Amruthadhaare:ಅಪ್ಪನ ಬಗ್ಗೆಯೇ ನಾಲಗೆ ಹರಿಯಬಿಟ್ಟ ಅಪೇಕ್ಷಾ; ಅಪ್ಪಿ ಕಪಾಳಕ್ಕೆ ಬಾರಿಸಿದ ಭೂಮಿಕಾ?
ಭೂಮಿಕಾಗೆ ತಂದೆ ಸದಾಶಿವ ಅಂದರೆ ಬಹಳ ಪ್ರೀತಿ. ತನ್ನ ತಂದೆಯನ್ನು ಯಾರ ಎದುರು ಕೂಡ ಆಕೆ ಬಿಟ್ಟುಕೊಡುವ ಮಾತೆ ಇಲ್ಲ. ತಂದೆ ನಮ್ಮನ್ನು ಬಹಳ ಕಷ್ಟಪಟ್ಟು ಬೆಳೆದಿದ್ದಾರೆ ಎನ್ನುವುದು ಭೂಮಿಕಾಗೆ ಚೆನ್ನಾಗಿ ಗೊತ್ತಿದೆ. ಆದರೆ, ಅಪೇಕ್ಷಾ ಮಾತ್ರ ದುಡ್ಡಿನ ದುರಹಂಕಾರದಿಂದ ಏನೇನೋ ತಂದೆಯ ಬಗ್ಗೆ ಮಾತಾನಾಡುತ್ತಿದ್ದಾಳೆ. ಆಕೆಗೆ ತಂದೆ ಎಂದರೆ ಇದೀಗ ಅಷ್ಟಕಷ್ಟೇ. ಹುಟ್ಟಿಸಿದ ತಂದೆ ತಾಯಿ ಮದುವೆ ಆಗುವವರೆಗೆ ಮಾತ್ರ ಆಮೇಲೆ ಅವರು ಬೇಕಾಗಿಯೇ ಇಲ್ಲ ಎನ್ನುವುದು ಇದೀಗ ಅಪ್ಪಿ ಮನಸ್ಸಿಗೆ ಬಂದುಬಿಟ್ಟಿದೆ.
ಎಷ್ಟೇ ದೊಡ್ಡ ಕುಟುಂಬಕ್ಕೆ ತಾನು ಸೊಸೆಯಾಗಿ ಬಂದರೂ ತನ್ನ ತಂದೆ ತಾಯಿಯನ್ನು ಭೂಮಿಕಾ ಅಪಾರವಾಗಿ ಪ್ರೀತಿ ಮಾಡುತ್ತಾಳೆ. ಭೂಮಿಕಾಗೆ ತನ್ನ ತಂದೆ ಎಂದರೆ ಬಹಳ ಪ್ರೀತಿ. ಹಾಗೆಯೇ ತಂದೆಗೆ ಮಗಳ ಮೇಲೆ ಬಹಳ ವಾತ್ಸಲ್ಯ. ಆದರೆ, ಅಪ್ಪಿಗೆ ಅಲ್ಪನಿಗೆ ಐಶ್ವರ್ಯ ಬಂದ ಹಾಗೆ ಆಗಿದೆ. ಇದನ್ನು ನೋಡಿದ ಸೀರಿಯಲ್ ಪ್ರೇಮಿಗಳು ಬಹಳ ಮುನಿಸಿಕೊಂಡಿದ್ದಾರೆ. ಅಪ್ಪಿಯ ಅಹಂಕಾರ ಮುರಿದು ಬೀಳುವುದು ಯಾವಾಗ? ಆಕೆಗೆ ಯಾಕೆ ಈ ರೀತಿ ಯ ಸೊಕ್ಕು. ತಂದೆ ತಾಯಿಯ ಬಗ್ಗೆ ತುಚ್ಛವಾಗಿ ಮಾತನಾಡುವುದು ಎಷ್ಟರ ಮಟ್ಟಿಗೆ ಸರಿ ಎಂದು ಅಭಿಮಾನಿಗಳು ಪ್ರಶ್ನೆ ಮಾಡುತ್ತಿದ್ದಾರೆ.

ಅಪೇಕ್ಷಾ ಶಾಪಿಂಗ್‌ಗೆ ಎಂದು ತೆರಳಿರುತ್ತಾಳೆ. ಆದರೆ ಬರುವಾಗ ಮನೆ ಮಂದಿಗೆಲ್ಲ ಕೆಲವೊಂದು ಗಿಫ್ಟ್ ತಂದಿರುತ್ತಾಳೆ. ಇದನ್ನು ನೋಡಿದ ಶಕುಂತಲಾ ಸಹೋದರ ಅಪ್ಪಿಗೆ "ಏನಮ್ಮಾ ಇದೆಲ್ಲ?" ಎಂದಾಗ "ನಾನು ಶಾಪಿಂಗ್‌ಗೆ ಎಂದು ಹೋಗಿದ್ದೆ. ಅದಕ್ಕೆ ಬರುವಾಗ ಎಲ್ಲರಿಗೂ ಡ್ರೆಸ್ ಎಲ್ಲಾ ತೆಗೆದುಕೊಂಡು ಬಂದೆ" ಎಂದು ಹೇಳುತ್ತಾಳೆ. ಇದನ್ನು ಕೇಳಿದ ಶಕುಂತಲಾ ಸಹೋದರ ಕೇಳುತ್ತಾನೆ "ಏನಮ್ಮಾ ನೀನು ಮದುವೆಗಿಂತ ಮುಂಚೆ ಹೀಗೆ ಮಾಡುತ್ತಿದ್ಯಾ? ಎಂದು ಕೇಳಿದಾಗ ಅಪ್ಪಿ ಕೊಂಚ ಜೋರಾಗಿ "ನನ್ನ ತಂದೆ ಬಹಳ ಜಿಪುಣ. ಅವರು ನಮಗೆ ಹಣ ಕೊಟ್ಟರೆ ಅಲ್ವಾ, ನಾನು ಖರ್ಚು ಮಾಡಲು ಆಗುವುದು. ಅಪ್ಪಂದು ತೀರಾ ಮಿಡಿಲ್ ಕ್ಲಾಸ್ ಮೆಂಟಾಲಿಟಿ. ಒಂದೊಂದು ರೂಪಾಯಿ ಖರ್ಚು ಮಾಡುವುದಕ್ಕೆ ನೂರು ಸಲ ಆಚೆ ಇಚೆ ನೋಡುತ್ತಾರೆ. ನಮ್ಮ ಅಪ್ಪನಿಗೆ ಸಂಬಳ ಬರುತ್ತಿದ್ದದ್ದು ಅಷ್ಟಕಷ್ಟೇ. ಸಚ್ ಏ ಬೋರಿಂಗ್ ಕ್ಯಾರೆಕ್ಟರ್" ಎಂದು ಹೇಳುತ್ತಾಳೆ ಅಪ್ಪಿ.
ಅಪ್ಪಿ ಮಾತಿಗೆ ಸಿಟ್ಟಿಗೆದ್ದ ಭೂಮಿಕಾ
ಅಪ್ಪಿ ಮಾತಿಗೆ ಭೂಮಿಕಾಗೆ ಬಹಳ ಸಿಟ್ಟು ಬರುತ್ತದೆ. ಅಪ್ಪಿ ಬೇರೆ ಇನ್ನೇನಾದರೂ ಹೇಳುವ ಮುನ್ನ ಆಕೆಯನ್ನು ತಡೆಯಬೇಕು ಎಂದುಕೊಂಡು ಭೂಮಿಕಾ ಹೋಗುತ್ತಾಳೆ. ಭೂಮಿಕಾ ಅಪ್ಪಿಯ ಬಳಿ "ಅಪ್ಪಿ ನೀನು ಏನು ಮಾತಾನಾಡುತ್ತಿದ್ದಿಯಾ ಎನ್ನುವುದರ ಬಗ್ಗೆ ನಿನಗೆ ಅರಿವು ಇದೆಯಾ?" ಎಂದಾಗ ಅಪ್ಪಿ "ಮತ್ತೆ ಇನ್ನೇನಕ್ಕಾ ಅಪ್ಪ ನಮ್ಮ ಕೈಗೆ ದುಡ್ಡು ಕೊಟ್ಟು ಖುಷಿಯಾಗಿ ಇರಿ ಎಂದು ಯಾವತ್ತಾದರೂ ಹೇಳಿದ್ದಾರಾ? ಅಂತಹ ಜಿಪುಣ ನಮ್ಮಪ್ಪ" ಎನ್ನುತ್ತಾಳೆ.

ಅಕ್ಕನ ಮಾತಿಗೆ ಸುಮ್ಮನಾಗದ ಅಪ್ಪಿ
"ಅಪ್ಪಿ ನಾವು ಬದಲಾಗುವುದು ತಪ್ಪಲ್ಲ ಅಪ್ಪಿ. ಆದರೆ ನಾವು ಬೆಳೆದು ಬಂದ ರೀತಿ ನಾವು ಬೆಳೆದ ಬೇರನ್ನು ಮರೆಯುವುದು ತಪ್ಪು" ಎಂದು ಹೇಳಿದಾಗ "ಅಪ್ಪ ಯಾವತ್ತೂ ನಮಗೆ ಈ ರೀತಿ ಹಣ ಕೊಟ್ಟಿದ್ದಾರಾ? ಅವರು ಶಾಲೆಯಲ್ಲಿಯೂ ಮೇಷ್ಟ್ರು. ಮನೆಯಲ್ಲಿಯೂ ಮೇಷ್ಟ್ರು. ಸಚ್ ಏ ಬೋರಿಂಗ್ ಕ್ಯಾರೆಕ್ಟರ್" ಎಂದು ಹೇಳಿದಾಗ ಭೂಮಿಕಾಗೆ ಬಹಳ ಸಿಟ್ಟು ಬರುತ್ತದೆ ಆಕೆಯ ಕೆನ್ನೆಗೆ ಜೋರಾಗಿ ಹೊಡೆಯುತ್ತಾಳೆ. ಈಗಾಗಲೇ ಅಪ್ಪಿಗೆ ತನ್ನ ಅಕ್ಕನ ಮೇಲೆ ಸಖತ್ ಸಿಟ್ಟು ಇದೆ. ಭೂಮಿಕಾ ಕೋಪಕ್ಕೆ ಸಿಕ್ಕಿ ಇದೀಗ ನಲುಗಿದ್ದಾಳೆ ಅಪ್ಪಿ. ಇದರಿಂದ ಅಪ್ಪಿ ಹಾಗೂ ಭೂಮಿಕಾ ಮಧ್ಯೆ ಇನ್ನೂ ಅಂತರ ಹೆಚ್ಚಾಗುವುದಂತೂ ಖಚಿತ.


Click it and Unblock the Notifications










