್ಥಗಳನ್ನು ಈಡೇರಿಸಿಕೊಂಡು ಬಂದವ ಅಣ್ಣ ಗೌತಮ್ ದಿವಾನ್.
ಆದರೆ ಇದೀಗ ಅಣ್ಣನ ಆಸೆಗಿಂತ ಮಹಿಮಾಗೆ ಕೆರಿಯರ್ ಇಂಪಾರ್ಟೆಂಟ್ ಆಗಿದೆ. ಮನೆಯವರ ಬಳಿ ಎಲ್ಲಾ ಸುಳ್ಳು ಹೇಳಿ ಮಗುವನ್ನ ಬಲವಂತದಿಂದ ತೆಗೆಸಿದ ಮಹಿಮ, ಮನೆಯವರ ಮುಂದೆ ನಟನೆ ಮಾಡುತ್ತಲೇ ಇರುತ್ತಾಳೆ. ಆದರೆ ಈ ವಿಚಾರವೆಲ್ಲ ಗೌತಮ್‌ಗೆ ತಿಳಿದಿರುವುದಿಲ್ಲ. ಗೌತಮ್ ಮನದಲ್ಲಿ ತನ್ನ ತಂಗಿಯ ಹೊಟ್ಟೆಯಲ್ಲಿ ತನ್ನ ತಂದೆ ಹುಟ್ಟಿ ಬರುತ್ತಾರೆ ಎನ್ನುವ ಆಸೆಯಿಂದ ಕಾಯುತ್ತಿದ್ದಾರೆ.

ಇನ್ನು ಮಹಿಮಾನನ್ನು ಈ ಮನೆಗೆ ಕರೆದುಕೊಂಡು ಬರಬೇಕು ಎಂಬ ಒಂದು ಕೋರಿಕೆಯನ್ನು ತನ್ನ ಅಣ್ಣನ ಮುಂದೆ ಇಟ್ಟಿರುತ್ತಾರೆ. ಇದನ್ನ ನೆನಪಿಸಿಕೊಂಡ ಗೌತಮ್, ಹೇಗಾದರೂ ಮಾಡಿ ನಾನು ತಂಗಿಗೆ ಕೊಟ್ಟ ಮಾತನ್ನು ಈಡೇರಿಸಲೆಬೇಕು ಎಂದು ತನ್ನ ಅತ್ತೆ ಮಾವನ ಬಳಿ ಕೂಡ ಮಾತನಾಡಿ ಅವರನ್ನೆಲ್ಲ ಒಪ್ಪಿಸಿ ಸೀಮಂತ ಶಾಸ್ತ್ರಕ್ಕೆ ಎಲ್ಲ ತಯಾರಿಯನ್ನು ಮಾಡುತ್ತಿರುತ್ತಾರೆ ಭೂಮಿಕಾ, ಗೌತಮ್ .
ಗೌತಮ್ ಆಸೆಗೆ ಕೊಳ್ಳಿ ಇಟ್ಟ ಮಹಿಮಾ
ಗೌತಮ್ ಆಸೆಗಳಿಗೆಲ್ಲ ಹಾಗೆಯೇ ಆಕೆಯ ಕುಟುಂಬದ ಆಸೆಯನ್ನೂ ತನ್ನ ದುಡುಕಿನ ನಿರ್ಧಾರದಿಂದ ಮಹಿಮಾ ಮಣ್ಣು ಪಾಲು ಮಾಡಿದ್ದಾರೆ. ಮಹಿಮಾಗೆ ಮಗು ತೆಗೆದಿರುವ ಗಿಲ್ಟ್ ಕಾಡುತ್ತಿದೆ. ಆದರೆ ಅಣ್ಣ ಮಗುವನ್ನು ಇಷ್ಟು ಪ್ರೀತಿ ಮಾಡುತ್ತಾನೆ ಎನ್ನುವ ವಿಚಾರ ಮಹಿಮಾಗೆ ತಿಳಿದಿಲ್ಲ. ಆದರೆ ಅಣ್ಣ ಮಗು ಹುಟ್ಟುವ ಮುನ್ನವೇ ಎಲ್ಲವನ್ನೂ ಪ್ಲಾನ್ ಮಾಡಿ ಇಟ್ಟಿರುವುದನ್ನು ನೋಡಿದ ಮಹಿಮಾಗೆ ಶಾಕ್ ಆಗುತ್ತದೆ. ಭೂಮಿಕಾ ಹಾಗೂ ಗೌತಮ್ ಸೀಮಂತ ಶಾಸ್ತ್ರಕ್ಕೆ ತಯಾರು ಮಾಡುತ್ತಿರುತ್ತಾರೆ.
ಡಾಕ್ಟರ್ ಧ್ವನಿ ಕೇಳಿ ನಡುಗಿದ ಗೌತಮ್
ಅಷ್ಟ್ರಲ್ಲಿ ಅವರಿಗೆ ಒಂದು ಫೋನ್ ಕರೆ ಬರುತ್ತದೆ. ಕರೆ ಸ್ವೀಕಾರ ಮಾಡಿ ಮಾತನಾಡಿದ ಗೌತಮ್‌ಗೆ ಅತ್ತ ಕಡೆಯಿಂದ ಡಾಕ್ಟರ್ ಮಾತನಾಡುತ್ತಾ ಇರುವ ಧ್ವನಿ ಕೇಳಿಸುತ್ತದೆ. ಮಹಿಮಾಗೆ ಏನೋ ಎಮರ್ಜೆನ್ಸಿ ಆಗಿದೆ ಎಂದು ತಿಳಿದು ಭೂಮಿಕಾನನ್ನು ಕರೆದುಕೊಂಡು ಹೋಗುತ್ತಾನೆ. ಆಸ್ಪತ್ರೆಗೆ ಹೋದ ಬಳಿಕ ಡಾಕ್ಟರ್, ಮಹಿಮಾ ಬೈಕ್ ನಲ್ಲಿ ಹೋಗುತ್ತಾ ಇರಬೇಕಾದರೆ ಆಕ್ಸಿಡೆಂಟ್ ಆಗಿದೆ ಎಂದು ಹೇಳಿದ್ದಾರೆ.

ತಂಗಿ ಮಗು ಇನ್ನಿಲ್ಲ ಎಂದು ತಿಳಿದು ಕುಸಿದ ಗೌತಮ್
ಡಾಕ್ಟರ್ ಮಾತು ಕೇಳಿ ಭಯಗೊಂಡ ಗೌತಮ್‌ಗೆ ಮಾತೇ ಬರದ ಹಾಗಾಗಿದೆ. ಗೌತಮ್ ಬಳಿ ಡಾಕ್ಟರ್ ಮಗು ಅಬಾರ್ಟ್ ಆಗಿ ಹೋಯಿತು ಎಂದಾಗ ಗೌತಮ್ ಗೆ ಆಕಾಶ ಭೂಮಿ ಕಳಚಿ ತಲೆ ಮೇಲೆ ಬಿದ್ದಂತಾಗಿದೆ. ಆದರೂ ಕೊಂಚ ಮಟ್ಟಿಗೆ ಸುಧಾರಿಸಿಕೊಂಡು ಜೋರಾಗಿ ಅಳುತ್ತಾನೆ. ಆತನಿಗೆ ತಾನು ಎಷ್ಟೆಲ್ಲ ಕನಸು ಕಂಡಿದ್ದೆ ಆದರೆ ಅದ್ಯಾವುದೂ ನನಸು ಆಗಲೇ ಇಲ್ಲ ಎನ್ನುವ ಬೇಸರವಿದೆ.
ಮಹಿಮಾ ಪ್ಲಾನ್ ಸಕ್ಸಸ್
ಮಹಿಮಾ ಅಜಾಗರುಕತೆಯಿಂದ ಇದೀಗ ಮಗುವನ್ನು ಕಳೆದುಕೊಂಡಿದ್ದಾಳೆ ಎನ್ನುವುದು ಗೌತಮ್ ಗೆ ಅನ್ನಿಸಿ ದೆ. ಇನ್ನು ಮಹಿಮಾ ಅದು ಹೇಗೋ ಡಾಕ್ಟರ್‌ಗೆ ಕನ್ವಿನ್ಸ್ ಮಾಡಿ ತನ್ನ ಅಣ್ಣನ ಬಳಿ ಸುಳ್ಳು ಹೇಳುವ ಹಾಗೆ ಮಾಡಿದ್ದಾಳೆ . ಗೌತಮ್ ನೋವು ನೋಡಲು ಆಗದೆ ಭೂಮಿಕಾ ಕೂಡ ಸೋತು ಹೋಗಿದ್ದಾಳೆ. ಕುಟುಂಬದಲ್ಲಿ ಹರುಷ ಮೂಡಿತ್ತು . ಆದರೆ ಆ ಸಂತೋಷ ಇದೀಗ ಕಳೆದು ಹೋಗಿದೆ.


Click it and Unblock the Notifications











