Amruthadhaare: ಅಪ್ಪನ ಹೆಸರು ಉಳಿಸಿದ ಗೌತಮ್‌ ಭೂಮಿಕಾಳ ಕೃತಜ್ಞತೆ: ಇತ್ತ, ಆಫೀಸ್‌ ಸೇರಿಕೊಂಡಿದ್ದಾನೆ ಕಿರಣ್!

By Poorva

ಅಮೃತಧಾರೆಯಲ್ಲಿ ಭೂಮಿಕಾ ಗೌತಮ್‌ಗೆ ಧನ್ಯವಾದಗಳು ಹೇಳುತ್ತಿದ್ದಾಳೆ. ಭೂಮಿಕಾ ತನ್ನ ತಂದೆಯ ಹೆಸರನ್ನು ತನ್ನ ಹೆಸರಿನೊಂದಿಗೆ ಸೇರಿಸಿಕೊಂಡಿರಬೇಕು ಎನ್ನುವ ಆಸೆ. ತಂದೆಯ ಜೊತೆ ಅಷ್ಟೊಂದು ಬಾಂಧವ್ಯವನ್ನು ಹೊಂದಿದ ಭೂಮಿಕಾ ಒಮ್ಮಿಂದೊಮ್ಮೆಲೆ ತನ್ನ ತಂದೆಯ ಸ್ಥಾನವನ್ನು ಗಂಡನಿಗೆ ಕೊಡಲು ಮನಸ್ಸಾಗಲಿಲ್ಲ. ಹಾಗೆಯೇ ತನ್ನ ತಂದೆ ಯಾವತ್ತೂ ನನ್ನ ಹತ್ತಿರವೇ ಇರಬೇಕೆಂದು ಆಕೆ ತನ್ನ ಹೆಸರಿನೊಂದಿಗೆ ತನ್ನ ತಂದೆಯ ಹೆಸರನ್ನು ಸೇರಿಸಿಕೊಂಡಿದ್ದಳು.

ಭೂಮಿಕಾ ಸದಾಶಿವ ಎನ್ನುವ ಹೆಸರಿನಿಂದಲೇ ಕರೆಸಿಕೊಳ್ಳುತ್ತಿದ್ದಳು. ಆದರೆ ಇದೀಗ ಭೂಮಿಕಾಗೆ ಮದುವೆಯಾಗಿದೆ. ಮದುವೆಯಾದ ಬಳಿಕ ಹೆಸರನ್ನ ಕೊಂಚಮಟ್ಟಿಗೆ ಬದಲಾವಣೆ ಮಾಡುತ್ತಾರೆ . ತಂದೆ ಮಗಳನ್ನು ಮದುವೆ ಮಾಡಿ ಕೊಟ್ಟಿದ್ದರು ತಂದೆಗೆ ಮಗಳು. ಗಂಡನ ಮನೆಗೆ ಸೇರಿದ ಬಳಿಕ ಮಗಳನ್ನು ನೆನೆದು ಅದೆಷ್ಟು ಬಿಕ್ಕಳಿಸಿರುತ್ತಾರೋ ಏನೋ ಅಪ್ಪಂದಿರು . ಅದೇ ರೀತಿ ಮಗಳು ಕೂಡ ತನ್ನ ತಂದೆಯ ನೆನಪಲ್ಲಿ ಕೊರಗುತ್ತಿರುತ್ತಾಳೆ.

Kannada serial Amruthadhaare written update on 06th December

ಇನ್ನು ಭೂಮಿಕಾ ಹೆಸರನ್ನು ಬದಲಿಸಲು ಹೊರಟಿದ್ದ ಅಜ್ಜಿಯ ಮನಸನ್ನ ಬದಲಿಸಲು ಭೂಮಿಕಾಗೆ ಸಾಧ್ಯವಾಗಲಿಲ್ಲ. ಆದರೆ ಭೂಮಿಕಾಳನ್ನು ಅರ್ಥ ಮಾಡಿಕೊಂಡ ಗೌತಮ್ ತನ್ನ ಅಜ್ಜಿಯ ಬಳಿ , ಮದುವೆಯಾದ ಬಳಿಕ ಆಕೆಯ ಮೊದಲಿನ ಹೆಸರನ್ನು ಬದಲಾಯಿಸುವ ಅಗತ್ಯವಿಲ್ಲ. ಅದು ಅವರವರಿಗೆ ಬಿಟ್ಟ ವಿಚಾರ ಎಂದೆಲ್ಲಾ ಹೇಳಿ ಅಜ್ಜಿಯನ್ನ ಸಮಾಧಾನ ಮಾಡುತ್ತಾನೆ.

ಗೌತಮ್ ಮಾತು ಕೇಳಿ ಖುಷಿಯಾದ ಭೂಮಿಕಾ

ಇನ್ನು ಅಜ್ಜಿ ಆ ಮಾತನ್ನು ಕೇಳಿ ಸರಿ ಆಯಿತು ಎಂದು ಹೇಳುತ್ತಾರೆ. ಭೂಮಿಕಾ ಗೌತಮ್ ದಿವಾನ್ ಎಂಬ ಹೆಸರನ್ನ ನಾನು ಇಡಬೇಕು ಎಂದು ಇದೆ . ಆದರೆ ಇದೀಗ ಬೇಡ ಎಂದು ಹೇಳುತ್ತಿದ್ದೀರಾ ಅದಕ್ಕೆ ಭೂಮಿಕಾ ಸದಾಶಿವ ಎನ್ನುವ ಹೆಸರೇ ಇರಲಿ. ಬದಲಾಯಿಸುವ ಅಗತ್ಯವೇ ಇಲ್ಲ ಎಂದು ಹೇಳುತ್ತಾರೆ. ಇನ್ನು ಭೂಮಿಕಾಗೆ ಬಹಳ ಖುಷಿಯಾಗುತ್ತದೆ. ತನ್ನ ಗಂಡ ತನ್ನನ್ನ ಕೊಂಚಮಟ್ಟಿಗಾದರೂ ಅರ್ಥಮಾಡಿಕೊಂಡಿದ್ದಾರಲ್ಲ ಎಂದು ಬಹಳ ಖುಷಿ ಪಡುತ್ತಾಳೆ.

ಹೆಂಡತಿಯ ಮನದ ಆಸೆ ಪೂರೈಸಿದ ಗೌತಮ್

ತಾನು ಏನು ಹೇಳದೆ ತನ್ನ ಮನದಲ್ಲಿರುವಂತ ಆಸೆಯನ್ನು ಗೌತಮ್ ಅವರು ನೆರವೇರಿಸಿದರು ಎನ್ನುವ ಖುಷಿ ಭೂಮಿಕಾಗೆ. ಹೀಗಾಗಿ ಗೌತಮ್‌ಗೆ ಧನ್ಯವಾದ ಹೇಳಬೇಕು ಎಂದು ಹೇಳಿ ಭೂಮಿಕಾ ಗೌತಮ್ ನ ಮಹಡಿಯ ಮೇಲೆ ಕರೆದು ಕೃತಜ್ಞತೆಯನ್ನು ಸಲ್ಲಿಸುತ್ತಾರೆ. ಇದನ್ನೆಲ್ಲ ನೋಡಿ ಗೌತಮ್, 'ಭೂಮಿಕಾ ಅವರೇ ನೀವು ಕೃತಜ್ಞತೆ ಸಲ್ಲಿಸುವ ಅಗತ್ಯವಿಲ್ಲ ಇದು ನನ್ನ ಕೆಲಸ ನಾನು ಮಾಡಬೇಕು ಇದರಿಂದ ನಿಮಗೆ ಖುಷಿಯಾಗಿದೆ ಎಂದು ಅಂದುಕೊಂಡಿದ್ದೇನೆ' ಎನ್ನುತ್ತಾನೆ.

Kannada serial Amruthadhaare written update on 06th December

ಭೂಮಿಕಾ ಗೌತಮ್ ಸಂಸಾರದಲ್ಲಿ ಹುಳಿ ಹಿಂಡಲು ಯತ್ನಿಸುತ್ತಿರುವ ಕಿರಣ್

ಇತ್ತ, ಭೂಮಿಕಾ ಹಾಗೂ ಗೌತಮ್ ಸಂಬಂಧವನ್ನು ಹೇಗಾದರೂ ಕೆಡಿಸಲೇಬೇಕೆಂದು ಕಿರಣ್ ಹೊಂಚು ಹಾಕುತ್ತಿರುತ್ತಾನೆ. ಆದರೆ ಕಿರಣ್ ಜೈದೇವನೊಂದಿಗೆ ಸೇರಿಕೊಂಡಿದ್ದಾನೆ. ಗೌತಮ್ ಆಫೀಸಿಗೆ ಬಂದು ಗೌತಮ್ ಬಳಿಯೇ ಕೊಂಚಮಟ್ಟಿಗೆ ಬೇಶ್ ಎಂದೇನಿಸಿಕೊಂಡು ಕೆಲಸಕ್ಕೆ ಸೇರಿಕೊಳ್ಳುತ್ತಾನೆ.

ಜೈದೇವ್ ಪರ ಕೆಲಸ ಮಾಡಲು ಒಪ್ಪಿಕೊಂಡ ಕಿರಣ್

ಕಿರಣ್ ಕೆಲಸಕ್ಕೆ ಸೇರಿಕೊಳ್ಳುವುದು ಜೈದೇವ್‌ಗೆ ಬಹಳ ಮುಖ್ಯ. ಕಿರಣ್‌ನನ್ನು ದಾಳವಾಗಿ ರೂಪಿಸಿಕೊಂಡು ಜೈದೇವ್ ಎಲ್ಲಾ ಕೆಲಸವನ್ನ ಮುಗಿಸಿಕೊಳ್ಳುವ ಆಸೆ. ಆದರೆ ಈ ಬಗ್ಗೆ ಆನಂದ್‌ಗೂ ಕೂಡ ಅಷ್ಟೊಂದು ಅನುಮಾನ ಬರುವುದಿಲ್ಲ. ಇನ್ನೂ ಜೈದೇವ್ ಹಾಗೂ ಕಿರಣ್ ಗೌತಮ್ ದಿವಾನ್ ಚೇಂಬರ್ ನಿಂದ ಹೊರ ಹೋಗುವ ಸಂದರ್ಭದಲ್ಲಿ ಭೂಮಿಕಾ ಕರೆ ಮಾಡುತ್ತಾಳೆ. ಗೌತಮ್ ಹಾಗೂ ಭೂಮಿಕಾ ಬಹಳ ಸಂತಸದಿಂದ ಮಾತನಾಡುತ್ತಾ ಇರುವುದನ್ನು ನೋಡಿದ ಕಿರಣ್ ಹೊಟ್ಟೆ ಉರಿದುಕೊಳ್ಳುತ್ತಾನೆ.

More from Filmibeat

English summary
Amruthadhaare serial 06th December upadate.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X