Amruthadhare ; ಅಳಿಯನ ಜೊತೆಗೆ ನೋವು ಬಿಚ್ಚಿಟ್ಟ ಮಂದಾಕಿನಿ,ಅತ್ತೆ ಮಾವನಿಗೆ ಧೈರ್ಯ ತುಂಬಿದ ಗೌತಮ್? ಮುಂದೆ ?

By ಪೂರ್ವ

ಗೌತಮ್ ಗೆ ತನ್ನ ಅತ್ತೆ ಮಾವನ ಪರಿಸ್ಥಿತಿ ಅರ್ಥವಾಗಿದೆ. ಜೀವ ಮೇಲೆ ಬಹಳ ಕೋಪ ಬಂದಿದೆ. ಹೇಗಾದರೂ ಮಾಡಿ ಜೀವಗೆ ಬುದ್ದಿ ಕಲಿಸಲೇಬೇಕು ಎನ್ನುವ ಜಿದ್ದಿಗೆ ಬಿದ್ದಿದ್ದಾನೆ. ಭೂಪತಿಯ ಕೈಗೊಂಬೆಯಾದ ಜೀವಗೆ ತನ್ನ ಭಾವನ ಮೇಲೆಯೇ ಬಹಳಷ್ಟು ಸಿಟ್ಟು. ಭಾವ ಮಾಡಿದ್ದು ಎಲ್ಲವೂ ತಪ್ಪು ಆದರೆ ತಾನು ಮಾಡಿದ್ದು ಎಲ್ಲವೂ ಸರಿ ಎಂದು ಅಂದುಕೊಳ್ಳುತ್ತಿರುವ ಜೀವ ಮನಸ್ಥಿತಿಯನ್ನು ಹೇಗಾದರೂ ಮಾಡಿ ಬದಲಿಸಬೇಕು ಎಂದು ಮಹಿಮಾ ಆಂದುಕೊಂಡಿರುತ್ತಾಳೆ. ಜೀವ ಯಾವ ರೀತಿಯ ಕೆಟ್ಟ ಕೆಲಸವನ್ನು ಮಾಡುತ್ತಿದ್ದಳು ಅದೇ ರೀತಿಯ ಕೆಟ್ಟ ಕೆಲಸವನ್ನು ಮಹಿಮಾ ಮಾಡುತ್ತಿದ್ದಳು.

ಇದರಿಂದ ಬಹಳ ಸಿಟ್ಟುಗೊಂಡ ಜೀವ ತಂದೆ ತಾಯಿ ಎಂದು ನೋಡದೆ ಅವರಿಬ್ಬರ ಮೇಲೆ ರೇಗಿ ಮನೆಯಿಂದ ಹೊರಗಡೆ ಹಾಕಿಬಿಟ್ಟಿದ್ದಾನೆ. ಆದರೆ ಆತನಿಗೆ ಕೊಂಚವೂ ಗಿಲ್ಟ್ ಎನ್ನುವುದು ಇಲ್ಲ. ಅಪ್ಪ ಅಮ್ಮನನ್ನು ಮನೆಯಿಂದ ಹೊರಗಡೆ ಹಾಕಿದೆ. ಆದರೆ ಅಪ್ಪ ಅಮ್ಮ ಎಲ್ಲಿಗೆ ಹೋದರು ಎನು ಮಾಡುತ್ತಿದ್ದಾರೆ ಎನ್ನುವುದನ್ನು ಕೂಡ ಜೀವ ಆಲೋಚನೆ ಮಾಡುತ್ತಿಲ್ಲ. ಸದಾಶಿವ ಹಾಗೂ ಮಂದಾಕಿನಿ ವಿಷ ಕುಡಿಯುವ ವೇಳೆ ಗೌತಮ್ ತಡೆದ ಇಲ್ಲವಾದರೆ ಭೂಮಿಕಾ ತಂದೆ ತಾಯಿ ಜೀವಂತವಾಗಿ ಉಳಿಯುತ್ತಿರಲಿಲ್ಲ. ಭೂಮಿಕಾ ಬೆಳಗ್ಗೆ ಎದ್ದು ತಂದೆ ತಾಯಿಯನ್ನು ಹುಡುಕಾಡುತ್ತಿರುತ್ತಾಳೆ. ಆಕೆಗೆ ಬಹಳ ಆತಂಕ ಆಗುತ್ತದೆ. ಇತ್ತ ಗೌತಮ್ ತನ್ನ ಅತ್ತೆ ಮಾವನಿಗೆ ಸಮಾಧಾನ ಮಾಡುತ್ತಾನೆ.

kannada-serial-amruthadhare-episode-28th-april

ನಿಮ್ಮೊಂದಿಗೆ ನಾನಿದ್ದೇನೆ ನೀವು ಏನು ಆತಂಕ ಪಡುವ ಅಗತ್ಯವೇ ಇಲ್ಲ ಎನ್ನುವ ಮಾತನ್ನು ಗೌತಮ್ ಹೇಳುತ್ತಾನೆ. ಗೌತಮ್ ಗೆ ಬಹಳ ನೋವು ಕಾಡುತ್ತದೆ. ಇದ್ದ ಒಬ್ಬ ಮಗ , ತಂದೆ ತಾಯಿಯನ್ನು ಬೀದಿ ಪಾಲು ಮಾಡಿ ಹೇಗೆ ಅಷ್ಟೊಂದು ಖುಷಿಯಾಗಿ ಇದ್ದಾನೆ ಎನ್ನುವುದು ಗೌತಮ್ ಗೆ ಅರ್ಥ ಆಗುತ್ತಿಲ್ಲ. ಆತನಿಗೆ ಬಹಳ ಬೇಸರವಾಗುತ್ತದೆ. ಸದಾಶಿವ ಹಾಗೂ ಮಂದಾಕಿನಿ ಗೆ ಧೈರ್ಯ ಹೇಳಿ ನಿಮ್ಮನ್ನು ನಾನು ಯಾವತ್ತೂ ಚೆನ್ನಾಗಿ ನೋಡಿಕೊಳ್ಳುತ್ತೇನೆ. ನೀವು ನನ್ನ ಅತ್ತೆ ಮಾವ ಅಲ್ಲ. ನನ್ನ ತಂದೆ ತಾಯಿ. ಹೀಗಿರುವಾಗ ಮಗನ ಜೊತೆಗೆ ನಿಮಗೆ ಇರಲು ಯಾವುದೇ ಮುಜುಗರ ಬೇಡ ಎನ್ನುವ ಮಾತನ್ನು ಹೇಳುತ್ತಾನೆ.

ಗಂಡನ ಜೊತೆಗೆ ಅಪ್ಪ ಅಮ್ಮನನ್ನು ಕಂಡು ಖುಷಿಪಟ್ಟ ಭೂಮಿಕಾ

ಮಂದಾಕಿನಿ ಹಾಗೂ ಸದಾಶಿವ ಅವರನ್ನು ಮನೆಗೆ ಕರೆದುಕೊಂಡು ಬರುತ್ತಾನೆ. ಅಪ್ಪ ಅಮ್ಮ ನ ಜೊತೆಗೆ ಗಂಡನನ್ನು ನೋಡಿದ ಭೂಮಿಕಾ ಗೆ ಹೋದ ಜೀವ ಮತ್ತೆ ಬಂದ ಹಾಗೆ ಆಗುತ್ತದೆ. ಎಲ್ಲಿಗೆ ಹೋಗಿದಿರಿ ಅಮ್ಮ ಅಪ್ಪ , ನಿಮ್ಮನ್ನು ನಾನು ಬೆಳಗ್ಗೆಯಿಂದ ಹುಡುಕಾಡುತ್ತಿದೆ. ಆದರೆ ನೀವು ಎಲ್ಲಿಯೂ ಕಾಣಿಸದೆ ಇರುವುದನ್ನು ನೋಡಿ ನನಗೆ ಆಘಾತವಾಯಿತು. ಆದರೆ ಇದೀಗ ಹೋದ ಜೀವ ಮತ್ತೆ ಬಂದ ಹಾಗೆ ಆಗಿದೆ ಎಂದು ಖುಷಿಯಿಂದ ಹೇಳುತ್ತಾಳೆ. ಮಗಳ ಮಾತನ್ನು ಕೇಳಿ ಸದಾಶಿವ ಹಾಗೂ ಮಂದಾಕಿನಿಗೆ ಬಹಳ ನೋವು ಆಗುತ್ತದೆ. ಆದರೆ ಈ ವಿಚಾರವನ್ನು ಯಾರ ಜೊತೆಗೂ ಹೇಳದೆ ಮುಚ್ಚಿಸುತ್ತಾರೆ. ಇತ್ತ ಅಪ್ಪಿ ಬಹಳ ಖುಷಿಯಲ್ಲಿದ್ದಾರೆ. ತನ್ನ ತಂದೆ ತಾಯಿ ನನ್ನ ಜೊತೆಗೆ ಬಹಳ ಖುಷಿಯಾಗಿ ಮಾತನಾಡುತ್ತಿದ್ದಾರೆ ಎನ್ನುವ ಖುಷಿ ಆಕೆಗೆ ಆಗುತ್ತದೆ.

ಅಕ್ಕನ ಮೇಲೆ ಮುನಿಸಿಕೊಂಡಿರುವ ಅಪ್ಪಿ

ಆದರೆ ಅಪ್ಪಿ ತಂದೆ ತಾಯಿಯನ್ನು ಎಷ್ಟು ಪ್ರೀತಿ ಮಾಡುತ್ತಾಳೋ ಅಷ್ಟೇ ಅಕ್ಕನ ಮೇಲೆ ಪ್ರೀತಿ ಇದೆ. ಆದರೆ ಆಕೆಯ ಮೇಲಿನ ಪ್ರೀತಿ ಕೋಪವಾಗಿ ಪರಿವರ್ತನೆ ಆಗಿದೆ. ತನ್ನ ಮದುವೆಗೆ ಅಕ್ಕ ಒಪ್ಪಿಲ್ಲ ಎನ್ನುವ ಒಂದೇ ಒಂದು ಕಾರಣಕ್ಕೆ ಅಪ್ಪಿ ಅಕ್ಕನ ಮೇಲೆ ಮುನಿಸಿಕೊಂಡಿದ್ದಾಳೆ. ಆದರೆ ಪಾರ್ಥ ಮಾತ್ರ ಅತ್ತಿಗೆಯ ಜೊತೆಗೆ ಅಪ್ಪಿ ಯಾವತ್ತಾದರೂ ಒಂದಾಗುತ್ತಾಳೆ ಎನ್ನುವ ಖುಷಿ ಪಾರ್ಥನಿಗೆ ಇದೆ. ಶಕುಂತಲಾ ದೇವಿ ಮಾತ್ರ ಭೂಮಿಕಾ ಜೊತೆಗೆ ಎದುರಲ್ಲಿ ಖುಷಿಯಾಗಿದ್ದರೆ, ಅವಳ ಹಿಂದುಗಡೇ ಪಿತೂರಿ ಮೇಲೆ ಪಿತೂರಿ ಮಾಡುತ್ತಲೇ ಇರುತ್ತಾಳೆ. ಜೈ ದೇವ್ ಗೆ ಮಾತ್ರ ಇದೀಗ ಜಾಕ್ಪಾಟ್ ಹೊಡೆದಿದೆ. ಆತ ಕಂಪನಿಯಲ್ಲಿ ಉನ್ನತ ಪೋಸ್ಟ್ ಅಲಂಕರಿಸಿದ್ದಾನೆ. ಮುಂದೇನು ಕಾದು ನೋಡಬೇಕಿದೆ.

More from Filmibeat

English summary
kannada serial amruthadhare episode 28th April
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X