ಇಕ್ಕಟ್ಟಿನಲ್ಲಿ ಸಿಲುಕಿಕೊಂಡ ಗೌತಮ್ ದಿವಾನ್; ಸಿಎಫ್‌ಒ ಪಟ್ಟ ಜೈದೇವ್‌ಗಾ? ಪಾರ್ಥಾನಿಗಾ?

By ಪೂರ್ವ

ಭೂಮಿಕಾ, ಗೌತಮ್‌ಗೆ ಟೆಂಡರ್ ಸಿಗುವಲ್ಲಿ ಬಹಳ ಕಷ್ಟ ಪಟ್ಟಿರುತ್ತಾಳೆ. ಹೇಗಾದರೂ ಮಾಡಿ ಟೆಂಡರ್ ನಮಗೆ ಸಿಗಬೇಕು. ಗೌತಮ್ ಅವರ ಕನಸು ನನಸಾಗಬೇಕು ಎಂದುಕೊಂಡು ಇರುತ್ತಾಳೆ. ಆದರೆ, ಇದ್ಯಾವುದನ್ನೂ ಅರಿತುಕೊಳ್ಳದ ಅಪ್ಪಿ ತನ್ನ ಅಕ್ಕನಿಗೆ ಕಾಟ ಕೊಡುವುದಕ್ಕೆ ಬರುತ್ತಾಳೆ. ಆದರೆ ಭೂಮಿಕಾ ಮಾತ್ರ ತನ್ನ ಮೈದುನನ ಬಗ್ಗೆ ಹೊಗಳಿ ಮಾತನಾಡುತ್ತಾಳೆ. ಇದನ್ನು ನೋಡಿದ ಅಪ್ಪಿಗೇ ಏನು ಮಾತನಾಡಬೇಕು ಎಂದು ತಿಳಿಯದೇ ಅಲ್ಲಿಂದ ಎಸ್ಕೇಪ್ ಆಗುತ್ತಾಳೆ.

ನನಗೆ ಉರಿಸಲು ಬಂದಳು ಆದರೆ ಇದೀಗ ಆಕೆಯೇ ಶೇಪ್ ಔಟ್ ಆಗಿ ಹೋದಳು ಎಂದು ಹೇಳಿದರು. ಇದೆಲ್ಲವನ್ನೂ ಮನದಲ್ಲಿ ನೆನೆದುಕೊಂಡು ಭೂಮಿಕಾ ಜೋರಾಗಿಯೇ ನಗುತ್ತಾಳೆ. ಇತ್ತ ಭೂಮಿಕಾಗಾಗಿ ಗೌತಮ್ ಆಫೀಸಿನಿಂದ ಬರಬೇಕಾದರೆ ಮಲ್ಲಿಗೆ ಹೂವನ್ನು ತೆಗೆದುಕೊಂಡು ಬರುತ್ತಾನೆ. ಮಲ್ಲಿಗೆ ಹೂವು ನೋಡಿದ ಕೂಡಲೇ ಗೌತಮ್ ಕಾಲೆಳೆಯುತ್ತಾಳೆ ಭೂಮಿಕಾ. ನಾನು ನಿಮಗೆ ಟೆಂಡರ್ ಕೊಟ್ಟಿದ್ದಕ್ಕಾಗಿ ನೀವು ನನಗೆ ಮಲ್ಲಿಗೆ ಹೂವನ್ನು ಲಂಚವಾಗಿ ನೀಡುತ್ತಿದ್ದೀರಿ ಎಂದು ಹೇಳುತ್ತಾಳೆ. ಇದನ್ನು ಕೇಳಿದ ಗೌತಮ್ ಗೆ ಎನು ಮಾಡಬೇಕು ಎಂದು ತಿಳಿಯದಾಗುತ್ತದೆ.

Kannada serial Amruthadhaare October 16th episode update

ಆತ ಎನು ಮಾಡಬೇಕು ಎಂದು ತಿಳಿಯದೇ ಸುಮ್ಮನೆ ಇರುತ್ತಾನೆ. ಇನ್ನು ಈ ಬಳಿಕ ಭೂಮಿ ಬಳಿ ಹೇಳುತ್ತಾನೆ. ನಾನು ಏನಾದರು ದೊಡ್ಡ ಮೊತ್ತದ ವಸ್ತುವನ್ನು ನಿಮಗೆ ತಂದಿದ್ದರೆ ನೀವು ರಾತ್ರಿ ಇಡಿ ಅದರ ಬಗ್ಗೆ ಯೋಚನೆ ಮಾಡುತ್ತಿದ್ದೀರಿ ಅದಕ್ಕಾಗಿ ನಾನು ಮಲ್ಲಿಗೆ ಹೂವು ತೆಗೆದುಕೊಂಡು ಬಂದೆ . ಇದರಿಂದ ನಿಮಗೆ ಇನ್ನೂ ಖುಷಿ ಆಗುತ್ತದೆ ಎನ್ನುವುದು ನನಗೆ ತಿಳಿದಿದೆ ಆದ್ದರಿಂದ ನಾನು ಮಲ್ಲಿಗೆ ಹೂವು ತೆಗೆದುಕೊಂಡು ಬಂದೆ ಇದರಿಂದ ನಿಮಗೆ ಬಹಳ ಖುಷಿ ಆಗಬಹುದು ಎಂದುಕೊಂಡು ಇದ್ದೇನೆ ಎಂದು ಹೇಳಿದಾಗ ಭೂಮಿಕಾ ನಾಚಿ ನೀರಾಗುತ್ತಾಳೆ. ಇತ್ತೀಚಿನ ದಿನಗಳಲ್ಲಿ ಪಾರ್ಥ ಬಹಳ ಉತ್ತಮವಾಗಿ ಆಫೀಸ್ ನಲ್ಲಿ ಕೆಲಸ ಮಾಡುತ್ತಿದ್ದಾನೆ.

ಅಕ್ಕನನ್ನು ಅರಿಯದ ಅಪ್ಪಿ ಬಗ್ಗೆ ಬೇಸರ ವ್ಯಕ್ತಪಡಿಸಿದ ಫ್ಯಾನ್ಸ್

ಅದೇ ರೀತಿ ಅಪ್ಪಿ ಗೆ ತನ್ನ ಗಂಡನ ಕೆಲಸದ ಬಗ್ಗೆ ಹೆಮ್ಮೆ ಇದೆ ಆದರೆ ಆಕೆಗೆ ತನ್ನ ಅಕ್ಕನನ್ನೇ ಅರ್ಥ ಮಾಡಿಕೊಳ್ಳಲು ಆಗುತ್ತಿಲ್ಲ. ಇದರಿಂದ ಅಭಿಮಾನಿಗಳು ಬೇಸರಗೊಂಡಿದ್ದಾರೆ. ಇನ್ನು ಅಪ್ಪಿ ಬಗ್ಗೆ ಬಹಳ ಬೇಸರ ಆಗುತ್ತದೆ. ಸ್ವಂತ ಅಕ್ಕನನ್ನು ಚಿಕ್ಕವಯಸ್ಸಿನಿಂದಲೂ ಆಕೆಯ ಗುಣವನ್ನು ಬಲ್ಲವಳಿಗೆ ದೊಡ್ಡ ಮನೆತನಕ್ಕೆ ಸೊಸೆ ಬಂದ ಕೂಡಲೇ ಆಕೆಗೆ ಅಕ್ಕ ಬೇಡವಾಗಿ ನೋಡಲು. ಪಾರ್ಥ ಹಾಗೂ ಅಪ್ಪಿ ಮದುವೆಗೆ ಭೂಮಿಕಾ ವಿರೋಧ ವ್ಯಕ್ತಪಡಿಸಿದ್ದಳು, ಎನ್ನುವ ಒಂದೇ ಒಂದು ಕಾರಣಕ್ಕೆ ಆಕೆಯನ್ನು ದ್ವೇಷ ಮಾಡುತ್ತಿದ್ದಾಳೆ ಅಪ್ಪಿ. ಆದರೆ ಭೂಮಿಕಾ ಮಾತ್ರ ಅಪ್ಪಿ ಏನೇ ಹೇಳಿದರೂ ಏನೇ ಮಾಡಿದರೂ ಅದೆಲ್ಲವನ್ನೂ ತಡೆದುಕೊಂಡು ತನ್ನ ಮೈದುನನ ಬಗ್ಗೆ ಕಾಳಜಿಯನ್ನು ಮಾಡುತ್ತಿದ್ದಾಳೆ.

Kannada serial Amruthadhaare October 16th episode update

ಮೈದುನ ಬಗ್ಗೆ ಒಳ್ಳೆಯ ಮಾತನಾಡಿದ ಭೂಮಿಕಾ

ತನ್ನ ಮೈದುನ ಒಳ್ಳೆಯ ಸ್ಥಾನಕ್ಕೆ ಹೋಗಬೇಕು ಎನ್ನುವ ಕಾರಣಕ್ಕೆ ಸಿಎಪ್ ಒ ಪಟ್ಟಕ್ಕೆ ಪಾರ್ಥ ನನ್ನು ರೆಕಾಮೆನ್ಡ್ ಮಾಡುತ್ತಾಳೆ ಭೂಮಿಕಾ. ಆ ಕೂಡಲೇ ಶಕುಂತಲಾ ದೇವಿ ಕೂಡ ಅದೇ ಮಾತನ್ನು ಗೌತಮ್ ಬಳಿ ಹೇಳುತ್ತಾಳೆ . ಆದರೆ ಪಾರ್ಥ ಬಗ್ಗೆ ಎನು ಮಾತು ಹೇಳುವುದಿಲ್ಲ ಆಕೆ ಮಾತನಾಡುವುದೇ ಜೈ ದೇವ್ ಬಗ್ಗೆ . ಯಾಕೆ ನೀನು ಜೈ ದೇವ್ ನನ್ನು ಸಿಎಫ್ ಒ ಪಟ್ಟಕ್ಕೆ ಜೈ ದೇವ್ ನನ್ನು ಸೆಲೆಕ್ಟ್ ಮಾಡಬಾರದು. ಆತನಿಗೆ ಎಲ್ಲಾ ಕೆಲಸ ಮಾಡಿ ಆತನಿಗೆ ತಿಳಿದಿದೆ ಹಾಗೆಯೇ ಆತ ಏನೇ ಕೆಲಸ ಮಾಡಿದರೂ ಪರ್ಫೆಕ್ಟ್ ಆಗಿ ಕೆಲಸ ಮಾಡುತ್ತಾನೆ ಎನ್ನುವ ಭರವಸೆ ನನಗೆ ಎಂದೆಲ್ಲ ಗೌತಮ್ ಬಳಿ ಹೇಳುತ್ತಾನೆ.

ಗೊಂದಲದಲ್ಲಿ ಸಿಲುಕಿದ ಗೌತಮ್

ಇದೆಲ್ಲವನ್ನೂ ಕೇಳಿದ ಗೌತಮ್ ಗೆ ಎನು ಮಾಡಬೇಕು ಎಂದು ತಿಳಿಯದ ಹಾಗೆ ಆಗುತ್ತದೆ. ಇತ್ತ ತಾಯಿ ಮಾತು ಕೇಳಬೇಕೋ ಅಥವಾ ಹೆಂಡತಿಯ ಮಾತು ಕೇಳಬೇಕು ಎನ್ನುವ ಗೊಂದಲದಲ್ಲಿ ಇರುತ್ತಾನೆ. ಇನ್ನು ಪಾರ್ಥ ಉತ್ತಮವಾಗಿ ಆಫೀಸ್ ನಲ್ಲಿ ಕೆಲಸ ಮಾಡುತ್ತಿರುವುದರಿಂದ ಪಾರ್ಥ ಗೆ ಅದೃಷ್ಟ ಕಾದಿದೆ ಎಂದು ಅಭಿಮಾನಿಗಳು ಮಾತನಾಡಿಕೊಳ್ಳುತ್ತಿದ್ದಾರೆ.

More from Filmibeat

English summary
Kannada serial Amruthadhaare October 16th episode update
Read more about: serial poorva filmibeat news
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X