Amruthadhaare:ಧನ್ಯಾ ಮಾತಿಗೆ ಬೆಚ್ಚಿ ಬಿದ್ದ ಶಕುಂತಲಾ ದೇವಿ? ಗೌತಮ್ ತಾಯಿ ಇರುವ ಸ್ಥಳ ಗೊತ್ತಾಗುತ್ತಾ?

By ಪೂರ್ವ

ಗೌತಮ್ ಹಾಗೆಯೇ ಭೂಮಿಕಾ ಇದೀಗ ಅನ್ಯೋನ್ಯವಾಗಿ ಜೀವನ ಕಳೆಯುತ್ತಿದ್ದಾರೆ. ಇವರಿಬ್ಬರ ಜೋಡಿಗೆ ಯಾರ ಕಣ್ಣೂ ಬೀಳದಿರಲಿ ಎಂದು ಅಭಿಮಾನಿಗಳು ಬೇಡಿಕೋಳ್ಳುತ್ತಿದ್ದಾರೆ. ಇತ್ತ ಭೂಮಿಕಾಗೆ ಧನ್ಯಾ ಪದೇ ಪದೆ ಕರೆ ಮಾಡಿ ಟಾರ್ಚರ್ ಮಾಡುತ್ತಿದ್ದಾರೆ. ಧನ್ಯಾಗೆ ತನ್ನ ಅಕ್ಕ ಹೇಳಿರುವ ನಿಜ ವಿಚಾರವನ್ನು ಹೇಗಾದರೂ ಮಾಡಿ ಭೂಮಿಕಾ ಅಥವಾ ಗೌತಮ್‌ಗೆ ತಲುಪಿಸಬೇಕು ಅಂದುಕೊಳ್ಳುತ್ತಾಳೆ. ಆದರೆ, ಇದಕ್ಕೆಲ್ಲ ಶಕುಂತಲಾ ದೇವಿ ಮಾತ್ರ ಬಿಡುವ ಹಾಗೆ ಕಾಣಿಸುತ್ತಿಲ್ಲ.

ಗೌತಮ್ ತಾಯಿ ಹಾಗೂ ತಂಗಿ ಇಬ್ಬರೂ ಬದುಕಿದ್ದಾರೆ ಎಂಬುದು ಗೌತಮ್‌ಗೆ ತಿಳಿದರೆ ತನಗೆ ಸಿಕ್ಕಿರುವ ಎಲ್ಲಾ ಸೌಲಭ್ಯಗಳು ತನ್ನಿಂದ ದೂರ ಹೋಗಬಹುದು ಎನ್ನುವ ಕಾರಣಕ್ಕೆ ಶಕುಂತಲಾ ದೇವಿ ಗೌತಮ್ ತಾಯಿ, ತಂಗಿ ಬದುಕಿದ್ದರೂ ಸತ್ತಿದ್ದಾರೆಂದು ಹೇಳುತ್ತಾರೆ. ಆದರೆ ನಿಜವಾಗಿಯೂ ಗೌತಮ್ ತಾಯಿ ಹಾಗೂ ತಂಗಿ ಎಲ್ಲಿದ್ದಾರೆ? ಅವರು ಏನು ಮಾಡುತ್ತಿದ್ದಾರೆ ಎನ್ನುವುದು ಆಕೆಗೆ ಇನ್ನೂ ತಿಳಿದಿಲ್ಲ. ಹೇಗಾದರೂ ಮಾಡಿ ಅದನ್ನು ಮೊದಲು ತಿಳಿದುಕೊಳ್ಳಬೇಕು ಎಂದು ಆಲೋಚನೆ ಮಾಡಿ ಶಕುಂತಲಾ ದೇವಿ ಗೌತಮ್ ಕೈಗೆ ಒಂದು ಚೈನ್ ಕೊಟ್ಟು ಭೂಮಿಕಾಗೆ ತೋಡಿಸುವಂತೆ ಹೇಳುತ್ತಾರೆ.

Kannada serial Amruthadhaare November 1st episode update

ಆ ಪ್ರಕಾರ ಭೂಮಿಕಾಗೆ ಆ ಸರವನ್ನು ಹಾಕುತ್ತಾನೆ. ಭೂಮಿಕಾಗೆ ಸರದಲ್ಲಿ ಮೈಕ್ ಅಳವಡಿಸಿರುವು ಮಾತ್ರ ಗೊತ್ತಿರುವುದಿಲ್ಲ. ಈಗ ಭೂಮಿಕಾ ಏನೇ ಮಾತಾಡಿದರೂ ಅದೆಲ್ಲವೂ ಶಕುಂತಲಾ ದೇವಿಗೆ ಕೇಳಿಸುತ್ತೆ. ಇನ್ನು ಭೂಮಿಕಾಗೆ ಕರೆ ಮಾಡಿದ ಧನ್ಯಾ, "ಗೌತಮ್ ತಾಯಿ, ತಂಗಿ ಸತ್ತಿಲ್ಲ. ಅವರು ಬದುಕಿದ್ದಾರೆ. ಅವರು ಎಲ್ಲಿದ್ದಾರೆ ಎನ್ನುವುದು ನನಗೆ ಗೊತ್ತಿದೆ. ಭೂಮಿಕಾ ಮೇಡಂ ನೀವು ನನ್ನ ಜೊತೆ ಬಂದರೆ ಅವರನ್ನು ನಾವು ಭೇಟಿ ಆಗಬಹುದು" ಎಂದಾಗ ಭೂಮಿಕಾ ಮೌನಿ ಆಗುತ್ತಾಳೆ. ಆದರೆ ಇದೆಲ್ಲವನ್ನೂ ಕೇಳಿಸಿಕೊಂಡ ಶಕುಂತಲಾ ದೇವಿ ಮಾತ್ರ ಬಹಳ ಶಾಕ್‌ಗೆ ಒಳಗಾಗುತ್ತಾಳೆ.

ಗೌತಮ್ ಮನೆಗೆ ಸೇರಲು ಸುಧಾ ಯತ್ನ

ಇತ್ತ ಸುಧಾ ತನ್ನ ತಾಯಿಯ ಬದುಕಿಗಾಗಿ ಏನು ಮಾಡಲು ಸಿದ್ದಳಾಗಿ ಇರುತ್ತಾಳೆ. ಅದಕ್ಕಾಗಿ ಇದೀಗ ಗೌತಮ್ ದಿವಾನ್ ಅವರನ್ನೇ ಟಾರ್ಗೆಟ್ ಮಾಡಿದ್ದಾರೆ. ಸುಧಾ ಮೇಲೆ ಬಹಳ ಒತ್ತಡ ಕೂಡ ಬೀಳುತ್ತಿದೆ. ಅಷ್ಟಕ್ಕೂ ಸುಧಾಗೆ ಯಾರು ಇಷ್ಟು ಒತ್ತಡ ಹಾಕುತ್ತಿದ್ದಾರೆ ಎನ್ನುವುದು ಮಾತ್ರ ತಿಳಿದಿಲ್ಲ. ಇನ್ನೊಂದು ಕಡೆ ಸುಧಾ ಬಗ್ಗೆ ಆನಂದ್, ಗೌತಮ್ ಬಳಿ ಹೊಗಳಿ ಮಾತನಾಡುತ್ತಾನೆ.

Kannada serial Amruthadhaare November 1st episode update

ಸುಧಾ ಕೈ ರುಚಿ ಹೊಗಳಿದ ಆನಂದ್

ತನ್ನ ಹೆಂಡತಿಯ ಜೀವವನ್ನು ಉಳಿಸಿದಾಕೆ ಇದೀಗ ತನ್ನ ಮನೆಯಲ್ಲಿ ಕೆಲಸ ಮಾಡುತ್ತಿದ್ದಾಳೆ. ಇದೀಗ ನಾನು ಹೊರಗಿನ ಜಂಕ್ ಫುಡ್ ಯಾವುದು ತಿನ್ನುವುದಿಲ್ಲ. ಆಕೆಯ ಕೈ ಅಡುಗೆಯ ಮುಂದೆ ನನಗೆ ಏನು ಇಲ್ಲ ಎಂದು ಗೌತಮ್ ಬಳಿ ಹೇಳಿಕೊಳ್ಳುತ್ತಾನೆ. ಗೌತಮ್‌ಗೆ ಕೂಡ ಆಕೆಯ ಕೈ ರುಚಿ ಸವಿಯಲೇ ಬೇಕು ಎನ್ನುವ ಆಸೆ ಆಗುತ್ತದೆ. ಹಾಗೆಯೇ "ಆಕೆಯ ಕೈ ರುಚಿಯನ್ನು ಆಫೀಸ್‌ಗೆ ಒಮ್ಮೆ ತೆಗೆದುಕೊಂಡು ಬಾ.. ನಾನು ಆಕೆಯ ಕೈ ರುಚಿ ಸವಿಯುತ್ತೇನೆ" ಎಂದು ಹೇಳುತ್ತಾರೆ. ಇನ್ನು ಸುಧಾ ಬಗ್ಗೆ ಇದೀಗ ಆನಂದ್‌ನ ಒಳ್ಳೆಯ ಇಂಪ್ರೇಶನ್ ಮೂಡಿದೆ. ಇತ್ತ ಧನ್ಯಾಗೆ ಮಾತ್ರ ಹೇಗಾದರೂ ಮಾಡಿ ಶಕುಂತಲಾ ದೇವಿ ಮುಖವಾಡವನ್ನು ಕಳಚಿ ಹಾಕಲೇಬೇಕು ಎಂದು ಪಣ ತೊಟ್ಟು ನಿಂತಿದ್ದಾಳೆ.

More from Filmibeat

Read more about: serial poorva filmibeat news
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X