Amruthadhaare: ಹುಟ್ಟಿ ಬೆಳೆದ ಮನೆ ಬಿಟ್ಟು ಬರುವ ಹೆಣ್ಣು, ಹೆಸರಿನ ಪಕ್ಕವೂ ಅಪ್ಪನನ್ನು ಉಳಿಸಿಕೊಳ್ಳೋ ಹಾಗಿಲ್ವಾ?

By Poorva

ಅಮೃತಧಾರೆ ಧಾರವಾಹಿಯಲ್ಲಿ ಇತ್ತೀಚಿನ ದಿನಗಳಲ್ಲಿ ಭೂಮಿಕಾ ತನ್ನ ತಂದೆಯನ್ನು ಬಹಳ ಮಿಸ್ ಮಾಡಿಕೊಳ್ಳುತ್ತಿದ್ದಾಳೆ. ಹಾಗೆಯೇ ಮದುವೆಯಾದ ಬಳಿಕ ತನ್ನ ತವರು ಮನೆಗೆ ಹೋಗುವುದೇ ಕಡಿಮೆಯಾಗಿ ಬಿಟ್ಟಿದೆ. ಅದರಲ್ಲೂ ಭೂಮಿಕಾ ಸದಾಶಿವ ಎನ್ನುವ ಹೆಸರಲ್ಲಿ ಭೂಮಿಕಾ ಅಪ್ಪನೂ ಕೂಡ ಸೇರಿಕೊಂಡಿದ್ದಾಳೆ.

ಅಪ್ಪ ಎಂದರೆ ಭೂಮಿಕಾಗೆ ಬಹಳ ಪ್ರೀತಿ, ಅಪ್ಪನ ಮುದ್ದಿನ ಮಗಳಾಗಿರುವ ಭೂಮಿಕಾಗೆ ಇದೀಗ ಮತ್ತೊಂದು ಸವಾಲು ಎದುರಾಗಿದೆ. ಭೂಮಿಕಾ ಹೆಸರು ಮುಂದೆ ಇರುವ ಸದಾಶಿವ ಎನ್ನುವುದಕ್ಕಿಂತ ಗೌತಮ್ ದಿವಾನ್ ಇದ್ದರೆ ಚೆನ್ನ ಎಂದು ಅಜ್ಜಿ ಹೇಳುತ್ತಿರುತ್ತಾರೆ . ಅಜ್ಜಿಯ ಮಾತಿನ ಪ್ರಕಾರ ಇದೀಗ ಹಾಗೆಯೇ ನಡೆಯುತ್ತಿದೆ. ಅಜ್ಜಿ ಮಾತಿಗೆ ಯಾರು ಕೂಡ ಎದುರಾಡುವ ಪರಿಸ್ಥಿತಿಯಲ್ಲಿ ಇಲ್ಲ. ಭೂಮಿಕಾ ಕೂಡ ಅಜ್ಜಿ ಹೇಳಿದ ಪ್ರಕಾರವಾಗಿ ನಡೆದುಕೊಳ್ಳಬೇಕಾಗುತ್ತದೆ.

 Kannada Serial Amruthadhaare written update on 4th December

ಅಜ್ಜಿ ಮನೆಗೆ ಲಾಯರ್ ಅನ್ನು ಕರೆಸುತ್ತಾರೆ. ವಕೀಲರನ್ನು ನೋಡಿದ ಶಕುಂತಲಾ ದೇವಿ ಇವರನ್ನು ಯಾಕೆ ಕರೆಸಿದ್ದಿರಾ ಎಂದು ಕೇಳಿದಾಗ ಭೂಮಿಕಾ ಹೆಸರಲ್ಲಿ ಭೂಮಿಕಾ ಸದಾಶಿವ್ ಎಂದು ಎಲ್ಲಾ ಕಡೆಯೂ ಆ ಹೆಸರೇ ಇದೆ. ಆದರೆ ಇದೀಗ ಭೂಮಿಕಾ ಗೌತಮನನ್ನೂ ಮದುವೆಯಾಗಿದ್ದಾಳೆ. ಅದಕ್ಕೆ ಭೂಮಿಕಾ ಗೌತಮ್ ದಿವಾನ್ ಎಂದು ಹೆಸರು ಬೇರೆ ಚೇಂಜ್ ಮಾಡಬೇಕಾಗಿತ್ತು. ಆದರೆ ಅದಕ್ಕಾಗಿ ವಕೀಲರನ್ನು ಕರೆಸಿದ್ದೇನೆ ಎಂದು ಹೇಳುತ್ತಾರೆ.

ಅತ್ತೆ ಮಾತಿಗೆ ಎದುರಾಡದ ಶಕುಂತಲಾ ದೇವಿ

ಗೌತಮ್ ಹೆಂಡತಿಯ ಹೆಸರು ಭೂಮಿಕಾ ಸದಾಶಿವ ಎಂದಿದೆ. ಅದನ್ನು ಭೂಮಿಕಾ ಗೌತಮ್ ದಿವಾನ್ ಎಂದು ಬದಲಾಯಿಸಿ. ಆಕೆಯ ಯಾವುದೆಲ್ಲ ಡಾಕ್ಯುಮೆಂಟ್ ಇದೆಯೋ ಅದೆಲ್ಲದರಲ್ಲಿ ಭೂಮಿಕಾ ಗೌತಮ್ ದಿವಾನ್ ಎಂದು ಇರಲಿ ಎಂದು ಹೇಳಿದಾಗ ಲಾಯರ್ ಆಯಿತು ಎನ್ನುತ್ತಾರೆ. ಕೊನೆಗೆ ಭೂಮಿಕಾಳನ್ನು ಕರೆದ ಅಜ್ಜಿ, 'ಭೂಮಿಕಾ ನಿನ್ನ ಹೆಸರನ್ನು ನಾನು ಭೂಮಿಕಾ ಗೌತಮ್ ದಿವಾನ್ ಎಂದು ಬದಲಿಸುತ್ತಿದ್ದೇನೆ. ಅದಕ್ಕೆ ಲಾಯರ್ ಬಂದಿದ್ದಾರೆ' ಎಂದು ಹೇಳಿದಾಗ ಭೂಮಿಕಾ ಮುಖ ಬಾಡಿ ಹೋಗುತ್ತದೆ.

 Kannada Serial Amruthadhaare written update on 4th December

ಅಜ್ಜಿಯ ನಿರ್ಧಾರಕ್ಕೆ ನೊಂದ ಭೂಮಿಕಾ

ಅಜ್ಜಿಯ ಮಾತು ಕೇಳಿ ಭೂಮಿಕಾಗೆ ಬಹಳ ಬೇಸರ ಉಂಟಾಗುತ್ತದೆ. ಯಾವತ್ತೂ ತನ್ನ ತಂದೆಯ ಹೆಸರು ನನ್ನ ಹೆಸರಲ್ಲಿ ತಳುಕು ಹಾಕಿಕೊಂಡು ಇದ್ದರೆ ಒಳ್ಳೆಯದು. ಭೂಮಿಕಾ ಸದಾಶಿವ ಎಂದು ಕರೆಯುವಾಗ ತನ್ನ ತಂದೆಯೇ ಜೊತೆಗೆ ಇದ್ದ ಹಾಗೆ ಆಗುತ್ತದೆ ಎಂದುಕೊಂಡಿದ್ದಾಳೆ. ಈ ವಿಚಾರ ಗೌತಮ್‌ಗೂ ಕೂಡ ತಿಳಿದಿದೆ. ಅಜ್ಜಿಯ ನಿರ್ಧಾರದಿಂದ ಎನು ಮಾಡಬೇಕು ಎಂದು ತೋಚದೇ ಬಹಳ ಬೇಸರ ಮಾಡಿಕೊಂಡು ' ಹುಟ್ಟಿ ಬೆಳೆದ ಮನೆ ಬಿಟ್ಟು ಬರುವ ಹೆಣ್ಣು, ಹೆಸರಿನ ಪಕ್ಕವೂ ಅಪ್ಪನನ್ನು ಉಳಿಸಿಕೊಳ್ಳೋ ಹಾಗಿಲ್ವಾ?' ಎಂದು ಮನದಲ್ಲೇ ಅಂದುಕೊಳ್ಳುತ್ತಾಳೆ.

ಅಜ್ಜಿ ಮಾತಿಗೆ ಸುಮ್ಮನಾದ ಗೌತಮ್

ಇತ್ತ ಭೂಮಿಕಾ ಬಹಳ ಬೇಸರ ಮಾಡಿಕೊಂಡರೆ ಶಕುಂತಲಾ ದೇವಿ ಮಾತ್ರ ಮೂಗು ಮುರಿಯುತ್ತಾ ಇರುತ್ತಾಳೆ. ಇಷ್ಟು ಬೇಗ ಇದೆಲ್ಲ ಮಾಡಬೇಕಾಗಿತ್ತಾ ಎಂದು ಕೇಳಿದಾಗ ಗೌತಮ್ ಅಜ್ಜಿ ಸುಮ್ಮನಾಗಿಸುತ್ತಾರೆ. ಶಕುಂತಲಾ ದೇವಿಗೂ ಕೂಡ ಎದುರಾಗಿ ಮಾತನಾಡಲು ಸಾಧ್ಯವಾಗುವುದಿಲ್ಲ.

More from Filmibeat

English summary
Amruthadhaare serial December 4th episode update.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X