Amruthadhaare: ಮಹಿಮಾಗೆ ಸಿಕ್ತು ಬಿಗ್ ಗಿಫ್ಟ್ , ಇತ್ತ ಜೈದೇವ್ ಜಾಲದಲ್ಲಿ ಸಿಲುಕಿದ್ದ ಅಪ್ಪಿಗೆ ಸಿಕ್ಕಿದೆ ಪಾರ್ಥ ಆಸರೆ!

By Poorva

ಗೌತಮ್‌ಗೆ ತನ್ನ ತಂಗಿಯದ್ದೆ ಚಿಂತೆ. ಮಹಿಮಾಗೂ ಕೂಡ ಅಣ್ಣ ಅಂದರೆ ವಿಪರೀತ ಪ್ರೀತಿ. ಅಣ್ಣ ಏನೇ ಕೊಟ್ಟರು ಬಹಳ ಪ್ರೀತಿಯಿಂದ ಮಹಿಮಾಗೆ ಕೊಡುತ್ತಾರೆ. ಇದರಿಂದ ಚಿಕ್ಕ ವಯಸ್ಸಿನಿಂದಲೂ ಮಹಿಮಾಗೆ ಅಣ್ಣ ಎಂದರೆ ಅಚ್ಚುಮೆಚ್ಚು. ಇದೆ ಇದೀಗ ಶಕುಂತಲಾ ದೇವಿಗೆ ಬಹಳ ದೊಡ್ಡ ತಲೆ ನೋವು ತಂದಿಟ್ಟಿದೆ. ಮಗಳ ಬಗ್ಗೆ ಅವಹೇಳನ ಮಾಡುತ್ತಿದ್ದ ಶಕುಂತಲಾ ದೇವಿ ಬಾಯಿ ಮುಚ್ಚಿಸಿ ಬಿಟ್ಟಿದ್ದಾಳೆ ಮಹಿಮಾ. ಗೌತಮ್ ತನ್ನ ತಂಗಿಯ ಸೇಫ್ಟಿ ಗಾಗಿ ಕಾರ್ ಅನ್ನು ಗಿಫ್ಟ್ ನೀಡುತ್ತಾನೆ.

ಇದನ್ನು ನೋಡಿದ ಭೂಮಿಕಾ ಮನೆ ಮಂದಿ ಆ ಗಿಫ್ಟ್ ಅನ್ನು ತೆಗೆದುಕೊಳ್ಳಲು ಹಿಂದೆ ಮುಂದೆ ನೋಡುತ್ತಾರೆ. ಆದರೆ ಮಹಿಮಾಗೆ ಮಾತ್ರ ಆ ಕಾರ್ ಬಹಳ ಇಷ್ಟ ಆಗುತ್ತದೆ. ಆಕೆ ಹೊಸ ಕಾರ್ ನೋಡಿ ಸಕತ್ ಖುಷಿ ಆಗುತ್ತದೆ. ಸೋ ನೈಸ್.. ಅಣ್ಣ ಕಾರು ಬಹಳ ಮುದ್ದಾಗಿ ಚೆನ್ನಾಗಿದೆ ಎಂದು ಹೇಳುತ್ತಾಳೆ. ಕಾರು ನೋಡಿ ಭೂಮಿಕಾ ಮನೆಯವರ ಮೊಗದಲ್ಲಿ ಖುಷಿಯೇ ಇರುವುದಿಲ್ಲ.

Kannada serial Amruthadhaare written update on 10th January

ಕಾರು ಕೀಯನ್ನು ಗೌತಮ್ ಜೀವನ್‌ಗೆ ಕೊಟ್ಟ ವೇಳೆ ಜೀವನ್ ಕಾರು ಕೀ ತೆಗೆದುಕೊಳ್ಳಲು ಹಿಂದೇಟು ಹಾಕುತ್ತಾನೆ. ಆ ವೇಳೆ ಭೂಮಿಕಾ ತನ್ನ ತಂದೆಯ ಬಳಿ "ಅಪ್ಪ, ಗೌತಮ್ ಅವರ ತಂಗಿ ಮೇಲಿನ ಕಾಳಜಿಗಾಗಿ ಕಾರು ಗಿಫ್ಟ್ ಮಾಡುತ್ತಿದ್ದಾರೆ. ಇಂತಹ ಸಮಯದಲ್ಲಿ ಅವಳು ಆರಾಮ ಆಗಿ ಇರಲಿ.. ಎಂಬುವುದು ಬಿಟ್ಟರೆ ಅವರ ಮನದಲ್ಲಿ ಬೇರೆ ಎನು ಇಲ್ಲ ಎಂದು" ಹೇಳುತ್ತಾಳೆ.

ಕಾರು ಕೀ ತೆಗೆದುಕೊಳ್ಳುವಂತೆ ಭೂಮಿ ವಿನಂತಿ

ಭೂಮಿಕಾ ತಂದೆಯ ಬಳಿ ಬಹಳ ಕೇಳಿಕೊಳ್ಳುತ್ತಾಳೆ. ದಯವಿಟ್ಟು ಈ ಕಾರು ಕೀ ತೆಗೆದುಕೊಳ್ಳಿ ಎಂದು ಹೇಳುತ್ತಾಳೆ. ಭೂಮಿಕಾ ತಂದೆ ಎನು ಮಾತನಾಡದೆ ಇದ್ದಾಗ ಭೂಮಿಕಾ ತಾಯಿ ಕೂಡ ಭೂಮಿಕಾ ತಂದೆಯ ಬಳಿ ಕಾರು ಕೀ ತೆಗೆದುಕೊಳ್ಳಲು ಹೇಳುತ್ತಾರೆ. ಆ ಕೂಡಲೇ ಮೆತ್ತಗೆ ನಕ್ಕ ಭೂಮಿಕಾ ತಂದೆ , ಜೀವ ಜೊತೆ ಕಾರು ಕೀ ತೆಗೆದುಕೊ ಎಂದು ಹೇಳುತ್ತಾರೆ. ಗೌತಮ್ ಬಹಳ ಖುಷಿಯಿಂದ ಕಾರು ಕೀಯನ್ನೂ ಜೀವ ಜೊತೆ ಕೊಡುತ್ತಾರೆ .

Kannada serial Amruthadhaare written update on 10th January

ಜೈದೇವ್ ಜಾಲದಲ್ಲಿ ಸಿಲುಕಿಕೊಂಡ ಅಪ್ಪಿ

ಇನ್ನು ಅಪ್ಪಿ ಜೈದೇವ್ ಬೆಸೆದಿರುವ ಜಾಲದಲ್ಲಿ ಸಿಲುಕಿರುತ್ತಾಳೆ. ಆದರೆ ಆಕೆಗೆ ಇದೆಲ್ಲ ತಿಳಿದಿರುವುದಿಲ್ಲ. ಜೈ ದೇವ್ ಜ್ಯೂಸ್‌ಗೆ ಮತ್ತು ಬರುವ ಮದ್ದು ಹಾಕಿ ಅಪ್ಪಿಗೆ ಕೊಟ್ಟು ಗೆಳೆಯರ ಜೊತೆ ಪಾರ್ಟಿ ಮಾಡಲು ಹೋಗುತ್ತಾರೆ. ಇನ್ನು ಅದೇ ಸಮಯಕ್ಕೆ ಫಾರ್ಮ್ ಹೌಸ್ ಗೆ ಪಾರ್ಥ ಬರುತ್ತಾನೆ . ಕಾಲಿಂಗ್ ಬೆಲ್ ಒತ್ತುತ್ತಾ ಇರುವಾಗ ಒಳಗಿದ್ದ ಅಲ್ಲಿ ಓಡಿಕೊಂಡು ಬಂದು ಅಪ್ಪಿ ಬಾಗಿಲು ತೆಗೆಯುತ್ತಾಳೆ.

ಪಾರ್ಥನನ್ನು ನೋಡಿ ಶಾಕ್ ಆದ ಅಪ್ಪಿ

ಹೊರಗಡೆ ಪಾರ್ಥ ನಿಂತು ಇರುವುದನ್ನು ನೋಡಿ ಶಾಕ್ ಆಗುತ್ತದೆ. ಇನ್ನು ಪಾರ್ಥ ಅರೆರೆ ನೀವೇನು ಇಲ್ಲಿ ಎಂದು ಕೇಳುತ್ತಾರೆ. ಆ ವೇಳೆ ನಡೆದ ವಿಚಾರವನ್ನು ಪಾರ್ಥ ಬಳಿ ಹೇಳುತ್ತಾಳೆ ಅಪ್ಪಿ. ಪಾರ್ಥ ಮನದಲ್ಲಿ, ಜೈ ದೇವ್ ಅಪ್ಪಿಯನ್ನು ಯಾಕೆ ಫಾರ್ಮ್ ಹೌಸ್ ಗೆ ಕರೆಸಿಕೊಂಡ ಎಂದು ಯೋಚನೆ ಮಾಡುತ್ತಾ ಇರುತ್ತಾನೆ.

More from Filmibeat

English summary
Amruthadhaare serial written update on 10th January.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X