Amruthadhaare:ಆನಂದ್ ಮನೆಗೆ ಎಂಟ್ರಿ ಕೊಟ್ಟಿರುವ ಸುಧಾ ಯಾರು? ಗೌತಮ್ ಟಾರ್ಗೆಟ್ ಆಗ್ತಿರೋದೇಕೆ?
ಆನಂದ್ ಹಾಗೂ ಅಪರ್ಣ ಮನೆಗೆ ಸೇರಿರುವಂತಹ ಸುಧಾ ಯಾರು? ಎನ್ನುವುದು ಇನ್ನಷ್ಟೇ ತಿಳಿಯಬೇಕಾಗಿದೆ . ಸುಧಾ ಯಾಕಾಗಿ ಆನಂದ್ ಮನೆ ಸೇರಿಕೊಂಡಿದ್ದಾಳೆ? ಅವಳನ್ನು ಆಟ ಆಡಿಸುತ್ತಿರುವವರು ಯಾರು? ಅವಳು ಯಾರಿಗಾಗಿ ಬಲೆಬೀಸಿದ್ದಾಳೆ? ಹಾಗೆಯೇ ಗೌತಮ್ ಕಂಡರೆ ಸುಧಾಗೆ ಯಾಕೆ ಅಷ್ಟು ಕೋಪ ? ಇದೆಲ್ಲವೂ ಕೂಡ ಇನ್ನಷ್ಟೇ ಬಯಲಾಗಬೇಕಾಗಿದೆ. ಈಗಾಗಲೇ ಧನ್ಯಾ ಎಂಬಾಕೆ ಶಕುಂತಲಾ ದೇವಿಯ ಮನಸ್ಸನ್ನು ಕೂಡ ಕೆಡಿಸಿದ್ದಾಳೆ.
ಯಾಕೆಂದರೆ ಗೌತಮ್ ಅವರ ತಾಯಿ ಹಾಗೂ ಆತನ ತಂಗಿ ಇನ್ನೂ ಕೂಡ ಬದುಕಿದ್ದಾರೆ ಎನ್ನುವ ಸುದ್ದಿ ಶಕುಂತಲಾ ದೇವಿ ಕಿವಿಗೆ ಯಾವಾಗ ಬಿತ್ತೋ, ಆಗಲೇ ಶಕುಂತಲಾ ದೇವಿ ಸ್ತಬ್ಧಳಾಗಿ ಬಿಡುತ್ತಾಳೆ. ಗೌತಮ್‌ಗೆ ಆಕೆಯ ತಾಯಿ ತಂಗಿ ಬದುಕಿದ್ದು ತಿಳಿದರೆ ಖಂಡಿತವಾಗಿಯೂ ಆತ ನಮ್ಮನ್ನೆಲ್ಲಾ ಬೀದಿ ಪಾಲು ಮಾಡುವುದು ಖಚಿತ ಎನ್ನುವುದು ಶಕುಂತಲಾ ದೇವಿಗೆ ತಿಳಿದಿರುತ್ತದೆ.

ಶಕುಂತಲಾ ದೇವಿ ಹಾಗೂ ಗೌತಮ್ ತಂದೆಯನ್ನು ಹೇಗೋ ಮೋಡಿ ಮಾಡಿ ಮದುವೆ ಮಾಡಿಕೊಂಡಿದ್ದರು. ಆದರೆ, ಇದಾದ ಬಳಿಕ ಗೌತಮ್ನ ತಾಯಿಯನ್ನೇ ಕಿಡ್ನಾಪ್ ಕೂಡ ಮಾಡಿಸಿದಳು. ಕೊನೆಗೆ ತಂದೆ ಸಾಯುವ ಸಮಯದಲ್ಲಿ ಶಕುಂತಲಾ ದೇವಿಯತ್ತ ಕೈ ತೋರಿಸಿ ಇವರನ್ನೆಲ್ಲ ನೀನು ತುಂಬಾ ಚೆನ್ನಾಗಿ ನೋಡಿಕೊಳ್ಳಬೇಕು ಎಂದು ಹೇಳಿ ಗೌತಮ್ ತಂದೆ ಪ್ರಾಣ ಬಿಡುತ್ತಾರೆ.
ಇದನ್ನು ನೋಡಿದ ಗೌತಮ್ ತನ್ನ ತಂದೆ ಹೇಳಿದ ಮಾತಿನ ಪ್ರಕಾರ ಶಕುಂತಲಾ ದೇವಿಯನ್ನು ತನ್ನ ತಾಯಿ ಎಂದು ಅಂದುಕೊಂಡಿರುತ್ತಾರೆ. ಹಾಗೆಯೇ ಆಕೆಯ ಮಕ್ಕಳನ್ನು ತನ್ನ ಸ್ವಂತ ತಮ್ಮಂದಿರ ಹಾಗೆ ನೋಡಿಕೊಂಡಿರುತ್ತಾನೆ. ಆದರೆ, ಶಕುಂತಲಾ ದೇವಿ ಒಳಗಿಂದೊಳಗೆ ಗೌತಮ್‌ನ ಆಸ್ತಿಯನ್ನೆಲ್ಲ ತನ್ನ ಹೆಸರಿಗೆ ಬರುವ ಹಾಗೆ ಮಾಡಿಕೊಳ್ಳಬೇಕು ಎಂದು ಪಿತೂರಿ ಮಾಡುತ್ತಿರುತ್ತಾಳೆ. ಆದರೆ ಈ ವಿಚಾರ ಗೌತಮ್‌ಗೆ ತಿಳಿದಿಲ್ಲ. ಇನ್ನು ಶಕುಂತಲಾ ದೇವಿಯ ಮೆಂಟಾಲಿಟಿ ಹಾಗೆ ಜೈದೇವ್‌ಗೂ ಬಂದು ಬಿಟ್ಟಿದೆ. ಜೈದೇವ್ ನಾಟಕ ಮಾಡುತ್ತಲೇ ಹೇಗಾದರೂ ಮಾಡಿ ಅಣ್ಣನ ಆಸ್ತಿಯನ್ನು ಲಪಟಾಯಿಸಬೇಕು. ಆ ಬಳಿಕ ಇವರಿಗೊಂದು ಗತಿ ಕಾಣಿಸಬೇಕು ಎಂದು ಅಂದುಕೊಂಡಿರುತ್ತಾನೆ.
ಜೈದೇವ್ ಆಟಕ್ಕೇ ಕೊನೆ ಎಂದು?
ಆದರೆ, ಒಂದಲ್ಲ ಒಂದು ವಿಚಾರದಿಂದ ಜೈದೇವ್ ಮನೆಯವರ ಮುಂದೆ ಸಿಕ್ಕಿ ಬೀಳುತ್ತಿದ್ದಾನೆ. ಆತನಿಗೆ ಏನು ಮಾಡಬೇಕು ಎಂದು ತಿಳಿಯದಾಗುತ್ತದೆ. ಅದಕ್ಕಾಗಿ ಇದೀಗ ಹೊಸದೊಂದು ನಾಟಕವನ್ನಾಡುತ್ತಿದ್ದಾನೆ. ಇನ್ನು ಗೌತಮ್ ಕಂಪನಿಯಲ್ಲಿ ಉತ್ತಮವಾದ ಬೆಳವಣಿಗೆ ಆದ ಕಾರಣ ಆತ ಎಲ್ಲರಿಗೂ ಪಾರ್ಟಿಯನ್ನು ಕೊಡಿಸುತ್ತಾನೆ. ಆ ಪಾರ್ಟಿಯಲ್ಲಿ ಜೈದೇವ್ ಬಗ್ಗೆ ಒಳ್ಳೆಯ ಮಾತನ್ನು ಹೇಳುತ್ತಾನೆ. "ಜೈ ದೇವ್ ನೀನು ಹೀಗೆ ಇದ್ದರೆ ನಮಗೆಲ್ಲ ಎಷ್ಟು ಸಂತೋಷವಾಗುತ್ತದೆ ಗೊತ್ತಾ? ನಮಗೆ ಬಹಳ ಖುಷಿಯಾಗುತ್ತದೆ. ನೀನು ಯಾವತ್ತೂ ಹೀಗೆ ಇರಬೇಕು" ಎಂದು ಹೇಳಿದಾಗ ಜೈದೇವ್ ಸುಮ್ಮನೆ ತಲೆ ಆಡಿಸುತ್ತಾನೆ. ಆದರೆ ಆತನ ಮನಸ್ಸಿನಲ್ಲಿ ಇರುವುದೇ ಬೇರೆ.

ಗೌತಮ್‌ಗೆ ಭೂಮಿಕಾ ಜೀವಕ್ಕಿಂತ ಹೆಚ್ಚು
ಇನ್ನು ಗೌತಮ ಹಾಗೂ ಭೂಮಿಕಾ ನಡುವೆ ಬಹಳ ಉತ್ತಮವಾದ ಕೆಮಿಸ್ಟ್ರಿ ನಡೆಯುತ್ತಿದೆ. ಇವರಿಬ್ಬರ ನಡುವೆ ಬಹಳ ಉತ್ತಮವಾದ ಬಾಂಧವ್ಯ ಕೂಡ ಏರ್ಪಟ್ಟಿದೆ. ಮೊದ ಮೊದಲಿಗೆ ಗೌತಮ್ ಹಾಗೂ ಭೂಮಿಕಾ ನಡುವೆ ಅಷ್ಟಾಗಿ ಏನು ಸಂಬಂಧ ಏರ್ಪಟ್ಟಿರಲಿಲ್ಲ. ಆದರೆ ಇದೀಗ ಅವರಿಬ್ಬರ ನಡುವೆ ಬಹಳ ಉತ್ತಮವಾದ ಸಂಬಂಧವಿದೆ. ಭೂಮಿಕಾಗೆ ಗೌತಮ್ ಎಂದರೆ ಬಹಳ ಇಷ್ಟ. ಹಾಗೆಯೇ ಗೌತಮ್‌ಗೆ ಕೂಡ ಭೂಮಿಕಾ ಇಲ್ಲದ ಜಗತ್ತಿಲ್ಲ. ಅಷ್ಟರ ಮಟ್ಟಿಗೆ ಭೂಮಿಕಾನನ್ನು ಬಹಳ ಪ್ರೀತಿ ಮಾಡುತ್ತಾನೆ. ಆದರೆ ಅದನ್ನು ಭೂಮಿಕಾ ಜೊತೆಯೂ ಹೇಳಿ ಕೊಳ್ಳುವುದಿಲ್ಲ. ಮುಂದೇನು ಎಂಬುವುದನ್ನು ಇನ್ನಷ್ಟೇ ಗೊತ್ತಾಗಬೇಕು.


Click it and Unblock the Notifications










