Amruthadhaare: ಅತ್ತಿಗೆ ಕೈಗೆ ಸಿಕ್ಕಿಬಿದ್ದ ಜೈದೇವ್!: ಆನಂದ್ - ಗೌತಮ್ ಗೆಳೆತನ ಸರಿಪಡಿಸುತ್ತಾಳಾ ಭೂಮಿಕಾ?

By Poorva

ಗೌತಮ್ ತನ್ನ ಬಾಲ್ಯದ ಗೆಳೆಯ ಆನಂದ್‌ನನ್ನು ದೂರ ಮಾಡಿಕೊಂಡಿದ್ದಾನೆ. ಗೌತಮ್ ಮಾಡಿದ ತಪ್ಪಿಗೆ ತಕ್ಕ ಬೆಲೆ ತೆರುತ್ತಿದ್ದಾನೆ. ಗೌತಮ್ ಒದ್ದಾಟ ನೋಡಿ ಭೂಮಿಕಾ ಆನಂದ್‌ರನ್ನು ನೀವು ಬಹಳ ಹಚ್ಚಿಕೊಂಡಿದ್ದೀರಿ. ನೀವು ಯಾಕೆ ಅವರಿಗೆ ಒಂದು ಸಲ ಫೋನ್ ಮಾಡಬಾರದು ಎಂದು ಪ್ರಶ್ನಿಸಿದ್ದಾಳೆ.

ಆದರೆ ಗೌತಮ್ ದಿವಾನ್ ಯಾವುದಕ್ಕೂ ಉತ್ತರ ಕೊಡದೆ ಸುಮ್ಮನಿರುತ್ತಾನೆ. ಬಳಿಕ 'ನಾನು ಮತ್ತೆ ಆನಂದ್ ಚಿಕ್ಕ ವಯಸ್ಸಿನಿಂದಲೂ ಒಟ್ಟಿಗೆ ಬೆಳೆದವರು ಬಹಳ ಅನ್ಯೂನ್ಯವಾಗಿದ್ದೆವು. ಆನಂದ ಬಿಟ್ಟು ಬೇರೆ ಯಾರಿಗೂ ನನ್ನ ಅಳು ಕಾಣಲೇ ಇಲ್ಲ. ಆದರೆ ಆನಂದ್ ಬಳಿಕ ನಿಮ್ಮ ಮುಂದೆಯೇ ನಾನು ಅತ್ತಿರುವುದು ಎಂದು ಗೌತಮ್ ಹೇಳುತ್ತಾನೆ .

kannada-serial-amruthadhaare

ಗೌತಮ್ ಮಾತಿಗೆ ಭೂಮಿಕಾಗೆ ಬಹಳ ನೋವಾಗುತ್ತದೆ. ಹೇಗಾದರೂ ಮಾಡಿ ಆನಂದ್ ಹಾಗೂ ಗೌತಮ್‌ನನ್ನು ಒಂದು ಮಾಡಲೇಬೇಕು ಎಂದು ಯೋಚನೆ ಮಾಡುತ್ತಿರುತ್ತಾಳೆ. ಇನ್ನು ರಾತ್ರಿ ಗೌತಮ್ ರೂಮಿನಲ್ಲಿ ಜಾಸ್ತಿ ಎಸಿ ಹಾಕಿಕೊಂಡು ಮಲಗಿರುತ್ತಾನೆ. ಭೂಮಿಕಾಗೆ ಎಸಿ ಎಂದರೇ ಆಗುವುದಿಲ್ಲ. ಹೀಗಾಗಿ ಬೆಡ್‌ಶೀಟ್ ಹುಡುಕಿಕೊಂಡು ರೂಮಿನಿಂದ ಹೊರ ಬರುತ್ತಾಳೆ.

ಬೆಡ್ ಶೀಟ್ ಹುಟುಕಿ ಗೌತಮ್ ರೂಮಿನಿಂದ ಹೊರಬಂದ ಭೂಮಿಕಾ

ಇದೇನಪ್ಪ ಎಸಿ ರೂಮು ಎಷ್ಟು ತಣ್ಣಗಿದೆ. ಇದರಲ್ಲಿ ಹೇಗಪ್ಪಾ ಗೌತಮ್ ಮಲಗಿಕೊಳ್ಳುತ್ತಾರೆ ಎಂದು ಯೋಚನೆ ಮಾಡುತ್ತಿರುತ್ತಾಳೆ ಆ ಬಳಿಕ ಬೆಡ್ ಶೀಟ್ ಎಲ್ಲಿದೆ ಎಂದು ಕೆಲಸದವರನ್ನು ಕೇಳಿ ಸ್ಟೋರ್‌ರೂಂಗೆ ಹೋಗಲು ತಯಾರಾಗುತ್ತಾಳೆ. ಕೆಲಸದಾದ ನಾನೇ ತಂದುಕೊಡುತ್ತೇನೆ ಎಂದು ಹೇಳುತ್ತಾನೆ ಇದನ್ನು ಕೇಳಿದ ಭೂಮಿಕಾ ಇಲ್ಲಪ್ಪ ನಾನೇ ಹೋಗಿ ತೆಗೆದುಕೊಳ್ಳುತ್ತೇನೆ ನಾಲ್ಕು ಹೆಜ್ಜೆ ಮುಂದೆ ಹೋದರೆ ನನ್ನ ಕಾಲು ಸವೆದು ಹೋಗುವುದಿಲ್ಲ ಎಂದು ಹೇಳುತ್ತಾಳೆ.

kannada-serial-amruthadhaare

ಬಳಿಕ ಆಕೆಯೇ ಬೆಡ್ ಶೀಟ್ ತೆಗೆದುಕೊಳ್ಳಲು ಹೋಗುತ್ತಾಳೆ. ಬೆಡ್ ಶೀಟ್ ತೆಗೆದುಕೊಂಡು ಬರುತ್ತಿರುವಾಗ ಯಾರೂ ಕಬೋರ್ಡ್ ನ ಬಾಗಿಲು ತೆಗೆಯುತ್ತಿರುವ ಸದ್ದು ಕೇಳಿಸುತ್ತದೆ. ಹಾಗೆ ಮೆತ್ತಗೆ ಹಿಂದೆ ತಿರುಗಿ ನೋಡಿದಾಗ ಜೈದೇವ್ ಕಾಣಿಸಿಕೊಳ್ಳುತ್ತಾನೆ. ಇದೇನಪ್ಪಾ ಇಷ್ಟು ಹೊತ್ತಿನಲ್ಲಿ ಕಬೋರ್ಡ್ ಬಾಗಿಲು ತೆಗೆಯುತ್ತಿದ್ದಾನಲ್ಲ ಎಂದು ಯೋಚನೆ ಮಾಡುತ್ತಾಳೆ.

ಜೈ ದೇವ್‌ ಕೈಯಲ್ಲಿ ಚಿನ್ನದ ಸರ, ಭೂಮಿಕಾ ಶಾಕ್

ಬಳಿಕ ಇದೆಲ್ಲಾ ನನಗೆ ಯಾಕೆ ಎಂದು ಮನದಲ್ಲಿ ಅಂದುಕೊಂಡಿರುತ್ತಾಳೆ. ಸ್ವಲ್ಪ ಮುಂದೆ ಹೋಗಿ ಹಿಂದೆ ತಿರುಗಿ ನೋಡುತ್ತಾಳೆ ಆಗ ಆತನ ಕೈಯಲ್ಲಿರುತ್ತದೆ. ಚಿನ್ನದ ಸರ ಕದ್ದಿದ್ದು ಜೈದೇವ್‌? ಇವರು ಸರ ಕದ್ದು, ಆನಂದ್‌ ಅವರ ಮೇಲೆ ಸರ ಕಳ್ಳತನ ಮಾಡಿದ್ದು ಎಂದು ಆಪಾದನೆ ಹೊರೆಸಿದ್ದಾರೆ ಎಂದು ಮನದಲ್ಲಿ ಯೋಚನೆ ಮಾಡುತ್ತಾಳೆ. ಅಷ್ಟಲ್ಲಿ ಜೈದೇವ್ ಕಬೋರ್ಡ್ ನಲ್ಲಿರುವ ಸರದ ಬ್ಯಾಗ್ ತೆಗೆದು ಕಬೋರ್ಡ್ ನ ಮೇಲೆ ಇಟ್ಟು ಅಲ್ಲಿಂದ ಹೊರಡಲು ಅನುವಾಗುತ್ತಾನೆ.

More from Filmibeat

English summary
Amruthadhaare serial 7th November update.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X