Amruthadhaare: ಮಹಿಮಾ ಮಾಡಿದ ಎಡವಟ್ಟು ಗೌತಮ್‌ಗೆ ತಿಳಿದರೆ ಗತಿಯೇನು?
ಎಲ್ಲರ ಮನದಲ್ಲಿ ಮೂಡಿದ್ದ ನಗು ಮಾಸಿಹೋಗಿದೆ. ಮನೆಗೆ ಮಗು ಬರುತ್ತದೆ ಎನ್ನುವ ಆಸೆ ಕೈಬಿಟ್ಟಾಗಿದೆ. ಭೂಮಿಕಾ ಕುಟುಂಬದ ಕನಸು ನುಚ್ಚುನೂರಾಗಿದೆ . ಸೀಮಂತದ ಸಂಭ್ರಮದಲ್ಲಿ ಇರಬೇಕಾದ ಮನೆ ಶೋಕ ಸಾಗರದಲ್ಲಿ ಮುಳುಗಿದೆ. ಮಹಿಮಾ ಮಾಡಿದ ಕೆಲಸಕ್ಕೆ ಮನೆಯವರೆಲ್ಲ ನೋವು ಅನುಭವಿಸಿದ್ದಾರೆ. ಆದರೆ ಮಹಿಮ ತಾನಾಗಿಯೇ ಈ ಮಗುವನ್ನು ತೆಗೆಸಿದ್ದು ಎಂದು ಯಾರ ಬಳಿಯೂ ಕೂಡ ಹೇಳದೆ ಗುಟ್ಟಾಗಿ ಇಟ್ಟಿದ್ದಾಳೆ.
ಎಲ್ಲರ ಎದುರು ಸುಳ್ಳು ನಾಟಕವನ್ನು ಆಡಿ ಆಕ್ಸಿಡೆಂಟ್ ಆಗಿ ಮಗು ಅಬಾರ್ಟ್ ಆಗಿದೆ ಎಂದು ಅಂದುಕೊಂಡು ಇರುತ್ತಾರೆ. ಭೂಮಿಕಾ ತನ್ನ ಮನೆಯವರಿಗೆ ಮಹಿಮಾಗೆ ಆಕ್ಸಿಡೆಂಟ್ ಆಗಿ ಮಗು ಕಳೆದುಕೊಂಡ ವಿಚಾರವನ್ನು ಹೇಳುತ್ತಾಳೆ. ಇದನ್ನು ಕೇಳಿದ ಭೂಮಿಕಾ ತಾಯಿಗೆ ತಲೆ ಚಕ್ಕರ್ ಬರುತ್ತದೆ. ಮನೆಯಲ್ಲಿ ಇಷ್ಟೆಲ್ಲ ಖುಷಿಯ ಸಂಭ್ರಮ ಮನೆ ಮಾಡಿತ್ತು. ಅದು ಕ್ಷಣ ಮಾತ್ರಕ್ಕೆ ಆರಿ ಹೋಯಿತಲ್ಲ ಎಂದು ಬಹಳ ಅಳುತ್ತಾರೆ.

ಚಂದ್ರ ಶೇಖರ್‌ಗೆ ಈ ಸುದ್ದಿ ಕೇಳಿ ಬರ ಸಿಡಿಲು ಬಡಿದ ಹಾಗೆ ಆಗುತ್ತದೆ. ಆದರೆ ಅವರೆಲ್ಲರಿಗಿಂತ ಹೆಚ್ಚು ದುಃಖ ಪಟ್ಟಿದ್ದು ಜೀವಾ. ತನ್ನ ಮಗುವಿನ ಬರುವಿಕೆಗಾಗಿ ಕಾತರದಿಂದ ಕಾಯುತ್ತ ಇದ್ದ. ಆದರೆ ವಿಚಾರ ತಿಳಿದು ಜೀವಾ ಬಹಳ ದುಃಖ ಪಡುತ್ತಾನೆ. ಆದರೆ ಈ ಸಂದರ್ಭ ಮನೆ ಮಂದಿಗೆ ಭೂಮಿಕಾ ಸಮಾಧಾನ ಮಾಡುತ್ತಾಳೆ. ನಡೆಯಬೇಕಾಗಿದ್ದ ಸೀಮಂತ ಕಾರ್ಯ ಮಾಡೋಣ, ಅದನ್ನು ನಿಲ್ಲಿಸುವುದು ಬೇಡ ಎಂದು ಭೂಮಿಕಾ ಹೇಳುತ್ತಾಳೆ.
ಮಹಿಮಾ ಗೆ ನಡೆಯಿತು ಸೀಮಂತ ಶಾಸ್ತ್ರ
ಇನ್ನು ಸೀಮಂತ ಶಾಸ್ತ್ರವನ್ನ ಮಹಿಮೆಗೆ ಮನೆಯವರೆಲ್ಲ ಸೇರಿ ಮಾಡುತ್ತಾರೆ. ಆದರೆ ಮನೆಯವರೆಲ್ಲ ಬಹಳ ಭಾವುಕರಾಗಿರುತ್ತಾರೆ. ಇನ್ನು ಗೌತಮ್ ಮಾತ್ರ ತನ್ನ ನೋವನ್ನು ಯಾರ ಬಳಿಯೂ ಹೇಳಲಾಗದೆ ನೋವನ್ನ ನುಂಗಿಕೊಂಡಿರುತ್ತಾನೆ. ಕಾರ್ಯಕ್ರಮ ಮುಗಿಸಿ ಮನೆಗೆ ಬಂದ ಗೌತಮ್ ಬಹಳ ಬೇಸರದಿಂದ ಇರುತ್ತಾನೆ. ಇದನ್ನು ನೋಡಿದ ಭೂಮಿಕಾ ಸಮಾಧಾನ ಮಾಡುತ್ತಾಳೆ. ಆದರೆ ಗೌತಮ್ ಅದು ಯಾವುದನ್ನು ಕೇಳುವ ಸ್ಥಿತಿಯಲ್ಲಿ ಇರುವುದಿಲ್ಲ. ಕೊನೆಗೆ ಗೌತಮ್‌ಗೆ ಸಮಾಧಾನ ಮಾಡಿ ಮಾಡಿ ಭೂಮಿಕಾಗೆ ಸಾಕಾಗಿ ಹೋಗುತ್ತದೆ.
ಭೂಮಿಕಾಗೆ ಧನ್ಯವಾದ ತಿಳಿಸಿದ ಗೌತಮ್
ಮರುದಿನ ಗೌತಮ್, ಭೂಮಿಕಾಳನ್ನು ಕರೆದು ಧನ್ಯವಾದ ಹೇಳುತ್ತಾನೆ. ಇನ್ನು ಮಹಿಮಾಗೆ ಶಕುಂತಲಾ ದೇವಿ ಎಚ್ಚರಿಕೆ ನೀಡುತ್ತಾಳೆ. ಮಹಿಮಾ, ಮಗುವಿಗೆ ನಿನಾಗಿಯೇ ಏನಾದರು ಮಾಡಿದ್ದರೆ ನಾನು ಯಾವತ್ತೂ ಸುಮ್ಮನೆ ಇರುವುದು ಇಲ್ಲ. ಹಾಗೆಯೇ ಇದಕ್ಕೆ ಯಾರೇ ಕುಮ್ಮಕ್ಕು ನೀಡಿದರು ನಾನು ಸುಮ್ಮನೆ ಬಿಡುವುದು ಇಲ್ಲ ಎಂದು ಮಹಿಮಾಗೆ ಕರೆ ಮಾಡಿ ಎಚ್ಚರಿಸುತ್ತಾಳೆ. ಆ ವೇಳೆ ಮಹಿಮಾ ಅಕ್ಕನಿಗೆ ಬಹಳ ಭಯ ಆಗುತ್ತದೆ. ಅಯ್ಯೋ ಎಲ್ಲಾದರೂ ಮಹಿಮಾ ತನ್ನ ಹೆಸರನ್ನು ಹೇಳಿ ಬಿಟ್ಟರೆ ಅಮ್ಮ ಮಾತ್ರ ನನ್ನನ್ನು ಸುಮ್ಮನೆ ಬಿಡುವುದು ಇಲ್ಲ ಎಂದು ಬಹಳ ಗಾಬರಿಯಿಂದ ಇರುತ್ತಾಳೆ.

ಅರ್ಪಿತಾ - ಪಾರ್ಥ ನಡುವೆ ಪ್ರೀತಿ
ಇನ್ನು ಗೌತಮ್ ತಮ್ಮ ಪಾರ್ಥ ಹಾಗೂ ಭೂಮಿಕಾ ತಂಗಿ ಅರ್ಪಿತಾ ನಡುವೆ ಮಾತ್ರ ಪ್ರೀತಿ ಚಿಗುರಿದೆ . ಅರ್ಪಿತಾ ನೆನಪಲ್ಲಿ ಇರುವ ಪಾರ್ಥ, ಹೇಗಾದರೂ ಮಾಡಿ ಅತ್ತಿಗೆ ತಂಗಿಗೆ ಮೆಸೇಜ್ ಮಾಡೋಣ ಎಂದುಕೊಂಡು ಮೆಸೇಜ್ ಮಾಡುತ್ತಾನೆ. ಆ ಕ್ಷಣವೇ ಅರ್ಪಿತಾ ರಿಪ್ಲೈ ಕೂಡ ಮಾಡುತ್ತಾಳೆ. ಇಬ್ಬರು ಕೂಡ ಪ್ರೀತಿಯಿಂದ ಕುಶಲೋಪರಿ ಮಾತನಾಡುತ್ತಾ ಇರುತ್ತಾರೆ. ಬಳಿಕ ಮನೆಯ ವಾತಾವರಣ ಮೊದಲಿನಂತೆ ಮಾಡಬೇಕು ಎಂದು ಇಬ್ಬರು ಅಂದುಕೊಂಡು ಇರುತ್ತಾರೆ. ಇಬ್ಬರ ನಡುವಿನ ಗೆಳೆತನ ಪ್ರೀತಿ ಆಗುತ್ತಿರುವುದು ಮಾತ್ರ ಸತ್ಯ.


Click it and Unblock the Notifications











