Amruthadhaare: ಗೌತಮ್ ಮುಂದೆ ಜೈದೇವ್ ಬಣ್ಣ ಬಯಲು, ಇನ್ಮೆಲೇ ನಿಜವಾದ ಆಟ ಶುರು!
ಅಮೃತಧಾರೆಯಲ್ಲಿ ಗೌತಮ್‌ಗೆ ಎಲ್ಲಾ ವಿಚಾರ ಆತನ ಗೆಳೆಯನಿಂದ ತಿಳಿದಿದೆ. ಲೈಸೆನ್ಸ್ ರಿನಿವಲ್ ಮಾಡದೇ ಜೈದೇವ್ ಬಹಳ ದೊಡ್ಡ ತಪ್ಪು ಮಾಡಿದ್ದಾನೆ. ಹಾಗೆಯೇ ಇದಕ್ಕೆ ಬಹಳ ದೊಡ್ಡ ಬೆಲೆ ತೆರಬೇಕಾಗಿದೆ ಕೂಡ. ಜೈದೇವ್‌ಗೆ ಈಗಾಗಲೇ ಅಕೌಂಟ್ ಡಿಪಾರ್ಟ್ಮೆಂಟ್‌ನಲ್ಲಿ ಇರುವ ಸತೀಶ್ ಎಲ್ಲ ವಿಚಾರಗಳನ್ನು ತಿಳಿಸುತ್ತಾನೆ.
ಇದರಿಂದ ಜೈದೇವ್‌ಗೆ ಇದೀಗ ನಡುಕ ಶುರುವಾಗಿದೆ. ಗೌತಮ್ ಎಲ್ಲರನ್ನೂ ಒಟ್ಟಿಗೆ ಕರೆಯಿಸಿ ಮೀಟಿಂಗ್ ಮಾಡುತ್ತಾ ಇದ್ದಾನೆ. ಹೌದು ಯಾಕೆ ಹೀಗಾಯಿತು ಎಂದೆಲ್ಲ ತಿಳಿಯಬೇಕು ಹಾಗೆಯೇ ಕಂಪನಿ ಕಡೆಯಿಂದ ಇಷ್ಟು ದೊಡ್ಡ ತಪ್ಪು ಹೇಗಾಯಿತು ಎಂದೆಲ್ಲ ಯೋಚನೆ ಮಾಡುತ್ತಾ ಇರುತ್ತಾನೆ.

ಆಗ ಗೌತಮ್ ಗೆಳೆಯ ಜೋರಾಗಿ ಹೇಳುತ್ತಾನೆ ರೀ ಸತೀಶ್ ಇಷ್ಟಕ್ಕೆಲ್ಲ ಕಾರಣ ನೀವು. ಏನಾಯಿತು ಎಂಬುವುದನ್ನು ವಿವರವಾಗಿ ಹೇಳಿ.. ಯಾಕೆ ಈ ರೀತಿ ತಪ್ಪು ಮಾಡಿದಿರಿ ಎಂದಾಗ ಗಾಬರಿಗೊಂಡ ಸತೀಶ್ ನಿಜ ವಿಚಾರ ಹೇಳುತ್ತಾನೆ. ಸರ್ ನಂದೇನು ತಪ್ಪು ಇಲ್ಲ. ಜೈದೇವ್ ಸರ್ ಹೇಳಿದ ವೇಳೆ ಎಲ್ಲಾ ನಾನು ಅವರಿಗೆ ಹಣ ನೀಡುತ್ತಿದ್ದೆ. ಜೈದೇವ್ ಸರ್ ಹೇಳದೆ ನಾಣು ದುಡ್ಡು ಟ್ರಾನ್ಸ್ಫರ್ ಮಾಡಿಲ್ಲ ಸರ್ ಎಂದು ಬಹಳ ಗಾಬರಿಯಿಂದ ಹೇಳುತ್ತಾನೆ.
ಇನ್ನೂ ಗೌತಮ್ ಈ ಬಗ್ಗೆ ಪ್ರಶ್ನೆ ಮಾಡಿದಾಗ ಜೈದೇವ್ ತೊದಲುತ್ತಾನೆ. ಇದನ್ನು ನೋಡಿ ಗೌತಮ್ ಮಾತ್ರ ಕೊಂಚ ಜೋರಾಗಿ ಹೇಳುತ್ತಾನೆ. ಲಾಸ್ಟ್ ಟೈಮ್ ಆಡಿಟಿಂಗ್‌ಗೆ ನೀನೇ ತಾನೇ ಹೋಗಿದ್ದು ಎಂದೆಲ್ಲ ಹೇಳುತ್ತ ಇರುತ್ತಾನೆ ಇದನ್ನು ಕೇಳಿದ ಜೈದೇವ್ ಬಹಳ ಆತಂಕದಲ್ಲಿ ಇರುತ್ತಾನೆ.

ಗಾಬರಿಯಲ್ಲಿ ಜೈದೇವ್
ಜೈದೇವ್ ಏನು ಮಾಡುವುದು ಅಣ್ಣ ಕೇಳಿದರೆ ರೆಡ್ ಹಾಂಡ್ ಆಗಿ ಅಣ್ಣನ ಕೈಯಲ್ಲಿ ಸಿಕ್ಕಿ ಬಿದ್ದೆನಲ್ಲ ಎಂದು ಯೋಚನೆ ಮಾಡುತ್ತಾ ಇರುತ್ತಾನೆ. ಜೈದೇವ್ ಪಿತೂರಿ ಎಲ್ಲಾ ಆನಂದ್‌ಗೆ ತಿಳಿದಿದೆ. ಆದರೂ ಆದರೂ ಸುಮ್ಮನೆ ಇರುತ್ತಾನೆ.
ಅಣ್ಣನ ಮಾತಿಗೆ ತಲೆ ತಗ್ಗಿಸಿದ ತಮ್ಮ
ಅಣ್ಣ ತಮ್ಮನ ನಡುವೆ ಜಗಳ ತಂದು ಇಡುವುದು ಯಾಕೆ ಎಂದು ಸುಮ್ಮನೆ ಇರುತ್ತಾನೆ. ಆದರೆ ಇದೀಗ ಜೈದೇವ್ ಮಾಡಿದ ಪಿತೂರಿಗಳು ಗೌತಮ್‌ಗೆ ತಿಳಿಯುತ್ತಿದೆ. ಜೈ ದೇವ್ ಮೇಲೆ ಯಾವ ಆಕ್ಷನ್ ತೆಗೆದುಕೊಳ್ಳುತ್ತಾನೆ ಎಂಬುವುದನ್ನು ನೋಡಬೇಕಾಗಿದೆ.
ಭೂಮಿಕಾಗೆ ಕಣ್ಣಿನಲ್ಲೇ ಸನ್ನೆ ಮಾಡಿದ ಗೌತಮ್
ಇನ್ನೂ ಭೂಮಿಕಾಗೆ ಗೌತಮ್ ಜೊತೆ ಅಡ್ಜಸ್ಟ್ ಆಗಲು ಕೊಂಚ ಸಮಯ ಹಿಡಿಯುತ್ತದೆ ಯಾಕೆಂದರೆ ಗೌತಮ್ ಬಹಳ ನೀಟ್. ಸ್ನಾನ ಮಾಡಿಕೊಂಡು ಬಂದು ಟವಲ್ ಅನ್ನು ಬೆಡ್ ಮೇಲೆ ಹಾಕುತ್ತಾಳೆ. ಇದನ್ನು ನೋಡಿದ ಗೌತಮ್ ಕಣ್ಣಿನಲ್ಲಿ ಸನ್ನೆ ಮಾಡಿ ಟವಲ್ ಬೇರೆ ಕಡೆ ಇಡುವಂತೆ ಸೂಚನೆ ನೀಡುತ್ತಾನೆ. ಇನ್ನೂ ಮಧ್ಯಮ ಕುಟುಂಬದಲ್ಲಿ ಬೆಳೆದ ಹೆಣ್ಣು ಮಗಳು ಭೂಮಿಕಾ. ಆಕೆಗೆ ಗೌತಮ್ ಜೊತೆ ಅಡ್ಜಸ್ಟ್ ಆಗಲು ಕೊಂಚ ಸಮಯವೇ ಬೇಕಾಗಬಹುದು.


Click it and Unblock the Notifications











