Amruthadhare ; ವಿಷ ಕುಡಿಯಲು ಯತ್ನಿಸಿದ ಸದಾಶಿವ ದಂಪತಿ, ಅತ್ತೆ ಮಾವನನ್ನು ರಕ್ಷಣೆ ಮಾಡಿದ ಗೌತಮ್
ಭೂಮಿಕಾಗೆ ತನ್ನ ತಂದೆ ತಾಯಿ ಮನೆಗೆ ಬಂದಿದ್ದಾರೆ ಎನ್ನುವ ಖುಷಿ ಬಹಳಷ್ಟು ಹೆಚ್ಚಾಗಿದೆ. ಆಕೆಗೆ ಬೇರೆ ಯಾರೆ ಬಂದಿದ್ದರು ಇಷ್ಟೊಂದು ಖುಷಿ ಆಗುತ್ತಿರಲಿಲ್ಲವೇನೋ. ಆದರೆ ಭೂಮಿಕಾ ಗೆ ತಂದೆ ತಾಯಿಯನ್ನು ನೋಡಿ ಮನಸ್ಸಿಗೆ ಬಹಳಷ್ಟು ಖುಷಿಯಾಗುತ್ತದೆ. ಹಾಗೆಯೇ ತಂದೆ ತಾಯಿ ತಂದಿದ್ದ ತಿಂಡಿಗಳನ್ನು ಬಹಳ ಖುಷಿಯಿಂದಲೇ ತಿನ್ನುತ್ತಾಳೆ. ಅಪ್ಪ ಅಮ್ಮನ ಜೊತೆ ಬಹಳಷ್ಟು ಸಮಯವನ್ನು ಕಳೆಯುತ್ತಾಳೆ. ಭೂಮಿಕಾ ಜೊತೆ ತಂಗಿ ಸರಿಯಾಗಿ ಮಾತನಾಡುತ್ತಿಲ್ಲ. ಒಂದಲ್ಲ ಒಂದು ದಿನ ಅಪ್ಪಿ ನನ್ನನ್ನು ಅರ್ಥ ಮಾಡಿಕೊಳ್ಳುತ್ತಾಳೆ ಆಕೆ ನನ್ನ ಜೊತೆಗೆ ಮಾತನಾಡಿಯೇ ಮಾತನಾಡುತ್ತಾಳೆ ಎಂದು ಅಂದುಕೊಂಡಿರುತ್ತಾಳೆ.
ಆದರೆ ಅಪ್ಪಿಗೆ ತನ್ನ ಹಠವೆ ಹೆಚ್ಚಾಗಿದೆ. ಎಲ್ಲರ ಜೊತೆಗೆ ನಗು ನಗುತ್ತಾ ಖುಷಿಯಾಗುರಬೇಕು ಎಂದು ಸದಾಶಿವ ಹಾಗೂ ಆತನ ಹೆಂಡತಿ ಆಂದುಕೊಂಡಿರುತ್ತಾರೆ. ಆದರೆ ಅವರಿಬ್ಬರ ಆಸೆಗೆ ತಣ್ಣೀರು ಎರಚಿದ ಹಾಗೆ ಆಗುತ್ತದೆ. ಭೂಮಿಕಾ ತನ್ನ ತಂದೆ ತಾಯಿಯ ಜೊತೆಗೆ ಮಾತನಾಡುತ್ತಾ ಅಮ್ಮ ತಂದ ತಿಂಡಿಯನ್ನು ಸವಿಯುತ್ತಾ ಬಹಳ ಖುಷಿಯಲ್ಲಿರುತ್ತಾಳೇ.

ಇದನ್ನು ನೋಡಿದ ಗೌತಮ್ ಗೆ ಬಹಳ ಆಸೆಯಾಗುತ್ತದೆ. ಇದೇನು ಭೂಮಿಕಾ ಬಹಳ ಖುಷಿಯಿಂದ ತಿಂಡಿ ಸವಿಯುತ್ತಿದ್ದಾಳಲ್ವ ಎಂದು ಗೌತಮ್ ಆಸೆ ಕಣ್ಣಿನಿಂದ ಭೂಮಿಕಾತ್ತಾ ನೋಡುತ್ತಾನೆ. ಆದರೆ ಭೂಮಿಕಾ ಮಾತ್ರ ಗೌತಮ್ ನನ್ನು ನೋಡಿ ನಾನು ಈ ತಿಂಡಿಯಲ್ಲಿ ಸ್ವಲ್ಪವೂ ನಿಮಗೆ ಕೊಡುವುದಿಲ್ಲ ಎನ್ನುವ ಮಾತು ಹೇಳಿದಾಗ ಗೌತಮ್ ಕೊಂಚ ಸಪ್ಪೆ ಮುಖ ಮಾಡಿ ಭೂಮಿಕಾಳನ್ನು ನೋಡುತ್ತಾನೆ.
ಭೂಮಿಕಾ ಆ ನೋಟಕ್ಕೆ ಜೋರಾಗಿಯೇ ನಗುತ್ತಾಳೆ. ಇಲ್ಲಾ ರೀ ನಿಮಗೆ ಕೊಡದ ತಿಂಡಿ ಯಾವುದಿದೆ ಎಂದಾಗ ಎಲ್ಲರೂ ಜೋರಾಗಿ ನಗುತ್ತಾರೆ. ಇನ್ನು ಭೂಮಿಕಾ ಬಳಿ ಸದಾಶಿವ ಹಾಗೂ ಮಂದಾಕಿನಿ ಅಪ್ಪಿ ಬಗ್ಗೆ ಕೇಳುತ್ತಾರೆ. ಆ ವೇಳೆ ಭೂಮಿಕಾ ಬಹಳ ಸಮಾಧಾನದಿಂದ ಪ್ರಶ್ನೆಗೆ ಉತ್ತರವನ್ನು ನೀಡುತ್ತಾಳೆ.ಅಮ್ಮ ಭೂಮಿಕಾ ಇದೀಗ ಮುಂಚೆ ಇರುವ ಹಾಗೆ ಇಲ್ಲ ಆಕೆ ಬಹಳಷ್ಟು ಬದಲಾಗಿದ್ದಾಳೆ.
ಮೊದಲೆಲ್ಲ ನಮ್ಮನ್ನು ನೋಡಿದರೆ ಕೋಪ ಮಾಡಿಕೊಳ್ಳುತ್ತಿದ್ದಳು. ಆದರೆ ಇದೀಗ ತಾನು ತನ್ನವರು ಎನ್ನುವ ಪ್ರೀತಿ ಆಕೆಗೆ ಇದೆ. ಎಲ್ಲರ ಜೊತೆಗೆ ಖುಷಿಯಾಗಿಯೇ ಜೀವನ ಸಾಗಿಸುತ್ತಿದ್ದಾಳೆ. ಆಕೆಗೆ ನಿಮ್ಮನ್ನು ನೋಡಿದರೆ ಬಹಳ ಪ್ರೀತಿ ಆದರೆ ನಿಮ್ಮ ಜೊತೆ ಬಂದು ಮಾತನಾಡಲು ಆಕೆಗೆ ಕೊಂಚ ಮುಜುಗರ ಅದಕ್ಕೆ ಅವಳು ನಿಮ್ಮ ಜೊತೆ ಮಾತನಾಡಲು ಬಂದಿಲ್ಲ. ನೀವೇ ಹೋಗಿ ಅವಳ ಜೊತೆ ಮಾತನಾಡಿ ಎಂದು ಅಪ್ಪ ಅಮ್ಮನ ಬಳಿ ಹೇಳುತ್ತಾಳೆ.
ಅಪ್ಪಿ ಮಾತಿಗೆ ಸಂತಸ ಪಟ್ಟ ತಂದೆ ತಾಯಿ
ಆಕೆಯ ಮಾತು ಕೇಳಿದ ಸದಾಶಿವ ದಂಪತಿ ನೇರವಾಗಿ ಅಪ್ಪಿ ರೂಮ್ ಗೆ ಹೋಗಿ ಮಗಳ ಜೊತೆಗೆ ಮಾತನಾಡುತ್ತಾಳೆ. ಮಗಳನ್ನು ನೋಡಿ ಬಹಳ ಖುಷಿಪಡುತ್ತಾಳೆ ಮಂದಾಕಿನಿ. ಅಪ್ಪಿ ತನ್ನ ತಂದೆ ತಾಯಿಯನ್ನು ನೋಡಿ ಕೊಂಚ ಖುಷಿ ಪಡುತ್ತಾಳೆ. ಆಕೆಗೆ ತನ್ನ ತಂದೆ ತಾಯಿಯೇ ಸರ್ವಸ್ವವಾಗಿರುತ್ತಾರೆ. ಆದರೆ ಆಕೆ ಖುಷಿಯಾಗಿ ತಂದೆ ತಾಯಿಯ ಜೊತೆಗೆ ಮಾತನಾಡುತ್ತಾಳೆ. ಅಪ್ಪಿ ಮಾತು ಕೇಳಿದ ಸದಾಶಿವ, ಪಾರ್ಥ ಜೊತೆಗೆ ನಿನ್ನ ಮದುವೆ ಆಗಬಾರದು ಎಂದು ತಡೆದಿದ್ದು ಬೇರೆಯೇ ಕಾರಣಕ್ಕೆ. ಆದರೆ ಇದೀಗ ಪಾರ್ಥ ಜೊತೆಗೆ ನಿನ್ನ ಮದುವೆ ಆಯಿತು. ನೀವಿಬ್ಬರು ಖುಷಿಯಿಂದ ಇದ್ದೀರಾ ಇದುವೇ ನಮಗೆ ಬೇಕಾಗಿರುವುದು ಎಂದು ಹೇಳುತ್ತಾನೆ.
ಬೆಳಗಾಗುವ ಮುಂಚೆಯೇ ಮನೆಯಿಂದ ಹೊರ ನಡೆದ ಸದಾಶಿವ ದಂಪತಿ
ಸದಾಶಿವನ ಮಾತು ಕೇಳಿದ ಅಪ್ಪಿ ಕೊಂಚ ನಿರಾಳವಾಗುತ್ತಾಳೆ. ಹಾಗೆಯೇ ಸದಾಶಿವ ತನ್ನ ಮಗಳು ಭೂಮಿಕಾ ಬಗ್ಗೆಯೂ ಅಪ್ಪಿ ಜೊತೆಗೆ ಹೇಳಿದಾಗ ಅಪ್ಪಿ ಕೋಪ ಮಾಡಿಕೊಳ್ಳುತ್ತಾಳೆ. ಇದನ್ನು ನೋಡಿದ ಪಾರ್ಥ, ಅಪ್ಪಿ ಇದೀಗ ನಿಮ್ಮ ಜೊತೆಗೆ ಖುಷಿಯಿಂದ ಇದ್ದಾಳೆ ಹಾಗೆಯೇ ಮುಂದೊಂದು ದಿನ ಭೂಮಿಕಾ ಜೊತೆಗೆ ಕೂಡ ಖುಷಿಯುಲ್ಲಿರುತ್ತಾಳೆ ಎನ್ನುವ ಭರವಸೆಯನ್ನು ಅತ್ತೆ ಮಾವಗೆ ಕೊಡುತ್ತಾನೆ.
ಇನ್ನು ಸದಾಶಿವ ಹಾಗೂ ಮಂದಾಕಿನಿ ಅವರ ಮನೆಯಲ್ಲಿ ಕಾಲ ಕಳೆಯುತ್ತಾರೆ. ಆದರೆ ಬೆಳಗಾಗುವ ಮುಂಚೆಯೇ ಅವರಿಬ್ಬರೂ ಮನೆಯಿಂದ ಹೊರಗಡೆ ಬರುತ್ತಾರೆ. ನಾವಿಬ್ಬರೂ ಬದುಕಿರುವುದು ವೇಸ್ಟ್. ಇನ್ನು ಮುಂದೆ ಯಾರಿಗಾಗಿ ನಾವು ಬದುಕುವುದು ಮಕ್ಕಳೇ ಹೀಗೆ ಮಾಡಿದರೆ ನಾವು ಎಲ್ಲಿಗೆ ಹೋಗುವುದು ಎಂದುಕೊಂಡು ವಿಷ ತೆಗೆದುಕೊಳ್ಳಬೇಕು ಎನ್ನುವಷ್ಟರಲ್ಲಿ ಗೌತಮ್ ಬಂದು ಅದೆಲ್ಲವನ್ನೂ ತಪ್ಪಿಸುತ್ತಾನೆ.


Click it and Unblock the Notifications











