Amruthadhaare ; ಪಂಕಜಾ ಹೆಸರು ಕೇಳುತ್ತಿದ್ದಂತೆಯೇ ಬೆಚ್ಚಿ ಬಿದ್ದ ಶಕುಂತಲಾ ? ಯಾರು ಈ ಪಂಕಜಾ ?
ಅಮೃತಧಾರೆ ಧಾರಾವಾಹಿಯಲ್ಲಿ ಪಂಕಜಾ ಯಾರು ಎನ್ನುವ ಪ್ರಶ್ನೆ ಈಗ ಎದ್ದಿದೆ. ಲಚ್ಚಿ ಬೆಚ್ಚಿ ಬೀಳುತ್ತಿದ್ದ ಚಪ್ಪಲಿ ಹುಡುಕಲು ಶಕುಂತಲಾ ಕೋಣೆಗೆ ಭೂಮಿಕಾ ಹೋದಾಗ ಚಪ್ಪಲಿಯ ಬದಲು ಪಂಕಜಾ ಅವರ ಬರ್ತ್ ಸರ್ಟಿಫಿಕೆಟ್ ಸಿಕ್ಕಿದೆ. ಇನ್ನು. ಪಂಕಜಾ ಮತ್ತು ಶಕುಂತಲಾ ಜನ್ಮದಿನ ಒಂದೇ ಆದ ಕಾರಣ ಭೂಮಿಕಾಗೆ ಅನುಮಾನ ಬಂದಿದೆ. ಆನಂದ್ ಸಹಾಯವನ್ನು ಪಡೆದಿರುವ ಭೂಮಿಕಾ ಸದ್ಯ
ಪಂಕಜಾ ಜನ್ಮ ಕುಂಡಲಿ ಪತ್ತೆ ಹಚ್ಚುವ ಪ್ರಯತ್ನ ಮಾಡುತ್ತಿದ್ದಾಳೆ. ಪಂಕಜಾ ಊರನ್ನು ಪತ್ತೆ ಮಾಡಿ ಅಲ್ಲಿನ ಗ್ರಾಮ ಪಂಚಾಯ್ತಿಗೆ ಕರೆ ಮಾಡಿದ್ದಾಳೆ. ನಾನು ಪಂಕಜಾ ಮಾತನಾಡ್ತಿರೋದು ನಾನು ನಿಮ್ಮ ಊರಿನವಳೇ ಎಂದು ಹೇಳುತ್ತಾಳೆ. ಮುಂದುವರೆದು ನಮ್ಮ ಊರಿನ ಬಗ್ಗೆ ಸ್ವಲ್ಪ ತಿಳಿದುಕೊಳ್ಳಬೇಕಾಗಿತ್ತು ಎಂದು ಹೇಳುತ್ತಾಳೆ.

ಪಂಕಜಾ ನನಗೆ ಗೊತ್ತು ಎಂದ ಅಜ್ಜಿ
ಆಗ ಗ್ರಾಮ ಪಂಚಾಯ್ತಿ ಸದಸ್ಯ ಊರಿನಲ್ಲಿ ಹೋಗಿ ಮಾತನಾಡಿಸಿ ವಿಚಾರ ತಿಳಿಸುವುದಾಗಿ ಹೇಳುತ್ತಾನೆ. ಪಂಕಜಾ ಎನ್ನುವರು ಯಾರಿಗಾದರೂ ಗೊತ್ತಿದ್ದರೆ ಹೇಳಿ ಎಂದು ಹೇಳುತ್ತಾನೆ. ಆಗ ಅಲ್ಲಿರುವ ಮಹಿಳೆಯೊಬ್ಬಳು ನನಗೆ ಪಂಕಜಾ ಗೊತ್ತು ಎಂದು ಹೇಳುತ್ತಾಳೆ. ಆ ನಂತರ ಗೌತಮ್ ದಿವಾನ್‌ಗೆ ಕರೆಯನ್ನು ಕೂಡ ಮಾಡುತ್ತಾಳೆ. ಆದರೆ ಈ ಸಮಯದಲ್ಲಿ ಗೌತಮ್ ಅಜ್ಜಿ ಫೋನ್ ಸ್ವೀಕರಿಸಿದ್ದು ಇಲ್ಲಿ ಯಾರು ಪಂಕಜಾ ಎನ್ನುವರು ಇಲ್ಲ ಇದು ಗೌತಮ್ ದಿವಾನ್ ಮನೆ ಎಂದು ಹೇಳುತ್ತಾರೆ.
ಶಂಕುತಲಾನೇ ಪಂಕಜಾನಾ ?
ಈ ಸಮಯದಲ್ಲಿ ಅಜ್ಜಿ ಮತ್ತು ಆ ಮಹಿಳೆಯ ಸಂಭಾಷಣೆಯನ್ನು ಕದ್ದು ಮುಚ್ಚಿ ತೆರೆ ಮರೆಯಲ್ಲಿ ನಿಂತು ಶಕುಂತಲಾ ಕೇಳಿಸಿಕೊಳ್ಳುತ್ತಿರುವುದನ್ನು ಭೂಮಿಕಾ ಗಮನಿಸುತ್ತಾಳೆ. ಇನ್ನು ಪಂಕಜಾ ಹೆಸರನ್ನು ಕೇಳಿ ಸದ್ಯ ಶಕುಂತಲಾ ಗಾಬರಿಯಾಗಿದ್ದು ಹಲವಾರು ಕಿರುತೆರೆಯ ಪ್ರೇಕ್ಷಕರು ಪಂಕಜಾ ಮತ್ತು ಶಕುಂತಲಾ ಇಬ್ಬರು ಒಂದೇ ಎನ್ನುವ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಗೌತಮ್ ಮನೆಯಲ್ಲಿ ಕೆಲಸಕ್ಕಿದ್ದ ಪಂಕಜಾ ಆ ನಂತರ ಆಸ್ತಿಯ ಆಸೆಗೆ ಗೌತಮ್ ತಂದೆಯನ್ನು ಪ್ರೇಮಪಾಶದಲ್ಲಿ ಸಿಲುಕಿಸಿ ಮದುವೆಯಾಗಿರಬಹುದು ಎನ್ನುವ ಅನುಮಾನವನ್ನು ವ್ಯಕ್ತಪಡಿಸುತ್ತಿದ್ದಾರೆ.
ಇನ್ನು ಈ ಹಿಂದೆ ಜಯದೇವ್ ತನ್ನ ತಂದೆಗೆ ಬೈಯ್ದಾಗ ಶಕುಂತಲಾ ಸಹಿಸಿರಲಿಲ್ಲ. ಹೀಗಾಗಿ ಗೌತಮ್ ತಂದೆ ಮತ್ತು ಜಯದೇವ್ ತಂದೆ ಇಬ್ಬರು ಬೇರೆಯಾಗಿರಬಹುದು ಎನ್ನುವ ಅನುಮಾನವನ್ನು ಕೂಡ ಹಲವರನ್ನು ಕಾಡುತ್ತಿದೆ.
ಪಂಕಜಾ ಹೆಸರು ಕೇಳಿದರೆ ಭಾಗ್ಯಮ್ಮಗೂ ಗಾಬರಿ
ಇನ್ನು ಇದಕ್ಕೂ ಮೊದಲು ಪಂಕಜಾ ಹೆಸರು ಕೇಳಿ ಭಾಗ್ಯಮ್ಮ ಕೂಡ ಗಾಬರಿಯಾಗಿರುತ್ತಾಳೆ. ಬರ್ತ್ ಸರ್ಟಿಫಿಕೆಟ್ ಸಿಕ್ಕ ನಂತರ ಮಲ್ಲಿ, ಸುಧಾ ಮತ್ತು ಸೃಜನ್ ಮೂವರ ಜೊತೆ ಮಾತನಾಡಿ ಅಲ್ಲಿಂದ ಕಳುಹಿಸಿದ್ದ ಭೂಮಿಕಾ ಈ ಪಂಕಜಾ ರಹಸ್ಯ ತಿಳಿದುಕೊಳ್ಳಬೇಕು ಎಂದುಕೊಂಡು ಆ ನಂತರ ಭಾಗ್ಯಮ್ಮ ಕೊಠಡಿಗೆ ಬಂದಿರುತ್ತಾಳೆ.
ಭಾಗ್ಯಮ್ಮ ರೂಮ್‌ಗೆ ಬಂದ ಭೂಮಿಕಾ ಮತ್ತು ಸುಧಾ ಮತ್ತು ಭಾಗ್ಯಮ್ಮ ಎದುರು ಪಂಕಜಾ ಹೆಸರು ಪ್ರಸ್ತಾಪಿಸುದಾಗ ಭಾಗ್ಯಮ್ಮ ವರ್ತನೆಯಲ್ಲಿ ಬದಲಾವಣೆಯಾಗುತ್ತೆ. ಭಾಗ್ಯಮ್ಮ ತಮ್ಮ ಮನದಲ್ಲಿಯೇ ಶಕುಂತಲಾ ಬಂಡವಾಳ ಬಯಲು ಮಾಡಲು ಇದು ಸರಿಯಾದ ಸಮಯ ಎಂದು ಅಂದುಕೊಂಡಿರುತ್ತಾಳೆ. ಆದರೆ ಪಂ.. ಪ ಎಂದು ಎಷ್ಟೇ ಮಾತನಾಡಲು ಪ್ರಯತ್ನ ಮಾಡಿದರು ಕೂಡ ಭಾಗ್ಮಮ್ಮಳ ಬಾಯಿಯಿಂದ ಒಂದು ಮಾತು ಕೂಡ ಹೊರಡುವುದಿಲ್ಲ.
ಸದ್ಯ ಅಮೃತಧಾರೆ ಧಾರಾವಾಹಿಯಲ್ಲಿ ಪಂಕಜಾ ಹೆಸರು ಸದ್ದು ಮಾಡುತ್ತಿದೆ. ಯಾರು ಈ ಪಂಕಜಾ ಎನ್ನುವ ಕುತೂಹಲ ಕೂಡ ಪ್ರೇಕ್ಷಕರನ್ನು ಕಾಡುತ್ತಿದೆ. ಮುಂದೇನಾಗುತ್ತೆ ? ಎನ್ನುವುದನ್ನು ಈಗ ಕಾದು ನೋಡಬೇಕಿದೆ. ಪಂಕಜಾ ರಹಸ್ಯ ಬೇಗ ಬಯಲಾಗುವ ನಿರೀಕ್ಷೆ ಕೂಡ ಇದೆ.


Click it and Unblock the Notifications











