Amruthadhaare: ಶೀತ, ಕೆಮ್ಮಿನಿಂದ ಬಳಲುತ್ತಿದ್ದ ಗೌತಮ್‌ಗೆ ಭೂಮಿಕಾ ಆರೈಕೆ: ಅಜ್ಜಿ ಫುಲ್ ಖುಷ್

By Poorva

ಅಮೃತಧಾರೆ ಧಾರಾವಾಹಿ ನೋಡುಗರಿಗೆ ಬಹಳ ಖುಷಿ ನೀಡುತ್ತಿದೆ. ಇದೀಗ ಚಳಿಗಾಲ ಆದ ಕಾರಣ ಗೌತಮ್‌ಗೂ ಕೂಡ ಶೀತ ಕೆಮ್ಮು ಎಲ್ಲಾ ಶುರುವಾಗಿಬಿಟ್ಟಿದೆ. ಗೌತಮ್ ಟ್ಯಾಬ್ಲೆಟ್ ತಗೊಳ್ತೀನಿ ಎಂದರೇ ಭೂಮಿಕಾ ಮಾತ್ರ ಅದೆಲ್ಲಾ ಬೇಡ ಕಷಾಯ ಹಾಗೂ ಸ್ಟೀಮ್ ತಗೋಳಿ ಈ ಶೀತ ಕೆಮ್ಮು ಕಫ ಎಲ್ಲ ವಾಸಿಯಾಗುತ್ತೆ ಎಂದು ಹೇಳಿ ಗೌತಮ್‌ಗಾಗಿ ಮನೆಮದ್ದು ಮಾಡುತ್ತಾಳೆ.

ಭೂಮಿಕಾ ಬಳಿ ಗೌತಮ್ ಸೀನಿಕೊಂಡು ಬರುವಾಗ ಇದೇನಪ್ಪಾ ಆಯ್ತು ಗೌತಮ್ ಅವರಿಗೆ ಎಂದು ಯೋಚನೆ ಮಾಡುತ್ತಿರುತ್ತಾಳೆ . ಆಗ ಗೌತಮ್ ಸ್ವಲ್ಪ ಕೋಲ್ಡ್ ಆಗ್ಬಿಟ್ಟಿದೆ ಎಂದು ಹೇಳುತ್ತಾನೆ. ಅದಕ್ಕೆ ಮಗೆ ಮನೆಮದ್ದು ಮಾಡಿಕೊಡುತ್ತೇನೆ, ನೀವು ಯಾವುದೇ ಟ್ಯಾಬ್ಲೆಟ್ ತೆಗೆದುಕೊಳ್ಳುವಂತಿಲ್ಲ ಎನ್ನುತ್ತಾಳೆ. ಆಗ ಗೌತಮ್, ಏನು ಅವೆಲ್ಲ ಎಂದು ಭೂಮಿಕಾ ಬಳಿ ಕೇಳುತ್ತಾನೆ.

Kannada Serial Amruthadhaare written update on 1st December

ಭೂಮಿಕಾ ಕಷಾಯವನ್ನು ಮಾಡಿಕೊಂಡು ಬರಲು ಅಡುಗೆ ಮನೆಗೆ ಹೋಗುತ್ತಾಳೆ. ಇನ್ನು ಕಷಾಯ ಮಾಡಿಕೊಂಡು ಗೌತಮ್ ಬಳಿಗೆ ಬಂದಾಗ ಗೌತಮ್ ಆ ಕಷಾಯವನ್ನು ತೆಗೆದುಕೊಳ್ಳುತ್ತಾನೆ. ಕಷಾಯ ಕೊಂಚ ಖಾರ ಇರುತ್ತದೆ. ಆಗ ಭೂಮಿಕಾ ಕಷಾಯ ಎಂದರೆ ಹಾಗೆಯೇ ನೀವು ಅದರ ಬಗ್ಗೆ ಏನು ಚಿಂತೆ ಮಾಡಬೇಡಿ ನೀವು ಅದನ್ನ ಕುಡಿಯಿರಿ ಎನ್ನುತ್ತಾಳೆ.

ಅಜ್ಜಿಯ ಭಯದಿಂದ ಕಷಾಯ ಕುಡಿದ ಗೌತಮ್

ಹಾಗಾದರೆ ಅಜ್ಜಿಯನ್ನು ಈಗಲೇ ಕರೆಯುತ್ತೇನೆ ಎಂದು ಭೂಮಿಕಾ ಹೇಳುತ್ತಾಳೆ. ಆ ಮಾತು ಕೇಳಿ ಗೌತಮ್ ಮೂಗು ಮುಚ್ಚಿಕೊಂಡು ಕಷಾಯವನ್ನು ಕುಡಿಯುತ್ತಾನೆ. ಆ ಬಳಿಕ ಸ್ಟೀಮ್ ತೆಗೆದುಕೊಳ್ಳಿ ಎಂದು ಭೂಮಿಕಾ ಹೇಳುತ್ತಾಳೆ. ಬಳಿಕ ತೆಗೆದುಕೊಳ್ಳಲು ದೊಡ್ಡ ಪಾತ್ರೆಯನ್ನು ಎಲ್ಲರ ಮುಂದಿಟ್ಟು ಗೌತಮನನ್ನೂ ಕರೆಯಲು ಬರುತ್ತಾಳೆ. ಆಗ ಗೌತಮ್ ಮನೆಯ ಎದುರುಗಡೆ ಇರುವ ಚಾವಡಿ ಬಳಿ ಬಂದು ಎನು ಇದೆಲ್ಲ.. ಸ್ಟೀಮ್ ತೆಗೆದುಕೊಳ್ಳಲು ನನಗೆ ಇಷ್ಟ ಇಲ್ಲ ಎಂದು ಹೇಳಿದಾಗ ಭೂಮಿಕಾ ಗೌತಮ್ ಮಾತನ್ನು ಕೇಳದೇ ಸ್ಟೀಮ್ ತೆಗೆದುಕೊಳ್ಳಬೇಕು ಎಂದು ಒತ್ತಾಯ ಮಾಡುತ್ತಾಳೆ.

Kannada Serial Amruthadhaare written update on 1st December

ಮನೆ ಮಂದಿಯ ಎದುರು ಗೌತಮ್ ಸ್ಟೀಮ್ ಡ್ರಾಮಾ!

ಸ್ಟಿಮ್ ತೆಗೆದುಕೊಳ್ಳಲು ಬಂದ ಗೌತಮ್ ಮನೆ ಮಂದಿಯನ್ನೆಲ್ಲ ನೋಡಿ ಆಶ್ಚರ್ಯಪಡುತ್ತಾನೆ. ಇದೇನು ಎಲ್ಲರೂ ಸೇರಿ ಬಿಟ್ಟಿದ್ದೀರಿ ಎಂದಾಗ ಭೂಮಿಕಾ ಹೇಳುತ್ತಾಳೆ. ನಿಮ್ಮನ್ನು ಸ್ಟೀಮ್ ತೆಗೆದುಕೊಳ್ಳಿ ಎಂದು ಹೇಳಿದರೆ ನೀವು ತೆಗೆದುಕೊಳ್ಳುವುದಿಲ್ಲ ಅದಕ್ಕಾಗಿ ಇವರನ್ನೆಲ್ಲ ನಾನೇ ಬರಲು ಹೇಳಿದೆ .ನೀವೆನಾದರೂ ಸ್ಟೀಮ್ ತೆಗೆದುಕೊಳ್ಳದೆ ಓಡಿ ಹೋದರೆ ನನ್ನಿಂದ ಅದನ್ನು ಹ್ಯಾಂಡಲ್ ಮಾಡಲು ಆಗುವುದಿಲ್ಲ ಅದಕ್ಕಾಗಿ ಅವರನ್ನೆಲ್ಲ ಕರೆದಿದ್ದೇನೆ ಎಂದು ಹೇಳುತ್ತಾಳೆ.

ಅಜ್ಜಿಯ ಮಾತಿಗೆ ಭಯಗೊಂಡ ಗೌತಮ್

ಆಗ ಪಕ್ಕದಲ್ಲೇ ಇದ್ದ ಅಜ್ಜಿ ಹೇಳುತ್ತಾರೆ ಏನಿದು ಗುಂಡು ಶೀತ ಆಗಿ ಬಿಟ್ಟಿದೆ. ಸ್ಟೀಮ್ ತೆಗೆದುಕೋ ಎಂದು ಹೇಳಿದಾಗ ಕೊಂಚ ಸ್ಟೀಮ್ ತೆಗೆದುಕೊಂಡು ಆ ಬಳಿಕ ನನಗೆ ಆಗುವುದೇ ಇಲ್ಲ ಎನ್ನುತ್ತಾನೆ. ಆ ಬಳಿಕ ಭೂಮಿಕಾ ಮಾತಿಗೆ ಕಟ್ಟುಬಿದ್ದು ಸರಿ ಎಂದು ಹೇಳಿ ಸ್ಟೀಮ್ ತೆಗೆದುಕೊಳ್ಳುತ್ತಾನೆ. ಇನ್ನು ಭೂಮಿಕಾ ಮಾತು ಕೇಳಲು ಶುರು ಮಾಡಿದ ಗೌತಮ್‌ನನ್ನು ನೋಡಿ ಶಕುಂತಲಾ ದೇವಿ ಮನದಲ್ಲಿ ನನಗೆ ಸ್ಪರ್ಧೆ ನೀಡಲು ಒಬ್ಬಳು ಬಂದೆ ಬಿಟ್ಟಳು ಎಂದು ಯೋಚನೆ ಮಾಡುತ್ತಾಳೆ.

More from Filmibeat

English summary
Amruthadhaare serial December 1st episode update.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X