Amruthadhaare: ಆನಂದ್ ನೆನಪಲ್ಲಿ ಮಳೆಯಲ್ಲಿ ನೆನೆಯುತ್ತಾ ನೋವು ಹೊರಹಾಕಿದ ಗೌತಮ್!

By Poorva

ಅಮೃತದಾರೆ ಧಾರವಾಹಿಯಲ್ಲಿ ಇಬ್ಬರು ಗೆಳೆಯರು ಒಬ್ಬರನ್ನೊಬ್ಬರು ನೋಡಲಾಗದೆ ಬಹಳ ನೊಂದುಕೊಂಡಿದ್ದಾರೆ. ಆನಂದ್ ಮಗಳು ಮನೆಯಲ್ಲಿ ಇರಬೇಕಾದರೆ ಅಪ್ಪ ನನಗೊಂದು ಹಾಡು ಹೇಳಪ್ಪ ಎಂದು ಹೇಳಿದಾಗ ಕುಚಿಕು ಕುಚಿಕು ಎನ್ನುವಂತಹ ಹಾಡನ್ನು ಹೇಳಿ ಅಳುತ್ತಾನೆ. ಆನಂದ್ ಪರಿಸ್ಥಿತಿಯನ್ನು ನೋಡಲಾಗದೆ ಅಪರ್ಣಾ ಏನು ಮಾಡಬೇಕೆಂದು ತಿಳಿಯದೆ ಸಮಾಧಾನಗೊಳಿಸುತ್ತಾಳೆ.

ಆನಂದ್ ಅಪರ್ಣಾ ಮಾತಿಗೆ ಅಳುವುದನ್ನು ನಿಲ್ಲಿಸುವುದಿಲ್ಲ. ಆದರೆ ನನ್ನ ಗೆಳೆಯ ನನ್ನ ಜೊತೆ ಯಾವತ್ತೂ ಹೀಗೆ ಮಾತನಾಡದೆ ಇರುತ್ತಿರಲಿಲ್ಲ ಆತನನ್ನು ನೋಡದೆ ನಾನು ಇರುತ್ತಿರಲಿಲ್ಲ. ನನಗೆ ಬಹಳ ನೋವಾಗುತ್ತಿದೆ ಆತನನ್ನು ಚಿಕ್ಕ ವಯಸ್ಸಿನಿಂದಲೂ ನಾನು ಬಹಳ ಹಚ್ಚಿಕೊಂಡಿದ್ದೇನೆ ಆತನ ಜೊತೆ ಎಲ್ಲದನ್ನು ಶೇರ್ ಮಾಡಿಕೊಳ್ಳುತ್ತಿದೆ. ಆದರೆ ಇದೀಗ ನನ್ನ ಗೆಳೆಯ ನನ್ನ ಜೊತೆ ಇಲ್ಲ ಎಂದು ಹೇಳಿದಾಗ ನನಗೆ ಬಹಳ ನೋವಾಗುತ್ತದೆ ಎಂದು ಆನಂದ್, ಜೋರಾಗಿ ಅಳುತ್ತ ಅಪರ್ಣಾಗೆ ಹೇಳುತ್ತಾನೆ.

Kannada serial Amruthadhaare written update on November 3rd

ಗೌತಮ್‌ಗೆ ಸಾಂತ್ವನ ಹೇಳಿದ ಭೂಮಿಕಾ

ಇತ್ತ, ಗೌತಮ್ ಆನಂದ್ ಮನೆಗೆ ಬಂದು ಮಾತನಾಡಲು ಆಗದೆ ಮನೆ ಗೇಟ್ ಬಳಿಯೇ ನಿಲ್ಲುತ್ತಾನೆ ಆಗಲೇ ಜೋರಾಗಿ ಮಳೆ ಸುರಿಯುತ್ತದೆ ಮಳೆಯಲ್ಲಿ ನೆನೆದುಕೊಂಡೆ ಆನಂದ್ ಮನೆಯ ಎದುರಿನಲ್ಲಿ ಬಹಳ ನೋವಿನಿಂದ ನಿಂತುಕೊಂಡೇ ಇರುತ್ತಾನೆ. ಅಷ್ಟರಲ್ಲಾಗಲೇ ಅಲ್ಲಿಗೆ ಭೂಮಿಕಾ ಬರುತ್ತಾಳೆ. ತನ್ನ ಬಳಿ ಇದ್ದ ಛತ್ರಿಯನ್ನು ಗೌತಮ್ ದಿವಾನ್ ಬಳಿ ತಂದಾಗ ನನಗೆ ಛತ್ರಿಯ ಅವಶ್ಯಕತೆ ಇಲ್ಲಎಂದು ಹೇಳುತ್ತಾನೆ. ಇದನ್ನು ಕೇಳಿಸಿಕೊಂಡ ಭೂಮಿಕಾ ನಿಮಗೆ ಮಳೆ ಎಂದರೆ ಆಗುವುದಿಲ್ಲ ಅಲ್ಲವೇ ಎಂದು ಹೇಳುತ್ತಾಳೆ.

ಭೂಂಇಕಾ ಮಾತಿಗೆ ಕೆಲವೊಂದು ಬಾರಿ ನಮಗೆ ಇಷ್ಟವಿಲ್ಲದಿದ್ದರೂ ಮಳೆಯಲ್ಲಿ ನೆನೆಯಬೇಕಾಗುತ್ತದೆ ಮನದಲ್ಲಿದ್ದ ನೋವನ್ನೆಲ್ಲ ಹೊರ ಹಾಕಬೇಕಾಗುತ್ತದೆ. ಆದ ಕಾರಣ ಮಳೆಯಲ್ಲಿ ನೆನೆದು ನನ್ನ ನೋವನ್ನು ಹೊರಹಾಕಿಕೊಳ್ಳುತ್ತೇನೆ ಎಂದಾಗ ಭೂಮಿಕಾಗೆ ಬಹಳ ನೋವಾಗುತ್ತದೆ. ನೀವು ಹೆಚ್ಚು ನೊಂದುಕೊಳ್ಳಬೇಡಿ ನನಗೆ ಅದನ್ನು ನೋಡಲು ಸಾಧ್ಯವಾಗುತ್ತಿಲ್ಲ ಎಂದು ಭೂಮಿಕಾ ಹೇಳುತ್ತಾಳೆ.

"ನಾನು ನನ್ನ ಗೆಳೆಯನ ಮನೆಯ ಮುಂದೆ ನಿಂತಿದ್ದೇನೆ ಆದರೆ ಗೆಳೆಯನ ಬಳಿ ಮಾತನಾಡಲು ಆಗುತ್ತಿಲ್ಲ. ಆತನ ಜೊತೆ ಚಿಕ್ಕ ವಯಸ್ಸಿನಿಂದಲೂ ಬಹಳ ಸಲ ಹಲವು ವಿಷಯಗಳಿಗೆ ನಮ್ಮ ಮಧ್ಯೆ ಬಹಳ ಜಗಳ ಆಗುತ್ತಿದ್ದವು. ಆದರೆ ಮಾತು ಬಿಡುವ ತನಕ ಹೋಗುತ್ತಿರಲಿಲ್ಲ. ಆದರೆ, ಈಗ ಆನಂದ್‌ನ ಮುಖ ನೋಡಲು ಆಗುತ್ತಿಲ್ಲ ಆತನ ಜೊತೆ ಮಾತನಾಡಲು ಆಗುತ್ತಿಲ್ಲ" ಎಂದು ಬಹಳ ನೊಂದುಕೊಂಡಿರುತ್ತಾನೆ.

Kannada serial Amruthadhaare written update on November 3rd

ಗೆಳೆಯನನ್ನು ನೋಡಿ ಶಾಕ್ ಆದ ಆನಂದ್‌

ಇನ್ನು ಅಪರ್ಣಾಳನ್ನು ತಬ್ಬಿಕೊಂಡು ಆನಂದ್‌ ಅಳುತ್ತಾ ಇರುತ್ತಾನೆ. ಇದೇ ವೇಳೆ ಮೇಲಿಂದ ಕೆಳಗೆ ನೋಡುತ್ತಾನೆ ಆನಂದ್. ಅಲ್ಲಿ ತನ್ನ ಜೀವದ ಗೆಳೆಯ ನಿಂತಿರುವುದನ್ನ ನೋಡಿ ಆತನಿಗೆ ಶಾಕ್ ಆಗುತ್ತದೆ.

More from Filmibeat

English summary
Amruthadhaare serial November 3rd written update.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X