Amruthadhare ; ಧನ್ಯಾನ ಕಿಡ್ನಾಪ್ ಮಾಡಿದ ಶಕುಂತಲಾ ದೇವಿ,ಭೂಮಿಕಾಗೆ ಸುಳಿವು ಸಿಗುತ್ತಾ?
ಭೂಮಿಕಾಗೆ ಧನ್ಯಾ ಕರೆ ಮಾಡಿ ಗೌತಮ್ ತಾಯಿ ಬಗ್ಗೆ ನಿಮ್ಮ ಬಳಿ ನಾನು ಏನೋ ವಿಚಾರವನ್ನು ಶೇರ್ ಮಾಡಬೇಕಿದೆ. ಆದರೆ ನೀವು ಅದಕ್ಕೆ ನಮಗೆ ಒಪ್ಪಿಗೆಯನ್ನು ಸೂಚಿಸಬೇಕಿದೆ ಎಂದು ಕೇಳಿದಾಗ ಭೂಮಿಕಾಗೆ ಗೊಂದಲ ಆಗುತ್ತದೆ. ಇತ್ತ ಶಕುಂತಲಾ ದೇವಿಗೆ ಮಾತ್ರ ಬಹಳ ಆತಂಕ ಆಗುತ್ತದೆ. ಏನು ಮಾಡಬೇಕು ಎಂದು ದಿಕ್ಕೇ ತೋಚದಾಗುತ್ತದೆ. ಇತ್ತ ಭೂಮಿಕಾ ಮನದಲ್ಲಿಯೇ ಗೌತಮ್ ಗೆ ಧನ್ಯಾ ಕರೆ ಮಾಡಿದ ವಿಚಾರವನ್ನು ಹೇಳಬೇಕಾ ಎಂದು ಲೆಕ್ಕಾಚಾರ ಹಾಕುತ್ತಾಳೆ. ಕೊನೆಗೆ ಗೌತಮ್ ತಾಯಿಯ ವಿಚಾರ ಆದ ಕಾರಣ ಧನ್ಯಾ ಕರೆ ಮಾಡಿದ್ದನ್ನು ಭೂಮಿಕಾ ತನ್ನ ಗಂಡನ ಬಳಿ ಹೇಳುತ್ತಾಳೆ.
ಗಂಡನ ತಾಯಿಗೆ ಸಂಬಂಧ ಪಟ್ಟಿರುವ ವಿಚಾರ ಆದ ಕಾರಣ ಗೌತಮ್ ಅವರ ಬಳಿ ಎಲ್ಲಾ ವಿಚಾರವನ್ನು ಹೇಳಿಕೊಳ್ಳಬೇಕೆಂದು ಭೂಮಿಕಾಗೆ ಅನ್ಸುತ್ತೆ. ಕೂಡಲೇ ಗೌತಮ್ ಗೆ ಕರೆ ಮಾಡಿದ ಭೂಮಿಕಾ ಎಲ್ಲಾ ವಿಚಾರವನ್ನು ಶೇರ್ ಮಾಡುತ್ತಾಳೆ. ಧನ್ಯ ಕರೆ ಮಾಡಿರುವ ವಿಚಾರವನ್ನು ಕೂಡ ಪ್ರಸ್ತಾಪ ಮಾಡುತ್ತಾಳೆ. ಧನ್ಯ ಜೀವಕ್ಕೆ ಆಪತ್ತಿದೆ ಎಂದು ನನಗೆ ಅನ್ನಿಸುತ್ತಿದೆ. ಹಾಗೆಯೇ ಆಕೆ ನಿಮ್ಮ ಜೊತೆ ಹೇಳಬೇಕು ಎನ್ನುವ ವಿಚಾರ ನಿಮ್ಮ ತಾಯಿಯದು. ಆದ ಕಾರಣ ನಾವು ಅವರ ಬಗ್ಗೆ ತಿಳಿದುಕೊಳ್ಳಬೇಕಾಗಿದೆ. ಧನ್ಯಗೆ ಜೀವದ ಭಯ ಕೂಡ ಇದೆ. ಕೂಡಲೇ ನಾವು ಆಕೆಯನ್ನು ಭೇಟಿ ಆಗಲೇ ಬೇಕು ಎಂದು ಹೇಳುತ್ತಾಳೆ. ಹಾಗೆಯೇ ಧನ್ಯಾಳನ್ನು ಉತ್ತರಹಳ್ಳಿಯಲ್ಲಿ ಭೇಟಿ ಮಾಡೋಣ ಎಂದು ಹೇಳುತ್ತಾಳೆ

ಆ ನಂತರ ಅಲ್ಲಿಗೆ ಹೋಗಿ ಆಕೆ ಯಾವ ಲೋಕೇಶನ್ ಹೇಳುತ್ತಾಳೆ. ಅಲ್ಲಿಯೇ ನಾವು ಆಕೆಯನ್ನು ಭೇಟಿ ಆಗೋಣ ಎಂದು ಗೌತಮ್ ಹೇಳುತ್ತಾನೆ . ಇದೆಲ್ಲವನ್ನೂ ಕೇಳಿದ ಭೂಮಿಕಾ ಕರೆ ಮಾಡಿ ನಾವು ಅಲ್ಲಿಗೆ ಬರುತ್ತೇವೆ ಆ ಬಳಿಕ ಒಂದು ಲೋಕೇಶನ್ ನಾವು ಶೇರ್ ಮಾಡುತ್ತೇವೆ ಅಲ್ಲಿಗೆ ಬನ್ನಿ ಎಂದು ಧನ್ಯಾ ಗೆ ಹೇಳುತ್ತಾಳೆ. ಇನ್ನು ಶಕುಂತಲಾ ದೇವಿ ಇದೆಲ್ಲವನ್ನೂ ಕೇಳಿಸಿಕೊಂಡು ಧನ್ಯಾಳನ್ನು ಹೇಗಾದರೂ ಮಾಡಿ ಕಿಡ್ನಾಪ್ ಮಾಡಬೇಕು . ಗೌತಮ್ ಹಾಗೂ ಭೂಮಿಕಾ ಧನ್ಯಳ ಬಳಿ ಹೋಗುವ ಮುಂಚೆ ನಾವು ಆಕೆಯ ಬಳಿಗೆ ಹೋಗಬೇಕು ಎಂದುಕೊಂಡು ತನ್ನ ತಮ್ಮನ ಬಳಿ ಹೇಳಿದಾಗ ಆತ ಕೂಡ ಶಕುಂತಲಾ ದೇವಿಗೆ ಸಪೋರ್ಟ್ ಮಾಡುತ್ತಾಳೆ.
ತಾಯಿಯ ಬಗ್ಗೆ ಮಾಹಿತಿ ಸಂಗ್ರಹಿಸಲಿರುವ ಗೌತಮ್
ಇನ್ನು ಭೂಮಿಕಾಗೆ ತನ್ನ ಗಂಡನ ತಾಯಿ ಸಿಗುತ್ತಾಳೆ ಎನ್ನುವ ಖುಷಿಯಲ್ಲಿ ಇರುತ್ತಾಳೆ. ತನ್ನ ತಾಯಿಯ ಮೇಲೆ ಗೌತಮ್ ಬಹಳ ಜೀವವನ್ನು ಇಟ್ಟುಕೊಂಡು ಇರುತ್ತಾನೆ. ಭೂಮಿಕಾ ಕರೆ ಮಾಡಿದ ಕೂಡಲೇ ಆತನಿಗೆ ಅದೇನೋ ಹೊಸ ಹುರುಪು ಸಿಕ್ಕ ಹಾಗೆ ಆಗುತ್ತದೆ. ತನ್ನ ತಾಯಿಯ ಬಗ್ಗೆ ಮಾಹಿತಿ ಸಿಗುತ್ತದೆ ಇವತ್ತು ಎನ್ನುವ ಖುಷಿ ಗೌತಮ್ ಗೆ. ಗೌತಮ್ ಬಳಿಗೆ ಆನಂದ್ ಬರುತ್ತಾನೆ. ಆನಂದ್ ಗೆ ನ ಬಳಿ ತನ್ನ ತಾಯಿ ಬಗ್ಗೆ ಹೇಳಿಕೊಂಡಾಗ ಆನಂದ್ ಗೆ ಕೊಂಚ ಸಂಶಯ ಬಂದು ಯಾರು ಶಕುಂತಲಾ ದೇವಿನಾ ಎಂದು ಕೇಳುತ್ತಾನೆ.
ಆನಂದ್ ಮೊಗದಲ್ಲಿ ಮೂಡಿದ ಮಂದಹಾಸ
ಆಗ ಗೌತಮ್ ಅಲ್ಲ ನನ್ನ ತಾಯಿಯ ಬಗ್ಗೆ ತಿಳಿಯಲು ಎಂದು ಹೇಳುತ್ತಾನೆ. ಇದನ್ನು ಕೇಳಿದ ಆನಂದ್ ಮುಖದಲ್ಲಿ ಮಂದಹಾಸ ಮೂಡುತ್ತದೆ. ಯಾರು ಭಾಗ್ಯ ಅಮ್ಮನ ಬಗ್ಗೆ ತಿಳಿದುಕೊಳ್ಳಲು ಹೋಗುತ್ತಿದ್ಧಿಯಾ ಎಂದಾಗ ಗೌತಮ್ ಹೌದು ಕಣೋ ನಾನು ಹೋಗಿ ಬರುತ್ತೇನೆ ಎಂದು ಹೇಳಿ ಅಲ್ಲಿಂದ ಹೊರಟು ಹೋಗುತ್ತಾನೆ . ಇತ್ತ ಶಕುಂತಲಾ ದೇವಿ ಧನ್ಯಗಾಗಿ ಬಲೆ ಬೀಸುತ್ತಾಳೆ. ಹಾಗೆಯೇ ಗೋಡನ್ ನಲ್ಲಿ ಆಕೆಯನ್ನು ಕಿಡ್ನಾಪ್ ಕೂಡ ಮಾಡುತ್ತಾರೆ. ಭೂಮಿಕಾಗೆ ಯಾವುದೇ ಸುಳಿವು ಸಿಗದ ಹಾಗೆ ಮಾಡುವ ಸಾಧ್ಯತೆ ಇದೆ.


Click it and Unblock the Notifications











