Amruthadhaare:ಬದಲಾಗದ ಜೈ ದೇವ್: ತಮ್ಮ ಮಾಡುತ್ತಿರುವ ನಾಟಕ ನಂಬುತ್ತಾನಾ ಗೌತಮ್?
ಜೈ ದೇವ್ ಆಡುತ್ತಿರುವುದೆಲ್ಲಾ ನಾಟಕ. ನಾಟಕ ಮಾಡುತ್ತಾ ಎಲ್ಲರನ್ನು ನಂಬುವ ಹಾಗೆ ಮಾತನಾಡುತ್ತಿದ್ದಾನೆ ಎನ್ನುವುದು ಗೌತಮ್‌ಗೆ ತಿಳಿಯುತ್ತಾ ಎನ್ನುವುದೇ ಎಲ್ಲರ ಪ್ರಶ್ನೆ. ಗೌತಮ್‌ಗೆ ತನ್ನ ತಮ್ಮಂದಿರು ಎಂದರೆ ಪಂಚಪ್ರಾಣ. ಅವರಿಗೋಸ್ಕರ ಏನು ಬೇಕಾದರೂ ಕೂಡ ಮಾಡಲು ಗೌತಮ್ ರೆಡಿ.
ಆದರೆ, ಜೈದೇವ್ ಮಾಡಿರುವ ಕೆಟ್ಟ ಕೆಲಸಕ್ಕೆ ಆತ ಬೆಲೆ ತೆರಲೇಬೇಕು ಎನ್ನುವುದು ಗೌತಮ್ ವಾದ. ಗೌತಮ್ ಯಾವತ್ತೂ ಯಾರಿಗೂ ಕೂಡ ಮೋಸ ಮಾಡಿದವನಲ್ಲ. ಯಾರಿಗೂ ಕೂಡ ನೋವಾಗುವ ಹಾಗೆ ನಡೆದುಕೊಂಡವನಲ್ಲ. ತನ್ನ ತಮ್ಮನಿಗೆ ತಂಗಿಗೆ ಏನಾದರೂ ನೋವಾದರೆ ಅದು ತನ್ನ ಕಷ್ಟ ಎಂದುಕೊಂಡು ಆತ ಅದೆಲ್ಲವನ್ನು ಸರಿಪಡಿಸಲು ನೋಡುತ್ತಾನೆ .

ಅಂತಹದರಲ್ಲಿ ಜೈದೇವ್ ಇಂತಹ ನೀಚ ಕೃತ್ಯಕ್ಕೆ ಕೈ ಹಾಕಲು ಮುಂದಾಗಿದ್ದಾನೆ. ಆತನಿಗೆ ತನ್ನ ತಂಗಿ ತಮ್ಮ ಯಾರೂ ಬೇಡ. ಆತನ ಕೆಲಸಕ್ಕೆ ಯಾರು ಅಡ್ಡಿ ಬರುತ್ತಾರೋ ಅವರನ್ನೆಲ್ಲ ಸಾಯಿಸಿ ಬಿಡಲು ಜಯಂ ನಿರ್ಧಾರ ಮಾಡುತ್ತಾರೆ. ಇನ್ನು ಹೆಂಡತಿ ಮಗು ಸತ್ತರು ಆತನಿಗೆ ಏನು ನೋವಿಲ್ಲ. ಹೆಂಡತಿಯನ್ನು ಸಾಯಿಸಲು ಮುಂದಾದ ಆತ ಮುಂದೆ ಬಹಳ ದೊಡ್ಡ ಟಪೋರಿ ಆಗುತ್ತಾನೆ ಎನ್ನುವುದು ಕೂಡ ಗೌತಮಗೆ ತಿಳಿದಿದೆ. ಆದ ಕಾರಣ ಶಕುಂತಲಾ ದೇವಿ ಅದನ್ನು ಅರಿತುಕೊಂಡು ಜೈದೇವ್ ನನ್ನ ಮನೆಯಿಂದ ಹೊರಗಡೆ ಹಾಕಲು ಯೋಚನೆ ಮಾಡುತ್ತಾಳೆ.
ಇನ್ನೂ ತನಗೆ ಹುಳಿಗಾಲವಿಲ್ಲ ಎಂದು ಅಂದುಕೊಂಡ ಜೈದೇವ್ ಹೊಟ್ಟೆಗೆ ತಿವಿಯುವ ಹಾಗೆ ನಾಟಕವನ್ನು ಮಾಡುತ್ತಾನೆ. ಆ ನಾಟಕ ಸತ್ಯ ಎಂದು ತಿಳಿದುಕೊಂಡ ಮನೆ ಮಂದಿ ಬಹಳ ಭಯದಿಂದ ಇರುತ್ತಾರೆ. ಜೈ ದೇವನಿಗೆ ಅಪಾಯವಾಗಿದೆ ಎಂದು ಕೊಂಡ ಮನೆ ಮಂದಿ ಆಸ್ಪತ್ರೆಯಲ್ಲಿ ಬಹಳ ಭಯದಿಂದಲೇ ದಿನ ಕಳೆಯುತ್ತಿರುತ್ತಾರೆ. ಹಾಗೆ ಜೈದೇವ್‌ಗೆ ಏನು ಆಗಿರುವುದಿಲ್ಲ. ಆತ ನಾಟಕ ಮಾಡುತ್ತಿರುವುದು ಎನ್ನುವುದು ಮನೆ ಮಂದಿಗೂ ಕೂಡ ತಿಳಿದಿಲ್ಲ.
ಜೈ ದೇವ್ ನಾಟಕಕ್ಕೆ ಬೆರಗಾದ ಮಾವ
ಇನ್ನು ಮಾವ ಜೈ ದೇವ್ ಬಳಿ ಈ ರೀತಿ ಎಲ್ಲಾ ಮಾಡಿಬಿಟ್ಟೆಯಲ್ಲ. ಯಾಕೆ ಹೀಗೆ ಮಾಡಿದೆ ಎಂದು ಕೇಳುತ್ತಾರೆ. ಇದೆಲ್ಲವನ್ನೂ ನೋಡಿದ ಜೈ ದೇವ್ "ನೀವು ನನಗೆ ಏನಾದರೂ ಆಗಿದೆ ಎಂದು ಅಂದುಕೊಂಡಿದ್ದೀರಾ? ನನಗೆ ಏನೂ ಆಗಿಲ್ಲ. ನಾನು ಚೆನ್ನಾಗಿದ್ದೇನೆ" ಎಂದು ಮಾವನ ಬಳಿ ಜೈ ದೇವ್ ಮಾಡುತ್ತಾನೆ. ಹಾಗೆಯೇ ಅಮ್ಮನನ್ನು ಕನ್ವಿನ್ಸ್ ಮಾಡಲು ಹೇಳುತ್ತಾನೆ. ಇದನ್ನು ಕೇಳಿದ ಆತನ ಮಾವ ಆಯ್ತು ಎಂದು ಹೇಳಿ ಶಕುಂತಲಾ ದೇವಿ ಒಪ್ಪಿಸುತ್ತಾನೆ.

ಶಕುಂತಲಾ ದೇವಿಗೆ ಅಸಮಾಧಾನ
ಆದರೆ ಶಕುಂತಲಾ ದೇವಿಗೆ ತನ್ನ ಮಗ ಮಾಡಿದ ಕೆಲಸ ಯಾವುದೂ ಕೂಡ ಇಷ್ಟವಿರುವುದಿಲ್ಲ. ಆತನಿಗೆ ಆತ ಮಾಡಿದ್ದೆ ಸರಿ. ತನ್ನ ತಮ್ಮನನ್ನು ಕೊಲ್ಲುವ ಯೋಜನೆಯನ್ನು ಮಾಡಿದ್ದು ಎಷ್ಟರ ಮಟ್ಟಿಗೆ ಸರಿ ಎನ್ನುವುದು ಶಕುಂತಲಾ ದೇವಿ ವಾದ. ಇನ್ನು ಜೈ ದೇವ್ ಮೇಲೆ ಯಾವುದೇ ನಂಬಿಕೆ ಗೌತಮ್‌ಗೆ ಇಲ್ಲ. ಆತನನ್ನು ಎಷ್ಟರ ಮಟ್ಟಿಗೆ ನಂಬಬೇಕು. ಅಷ್ಟೇ ನಂಬಬೇಕು ಎಂದು ಭೂಮಿಕಾಗೆ ವಾರ್ನಿಂಗ್ ಮಾಡುತ್ತಾನೆ.
ಜೈ ದೇವ್ ನಟನೆಗೆ ಸುಮ್ಮನಾದ ಮನೆ ಮಂದಿ
ಇತ್ತ ಮನೆಗೆ ಬಂದ ಜೈ ದೇವ್ ಮತ್ತಷ್ಟು ನಾಟಕ ಮಾಡುತ್ತಿದ್ದಾನೆ. ಆತನ ಹೆಂಡತಿ ಎಲ್ಲವನ್ನು ನಂಬಿದರೆ, ಶಕುಂತಲಾ ದೇವಿಗೆ ಮಾತ್ರ ತನ್ನ ಮಗ ಏನು ಎತ್ತ ಎನ್ನುವುದು ಚೆನ್ನಾಗಿ ತಿಳಿದಿದೆ. ಆದ ಕಾರಣ ಆಕೆ ಏನೂ ಮಾತನಾಡುವುದಿಲ್ಲ.


Click it and Unblock the Notifications











