Amruthadhaare: ಗೌತಮ್‌ಗೆ ಕಗ್ಗಂಟಾದ ಧನ್ಯಾ ವಿಚಾರ? ಮಾನ್ಯಾ ಸಾವಿನ ಬಗ್ಗೆ ಭೂಮಿಕಾಗೆ ಹೆಚ್ಚಾಯ್ತು ಅನುಮಾನ?
ಮಾನ್ಯಾ ವಿಚಾರ ಇದೀಗ ಭೂಮಿಕಾಗೆ ತಿಳಿದಿದೆ. ಮಾನ್ಯಾ ಬಗ್ಗೆ ಇಲ್ಲ ಸಲ್ಲದ ಕಥೆ ಕಟ್ಟಿರುವುದು ಶಕುಂತಲಾ ಎಂದು ಯಾರಿಗೂ ಗೊತ್ತಾದರೆ ಮಾತ್ರ ಯಾರನ್ನು ಸುಮ್ಮನೆ ಬಿಡುವುದಿಲ್ಲ ಅನ್ನೋದೂ ಗೊತ್ತು. ಮಾನ್ಯಾ ತಾನು ಸಾಯುವ ಮುನ್ನ ಎಲ್ಲವನ್ನೂ ತನ್ನ ತಂಗಿ ಧನ್ಯಾ ಬಳಿ ಹೇಳಿ ಸತ್ತಿದ್ದಾಳೆ. ಆದರೆ, ಇದು ಶಕುಂತಲಾ ದೇವಿಗೆ ನಡುಕ ಹುಟ್ಟಿಸಿದೆ. ಭೂಮಿಕಾಗೆ ಧನ್ಯಾ ಕರೆ ಮಾಡಿ ತಾನು ನಿಮ್ಮ ಜೊತೆ ಏನೋ ಒಂದು ವಿಚಾರ ಮಾತನಾಡಬೇಕಿದೆ. ದಯವಿಟ್ಟು ನನಗೆ ಸಿಗಬಹುದಾ ಎಂದು ಕೇಳಿಕೊಂಡಿದ್ದಾಳೆ.
ನೀನು ಯಾರು ಎಂದು ಕೇಳಿದಾಗ ಮಾನ್ಯಾ ತಂಗಿ ನಾನು ಎಂದು ಹೇಳಿ ಕರೆ ಕಟ್ ಮಾಡುತ್ತಾಳೆ. ಗೌತಮ್ ಮಾನ್ಯಾ ಬಗ್ಗೆ ಭೂಮಿಕಾ ಬಳಿ ಇದೂವರೆಗೆ ಕೂಡ ಏನು ಹೇಳಿಲ್ಲ. ಯಾಕೆಂದರೆ ಭೂಮಿಕಾಗೆ ಮಾನ್ಯಾ ವಿಚಾರ ತಿಳಿದರೆ ಆಕೆ ಎಲ್ಲಿ ತಪ್ಪು ತಿಳಿದುಕೊಂಡು ಬಿಡುತ್ತಾಳೆ ಎನ್ನುವ ಆತಂಕದಲ್ಲಿ ಯಾವ ವಿಚಾರವನ್ನು ಹೇಳದೆ ಸುಮ್ಮನೆ ಬಚ್ಚಿಟ್ಟಿದ್ದರು. ಆದರೆ, ಇದೀಗ ಭೂಮಿಕಾಗೆ ತನ್ನ ಗಂಡನ ಬಳಿ ಎಲ್ಲಾ ವಿಚಾರವನ್ನು ಕೇಳಿದ್ದಾಳೆ. ಹಾಗೆಯೇ ಮಾನ್ಯಾ ಬಗ್ಗೆ ಭೂಮಿಕಾ ಗೌತಮ್ ಬಳಿ ಕೇಳಿದಾಗ ಆತ ಎಲ್ಲಾ ವಿಚಾರವನ್ನು ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾನೆ.

ಮಾನ್ಯಾ ತನ್ನ ಮನೆಗೆ ಕೆಲಸದವಳ ಹಾಗೆ ಸೇರಿಕೊಂಡಿದ್ದಳು. ತನ್ನ ತಾಯಿ ಶಕುಂತಲಾ ದೇವಿಯನ್ನು ನೋಡಿಕೊಳ್ಳುವ ರೀತಿಯನ್ನು ನೋಡಿ ನಮ್ಮ ಮನೆಯವರಿಗೆ ಎಲ್ಲರಿಗೂ ಕೂಡ ಆಕೆ ಇಷ್ಟ ಆಗಿದ್ದಳು. ತನ್ನ ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದಳು. ಶಿಕ್ಷಣವನ್ನು ಪಡೆದುಕೊಂಡು ಆಫೀಸ್‌ನಲ್ಲಿ ಕೆಲಸ ಮಾಡುತ್ತಿದ್ದಳು. ಆ ಬಳಿಕ ಅವಳ ಡ್ರೆಸ್ಸಿಂಗ್ ಸ್ಟೈಲ್ ಎಲ್ಲವೂ ಕೂಡ ಬದಲಾಯಿತು. ಆ ಬಳಿಕ ತನ್ನ ತಾಯಿ ಶಕುಂತಲಾ ದೇವಿ ಜೊತೆಗೆ ತನ್ನ ಜೊತೆ ಆಕೆ ಫೋಟೋ ತೆಗೆಸಿಕೊಂಡಿರುವುದನ್ನು ತೋರಿಸಿದ್ದಾಳೆ.
ಹಾಗೆಯೇ ಹನಿಟ್ರ್ಯಾಪ್ ಮಾಡಿದ್ದಾಳೆ ಅಂತ ಅಮ್ಮ ಹೇಳಿದ್ದರು. ಅದಾದ ಬಳಿಕ ಆಕೆಯನ್ನು ಕೆಲಸದಿಂದ ತೆಗೆದು ಹಾಕಲಾಯಿತು. ಮಾನ್ಯಾ ತನ್ನ ಹಿಂದೆ ಹಿಂದೆ ಓಡೋಡಿ ಬರುತ್ತಿದ್ದಳು. ಆಕೆ ಬರುವುದನ್ನು ನೋಡಿ ನನಗೆ ಗಾಬರಿಯಾಗಿ ಹೋಗಿತ್ತು. ಅದಾದ ಕೆಲವು ದಿನಕ್ಕೆ ಆಕೆ ಇನ್ನಿಲ್ಲ ಎನ್ನುವ ಸುದ್ದಿ ಬಂತು ಎಂದು ಭೂಮಿಕಾ ಜೊತೆ ಪಿನ್ ಟು ಪಿನ್ ವಿಚಾರವನ್ನು ಹೇಳುತ್ತಾನೆ. ಇದನ್ನು ಕೇಳಿದ ಭೂಮಿಕಾಗೆ ಮಾನ್ಯಾ ಅಷ್ಟು ಕೆಟ್ಟವಳಾ ಎನ್ನುವ ಅನುಮಾನ ಶುರುವಾಗಿದೆ.

ಮಾನ್ಯಾ ಯಾವತ್ತೂ ಯಾರಿಗೂ ಕೆಟ್ಟದನ್ನು ಬಯಸಿಲ್ಲ ಎಂದು ಧನ್ಯಾ ಹೇಳಿದ್ದಳು. ಆದರೆ ಇದೀಗ ಧನ್ಯಾ ಯಾಕೆ ನನ್ನ ಜೊತೆ ಮಾತನಾಡಬೇಕು ಎಂದು ಕರೆಸಿಕೊಂಡಿದ್ದಾಳೆ ಆಲೋಚನೆ ಮಾಡುತ್ತಿರುತ್ತಾಳೆ. ಇನ್ನು ಗೌತಮ್ ಒಬ್ಬಂಟಿಯಾಗಿ ಯೋಚನೆ ಮಾಡುತ್ತಿರುವ ವೇಳೆ ಶಕುಂತಲಾ ದೇವಿ ಮಗನ ಬಳಿ ಬರುತ್ತಾಳೆ. ಆತನ ಬಳಿಗೆ ಬಂದ ಶಕುಂತಲಾ ಗೌತಮ್ ಬಳಿ ಏನಾಯಿತು ಎಂದು ಕೇಳಿದಾಗ ಗೌತಮ್ ಧನ್ಯಾ ಕರೆ ಮಾಡಿದ ಬಗ್ಗೆ ಪ್ರಸ್ತಾಪ ಮಾಡುತ್ತಾನೆ. ಧನ್ಯಾ ಎನ್ನುವ ಹೆಸರು ಕೇಳಿದಾಗ ಶಕುಂತಲಾಗೆ ಬಹಳ ಭಯವಾಗುತ್ತದೆ .
ಇದೇನಪ್ಪ ಧನ್ಯಾ ಎಲ್ಲಾದರೂ ಇವನ ಬಳಿ ಎಲ್ಲಾ ವಿಚಾರಗಳನ್ನು ಹೇಳಿ ಬಿಟ್ಟಳ ಹೇಗೆ? ಎಂದು ಅಂದುಕೊಳ್ಳುತ್ತಾಳೆ. ಮಾತು ಮುಂದುವರೆಸಿದ ಗೌತಮ್ "ಧನ್ಯಾ ನನಗೆ ಮೆಸೇಜ್ ಮಾಡಿ ಏನೋ ಹೇಳಬೇಕೆಂದು ಕೇಳಿಕೊಂಡಿದ್ದಾಳೆ. ಹಾಗೆಯೇ ಭೂಮಿಕಾಗೆ ಕೂಡ ಕರೆ ಮಾಡಿದ್ದಾರೆ. ಇದೆಲ್ಲ ಯಾಕೋ ನಮಗೆ ಸರಿ ಬರುತ್ತಿಲ್ಲ. ಆದುದರಿಂದ ಏನು ಮಾಡಬೇಕು ಎಂದು ಯೋಚನೆ ಮಾಡುತ್ತಿದ್ದೇನೆ" ಎಂದಾಗ ಶಕುಂತಲಾ ದೇವಿ ಹೇಳುತ್ತಾಳೆ. "ನೀನೇನು ತಲೆ ಕೆಡಿಸಿಕೊಳ್ಳಬೇಡ, ಏನು ಆಗುವುದು ಇಲ್ಲ" ಎಂದು ಹೇಳುತ್ತಾಳೆ. ಹಾಗೆಯೇ ಮಾನ್ಯಾ, ಧನ್ಯಾಳನ್ನು ಚೂ ಬಿಟ್ಟಿದ್ದಾಳೆ. ಅದಕ್ಕೆ ನಿನಗೆ ಅಷ್ಟು ಕಾಟ ಕೊಡುತ್ತಿದ್ದಾಳೆ ಎಂದು ಶಕುಂತಲಾ ದೇವಿ ನಾಟಕೀಯ ಮಾತುಗಳನ್ನು ಹೇಳಿ ಅಲ್ಲಿಂದ ಹೊರಟು ಹೋಗುತ್ತಾಳೆ.


Click it and Unblock the Notifications











