ಮಾನ್ಯಾ ನಿಗೂಢ ಸಾವಿನ ಬಗ್ಗೆ ಗೌತಮ್ ತನಿಖೆ ಶುರು; ಅದು ಇರಲಿ ಮಕ್ಕಳು-ಮರಿ ಮಾಡಿಕೊಳ್ಳಿ ಎಂದ ನೆಟ್ಟಿಗರು!

By ಪೂರ್ವ

ದಿವಾನ್ ಸಂಸ್ಥೆಯ ಸಿಎಫ್‌ಒ ಆಗಿ ಪಾರ್ಥ ದಿವಾನ್ ಆಯ್ಕೆ ಆಗಿದ್ದಾರೆ. ಗೌತಮ್‌ಗೆ ಜೈದೇವ್ ಮೇಲೆ ಅಷ್ಟಾಗಿ ನಂಬಿಕೆ ಇಲ್ಲ. ಆದರೆ ಜೈದೇವ್ ಮಾತ್ರ ತನಗೆ ಸಿಎಫ್ಒ ಪಟ್ಟ ಸಿಗುತ್ತೆ ಎಂದು ಅಂದುಕೊಂಡಿರುತ್ತಾನೆ. ಶಕುಂತಲಾ ದೇವಿ ಕೂಡ ತನ್ನ ಮಗನಿಗೆ ಅಪಟ್ಟ ಸಿಗಬೇಕು ಎಂದು ಅಂದುಕೊಳ್ಳುತ್ತಾಳೆ. ಆದರೆ, ಶಕುಂತಲಾ ದೇವಿ ಬಯಸಿದ್ದೆ ಒಂದು. ಅಲ್ಲಿ ನಡೆದದ್ದೇ ಒಂದು.

ಶಕುಂತಲಾ ದೇವಿಗೆ ತನ್ನ ಮಗ ಉತ್ತಮ ಸ್ಥಾನಕ್ಕೆ ಹೋಗಬೇಕು. ಆತ ಎಲ್ಲರಂತೆ ಆಗಬಾರದು ಎನ್ನುವ ಆಸೆ ಇತ್ತು. ಆದರೆ, ಗೌತಮ್ ಮಾತ್ರ ತನ್ನ ಅಮ್ಮನ ಆಸೆಯನ್ನು ನೆರವೇರಿಸುವಲ್ಲಿ ವಿಫಲನಾಗುತ್ತಾನೆ. ಯಾಕೆಂದರೆ, ಆತನಿಗೆ ದಿವಾನ್ ಕಂಪನಿಯನ್ನು ಬಹಳ ಉತ್ತಮವಾಗಿ ನೋಡಿಕೊಳ್ಳುವವರು ಬೇಕಾಗಿತ್ತು.

Kannada serial Amruthadhaare October 18th episode update

ಹಾಗೆಯೇ ಕಂಪನಿ ಒಂದು ಉತ್ತಮ ಕ್ಯಾಂಡಿಡೇಟ್ ಬೇಕಾಗಿತ್ತು. ಈ ವಿಚಾರವನ್ನು ಮೊದಲೇ ಗೌತಮ್, ಭೂಮಿಕಾ ಬಳಿ ಚರ್ಚೆ ಮಾಡಿರುತ್ತಾನೆ. ಆದರೆ, ಭೂಮಿಕಾ ಮಾತ್ರ ಪಾರ್ಥನನ್ನು ಯಾಕೆ ಸೆಲೆಕ್ಟ್ ಮಾಡಬಾರದು ಎಂದು ಮೊದಲೇ ಗೌತಮ್ ಬಳಿ ಹೇಳಿರುತ್ತಾಳೆ. ಪಾರ್ಥ ತಮ್ಮ ಕಂಪನಿಯಲ್ಲಿ ಇತ್ತೀಚಿನ ದಿನಗಳಲ್ಲಿ ಉತ್ತಮವಾಗಿಯೇ ಕೆಲಸ ಮಾಡುತ್ತಿರುತ್ತಾರೆ. ಆದ್ದರಿಂದ ಪ್ರಾರ್ಥನನ್ನು ಯಾಕೆ ನಾವು ದಿವಾನ್ ಸಂಸ್ಥೆಯ ಸಿಎಫ್ಒ ಆಗಿ ಆಯ್ಕೆ ಮಾಡಬಾರದು ಎಂದು ಭೂಮಿಕಾ ಹೇಳಿರುತ್ತಾಳೆ.

ಅಷ್ಟರಲ್ಲಿ ಶಕುಂತಲಾ ದೇವಿ ಕೂಡ ತನ್ನ ಮನದ ಇಷ್ಟವನ್ನು ಮಗನ ಬಳಿ ಹೇಳಿರುತ್ತಾಳೆ. ಆದರೆ, ಗೌತಮ್‌ಗೆ ಜೈದೇವ್‌ನ್ನು ಸಿಎಫ್ಒ ಮಾಡುವುದು ಇಷ್ಟವಿರುವುದಿಲ್ಲ. ಜೈದೇವ್ ಮಾಡಿದ ಕೆಟ್ಟ ಕೆಲಸಗಳನ್ನು ಕೂಡ ಗೌತಮ್‌ಗೆ ಆರಗಿಸಿಕೊಳ್ಳಲು ಆಗುತ್ತಿಲ್ಲ. ಆದ ಕಾರಣ ಜೈದೇವ್ ನನ್ನ ಸಿಎಫ್‌ಒ ಮಾಡದೆ ಪ್ರಾರ್ಥನನ್ನು ಆಯ್ಕೆ ಮಾಡುತ್ತಾರೆ.

ಆದರೆ, ಜೈದೇವ್ ಮಾತ್ರ ತನ್ನ ಅಣ್ಣನ ವಿರುದ್ಧ ಸಿಡಿಮಿಡಿಕೊಳ್ಳುತ್ತಾನೆ. ಪಾರ್ಥಗೆ ಅವಕಾಶ ಸಿಕ್ಕಿದೆ. ಆದರೆ ನಾನು ಎಷ್ಟು ವರ್ಷ ಕಷ್ಟಪಟ್ಟು ಕೆಲಸ ಮಾಡಿದ್ದು, ಅಣ್ಣನಿಗೆ ಕಾಣಿಸಲಿಲ್ವಾ ಎಂದು ಅಂದುಕೊಂಡಿರುತ್ತೇನೆ. ಹಣಕಾಸಿನ ಡಿಪಾರ್ಟ್ಮೆಂಟ್ ಆದರೆ, ಅದು ಕೂಡ ಜೈದೇವ್ ಕೈ ತಪ್ಪಿ ಹೋಗಿರುತ್ತದೆ. ಇನ್ನು ಮನೆಗೆ ಬಂದ ಪಾರ್ಥ ಮಾತ್ರ ಬಹಳ ಖುಷಿಯಲ್ಲಿ ಇರುತ್ತಾನೆ. ಇದಕ್ಕಿಂತ ಮುಂಚಿತವಾಗಿಯೇ ಗೌತಮ್ ತನ್ನ ತಾಯಿಯ ಬಳಿ ಕ್ಷಮೆ ಕೇಳಿರುತ್ತಾನೆ.

Kannada serial Amruthadhaare October 18th episode update

"ನನಗೆ ನಿಮ್ಮ ಆಸೆಯನ್ನು ಈಡೇರಿಸಲು ಆಗುತ್ತಿಲ್ಲ. ಜೈದೇವ್ ಒಂದು ವೇಳೆ ಬದಲಾದರೆ ಆತನಿಗೆ ನನ್ನ ಸಿಎಫ್‌ಒ ಪಟ್ಟವನ್ನೇ ಬಿಟ್ಟುಕೊಡುತ್ತೇನೆ ಎಂದು ತನ್ನ ತಾಯಿಗೆ ವಾಯ್ಸ್ ಮೆಸೇಜನ್ನು ಕಳಿಸಿ ಸಿಎಫ್ಒ ಆಗಿ ಪಾರ್ಥನನ್ನು ಆಯ್ಕೆ ಮಾಡುತ್ತಾರೆ. ಇನ್ನು ಪಾರ್ಥನ ಹೆಂಡತಿ ಅಪೇಕ್ಷಾಗೆ ತನ್ನ ಗಂಡ ಸಿಎಫ್ಒ ಆಗಿರುವುದನ್ನು ಕೇಳಿ ಬಹಳ ಖುಷಿಯಾಗುತ್ತದೆ. ಆಕೆ ಎಲ್ಲರಿಗೂ ಸಿಹಿ ತಿಂಡಿಯನ್ನು ಹಂಚಿ ಸಂಭ್ರಮಿಸುತ್ತಾಳೆ. ತನ್ನ ಗಂಡ ಉತ್ತಮ ಸ್ಥಾನಕ್ಕೆ ಏರುತ್ತಾರೆಂದು ಆಕೆ ಪದೇ ಪದೆ ಹೇಳುತ್ತಿರುತ್ತಾಳೆ. ತನ್ನ ಗಂಡ ಆಫೀಸಿನಲ್ಲಿ ಉತ್ತಮವಾಗಿ ಕೆಲಸ ಮಾಡುತ್ತಾರೆ. ಅದಕ್ಕೆ ಅವರಿಗೆ ಆಫೀಸಿನಲ್ಲಿ ಇಂತಹ ಉತ್ತಮ ಸ್ಥಾನವನ್ನು ನೀಡಲಾಗಿದೆ" ಎಂದು ಹೇಳುತ್ತಿರುತ್ತಾಳೆ.

ಇನ್ನು ಮಾನ್ಯ ಆಕ್ಸಿಡೆಂಟ್ ಆಗಿ ಸತ್ತು ಹೋಗಿರುತ್ತಾಳೆ. ಆಕೆಯ ತಂಗಿಗೆ ಶಕುಂತಲಾ ದೇವಿ ಮೇಲೆ ಅಪಾರವಾದ ಸಿಟ್ಟಿರುತ್ತದೆ. ತನ್ನ ಅಕ್ಕನ ಸಾವಿಗೆ ಶಕುಂತಲಾ ದೇವಿಯವರೇ ಕಾರಣ ಎನ್ನುವುದು ಮಾನ್ಯಾ ತಂಗಿ ಧನ್ಯಾಗೆ ಕೂತಿರುತ್ತದೆ. ಶಕುಂತಲಾ ದೇವಿಗೆ ಕರೆ ಮಾಡಿ "ನಾನು ಮಾನ್ಯ ತಂಗಿ. ನೀವು ಅಲ್ಲಿ ಬಹಳ ಖುಷಿಯಾಗಿದ್ದೀರ ಎಂದು ನನಗೆ ಗೊತ್ತಿದೆ. ಆದರೆ ನನ್ನ ಅಕ್ಕನನ್ನು ನೀವು ಸಾಯಿಸಿದ್ದೀರ ಅನ್ನುವುದು ನನಗೆ ಚೆನ್ನಾಗಿ ತಿಳಿದಿದೆ. ನನ್ನ ಅಕ್ಕ ಸಾಯುವ ಮುನ್ನ ಎಲ್ಲ ವಿಚಾರವನ್ನು ನನ್ನ ಬಳಿ ಹೇಳಿಕೊಂಡಿದ್ದಾಳೆ" ಎಂದು ಹೇಳಿದ್ದಾರೆ.

"ನನ್ನ ಅಕ್ಕ ಆಕ್ಸಿಡೆಂಟ್ ನಿಂದ ತೀರಿ ಹೋಗಿಲ್ಲ ಆಕೆ ಯಾರದೋ ಪಿತೂರಿಗೆ ಬಲಿಯಾಗಿದ್ದಾಳೆ ಎಂದು ಧನ್ಯಾ ಹೇಳಿದಾಗ ಗೌತಮ್‌ಗೆ ಶಾಕ್ ಆಗುತ್ತದೆ ಇಷ್ಟೆಲ್ಲಾ ಆದ ಬಳಿಕ ಸೀರಿಯಲ್ ನೋಡುತ್ತಿರುವ ಪ್ರೇಮಿಗಳು ಕಾಮೆಂಟ್ ಮಾಡುವುದಕ್ಕೆ ಶುರು ಮಾಡಿದ್ದಾರೆ. "ಇಷ್ಟರವರೆಗೆ ಅದೆಲ್ಲಾ ಮುಗಿಸಿ ಇದೀಗ ಇನ್ನೊಂದು ಕೆಲಸಕ್ಕೆ ಗೌತಮ್ ಇಳಿದಿದ್ದಾರೆ. ಹೀಗೆ ಒಂದರ ಮೇಲೊಂದು ಇನ್ವೆಸ್ಟಿಗೇಷನ್ ಮಾಡುತ್ತಾರೆ. ಹೀಗೆ ಆದರೆ, ಮಕ್ಕಳು ಮರಿಯನ್ನು ಯಾವಾಗ ಮಾಡಿಕೊಳ್ಳುತ್ತೀರಿ ಗೌತಮ್ ಅವರೇ?" ಎಂದು ಅಭಿಮಾನಿಗಳು ಪ್ರಶ್ನೆ ಮೇಲೆ ಪ್ರಶ್ನೆಯನ್ನ ಕೇಳುತ್ತಲೇ ಇದ್ದಾರೆ.

More from Filmibeat

English summary
Kannada serial Amruthadhaare October 18th episode update
Read more about: serial poorva filmibeat news
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X