Amruthadhaare: ಗೌತಮ್ ಮನೆಗೆ ಕಾಲಿಟ್ಟ ಸುಧಾ; ಮತ್ತೆ ಕಾದಿದ್ಯಾ ಗೌತಮ್ ದಿವಾನ್‌ಗೆ ಕಂಟಕ?

By ಪೂರ್ವ

ಭೂಮಿಕಾ ಎಲ್ಲರನ್ನೂ ಕೂಡ ಕಾಪಾಡಿ ಆಕೆಯ ಜೀವಕ್ಕೆ ಹಾನಿ ಮಾಡಿಕೊಳ್ಳುತ್ತಾಳೆ. ಆಕೆಗೆ ತನ್ನ ಗಂಡ ಹಾಗೂ ಆಕೆಯ ಮನೆಯವರಿಗೆ ಸಂಚು ಕೋರರಿಂದ ಹಾನಿ ಆಗುತ್ತದೆ ಎಂದು ತಿಳಿದಿತ್ತು. ಹೀಗಾಗಿ ಎಲ್ಲರಿಗೂ ಅಪಾಯದ ಮುನ್ಸೂಚನೆಯನ್ನು ನೀಡುತ್ತಾಳೆ. ಹಾಗೆಯೇ ಮನೆಯಲ್ಲಿದ್ದ ಫೋನ್ ಅನ್ನೇ ಹೊರಗೆ ತೆಗೆದುಕೊಂಡು ಬಿಸಾಡುತ್ತಾಳೆ. ಭೂಮಿಕಾಗೆ ಈ ವೇಳೆ ಕೊಂಚ ಮಟ್ಟಿಗೆ ಏಟು ಆಗುತ್ತದೆ. ಆದರೆ ಆಕೆ ಮನೆ ಮಂದಿಯ ಪ್ರಾಣವನ್ನು ಉಳಿಸಿದ್ದರಿಂದ ಭೂಮಿಕಾ ಮೇಲೆ ಗೌತಮ್‌ಗೆ ಬಹಳ ಹೆಮ್ಮೆ.

ಭೂಮಿಕಾನನ್ನು ಬಹಳ ಚೆನ್ನಾಗಿ ನೋಡಿಕೊಳ್ಳಬೇಕು. ಆಕೆಯನ್ನು ಎಷ್ಟು ಹೊತ್ತಿಗೂ ನನ್ನಿಂದ ನೋಡಿಕೊಳ್ಳಲು ಆಗುವುದು ಇಲ್ಲ. ಆದ ಕಾರಣ ಆಕೆಯನ್ನು ಯಾರು ಚೆನ್ನಾಗಿ ನೋಡಿಕೊಳ್ಳುತ್ತಾರೋ ಅಂತಹವರು ನಮ್ಮ ಮನೆಗೆ ಕೆಲಸದವರಾಗಿಬೇಕು. ಇಲ್ಲವಾದರೆ ನಾನೇ ಏನಾದರೂ ಒಂದು ಮಾಡುತ್ತೇನೆ ಎಂದು ಹೇಳುತ್ತಾನೆ. ಭೂಮಿಕಾ ತನಗೆ ಏನೂ ಆಗಿಲ್ಲ ಎಂಬಂತೆ ಸಹಜವಾಗಿಯೇ ಇರುತ್ತಾಳೆ.

Kannada serial Amruthadhaare November 18th episode update

ಆಕೆಗೆ ತನ್ನ ಗಂಡ ತನ್ನ ಬಗ್ಗೆ ಹೆಚ್ಚಿನ ಗಮನ ಹರಿಸುವುದು ಬಹಳಷ್ಟು ಇರಿಸು ಮುರಿಸು ತಂದಿತ್ತು. ಆದರೂ ಕೂಡಾ ತನ್ನ ಗಂಡ ತನ್ನನ್ನು ಹೆಚ್ಚು ಪ್ರೀತಿ ಮಾಡುತ್ತಿರುವುದರಿಂದ ಆಕೆಗೆ ಅರಿಯದೆ ಆತನ ಮೇಲೆ ಪ್ರೀತಿ ಹೆಚ್ಚಾಗುತ್ತೆ. ಆದರೆ, ಅದನ್ನು ಗೌತಮ್ ಎದುರು ತೋರಿಸಿಕೊಂಡು ಇರುವುದಿಲ್ಲ. ಇನ್ನೂ ಆನಂದ್ ಸುಧಾ ಬಳಿ ಬಂದು ತನ್ನ ಗೆಳೆಯನ ಮನೆಯಲ್ಲಿ ಒಂದು ಕೆಲಸ ಇದೆ. ಅದಕ್ಕೆ ಒಳ್ಳೆಯ ಮನಸ್ಸಿದ್ದವರು, ಹಾಗೆಯೇ ಒಳ್ಳೆಯ ಗುಣ ನಡತೆ ಇರುವವರು ಬೇಕು ಎಂದು ಹೇಳುತ್ತಾನೆ. ಹಾಗೆಯೇ ಗೆಳೆಯನ ಮನೆಯಲ್ಲಿ ಏನೇನೆಲ್ಲ ನಡೆಯಿತೋ ಆದರೆ ಬಗ್ಗೆ ಸುಧಾಗೆ ಹೇಳುತ್ತಾನೆ.

ಗೌತಮ್ ಮನೆಗೆ ಬಲಗಾಲಿಟ್ಟು ಬಂದ ಸುಧಾ

ಆನಂದ್ ಮಾತಿಗೆ ಒಪ್ಪಿ ಸುಧಾ ಗೌತಮ್ ಮನೆಗೆ ಬರುತ್ತಾಳೆ. ಗೌತಮ್ ಮನೆಗೆ ಮೊದಲು ಬಂದಾಗ ಸುಧಾ ಬಳಿ ಆನಂದ್ "ಸುಧಾ ನೀನು ಬಲಗಾಲು ಇಟ್ಟು ಮನೆಗೆ ಬಾರಮ್ಮ. ಇದರಿಂದ ನಮ್ಮ ಗೆಳೆಯನ ಮನೆಯಲ್ಲಿ ಇನ್ನೂ ಖುಷಿ, ಸಂತೋಷ ಉಕ್ಕಿ ಹರಿಯಲಿ" ಎಂದು ಹೇಳುತ್ತಾನೆ. ಇದನ್ನು ಕೇಳಿದ ಸುಧಾಗೆ ಖುಷಿ ಆಗಿ ಬಲಗಾಲು ಇಟ್ಟು ಮನೆಗೆ ಬರುತ್ತಾಳೆ. ಸುಧಾಳನ್ನು ಅಲ್ಲಿಯೇ ನಿಲ್ಲಿಸಿ ತನ್ನ ಗೆಳೆಯನ ಬಳಿಗೆ ಬಂದ ಆನಂದ್ "ನಮ್ಮ ಮನೆಗೆ ಒಬ್ಬರು ಬಂದಿದ್ದಾರೆ. ನಮ್ಮ ಅತ್ತಿಗೆಯನ್ನು ದೇವತೆಯ ಹಾಗೆ ನೋಡಿಕೊಳ್ಳುತ್ತಾರೆ. ಇದಕ್ಕೆ ಯಾವುದೇ ಸಂಶಯ ಬೇಡ" ಎಂದು ಹೇಳುತ್ತಾನೆ.

Kannada serial Amruthadhaare November 18th episode update

ಸುಧಾಳನ್ನು ನೋಡಿ ಆಶ್ಚರ್ಯಗೊಂಡ ಗೌತಮ್

ಗೌತಮ್ ಬಳಿ ಆನಂದ್ ಸುಧಾ ಬಂದಿರುವ ವಿಚಾರ ಹೇಳಿದಾಗ "ನಾನು ನೋಡಬೇಕು. ಸುಮ್ಮನೆ ನಾನು ನೋಡದೆ ಯಾವ ಕೆಲಸಾದವರನ್ನು ನಾನು ತೆಗೆದುಕೊಳ್ಳುವುದಿಲ್ಲ" ಎಂದು ಗೌತಮ್ ಹೇಳುತ್ತಾನೆ. ಅಲ್ಲಿ ನೋಡಿದಾಗ ಗೌತಮ್‌ಗೆ ಸರ್ಪ್ರೈಸ್ ಕಾದಿತ್ತು. ಅಲ್ಲಿ ಇದ್ದಿದ್ದು ಬೇರೆ ಯಾರು ಅಲ್ಲ. ಗೌತಮ್‌ನನ್ನು ಕಾಪಾಡಿದ ಸುಧಾ. ಇದನ್ನು ಕಂಡು ಗೌತಮ್‌ಗೆ ಬಹಳ ಖುಷಿ ಆಗುತ್ತದೆ. ಗೌತಮ್‌ನನ್ನು ಈ ಮನೆಯಲ್ಲಿ ನೋಡಿದ ಸುಧಾ "ಅಣ್ಣ ನೀವೇನು ಇಲ್ಲಿ ಎಂದು ಕೇಳುತ್ತಾಳೆ. ಇದನ್ನು ಕೇಳಿದ ಗೌತಮ್‌ಗೆ ನಗು ಬರುತ್ತದೆ. ಆನಂದ್‌ಗೆ ಏನು ಮಾತನಾಡುತ್ತಿದ್ದಾರೆ ಎನ್ನುವುದು ಅರ್ಥ ಆಗುವುದೇ ಇಲ್ಲ. ಇನ್ನೂ ಗೌತಮ್ ಏನು ಮಾತೆ ಆಡುವುದಿಲ್ಲ. ಸ್ವಲ್ಪ ಹೊತ್ತಿನ ಬಳಿಕ ಗೌತಮ್ "ಇದು ನನ್ನದೇ ಮನೆ. ನಾನೇ ಗೌತಮ್ ದಿವಾನ್" ಎಂದು ಹೇಳುತ್ತಾನೆ. ಇದನ್ನು ಕೇಳಿದ ಸುಧಾಗೆ ಶಾಕ್ ಆಗುತ್ತದೆ.

More from Filmibeat

English summary
Kannada serial Amruthadhaare November 18th episode update
Read more about: serial poorva filmibeat news
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X