Amruthadhaare: ಗೌತಮ್ ಮೇಲೆ ಭೂಮಿಕಾಗೆ ಚಿಗುರೊಡೆದ ಪ್ರೀತಿ, ಹೆಂಡತಿಯ ಗುಣಗಾನ ಮಾಡಿದ ಗೌತಮ್!
ಕಿರಣ್ ಮಾಡಿದ ಒಂದೇ ಒಂದು ತಪ್ಪು ಕೆಲಸದಿಂದ ಭೂಮಿಕಾ ಹಾಗೂ ಗೌತಮ್ ಮತ್ತಷ್ಟು ಹತ್ತಿರ ಆಗಿದ್ದಾರೆ. ಗೌತಮ್‌ಗೆ ಭೂಮಿ ಮೇಲೆ ಇರುವ ನಂಬಿಕೆ ಭೂಮಿಕಾಗೆ ಬಹು ದೊಡ್ಡ ಶ್ರೀರಕ್ಷೆ ಆಗಿದೆ ಎಂದರೆ ತಪ್ಪಾಗದು. ಕಿರಣ್ ಬೀಸಿದ ಜಾಲಕ್ಕೆ ಭೂಮಿಕಾ ಬಲಿ ಆದರೂ ಆಕೆಯ ಗೆಳತಿಯೇ ಆಕೆಗೆ ಮತ್ತೊಂದು ಜೀವನವನ್ನು ಕಲ್ಪಿಸಿದ್ದಾರೆ. ಅದು ಕಿರಣ್ ಹೆಂಡತಿ ಶೃತಿ, ಭೂಮಿಕಾ ಗೆಳತಿ .
ಕಿರಣ್ ಬಂಡವಾಳವನ್ನು ಎಲ್ಲರ ಎದುರು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾಳೆ ಎಂದರೆ ತಪ್ಪಾಗದು. ಇದೆಲ್ಲದರ ಜೊತೆಗೆ ಗೌತಮ್ ಬಳಿ ಕಿರಣ್ ಬಗ್ಗೆ ವಿವರವಾಗಿ ಹೇಳಿದ್ದಾಳೆ. ಆದರೆ ಗೌತಮ್ ಮಾತ್ರ ಇದೆಲ್ಲವನ್ನೂ ಬಹಳ ಸೂಕ್ಷ್ಮವಾಗಿ ಗಮನಿಸಿ ಕಿರಣ್‌ಗೆ ಸರಿಯಾಗಿ ಪಾಠ ಕಲಿಸಿದ್ದಾರೆ. ಇದರಿಂದ ಜೈದೇವ್‌ಗೆ ಇನ್ನೊಂದು ಪೆಟ್ಟು ಬಿದ್ದ ಹಾಗೆ ಆಯಿತು.

ಜೈದೇವ್ ಬಹಳ ಕಷ್ಟಪಟ್ಟಿ ಈ ಪ್ಲಾನ್ ರೆಡಿ ಮಾಡಿದ್ದ. ಅದಕ್ಕಿಂತ ಮುಂಚೆ ಭೂಮಿಕಾ ಹಿನ್ನೆಲೆಯನ್ನು ಚೆಕ್ ಮಾಡಿದ್ದ. ಆದರೆ ಅದೆಲ್ಲವೂ ಇದೀಗ ಟಸ್ ಪಟಾಕಿ ಆಗಿದೆ. ಹಾಗೆಯೇ ಬಿಸೋ ದೊಣ್ಣೆಯಿಂದ ಪಾರಾಗಿ ಹೋಗಿದ್ದಾನೆ. ಇದೀಗ ಭೂಮಿಕಾಗೆ ಗೌತಮ್ ಸಮಾಧಾನಕರ ಮಾತುಗಳನ್ನು ಹೇಳುತ್ತಾನೆ. ಆದರೆ, ಭೂಮಿಕಾಗೆ ಈ ಹಿಂದೆ ಗೌತಮ್ ಮಾತನಾಡಿದ ಧ್ವನಿ ಆಕೆಗೆ ನೆನಪಾಗಿ ಬಿಡುತ್ತದೆ.
ಗಂಡನ ಬಗ್ಗೆ ಹೆಮ್ಮೆ ಪಟ್ಟ ಭೂಮಿಕಾ
ಆ ಬಗ್ಗೆ ಗೌತಮ್ ಕೇಳಿದಾಗ ಆತ ಮಾತನಾಡಿದ್ದೆ ಎಂದು ತಿಳಿದು ಬಹಳ ಖುಷಿ ಪಡುತ್ತಾಳೆ .ಹಾಗೆಯೇ ಓಡಿ ಬಂದು ಗೌತಮ್ ನನ್ನು ತಬ್ಬಿಕೊಂಡು ಬಿಡುತ್ತಾಳೆ. ಇದನ್ನು ನೋಡಿದ ಗೌತಮ್ ಮನದಲ್ಲಿ ಪ್ರೀತಿ ಅರಳುತ್ತದೆ. ಇನ್ನು ಇದೆಲ್ಲವನ್ನೂ ಗೌತಮ್ ತನ್ನ ಗೆಳೆಯ ಆನಂದ್ ಜೊತೆ ಹಂಚಿಕೊಳ್ಳುತ್ತಾನೆ.

ಗೆಳೆಯನ ಮಾತಿಗೆ ಮನದ ಮಾತು ಬಿಚ್ಚಿಟ್ಟ ಗೌತಮ್
'ನೀನು ಹೇಳಿದ ಮಾತುಗಳು ನನ್ನ ಕಿವಿಯಲ್ಲಿ ಈಗಲೂ ಗುಯಿ ಗುಡುತ್ತಿದೆ. ನಿನ್ನಂತಹ ಒಳ್ಳೆಯ ಗಂಡ ಬೇಕು ಎಂದು ಎಲ್ಲರೂ ಅಂದುಕೊಂಡು ಇರುತ್ತಾರೆ. ಹೀರೋ ಥರ ಮಾತನಾಡಿದ್ದಿಯಾ ನನಗೆ ಹೀಗೆ ಅನ್ನಿಸಿದೆ. ಅತ್ತಿಗೆಗೆ ಹೇಗೆ ಆಗಬೇಡ' ಎಂದು ಆನಂದ್ ಹೇಳುತ್ತಾನೆ. ಆಗ ಗೌತಮ್ ಹೇಳುತ್ತಾನೆ, 'ನಿಮ್ಮ ಅತ್ತಿಗೆ ತುಂಬಾ ಫೀಲ್ ಆಗಿ, ನನ್ನನ್ನು ಓಡಿ ಬಂದು ತಬ್ಬಿಕೊಂಡು ಬಿಟ್ಟರು' ಎನ್ನುತ್ತಾನೆ. ಆಗ ಆನಂದ್ ಕಿಂಡಲ್ ಮಾಡುತ್ತಾನೆ.
ಭೂಮಿಕಾ ನೋಡಿ ಕಳೆದು ಹೋದ ಗೌತಮ್
ಇನ್ನು ಗೌತಮ್ ರೂಮ್‌ಗೆ ಬಂದಾಗ ಅಲ್ಲಿ ಭೂಮಿಕಾ ಇರುತ್ತಾಳೆ. ಭೂಮಿಕಾಳನ್ನು ನೋಡಿ ಗೌತಮ್ ಕಳೆದು ಹೋಗಿ ಬಿಡುತ್ತಾನೆ. ಹಾಗೆಯೇ ಪ್ರತಿ ಹೆಜ್ಜೆಯಲ್ಲೂ ಭೂಮಿಕಾ ಕೂಡ ಗೌತಮ್ ಪ್ರೀತಿಗೆ ಶರಣಾಗಿ ಬಿಡುತ್ತಾಳೆ. ಗೌತಮ್ ರೂಮ್‌ಗೆ ಬಂದ ಕೂಡಲೇ ಯಾರೋ ಬಂದು ಬಾಗಿಲು ಬಡಿದ ಹಾಗೆ ಆಯಿತು. ಆ ಕೂಡಲೇ ಬಾಗಿಲು ತೆಗೆಯಲು ಇಬ್ಬರು ತೆರಳಿದಾಗ ಒಬ್ಬರಿಗೊಬ್ಬರು ತಾಗಿಕೊಂಡು ಮುಖ ಮುಖ ನೋಡುತ್ತಾ ಇರುತ್ತಾರೆ. ಗೌತಮ್ ಪ್ರೀತಿಯಲ್ಲಿ ಬಿದ್ದ ಭೂಮಿಕಾಗೆ ಜಗವೇ ಕಾಣಿಸುತ್ತಿಲ್ಲ.


Click it and Unblock the Notifications











