Amruthadhaare Serial: ಅಜ್ಜಿಯ ಶಾಸ್ತ್ರ ಕೇಳಿ ಪರದಾಡುತ್ತಿರುವ ಗೌತಮ್-ಭೂಮಿಕಾ.. ಮುಂದೇನು?
'ಅಮೃತಧಾರೆ' ಧಾರಾವಾಹಿ ಶುರುವಿನಲ್ಲಿ ಬಹಳ ಪಾಪ್ಯುಲರ್ ಆಗಿತ್ತು. ಆದರೆ, ಈಗ ಕಥೆಯನ್ನು ಸ್ವಲ್ಪ ಎಳೆಯುತ್ತಿದ್ದಾರೆ ಎಂದು ಎನಿಸುತ್ತಿದೆ. ಎರಡೆರಡು ಮದುವೆ ಸಂಭ್ರಮದಲ್ಲಿರುವ ಧಾರಾವಾಹಿಯ ಕಥೆ ಸ್ವಲ್ಪ ಸ್ಲೋ ಆಗಿದೆ.
ಇನ್ನು ಮನೆಯಲ್ಲಿ ಇನ್ವಿಟೇಷನ್ ಕಾರ್ಡ್ ಪ್ರಿಂಟ್ ಆಗಿದೆ. ಎಲ್ಲರಿಗೂ ಆಮಂತ್ರಣ ಪತ್ರಿಕೆ ನೀಡುವ ಮುನ್ನ ದೇವಸ್ಥಾನಕ್ಕೆ ಕೊಟ್ಟು ಪೂಜೆ ಮಾಡಿಸಲು ಎರಡೂ ಮನೆಯವರು ಮುಂದಾಗಿದ್ದಾರೆ.

ಇದಾದ ಬಳಿಕ ಹುಡುಗ-ಃಉಡುಗಿ ಮನೆಯವರನ್ನು ಮದುವೆಗೆ ಆಹ್ವಾನಿಸಿ ಬಳಿಕ ಮುಂದಿನ ಕಾರ್ಯಗಳನ್ನು ಮಾಡಬೇಕು ಎಂದು ನಿರ್ಧಾರಿಸಿದ್ದಾರೆ.
ಶಕುಂತಲಾ ಜೀವ ಹಿಂಡುತ್ತಾಳಾ ಮಾನ್ಯ?
ಮಾನ್ಯ ಶತಾಯಗತಾಯ ಗೌತಮ್ ನನ್ನು ಭೇಟಿ ಮಾಡಿ ಸತ್ಯವನ್ನೆಲ್ಲಾ ಹೇಳಬೇಕು ಎಂದು ಒದ್ದಾಡುತ್ತಿದ್ದಾಳೆ. ಆದರೆ, ಗೌತಮ್‌ಗೂ ಮಾನ್ಯ ಮೇಲೆ ಕೋಪ ಇರುವ ಕಾರಣ ಸಾಧ್ಯವಾಗುತ್ತಿಲ್ಲ. ಅಲ್ಲದೇ, ಶಕುಂತಲಾ ಕೂಡ ಮನೆಯ ಸುತ್ತಾ ಟೈಟ್ ಸೆಕ್ಯೂರಿಟಿ ಹಾಕಿದ್ದಾಳೆ. ಮಾನ್ಯ ಏನೇ ಪ್ರಯತ್ನ ಮಾಡಿದರೂ ಗೌತಮ್ ನನ್ನು ಭೇಟಿ ಮಾಡಿ ಸತ್ಯ ಹೇಳಲು ಆಗುತ್ತಿಲ್ಲ. ಅದು ಯಾವ ಸತ್ಯ ಏನು ವಿಚಾರ ಎಂದು ಯಾರಿಗೂ ಗೊತ್ತಿಲ್ಲ. ಆದರೆ, ಶಕುಂತಲಾ ಜೀವವನ್ನು ಮಾನ್ಯ ಹಿಂಡುತ್ತಿದ್ದಾಳೆ. ಅವಳನ್ನು ಹೇಗೆ ಗೌತಮ್‌ದ ದೂರ ಇಡುವುದು ಎಂಬುದೇ ಶಕುಂತಲಾಳಿಗೆ ದೊಡ್ಡ ತಲೆ ನೋವಾಗಿದೆ.
ಫೋಟೋಶೂಟ್ ಒದ್ದಾಟ ಮುಗೀತು
ಇತ್ತ ಎಲ್ಲರೂ ಫೋಟೋಶೂಟ್ ಖುಷಿಯಲ್ಲಿದ್ದರೆ, ಗೌತಮ್ ಮತ್ತು ಭೂಮಿಕಾಳಿಗೆ ಇದು ಒದ್ದಾಟವಾಗಿದೆ. ಪಕ್ಕ ಪಕ್ಕದಲ್ಲಿ ನಿಲ್ಲಲು ಕೂಡ ಇಬ್ಬರು ಮುಜುಗರ ಪಟ್ಟುಕೊಳ್ಳುತ್ತಿದ್ದರು. ಇಬ್ಬರೂ ಅಜ್ಜಿಯಂದಿರು ಸೇರಿಕೊಂಡು ಫೋಟೋಗೆ ಹೇಗೆ ಪೋಸ್ ಕೊಡಬೇಕು ಎಂದು ಹೇಳಿಕೊಡುತ್ತಾರೆ. ಆದರೂ ಕೂಡ ಗೌತಮ್ ಮತ್ತು ಭೂಮಿಕಾ ಬಹಳ ಮುಜುಗರ ಪಟ್ಟುಕೊಳ್ಳುತ್ತಾರೆ. ನಂತರ ಇಬ್ಬರ ಬೇರೆ ಬೇರೆ ಫೋಟೋವನ್ನು ಎಡಿಟ್ ಮಾಡಿ ಒಟ್ಟಿಗೆ ಇರುವಂತೆ ತೋರಿಸುತ್ತಾರೆ.

ಶಾಸ್ತ್ರದ ಹೆಸರಲ್ಲಿ ಜೋಡಿಗಳ ಪರದಾಟ
ಇನ್ನು ಶಾಸ್ತ್ರದ ಹೆಸರಿನಲ್ಲಿ ಗೌತಮ್ ಮತ್ತು ಭೂಮಿಕಾ ಪರದಾಡುವಂತಾಗಿದೆ. ಮದುವೆಯ ಇನ್ವಿಟೇಷನ್ ಬಂದಿದ್ದು, ಎಲ್ಲರಿಗೂ ಹಂಚುವ ಮುನ್ನ ದೇವಸ್ಥಾನಕ್ಕೆ ಹೋಗಬೇಕು ಎಂದು ಗೌತಮ್ ಅಜ್ಜಿ ಹೇಳುತ್ತಾರೆ. ಹೀಗಾಗಿ ಎರಡೂ ಜೋಡಿಗಳನ್ನು ದೇವಸ್ಥಾನಕ್ಕೆ ಕರೆದುಕೊಂಡು ಹೋಗುವ ಅಜ್ಜಿ. ಗೌತಮ್ ಮತ್ತು ಜೀವ ಇಬ್ಬರೂ ಭೂಮಿಕಾ ಮತ್ತು ಮಹಿಮಾಳನ್ನು ಎತ್ತಿಕೊಂಡು ದೇವಸ್ಥಾನಕ್ಕೆ ಬರಬೇಕು ಎಂದು ಅಜ್ಜಿ ಶಾಸ್ತ್ರದ ಬಗ್ಗೆ ಹೇಳುತ್ತಾರೆ. ಇದು ಜೀವನ್ ಹಾಗೂ ಮಹಿಮಾಳಿಗೆ ಖುಷಿ ಕೊಡುತ್ತದೆ. ಆದರೆ, ಗೌತಮ್ ಮತ್ತು ಭೂಮಿಕಾರಿಗೆ ಒದ್ದಾಡುವಂತೆ ಮಾಡುತ್ತದೆ. ಗೌತಮ್ ಎಷ್ಟೇ ಹೇಳಿದರೂ ಅವರ ಅಜ್ಜಿ ಇಲ್ಲ ಈ ಶಾಸ್ತ್ರ ನಡೆಯಲೇಬೇಕು ಎಂದು ಹೇಳುತ್ತಾರೆ.
ಒಂದಾಗುತ್ತಾರಾ ಗೌತಮ್-ಭೂಮಿಕಾ?
ಇದು ಭೂಮಿಕಾಳಿಗೆ ಕೋಪ ಬರಿಸುತ್ತದೆ. ಭುಮಿಕಾ ಗೌತಮ್ ಗೆ ನನ್ನ ಕೈನಲ್ಲಿ ಆಗೋದಿಲ್ಲ. ನಿಮ್ಮ ಅಜ್ಜಿ ಮಾತಿಗೆ ಹೂ ಅನ್ನೋದು ಬಿಟ್ಟು ಆಗಲ್ಲ ಎಂದು ಹೇಳಿ ಎನ್ನುತ್ತಾಳೆ. ಆದರೆ, ಗೌತಮ್ ಗೆ ಅಜ್ಜಿ ಈ ಶಾಸ್ತ್ರ ಮಾಡದಿದ್ದರೆ, ಇಲ್ಲಿಂದಲೇ ಹೋಗುವುದಾಗಿ ಬೆದರಿಸಿದ್ದಾರೆ. ಆನಂದ್ ಗೆಳೆಯನಿಗೆ ಸಹಾಯ ಮಾಡುವ ಸಲುವಾಗಿ ಕುಂಟುವಂತೆ ನಟಿಸಲು ಹೇಳಿಕೊಟ್ಟಿದ್ದಾನೆ. ಆದರೆ, ಅಜ್ಜಿ ಗೌತಮ್ ಸುಳ್ಳು ನೆಪವನ್ನು ನಂಬುತ್ತಾರಾ ಎಂಬುದನ್ನು ನಾಳಿನ ಸಂಚಿಕೆಯಲ್ಲಿ ನೋಡಬೇಕಿದೆ. ಅಜ್ಜಿಯರು ಇಬ್ಬರೂ ಸೇರಿ ಭೂಮಿಕಾ ಮತ್ತು ಗೌತಮ್ ಇಬ್ಬರನ್ನು ಒಂದು ಮಾಡುತ್ತಾರಾ ಎಂಬ ನಿರೀಕ್ಷೆ ಪ್ರೇಕ್ಷಕರದ್ದು.


Click it and Unblock the Notifications











