Amruthadhaare: ಭೂಮಿಕಾ ಮೇಲೆ ಗೌತಮ್‌ಗೆ ಬೇಸರ: ಕಿರಣ್ ಅತಿರೇಕದ ವರ್ತನೆಗೆ ಬಲಿಯಾಗ್ತಾಳಾ ಭೂಮಿ..?
ಅಮೃತದಾರೆ ಧಾರಾವಾಹಿಯಲ್ಲಿ ಭೂಮಿಕಾ ಕಿರಣ್ ಜೊತೆ ಇರುವುದನ್ನು ಗೌತಮ್ ನೋಡುತ್ತಾನೆ. ಈಗಾಗಲೇ ಭೂಮಿಕಾ ಡೈರಿ ತೋರಿಸಿ ಇದರಲ್ಲಿ ನನ್ನ ಹತ್ತಿರದವರು ಬರೆದಂತಹ ಪತ್ರಗಳು ಹಾಗೆಯೇ ಜೀವನದಲ್ಲಿ ನಡೆದಂತಹ ಖುಷಿಯ ಸಂಗತಿ, ಕಹಿಯ ಸಂಗತಿಗಳನ್ನ ಇದರಲ್ಲಿ ಬರೆದು ಇಟ್ಟಿದ್ದೇನೆ ಎಂದು ಗೌತಮ್‌ಗೆ ತೋರಿಸಿದ್ದಾಳೆ.
ಆ ಡೈರಿಯನ್ನು ಮರೆತು ಡ್ರಾನಲ್ಲಿ ಬಿಟ್ಟು ಹೋಗಿರುತ್ತಾರೆ. ಇನ್ನು ಭೂಮಿಕಾ ತನ್ನ ಜೀವನದಲ್ಲಿ ನಡೆದ ಹಳೆಯ ಘಟನೆಯನ್ನು ಗೌತಮ್ ನಿಂದಾ ಮುಚ್ಚಿ ಇಟ್ಟಿರುತ್ತಾರೆ. ಆದರೆ ಇದೀಗ ಡೈರಿ ಮುಖಾಂತರ ಗೌತಮ್‌ಗೆ ಎಲ್ಲಾ ವಿಚಾರಗಳು ತಿಳಿದು ಹೋಗಿದೆ. ಗೌತಮ್‌ಗೆ ತನ್ನ ಹಳೆಯ ಕಹಿ ದಿನಗಳು ತಿಳಿದಿದೆ ಎಂದು ಗೊತ್ತಿರುವುದು ಇಲ್ಲ.

ಇನ್ನು ಭೂಮಿಕಾ ಹಾಗೂ ಗೌತಮ್‌ನನ್ನು ಹೇಗಾದರೂ ಮಾಡಿ ದೂರ ಮಾಡಬೇಕು. ಅವರಿಬ್ಬರ ಜೀವನದಲ್ಲಿ ಬಿರುಕು ತರಬೇಕು ಎಂದು ಜೈದೇವ್ ಈ ಪ್ಲಾನ್ ಮಾಡಿ ಇರುತ್ತಾನೆ. ಅದಕ್ಕೆ ಸರಿಯಾಗಿ ಕಿರಣ್ ಕೂಡ ಕುಣಿಯುತ್ತಾ ಇರುವುದು ಎಲ್ಲರಿಗೆ ಬೇಸರ ಮೂಡಿಸಿದೆ. ಕಿರಣ್ ಮನೆಯಲ್ಲಿ ಹೆಂಡತಿ ಇದ್ದರೂ ಭೂಮಿಕಾ ಹಿಂದೆ ಸುತ್ತುತ್ತಾ ಇರುತ್ತಾರೆ. ಆದರೆ ಭೂಮಿಕಾ ಅದೆಷ್ಟೇ ವಾರ್ನಿಂಗ್ ಮಾಡಿದರು ಕಿರಣ್ ಏನೇನೋ ಹೇಳಿ ಭೂಮಿಕಾಳನ್ನು ಭೇಟಿ ಮಾಡುತ್ತಾನೆ.
ಕಿರಣ್ ಮಾತು ನಂಬಿದ ಭೂಮಿಕಾ
ಕಿರಣ್ ವರ್ತನೆ ಕೊಂಚವೂ ಕೂಡ ಭೂಮಿಕಾಗೆ ಹಿಡಿಸುವುದಿಲ್ಲ. ಇನ್ನು ಇದೀಗ ಕಿರಣ್ ಹಾಗೂ ಭೂಮಿಕಾ ಲವರ್ಸ್ ಆಗಿರುವ ವೇಳೆ ಒಂದು ಬ್ಯಾಂಕ್ ಖಾತೆಯಲ್ಲಿ ಜಂಟಿ ಖಾತೆ ತೆರೆದು ಇರುತ್ತಾರೆ. ಭೂಮಿಕಾಗೆ ಕರೆ ಮಾಡಿ ಜಂಟಿ ಖಾತೆ ಇದೆ ನೀವು ಬಂದರೆ ಮಾತ್ರ ಜಂಟಿ ಖಾತೆಯಿಂದ ಹಣ ತೆಗೆಯಬಹುದು. ನನಗೆ ಬಹಳ ಕಷ್ಟ ಇದೆ ಎಂದೆಲ್ಲ ಹೇಳುತ್ತಾನೆ ಇದನ್ನು ಕೇಳಿದ ಭೂಮಿಕಾಗೆ ಅಯ್ಯೋ ಪಾಪ ಎನಿಸಿ ಬಿಡುತ್ತದೆ. ಆಯ್ತು ಎಂದು ಹೇಳಿ ಕರೆ ಕಟ್ ಮಾಡುತ್ತಾಳೆ.

ಇತ್ತ ಕಿರಣ್‌ಗೆ ಬಹಳ ಖುಷಿ ಭೂಮಿಕಾ ಬರುತ್ತಾಳೆ ಎಂದು. ಇನ್ನು ಗೌತಮ್‌ಗೆ ಕೊಂಚ ತಳಮಳ ಇರುತ್ತದೆ. ಇದೀಗ ಭೂಮಿಕಾ ಗೌತಮ್ ಬಳಿ ಇವತ್ತು ನನಗೆ ಆಫೀಸ್‌ಗೆ ಬರಲು ಆಗುವುದಿಲ್ಲ. ನನ್ನ ಹಳೆಯ ಗೆಳೆಯರನ್ನು ಭೇಟಿ ಆಗೋದಿದೆ ಎಂದು ಹೇಳುತ್ತಾಳೆ. ಗೌತಮ್ ಅದಕ್ಕೆ ಪರ್ಮಿಷನ್ ಕೇಳುವ ಅಗತ್ಯವಿಲ್ಲ ಎಂದೆಲ್ಲ ಹೇಳಿದಾಗ ಭೂಮಿಕಾಗೆ ಖುಷಿ ಆಗುತ್ತದೆ. ಭೂಮಿಕಾ ಮನೆಯಿಂದ ಹೊರಡುತ್ತಾಳೆ .
ಗೌತಮ್ ಗೆ ಹೆಚ್ಚಿದ ತಳಮಳ
ಭೂಮಿಕಾ ಎಲ್ಲಿಗೆ ಹೋಗುತ್ತಾಳೆ ಎಂದು ಗೌತಮ್ ಫಾಲೋ ಮಾಡುತ್ತಾನೆ. ಕೊನೆಗೆ ಕಿರಣ್ ಜೊತೆ ಭೂಮಿಕಾ ಇರುವುದನ್ನು ನೋಡಿ ಗೌತಮ್‌ಗೆ ಇದ್ದ ಅನುಮಾನ ಬಲಗೊಳ್ಳುತ್ತದೆ. ಗೌತಮ್ ಗೆ ಭೂಮಿ ಮೇಲೆ ಅತಿಯಾದ ನಂಬಿಕೆ ಹಾಗೂ ಪ್ರೀತಿ ಕಳಚಿ ಹೋಗುವ ಎಲ್ಲಾ ಸಂದರ್ಭ ಇದು. ಗೌತಮ್‌ಗೆ ಭೂಮಿಕಾ ಬೆಸ್ಟ್ ಹೆಂಡತಿ. ಆದರೆ ಹೆಂಡತಿಯನ್ನು ಅನುಮಾನದಿಂದ ನೋಡುತ್ತಿರುವುದು ವೀಕ್ಷಕರಿಗೆ ಕೂಡ ನೋವಾಗುತ್ತಿದೆ. ಇನ್ನು ಗೌತಮ್ ಮುಂದೇನು ಮಾಡುತ್ತಾನೆ ಎಂಬುವುದನ್ನು ಕಾದು ನೋಡಬೇಕಿದೆ.


Click it and Unblock the Notifications











