Amruthadhaare:ಜೈ ದೇವ್‌ನನ್ನು ಕ್ಷಮಿಸಲು ಗೌತಮ್ ತಯಾರಿಲ್ಲ; ಮಲ್ಲಿಗೆ ಪತಿಯ ನಾಟಕ ಗೊತ್ತಾಗ್ತಿಲ್ಲ

By ಪೂರ್ವ

ಮನೆಯವರನ್ನು ನಂಬಿಸುತ್ತಾ ನಾನು ಯಾರಿಗಿಂತಲೂ ಕಮ್ಮಿ ಇಲ್ಲ ಅಂತ ಕಾಲ ಕಳೆಯುತ್ತಿದ್ದ ಜೈ ದೇವ್ ಇದೀಗ ಪುನಃ ದಿವಾನ್ ಕುಟುಂಬಕ್ಕೆ ಎಂಟ್ರಿ ಕೊಟ್ಟಿದ್ದಾನೆ. ಆತನಿಗೆ ತಾನು ಏನೇ ಮಾಡಿದರೂ ಮನೆಯವರು ಅದೆಲ್ಲವನ್ನೂ ನಂಬುತ್ತಾರೆ ಎನ್ನುವ ಭ್ರಮೆಯಲ್ಲಿ ಇದ್ದಾನೆ. ಆದರೆ, ಅದ್ಯಾವುದೂ ಕೂಡ ಗೌತಮ್‌ಗೆ ತಿಳಿಯುತ್ತಿಲ್ಲ ಅಂತ ಅಂದುಕೊಂಡಿದ್ದಾನೆ.

ಆದರೆ ಗೌತಮ್ ಮಾತ್ರ ಜೈ ದೇವ್ ಆತನ ಮೇಲೆ ಒಂದು ಹದ್ದಿನ ಕಣ್ಣು ಇಟ್ಟಿದ್ದಾನೆ. ಜೈ ದೇವ್ ಏನೇ ಮಾಡಿದರೂ ಎಲ್ಲಿಗೆ ಹೋದರೂ ಆ ವಿಚಾರ ಗೌತಮ್‌ಗೆ ತಿಳಿಯುತ್ತದೆ. ಗೌತಮ್ ಏನೇ ಮಾಡಿದರೂ ಅದು ಮನೆಯವರ ಒಳ್ಳೆಯದ್ದಕ್ಕಾಗಿ. ತನ್ನ ಎರಡನೇ ತಾಯಿ ದಿಕ್ಕು ದೆಸೆ ಇಲ್ಲದೆ ತಬ್ಬಲಿ ಆಗಿ ಇರಬೇಕಾದರೆ, ಗೌತಮ್ ಆತನಿಗೆ ಆಶ್ರಯ ನೀಡುತ್ತಾನೆ. ಅದು ಕೇವಲ ತನ್ನ ಅಪ್ಪ ಹೇಳಿದ ಮಾತಿಗೆ. ಇನ್ನು ಶಕುಂತಲಾ ದೇವಿ ಗೌತಮ್‌ನನ್ನು ಅಂದಿನಿಂದಲೂ ತನ್ನ ಕಪಿ ಮುಷ್ಠಿಯಲ್ಲಿ ಇಟ್ಟುಕೊಂಡಿದ್ದಾಳೆ.

Kannada serial Amruthadhaare October 12th episode update

ಗೌತಮ್‌ಗೆ ಮದುವೆ ಮಾಡಿದರೆ ಎಲ್ಲಿ ಆಸ್ತಿ ಎಲ್ಲಾ ನಮ್ಮ ಕೈ ತಪ್ಪಿ ಹೋಗುತ್ತದೆ ಎನ್ನುವ ಭಯ ಆಕೆಗೆ ಬಂದಿದ್ದು ಮಾತ್ರ ಸುಳ್ಳಲ್ಲ. ಆಕೆಗೆ ನನ್ನ ಮಕ್ಕಳ ಮೇಲೆ ಪ್ರೀತಿ ಜಾಸ್ತಿ ಇದೆ. ಕ್ರಮೇಣವಾಗಿ ದಿವಾನ್ ಮನೆತನದ ಒಡತಿ ಆಗಬೇಕು ಎನ್ನುವ ಹಂಬಲ ಆಕೆದ್ದಾಗಿರುತ್ತದೆ. ಆದರೆ, ಅದ್ಯಾವುದನ್ನೂ ಕೂಡ ಗೌತಮ್ ಮನಸ್ಸಿಗೆ ಬಂದಿರುವುದಿಲ್ಲ. ತಮ್ಮಂದಿರು ಸಿಕ್ಕಾಪಟ್ಟೆ ಖರ್ಚು ಮಾಡುತ್ತಿದ್ದರು ಯಾಕೆ ಏನು ಎನ್ನುವ ಒಂದು ಮಾತನ್ನು ಕೂಡ ಗೌತಮ್ ಕೇಳುತ್ತಿರಲಿಲ್ಲ.

ಜೈದೇವ್ ಬುದ್ದಿ ಅರಿತ ಗೌತಮ್

ಇನ್ನು ಜೈ ದೇವ್ ಬುದ್ದಿ ಈ ಮೊದಲೇ ಗೌತಮ್‌ಗೆ ತಿಳಿದಿರಲಿಲ್ಲ. ಸಂಘರ್ಷವನ್ನು ನೋಡಿ ಜೈದೇವ್ ಮಾಡುತ್ತಿರುವುದು ತಪ್ಪು ಎಂದು ಆತನಿಗೆ ಗೊತ್ತಾಗುತ್ತದೆ. ಅದಾದ ಬಳಿಕ ಮಲ್ಲಿ ಜೊತೆ ಮದುವೆ ಕೂಡ ಮಾಡಲಾಗುತ್ತೆ. ಜೈದೇವ್‌ಗೆ ಇದರಿಂದ ಬಹಳ ಕೋಪ ಬರುತ್ತೆ. ಹಾಗೆಯೇ ತನ್ನ ಪ್ರೇಯಸಿ ದಿಯಾ ಜೊತೆ ಹೇಗಾದರೂ ಮಾಡಿ ಮದುವೆಯಾಗಬೇಕು ಎಂದು ಅಂದುಕೊಳ್ಳುತ್ತಾನೆ. ಅದಕ್ಕೋಸ್ಕರ ಮಲ್ಲಿಯನ್ನು ಸಾಯಿಸಲು ಕೂಡ ಜೈದೇವ್ ಹಿಂದೆ ಮುಂದೆ ನೋಡಲಿಲ್ಲ.

Kannada serial Amruthadhaare October 12th episode update

ಜೈ ದೇವ್ ಮೋಸದಾಟಕ್ಕೆ ಕೊನೆ ಎಂದು?

ಜೈದೇವ್‌ಗೆ ತಾನೊಬ್ಬನೇ ಚೆನ್ನಾಗಿದ್ದರೆ ಸಾಕು. ಹಾಗೆಯೇ ತನಗೆ ಆಸ್ತಿ ಸಿಕ್ಕಿದರೆ ಸಾಕು ಎಂದು ಅಂದು ಕೊಳ್ಳುತ್ತಿರುತ್ತಾನೆ. ಆತ ಇರುವುದು ತನ್ನ ಅಣ್ಣನ ಹಂಗಲ್ಲಿ ಎನ್ನುವುದನ್ನು ಮರೆತು ದಿಯಾಗೆ ಕಾರು, ಹಾಗೆ ಆಕೆಯನ್ನು ಸುತ್ತಾಡಿಸಲು ಹೀಗೆಲ್ಲಾ ಒಂದರ ಮೇಲೊಂದು ಖರ್ಚು ಮಾಡುತ್ತಾನೆ. ಆದರೆ ಇದೆಲ್ಲವೂ ಗೌತಮ್‌ಗೆ ತಿಳಿದಿದ್ದರೂ ಕೂಡ ಗೌತಮ್ ಏನು ಮಾಡುವ ಸ್ಥಿತಿಯಲ್ಲಿ ಇರಲಿಲ್ಲ. ಇನ್ನು ಭೂಮಿಕಾ ಬಳಿ ಗೌತಮ್ "ಜೈ ದೇವ್‌ನನ್ನು ಮನೆ ಮಂದಿ ಎಲ್ಲರೂ ನಂಬಿದರು ಕೂಡ ನಾನು ಆತನನ್ನು ಒಂದೇ ಒಂದು ಕ್ಷಣವೂ ನಂಬುವುದಿಲ್ಲ. ಆತ ಮಾಡಿದ ಮೋಸ ನನ್ನ ಕಣ್ಣ ಮುಂದೆಯೇ ಇದೆ. ಆತ ಏನು ಮಾಡಬಾರದು ಎಂದು ಹೇಳಿದರೂ ಅದನ್ನೇ ಮಾಡುತ್ತಾನೆ. ಅಂತಹ ಮೋಸಗಾರರನ್ನು ಯಾವತ್ತೂ ನಾನು ಕ್ಷಮಿಸುವುದಿಲ್ಲ" ಎಂದು ಹೇಳುತ್ತಾರೆ.

More from Filmibeat

English summary
Kannada serial Amruthadhaare October 12th episode update:
Read more about: serial poorva filmibeat news
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X