Amruthadhaare: ಹಳೆ ಫೋಟೋಗಳನ್ನು ಗೌತಮ್‌ಗೆ ಕಳುಹಿಸಿ ಆಟವಾಡುತ್ತಿರುವ ಕಿರಣ್!
ಗೌತಮ್ ಮನದಲ್ಲಿ ಕಿರಣ್ ನಡವಳಿಕೆ ಹಲವಾರು ಅನುಮಾನಗಳನ್ನು ಸೃಷ್ಟಿ ಮಾಡುತ್ತಿದೆ. ಆತ ಪದೇ ಪದೇ ಗೌತಮ್ ಮೊಬೈಲ್ ಗೆ ಮೆಸೇಜ್ ಕಳುಹಿಸಿ ಗೌತಮ್ ಮನದಲ್ಲಿ ಅಶಾಂತಿ ಏಳಿಸುತ್ತಿದ್ದಾನೆ. ಗೌತಮ್ ಭೂಮಿಕಾ ನಡುವೆ ಈಗಷ್ಟೇ ಸರಿ ಹೋಗುತ್ತಿದೆ ಎನ್ನುವಷ್ಟರಲ್ಲಿ ಕಿರಣ್ ಬಂದು ಎಲ್ಲಾ ಹಾಳು ಮಾಡಿ ಬಿಟ್ಟಿದ್ದಾನೆ.
ಭೂಮಿಕಾ ಮೇಲೆ ಜೈದೇವ್‌ಗೆ ಬಹಳ ಸಿಟ್ಟು. ಆಕೆಯಿಂದಲೆ ಈಗ ನನ್ನ ಜೀವನದಲ್ಲಿ ಇಷ್ಟೊಂದು ಕಷ್ಟ ಆಗಿರುವುದು, ಅಣ್ಣನ ಮುಂದೆ ತಲೆ ತಗ್ಗಿಸುವ ಹಾಗೆ ಮಾಡಿದ್ದಾಳೆ. ಆಕೆಗೆ ತಕ್ಕ ಶಾಸ್ತಿ ಮಾಡಲೇ ಬೇಕು ಎಂದು ಉದ್ದೇಶ ಪೂರ್ವಕವಾಗಿ ಕಿರಣ್‌ನನ್ನು ಆಫೀಸ್‌ಗೆ ಕೆಲಸಕ್ಕೆಂದು ಕರೆದುಕೊಂಡು ಬರುತ್ತಾನೆ.

ಜೈದೇವ್‌ಗೆ ಎಲ್ಲಾ ವಿಚಾರ ತಿಳಿದಿದ್ದರು ಕೂಡ ಭೂಮಿಕಾ ಹಾಗೂ ಕಿರಣ್ ಸಂಬಂಧ ಇನ್ನಷ್ಟು ಹತ್ತಿರ ಆಗಬೇಕು ಇದರಿಂದ ಗೌತಮ್ ದಿವಾನ್‌ಗೆ ಬಹಳಷ್ಟು ಕಷ್ಟ ಆಗಬೇಕು ಎಂದುಕೊಂಡು ಮಾಸ್ಟರ್ ಪ್ಲಾನ್ ಮಾಡಿ ಇರುತ್ತಾನೆ . ಆದರೆ ಕಿರಣ್ ಅದೆಲ್ಲ ಬೇಕಿಲ್ಲ ಆತನಿಗೆ ಬೇಕಿರುವುದು ಭೂಮಿಕಾ ಮಾತ್ರ. ಭೂಮಿಕಾನನ್ನು ಹೇಗಾದರೂ ಪಡೆದೆ ಪಡೆಯಬೇಕು ಎಂದು ಗೌತಮ್‌ಗೆ ಕಿರಿ ಕಿರಿ ಮಾಡತೊಡಗಿದ್ದಾನೆ.
ಗೌತಮ್ ಮಾತಿನ ದಾಟಿಗೆ ಬೆದರಿದ ಭೂಮಿಕಾ
ಗೌತಮ್ ಜೊತೆ ಭೂಮಿಕಾ ಒಂದೇ ಒಂದು ಎಡವಟ್ಟು ಮಾಡಿಕೊಂಡಿದ್ದಾಳೆ. ಅದೇನೆಂದರೆ ಆತನಿಗೆ ನಿಜ ಹೇಳದೆ ಇರುವುದು. ಹೌದು ಕಿರಣ್ ಅದೇನೋ ಸುಳ್ಳು ಹೇಳಿ ಭೂಮಿಕಾನನ್ನು ಮೀಟ್ ಆಗುತ್ತಾನೆ. ಇದಕ್ಕೂ ಮುಂಚೆ ಭೂಮಿಕಾಗೆ ಕರೆ ಮಾಡಿ ಜಂಟಿ ಖಾತೆಯಲ್ಲಿ ಇದ್ದ ಹಣ ತೆಗೆಯುವ ನಾಟಕವಾಡಿ ಕರೆ ಮಾಡುತ್ತಾನೆ. ಕಿರಣ್ ಮಾತು ಕೇಳಿದ ಭೂಮಿಕಾ, ಗೌತಮ್‌ಗೆ ಸುಳ್ಳು ಹೇಳಿರುವುದು ಇಷ್ಟೆಲ್ಲಾ ಅನುಮಾನ ಹುಟ್ಟಿಸಿದೆ.

ತಡವಾಗಿ ಮನೆಗೆ ಬಂದ ಭೂಮಿಕಾ
ಇನ್ನು ಮನೆಗೆ ಬಂದ ಭೂಮಿಕಾ ಕೊಂಚ ಭಯದಲ್ಲಿ ಲೇಟ್ ಆಯಿತು ಸಾರಿ ಎನ್ನುತ್ತಾಳೆ. ಲೇಟ್ ಆಗುತ್ತೆ ಎಂದು ಗೊತ್ತಾಗಿದ್ದರೇ ನಾನೇ ಕರೆದುಕೊಂಡು ಹೋಗಲು ಬರುತ್ತಿದ್ದೆ ಎಂದು ಗೌತಮ್ ಹೇಳುತ್ತಾನೆ. ಆಫೀಸ್ ವಿಚಾರ ಮಾತನಾಡುತ್ತಾ ಇರುವಾಗ ಕಿರಣ್ ಗೌತಮ್ ಮೊಬೈಲ್‌ಗೆ ಮೆಸೇಜ್ ಮಾಡುತ್ತಾನೆ. ಭೂಮಿಕಾ ಹಾಗೂ ಕಿರಣ್ ಮೊದಲು ತೆಗೆಸಿಕೊಂಡಿದ್ದ ಫೋಟೋಗಳನ್ನ ಸೆಂಡ್ ಮಾಡಿರುತ್ತಾನೆ. ಇದನ್ನು ನೋಡಿ ಗೌತಮ್ ಬಹಳ ವಿಚಲಿತನಾಗುತ್ತಾನೆ.
ಭೂಮಿಕಾ ಹುಟ್ಟುಹಬ್ಬ ಸಂಭ್ರಮಕ್ಕೆ ಪ್ಲ್ಯಾನ್!
ಇನ್ನು, ಭೂಮಿಕಾ ಮನೆಯಲ್ಲಿ ಬಿಸಿ ಬಿಸಿ ಚರ್ಚೆ ಆಗುತ್ತಾ ಇದೆ. ಭೂಮಿಕಾ ಹುಟ್ಟು ಹಬ್ಬದ ದಿನ ಬಂದೇ ಬಿಟ್ಟಿತು. ಗೌತಮ್ ಏನೋ ಸರ್ಪ್ರೈಸ್ ಗಿಫ್ಟ್ ಕೊಡುತ್ತೇನೆ ಎಂದು ಹೇಳಿದ್ದಾನೆ. ಇತ್ತ ಭೂಮಿಕಾ ತವರು ಮನೆಯವರು ಗೌತಮ್ ದಿವಾನ್ ಮನೆಗೆ ಬಂದು ಸರ್ಪ್ರೈಸ್ ಕೊಡೋಣ ಎಂದು ಅಂದುಕೊಂಡಿದ್ದಾರೆ.


Click it and Unblock the Notifications











