Amruthadhaare: ಮನೆಯಿಂದ ಎದ್ದು ಹೊರಟ ಗೌತಮ್ ದಿವಾನ್ ತಾಯಿ; ಮಗನ ಕಣ್ಣಿಗೆ ಬೀಳುತ್ತಾಳಾ?
ಸುಧಾ ಮೇಲೆ ಕಿಡಿ ಕಾರುತ್ತಿದ್ದ ಅಪ್ಪಿಗೆ ಸರಿಯಾದ ಪಾಠ ಕಲಿಸಿದ್ದಾಳೆ ಭೂಮಿಕಾ. ಭೂಮಿಕಾ ಮಾತಿಗೆ ಅಪ್ಪಿ ಇದೀಗ ಕೋಪ ಮಾಡಿಕೊಂಡಿದ್ದಾಳೆ. ಅಪ್ಪಿಗೆ ಭೂಮಿಕಾ ಎಂದರೆ ಬಹಳ ಕೋಪ. ಕಾರಣ ಒಂದೇ ಪಾರ್ಥ ಹಾಗೂ ನನ್ನ ಮದುವೆ ಒಪ್ಪದೇ ಇರುವುದು. ಪಾರ್ಥ ಹಾಗೂ ಅಪ್ಪಿ ಒಬ್ಬರನ್ನೊಬ್ಬರು ಪ್ರೀತಿ ಮಾಡುವ ವಿಚಾರ ಭೂಮಿಕಾ ತಿಳಿದೆ ಇತ್ತು. ಬಳಿಕ ಪಾರ್ಥ ಬಳಿ ಈ ಬಗ್ಗೆನೂ ಮಾತನಾಡಿದ್ದಳು. ಆದರೆ ಅಪ್ಪಿಗೆ ತನ್ನ ಅಕ್ಕನಿಗೆ ಮುಂಚಿತವಾಗಿಯೇ ಪ್ರೀತಿ ವಿಚಾರ ತಿಳಿದಿತ್ತು ಎನ್ನುವುದು ಗೊತ್ತಿರಲಿಲ್ಲ. ಭೂಮಿಕಾ, ಪಾರ್ಥ ಹಾಗೂ ಅಪ್ಪಿ ಮದುವೆಗೆ ಒಪ್ಪಿಗೆ ಸೂಚಿಸದೆ ಇರುವ ಕಾರಣ ಆಕೆಯ ತಂದೆ. ಭೂಮಿಕಾ ಬಳಿಗೆ ಬಂದ ಆಕೆಯ ತಂದೆ ಪ್ರಮಾಣ ಮಾಡಿಕೊಂಡಿದ್ದರು.
ಆದ ಕಾರಣ ಅಪ್ಪಿ ಮದುವೆಗೆ ಭೂಮಿಕಾ ಒಪ್ಪಲಿಲ್ಲ. ಆದರೆ ಇದೀಗ ಅದನ್ನೇ ಇಟ್ಟುಕೊಂಡು ಅಪ್ಪಿ ಭೂಮಿಕಾ ಮೇಲೆ ಹಗೆ ಸಾಧಿಸುತ್ತಾಳೆ. ಅಪ್ಪಿ ಮನಸ್ಸಿನಲ್ಲಿ ಭೂಮಿಕಾ ಬೇಕಂತಲೇ ನನ್ನ ಹಾಗೂ ಪಾರ್ಥ ಅವರನ್ನು ದೂರ ಮಾಡಲು ಪ್ರಯತ್ನ ಪಟ್ಟಳು ಎನ್ನುವ ಆಲೋಚನೆ ಮೂಡುತ್ತದೆ. ಆ ಯೋಚನೆಯಿಂದಾಗಿ ಅಪ್ಪಿ ಆಕೆಯ ಆಲೋಚನೆಯನ್ನು ಬದಲಾಯಿಸಿಕೊಂಡಿದ್ದಾಳೆ. ಅದಕ್ಕೆ ಶಕುಂತಲಾ ದೇವಿ ಕುಮ್ಮಕ್ಕು ಬೇರೆ. ಇತ್ತ ಸುಧಾ ಬಗ್ಗೆ ಅಪ್ಪಿ ಹಗುರವಾಗಿ ಮಾತನಾಡಿದ್ದಕ್ಕೆ ಬಹಳ ಖಡಕ್ ಆಗಿಯೇ ಅಪ್ಪಿಗೆ ಭೂಮಿಕಾ ಜೀವನ ಪಾಠವನ್ನು ಹೇಳಿಕೊಟ್ಟಿದ್ದಾಳೆ. ಆದರೆ ಭೂಮಿಕಾ ಮಾತಿಗೆ ಅಪ್ಪಿ ಮಾತ್ರ ಸಿಡಿ ಸಿಡಿ ಎನ್ನುತ್ತಿರುತ್ತಾಳೆ.

ಆಕೆಗೆ ಬಹಳ ಕೋಪ. ಅಕ್ಕನಿಗೆ ನಾನೇ ಬುದ್ಧಿವಾದ ಹೇಳಲು ಹೋದೆ. ಆದರೆ ಆಕೆ ನನಗೆ ಪಾಠ ಮಾಡಿಬಿಟ್ಟಳು ಎಂದುಕೊಳ್ಳುತ್ತಾಳೆ ಅಪ್ಪಿ. ಅಪ್ಪಿ ಗಾರ್ಡನ್‌ನಲ್ಲಿ ಕುಳಿತು ಅಕ್ಕ ಹೇಳಿದ ಮಾತುಗಳನ್ನು ಮೆಲುಕು ಹಾಕುತ್ತಿರುತ್ತಾಳೆ. ಆಗ ಪಾರ್ಥ ಅಪೇಕ್ಷಾ ಸುಮ್ಮನೆ ಕುಳಿತಿರುವುದನ್ನು ನೋಡಿ ಪ್ರಶ್ನಿಸಿದಾಗ ಅಪ್ಪಿ ಅಕ್ಕನ ಮೇಲಿರುವ ಅಸಮಾಧಾನವನ್ನು ಹೊರ ಹಾಕುತ್ತಾಳೆ. ಭೂಮಿಕಾ ಅತ್ತಿಗೆ ಏನೇ ಮಾಡಿದರು ಅದಕ್ಕೆ ಏನಾದರು ಒಂದು ಕಾರಣ ಇರುತ್ತದೆ ಎನ್ನುವುದು ಆತನ ವಾದ. ಆದರೆ, ಅದು ಅಪ್ಪಿಗೆ ಸ್ವಲ್ಪವೂ ಅರ್ಥ ಆಗುತ್ತಿಲ್ಲ. ಅಪ್ಪಿ ಪಾರ್ಥ ಮೇಲೆ ರೇಗಾಡುತ್ತಾಳೆ. ಯಾಕೆಂದರೆ, ಪಾರ್ಥ ಯಾವತ್ತೂ ತನ್ನ ಅತ್ತಿಗೆಯನ್ನು ಬಿಟ್ಟುಕೊಟ್ಟಿಲ್ಲ. ತುಂಬಾ ಗೌರವದಿಂದ ಮಾತನಾಡುತ್ತಾನೆ. ಇದನ್ನು ಕೇಳಿಸಿಕೊಂಡ ಅಪ್ಪಿಗೆ ಬಹಳ ಕಿರಿ ಕಿರಿ ಆಗುತ್ತದೆ.
ಭೂಮಿಕಾ ಮೇಲೆ ಹಗೆ ಸಾಧಿಸುತ್ತಿರುವ ಅಪ್ಪಿ
ಮೊದಲೇ ಅಕ್ಕನ ಮೇಲೆ ಕೋಪ ಇರುತ್ತೆ. ಆದರೆ, ಇದೀಗ ಮತ್ತೆ ಭೂಮಿಕಾ ಮೇಲೆ ಕೋಪ ಇನ್ನಷ್ಟು ಹೆಚ್ಚಾಗುತ್ತೆ. ಶಕುಂತಲಾ ದೇವಿ ತಮ್ಮ ಸುಮ್ಮನೆ ಮನೆಯಲ್ಲಿ ಕುಳಿತು ಆಲೋಚನೆ ಮಾಡುತ್ತಿರುತ್ತಾಳೆ. ಆತನಿಗೆ ಭಾಗ್ಯಳದ್ದೆ ಯೋಚನೆ. ಭಾಗ್ಯಾ ಯಾರೆಂದರೆ ಗೌತಮ್ ದಿವಾನ್ ತಾಯಿ. ಆತನಿಗೆ ಗೌತಮ್ ತಾಯಿಯನ್ನು ಹುಡುಕುವುದೇ ಕೆಲಸ. ಆ ವೇಳೆ ಗೌತಮ್ ಸುಮ್ಮನೆ ಕುಳಿತಿರುವ ಮಾವನನ್ನು ಕಂಡು ಆಫೀಸ್‌ಗೆ ಬನ್ನಿ ಎಂದು ಕರೆಯುತ್ತಾರೆ. ಆ ಕೂಡಲೇ ಗೌತಮ್ ಮಾವ ಹೊರಟು ಬರುತ್ತಾನೆ. ಗೌತಮ್ ದಿವಾನ್ ತಾಯಿ ತನ್ನ ಮಗನಿಗೋಸ್ಕರ ಕನವರಿಸದೆ ಇರುವ ದಿನವೇ ಇಲ್ಲ.

ಮಗನನ್ನು ಹುಡುಕುತ್ತಾ ಹೊರಟ ಭಾಗ್ಯಾ
ಭಾಗ್ಯಾ ಹಾಸಿಗೆಯಿಂದ ಯಾವತ್ತೂ ಎದ್ದೆ ಇರಲಿಲ್ಲ. ಆದರೆ ಈ ದಿನ ಮಾತ್ರ ತನ್ನ ಮಗನ ನೆನಪಾಗಿ ಹಾಸಿಗೆಯಿಂದ ಎದ್ದು ಮನೆಯಿಂದ ಹೊರ ನಡೆದು ಬಿಡುತ್ತಾರೆ. ಮನೆಯಲ್ಲಿ ಅಜ್ಜಿಯನ್ನು ಕಾಣದ ಮೊಮ್ಮಗಳು ಮಾತ್ರ ಗಾಬರಿ ಆಗುತ್ತಾಳೆ. ಭಾಗ್ಯಾ ತನ್ನ ಮಗನನ್ನು ನೆನೆದು ರಸ್ತೆ ಬದಿ ನಿಂತಿರುತ್ತಾಳೆ. ಆಗ ಗೌತಮ್ ದಿವಾನ್ ಹಾಗೂ ಆತನ ಮಾವ ಕಾರಿನಲ್ಲಿ ಆಫೀಸ್ ಕಡೆಗೆ ಹೋಗುತ್ತಾರೆ. ಆಗ ಗೌತಮ್ ಮಾವ ಭಾಗ್ಯಳನ್ನು ನೋಡುತ್ತಾನೆ. ಕೂಡಲೇ ಆತನಿಗೆ ಶಾಕ್ ಆಗುತ್ತದೆ. ಹತ್ತಿರದಲ್ಲಿ ಗೌತಮ್ ಇರುತ್ತಾನೆ. ಆತನ ಕಣ್ಣಿಗೆ ಭಾಗ್ಯಾ ಬಿದ್ದು ಬಿಟ್ಟರೆ ಎನ್ನುವ ಭಯ ಆತನಿಗೆ ಕಾಡುತ್ತದೆ.


Click it and Unblock the Notifications











