Amruthadhaare: ಅಕ್ಕನ ಸೇವೆ ಮಾಡಲು ಬಿಡದ ಭಾವ; ಗೌತಮ್ ನಿರ್ಧಾರ ಮಲ್ಲಿಗೆ ಬೇಸರ?

By ಪೂರ್ವ

ಗೌತಮ್ ಮನೆಗೆ ಸುಧಾ ಈಗಾಗಲೇ ಕಾಲಿಟ್ಟಿದ್ದಾಳೆ. ಸುಧಾಗೆ ಟಾರ್ಗೆಟ್ ಇದ್ದಿದ್ದೆ ಗೌತಮ್ ದಿವಾನ್. ಆದರೆ ತಾನು ರಕ್ಷಣೆ ಮಾಡಿದವರೇ ಗೌತಮ್ ದಿವಾನ್ ಎನ್ನುವುದು ಆಕೆಗೆ ಗೊತ್ತಿರಲಿಲ್ಲ. ಆದರೆ, ಇದೀಗ ಈಕೆ ಗೌತಮ್ ಮನೆಗೆ ಬಂದಿರುವುದೇ ಆ ಟಾರ್ಗೆಟ್ ಇಟ್ಟುಕೊಂಡು. ಸುಧಾ ಮನೆಗೆ ಬಂದು ಭೂಮಿಕಾ ಆರೈಕೆಯನ್ನು ಬಹಳ ಅಚ್ಚುಕಟ್ಟಾಗಿ ನಿಭಾಯಿಸುತ್ತಿದ್ದಾಳೆ. ಆದರೆ ಇದರಿಂದ ಮಲ್ಲಿಗೆ ಬಹಳ ಬೇಸರ ಆಗಿದೆ. ನನಗೆ ನನ್ನ ಅಕ್ಕನ ಆರೈಕೆ ಮಾಡಲು ಭಾವ ಒಂದು ಅವಕಾಶ ಕೊಡಬೇಕಾಗಿತ್ತು. ಯಾಕೆಂದರೆ ಅಕ್ಕ ನನ್ನ ಬಗ್ಗೆ ಬಹಳ ಕಾಳಜಿ ವಹಿಸುತ್ತಾರೆ ಎಂಬ ಅಳುಕು ಇದೆ.

ಈ ಕಾರಣಕ್ಕೆ ಭೂಮಿಕಾ ಅವರ ಕಾಳಜಿ ವಹಿಸಬೇಕು. ಅವರನ್ನು ಚೆನ್ನಾಗಿ ಆರೈಕೆ ಮಾಡಬೇಕು ಎಂದುಕೊಂಡಿದ್ದಾಳೆ ಮಲ್ಲಿ. ಆದರೆ ಗೌತಮ್ ತೆಗೆದುಕೊಂಡ ನಿರ್ಧಾರಕ್ಕೆ ಮಲ್ಲಿಗೆ ಬಹಳ ಬೇಸರ ಆಗಿರುವುದಂತೂ ನಿಜ. ಭಾವನ ಮನೆಯಲ್ಲಿ ತಾನು ಇದ್ದೇನೆ ಎನ್ನುವುದನ್ನು ಮರೆತು ಬಿಟ್ಟಿದ್ದಾರೆ ಎಂದು ಮಲ್ಲಿ ಅಂದುಕೊಂಡಿರುತ್ತಾಳೆ. ಇದರಿಂದ ಬಹಳ ಬೇಸರ ಕೂಡ ಆಗಿದೆ. ಇತ್ತ ಭೂಮಿಕಾಗೆ ಸುಧಾನ ನೋಡಿ ಬಹಳ ಖುಷಿ ಆಗಿದೆ.

Kannada serial Amruthadhaare November 19th episode update

ಸುಧಾಳನ್ನು ಮನೆಯ ಕೆಲಸದವಳಾಗಿ ಭೂಮಿಕಾ ಯಾವತ್ತೂ ಟ್ರೀಟ್ ಮಾಡಿರುವುದಿಲ್ಲ. ಆಕೆಯನ್ನು ಮನೆಯ ಮಗಳಾಗಿ ನೋಡಿಕೊಂಡು ಮಾತನಾಡಿಕೊಂಡು ಇರುತ್ತಾಳೆ. ಆದರೆ, ಇದೆಲ್ಲವನ್ನೂ ನೋಡಿದ ಸುಧಾಗೆ ಬಹಳ ಆಶ್ಚರ್ಯ ಆಗುತ್ತೆ. ಆಕೆಗೆ ತನ್ನ ಮನೆಯವರ ಹಾಗೆಯೇ ಗೌತಮ್ ದಿವಾನ್ ಮನೆಯಲ್ಲಿ ಫೀಲ್ ಆಗುತ್ತದೆ. ಭೂಮಿಕಾಗೆ ಊಟ ತೆಗೆದುಕೊಂಡು ಬಂದ ಸುಧಾಳನ್ನು ನೋಡಿ ಭೂಮಿಕಾಗೆ ಬಹಳ ಖುಷಿ ಆಗುತ್ತೆ. ಹಾಗೆಯೇ ಭೂಮಿಕಾ ಪ್ರೀತಿ ನೋಡಿ ಸುಧಾ ಕರಗಿಬಿಡುತ್ತಾಳೆ.

ಇತ್ತ ಮಲ್ಲಿ ಬಹಳ ಬೇಸರದಿಂದ ತನ್ನ ಭಾವ ಹಾಗೂ ಆನಂದ್ ಕುಳಿತಿರುವಲ್ಲಿಗೆ ಬರುತ್ತಾಳೆ. ಆಕೆ ಗೌತಮ್ ಬಳಿ "ಭಾವ ನಿಮ್ಮ ನಿರ್ಧಾರ ನನಗೆ ಬೇಸರ ತರಿಸಿರುವುದು ಮಾತ್ರ ಸತ್ಯ. ಯಾಕೆಂದರೆ, ನಾನು ಯಾವತ್ತೂ ಅಕ್ಕನ ಸೇವೆ ಮಾಡಲು ಆಗಲಿಲ್ಲ. ಈಗ ಆದರೂ ಆಕೆಯ ಸೇವೆ ಮಾಡಬೇಕು ಅಂದುಕೊಂಡು ಇದ್ದೆ. ಆದರೆ, ಅದಕ್ಕೆ ನೀವು ಬಿಡಲಿಲ್ಲ. ಮನೆಗೆ ಕೆಲಸದವರನ್ನು ಕರೆದುಕೊಂಡು ಬಂದಿದ್ದೀರ. ನನಗೆ ಬಹಳ ಬೇಸರ ಆಗುತ್ತಿದೆ" ಎಂದು ಹೇಳುತ್ತಾಳೆ. ಇದನ್ನು ಕೇಳಿದ ಗೌತಮ್ ಮಲ್ಲಿಗೆ ಸಮಾಧಾನ ಹೇಳುತ್ತಾನೆ.

Kannada serial Amruthadhaare November 19th episode update

"ಜೈ ದೇವ್‌ಗೆ ಕೂಡ ಏಟಾಗಿದೆ. ನೀನು ಆತನ ಬಳಿಯಲ್ಲಿ ಇದ್ದು ಆರೈಕೆ ಮಾಡು. ಆಗ ನಿನ್ನ ಹಾಗೂ ಜೈ ದೇವ್ ಬಾಡಿಂಗ್ ಕೂಡ ಚೆನ್ನಾಗಿ ಆಗುತ್ತದೆ" ಎಂದು ಹೇಳುತ್ತಾರೆ. ಆಗ ಮಲ್ಲಿ ನಾಚಿ ನೀರಾಗುತ್ತಾಳೆ. ಇದೆಲ್ಲವನ್ನೂ ಪಾರ್ಥ ದೂರದಿಂದ ಗಮನಿಸುತ್ತಾ ಇರುತ್ತಾನೆ. ಆತನಿಗೆ ತನ್ನ ಹೆಂಡತಿ ಸ್ವಭಾವ ಚೇಂಜ್ ಆಗಿರುವುದೇ ಬಹಳ ಬೇಸರ. ಆಕೆ ಇವತ್ತು ಸರಿ ಹೋಗುತ್ತಾಳೆ. ನಾಳೆ ಸರಿ ಹೋಗುತ್ತಾಳೆ ಎಂದು ಅಂದುಕೊಂಡು ದಿನ ದೂಡುತ್ತಿದ್ದಾನೆ. ಸ್ವಂತ ಅಕ್ಕನಿಗೆ ಅಷ್ಟು ನೋವು ಆದರೂ ಅಪ್ಪಿಗೆ ಮಾತ್ರ ಇದ್ಯಾವುದರ ಅರಿವೆ ಇಲ್ಲವೆಂದು ಬೇಸರ ಮಾಡಿಕೊಳ್ಳುತ್ತಾನೆ.

More from Filmibeat

English summary
Kannada serial Amruthadhaare November 19th episode update;
Read more about: serial poorva filmibeat news
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X